Grammy Awards: ಗ್ರ್ಯಾಮಿ ಅವಾರ್ಡ್ಸ್​ಗೆ ನಾಮಿನೇಟ್​ ಆದ ನರೇಂದ್ರ ಮೋದಿ ಇಂಗ್ಲಿಷ್​ ಹಾಡು

|

Updated on: Nov 11, 2023 | 8:21 AM

Narendra Modi Song: ಪ್ರಧಾನಿ ನರೇಂದ್ರ ಮೋದಿ ಅವರು ಕಾಣಿಸಿಕೊಂಡಿರುವ ‘ಅಬಂಡೆನ್ಸ್​ ಇನ್​ ಮಿಲೆಟ್ಸ್​’ ಹಾಡು 2023ರ ಜೂನ್​ನಲ್ಲಿ ಬಿಡುಗಡೆ ಆಯಿತು. ಇಂಗ್ಲಿಷ್​ ಮತ್ತು ಹಿಂದಿ ಸಾಹಿತ್ಯ ಈ ಗೀತೆಯಲ್ಲಿದೆ. ಈ ಹಾಡನ್ನು ಬರೆಯಲು ಮೋದಿಯವರೇ ಸ್ಫೂರ್ತಿ ಎಂದು ಫಲ್ಗುಣಿ ಶಾ ಅವರು ಹೇಳಿದ್ದಾರೆ. ಈ ಹಾಡಿಗೆ ಗ್ರ್ಯಾಮಿ ಪ್ರಶಸ್ತಿ ಸಿಗಲಿ ಎಂದು ಹಾರೈಸಲಾಗುತ್ತಿದೆ.

Grammy Awards: ಗ್ರ್ಯಾಮಿ ಅವಾರ್ಡ್ಸ್​ಗೆ ನಾಮಿನೇಟ್​ ಆದ ನರೇಂದ್ರ ಮೋದಿ ಇಂಗ್ಲಿಷ್​ ಹಾಡು
‘ಅಬಂಡೆನ್ಸ್​ ಇನ್​ ಮಿಲೆಟ್ಸ್​’ ಹಾಡಿನಲ್ಲಿ ನರೇಂದ್ರ ಮೋದಿ
Follow us on

ಆಸ್ಕರ್​ ಪ್ರಶಸ್ತಿಯ ರೀತಿಯೇ ‘ಗ್ರ್ಯಾಮಿ ಅವಾರ್ಡ್ಸ್​’ (Grammy Awards) ಕೂಡ ವಿಶ್ವಾದ್ಯಂತ ಮಾನ್ಯತೆ ಹೊಂದಿದೆ. ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. ಪ್ರತಿ ವರ್ಷವೂ ಈ ಪ್ರತಿಷ್ಠಿತ ಪ್ರಶಸ್ತಿ ಪಡೆಯಲು ಅನೇಕರು ಪ್ರಯತ್ನಿಸುತ್ತಾರೆ. ಈ ಬಾರಿ ಹಲವು ಹಾಡುಗಳು, ಗಾಯಕರು, ಗೀತರಚನಾಕಾರರು, ಸಂಗೀತ ನಿರ್ದೇಶಕರು ಗ್ರ್ಯಾಮಿ ಅವಾರ್ಡ್​ಗೆ ನಾಮಿನೇಟ್​ ಆಗಿದ್ದಾರೆ. ಅಚ್ಚರಿ ಏನೆಂದರೆ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಕಾಣಿಸಿಕೊಂಡಿರುವ ಒಂದು ಹಾಡು ಕೂಡ ಈ ಬಾರಿ ಗ್ರ್ಯಾಮಿ ಅವಾರ್ಡ್ಸ್​ಗೆ ನಾಮನಿರ್ದೇಶನಗೊಂಡಿದೆ. ‘ಅಬಂಡೆನ್ಸ್​ ಇನ್​ ಮಿಲೆಟ್ಸ್​’ (Abundance in Millets) ಎಂಬ ಈ ಹಾಡಿನ ಬಗ್ಗೆ ಇಲ್ಲಿದೆ ಮಾಹಿತಿ..

ಸಿರಿಧಾನ್ಯಗಳ ಪ್ರಾಮುಖ್ಯತೆ ಮತ್ತು ಅವುಗಳನ್ನು ಬೆಳೆಯಲು ರೈತರಿಗೆ ಸರ್ಕಾರ ನೀಡುತ್ತಿರುವ ಪ್ರೋತ್ಸಾಹದ ಬಗ್ಗೆ ‘ಅಬಂಡೆನ್ಸ್​ ಇನ್​ ಮಿಲೆಟ್ಸ್​’ ಹಾಡಿನಲ್ಲಿ ವಿವರಿಸಲಾಗಿದೆ. ಇಂಡಿಯನ್​-ಅಮೆರಿಕನ್​ ಗಾಯಕರಾದ ಫಲ್ಗುಣಿ ಶಾ ಹಾಗೂ ಗೌರವ್​ ಶಾ ಅವರು ಈ ಹಾಡು ರಚಿಸಿದ್ದಾರೆ. ಅವರ ಕಂಠದಲ್ಲಿ ಈ ಗೀತೆ ಮೂಡಿಬಂದಿದೆ. ನರೇಂದ್ರ ಮೋದಿ ಅವರು ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದು, ಸಿರಿಧಾನ್ಯಗಳ ಬಗ್ಗೆ ಅವರು ಮಾತನಾಡಿದ್ದಾರೆ. ಈ ಗೀತೆ ಈಗ ‘ಗ್ರ್ಯಾಮಿ ಅವಾರ್ಡ್ಸ್​’ಗೆ ನಾಮಿನೇಟ್​ ಆಗಿರುವುದು ವಿಶೇಷ.

ಪ್ರಧಾನಿ ನರೇಂದ್ರ ಮೋದಿ ಅವರು ಕಾಣಿಸಿಕೊಂಡಿರುವ ‘ಅಬಂಡೆನ್ಸ್​ ಇನ್​ ಮಿಲೆಟ್ಸ್​’ ಹಾಡು 2023ರ ಜೂನ್​ನಲ್ಲಿ ಬಿಡುಗಡೆ ಆಯಿತು. ಇಂಗ್ಲಿಷ್​ ಮತ್ತು ಹಿಂದಿ ಸಾಹಿತ್ಯ ಈ ಹಾಡಿನಲ್ಲಿದೆ. ಈ ಹಾಡನ್ನು ಬರೆಯಲು ಮೋದಿಯವರೇ ಸ್ಫೂರ್ತಿ ಎಂದು ಫಲ್ಗುಣಿ ಶಾ ಅವರು ಹೇಳಿದ್ದಾರೆ. ಈ ಹಾಡಿಗೆ ಗ್ರ್ಯಾಮಿ ಪ್ರಶಸ್ತಿ ಸಿಗಲಿ ಎಂದು ಹಾರೈಸಲಾಗುತ್ತಿದೆ. 2023ರ ವರ್ಷವನ್ನು ವಿಶ್ವಸಂಸ್ಥೆಯು ‘ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ’ ಎಂದು ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಈ ಹಾಡನ್ನು ಸಿದ್ಧಪಡಿಸಲಾಗಿದೆ.

ಇದನ್ನೂ ಓದಿ: Narendra Modi: ಭಾರತದ ಆಹಾರ ವೈವಿಧ್ಯತೆಯಿಂದ ಜಾಗತಿಕ ಹೂಡಿಕೆದಾರರಿಗೆ ಅನುಕೂಲ: ಎರಡನೇ ಆವೃತ್ತಿಯ ವರ್ಲ್ಡ್ ಫುಡ್ ಇಂಡಿಯಾ ಉದ್ಘಾಟನೆಯಲ್ಲಿ ನರೇಂದ್ರ ಮೋದಿ

ಕಳೆದ ವರ್ಷ ಗ್ರ್ಯಾಮಿ ಅವಾರ್ಡ್​ ಗೆದ್ದ ಬಳಿಕ ಫಲ್ಗುಣಿ ಅವರು ನರೇಂದ್ರ ಮೋದಿ ಅವರನ್ನು ಭೇಟಿ ಆಗಿದ್ದರು. ಆಗ ನಡೆದ ಮಾತುಕತೆಯ ವೇಳೆ ಅವರಿಗೆ ಸಿರಿಧಾನ್ಯಗಳ ಬಗ್ಗೆ ಹಾಡು ರಚಿಸುವ ಆಲೋಚನೆ ಬಂತು. ಹಸಿವು ಮುಕ್ತವಾಗಿಸುವ ಸಿರಿಧಾನ್ಯಗಳ ಬಗ್ಗೆ ಹಾಡು ರಚಿಸಲು ಮೋದಿಯವರೇ ಸಲಹೆ ನೀಡಿದರು ಎಂದು ಫಲ್ಗುಣಿ ಹೇಳಿದ್ದಾರೆ. ‘ಅಬಂಡೆನ್ಸ್​ ಇನ್​ ಮಿಲೆಟ್ಸ್​’ ಹಾಡು ಯೂಟ್ಯೂಬ್​ನಲ್ಲಿ ವೀಕ್ಷಣೆಗೆ ಲಭ್ಯವಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.