ದೇಹದ ಬೆಳವಣಿಗೆಗೆ ಹಾರ್ಮೋನ್ ಇಂಜೆಕ್ಷನ್ ತೆಗೆದುಕೊಂಡ್ರಾ ಈ ಬಾಲ ನಟಿ?

‘ಉರಿ: ದಿ ಸರ್ಜಿಕಲ್​ ಸ್ಟ್ರೈಕ್’ ಸಿನಿಮಾದಲ್ಲಿ ರಿವಾ ಅರೋರಾ ಅವರು ಯೋಧನ ಮಗಳಾಗಿ ಕಾಣಿಸಿಕೊಂಡಿದ್ದರು. ಹುತಾತ್ಮನಾದ ತಂದೆಯ ಅಂತ್ಯ ಸಂಸ್ಕಾರದ ವೇಳೆ ಅಳುತ್ತಿರುವ ದೃಶ್ಯ ಎಲ್ಲರ ಗಮನ ಸೆಳೆದಿತ್ತು. ಈ ಮೂಲಕ ಅವರು ಫೇಮಸ್ ಆದರು. ಈಗ ರಿವಾ ಅವರು ಹಾರ್ಮೋನ್ ಇಂಜೆಕ್ಷನ್ ಪಡೆದಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ದೇಹದ ಬೆಳವಣಿಗೆಗೆ ಹಾರ್ಮೋನ್ ಇಂಜೆಕ್ಷನ್ ತೆಗೆದುಕೊಂಡ್ರಾ ಈ ಬಾಲ ನಟಿ?
ರಿವಾ ಅರೋರಾ
Follow us
 ಶ್ರೀಲಕ್ಷ್ಮೀ ಎಚ್
| Updated By: ಮದನ್​ ಕುಮಾರ್​

Updated on: Nov 11, 2023 | 11:10 AM

ರಿವಾ ಅರೋರಾ (Riva Arora) ಅವರಿಗೆ ಈಗಿನ್ನೂ ಸಣ್ಣ ವಯಸ್ಸು. ಈ ವಯಸ್ಸಿಗೇ ಅವರು ಸಖತ್ ಗ್ಲಾಮರಸ್ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ವೈರಲ್ ಹಾಡುಗಳಿಗೆ ರೀಲ್ಸ್ ಮಾಡಿ ಗಮನ ಸೆಳೆಯುತ್ತಾರೆ. ಇಷ್ಟು ಸಣ್ಣ ವಯಸ್ಸಿಗೆ ರಿವಾ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಅವರು ಕೆಲವು ಸಿನಿಮಾಗಳಲ್ಲಿ (Hindi Cinema) ಬಾಲ ಕಲಾವಿದೆಯಾಗಿ ನಟಿಸಿದ್ದಾರೆ. ರಿವಾ ಅವರು ಹಾರ್ಮೋನ್ ಇಂಜೆಕ್ಷನ್ (Hormone Injection) ಪಡೆದಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಕಾರಣದಿಂದಲೇ ಅವರ ದೇಹ ಬೇಗ ಬೆಳವಣಿಗೆ ಕಂಡಿದೆ ಎನ್ನಲಾಗುತ್ತಿದೆ. ಆದರೆ, ಕುಟುಂಬದವರು ಇದನ್ನು ತಳ್ಳಿ ಹಾಕಿದ್ದಾರೆ.

ಸಿನಿಮಾದಲ್ಲಿ ನಟನೆ

‘ಉರಿ: ದಿ ಸರ್ಜಿಕಲ್​ ಸ್ಟ್ರೈಕ್’ ಸಿನಿಮಾ 2019ರಲ್ಲಿ ರಿಲೀಸ್ ಆಯಿತು. ವಿಕ್ಕಿ ಕೌಶಲ್ ನಟನೆಯ ಈ ಸಿನಿಮಾ ಭಾರತವು ಪಾಕ್ ಉಗ್ರರ ಮೇಲೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಆಧರಿಸಿದೆ. ಈ ಸಿನಿಮಾದಲ್ಲಿ ರಿವಾ ಅರೋರಾ ಅವರು ಯೋಧನ ಮಗಳಾಗಿ ಕಾಣಿಸಿಕೊಂಡಿದ್ದರು. ಹುತಾತ್ಮನಾದ ತಂದೆಯ ಅಂತ್ಯ ಸಂಸ್ಕಾರದ ವೇಳೆ ಅಳುತ್ತಿರುವ ದೃಶ್ಯ ಎಲ್ಲರ ಗಮನ ಸೆಳೆದಿತ್ತು. ಈ ಮೂಲಕ ಅವರು ಫೇಮಸ್ ಆದರು. 2020ರಲ್ಲಿ ರಿಲೀಸ್ ಆದ ‘ಗುಂಜನ್ ಸಕ್ಸೇನಾ: ದಿ ಕಾರ್ಗಿಲ್’ ಗರ್ಲ್​ ಸಿನಿಮಾದಲ್ಲಿ ಗುಂಜನ್ ಅವರು ಬಾಲ್ಯದ ಪಾತ್ರವನ್ನು ಅವರು ಮಾಡಿದ್ದರು. ಕೆಲವೇ ವರ್ಷಗಳಲ್ಲಿ ಅವರ ದೇಹದಲ್ಲಿ ಸಾಕಷ್ಟು ಬೆಳವಣಿಗೆ ಕಂಡಿದೆ.

Happy Hormones: ಹ್ಯಾಪಿ ಹಾರ್ಮೋನ್​ಗಳನ್ನು ಹೆಚ್ಚಿಸುವುದು ಹೇಗೆ ಇಲ್ಲಿದೆ ಕೆಲವು ಉಪಯುಕ್ತ ಸಲಹೆಗಳು

ವಯಸ್ಸಿನ ಬಗ್ಗೆ ಮೂಡಿದೆ ಅನುಮಾನ:

‘ಉರಿ’ ಸಿನಿಮಾ ಶೂಟಿಂಗ್ ವೇಳೆ ರಿವಾ ಅವರಿಗೆ 12 ವರ್ಷ ಆಗಿತ್ತು ಎನ್ನಲಾಗಿದೆ. ನಾಲ್ಕೇ ವರ್ಷಗಳಲ್ಲಿ ಅವರು ಸಾಕಷ್ಟು ಬೆಳೆದರು. ಇದು ಅನೇಕರಿಗೆ ಅಚ್ಚರಿ ಮೂಡಿಸಿತ್ತು. ರಿವಾ ಬೇಗ ಬೆಳವಣಿಗೆ ಕಾಣಬೇಕು ಎನ್ನುವ ಕಾರಣಕ್ಕೆ ಅವರಿಗೆ ಹಾರ್ಮೋನ್ ಇಂಜಕ್ಷನ್ ಕೊಡಿಸಲಾಗಿದೆ ಎನ್ನಲಾಗುತ್ತಿದೆ. ಅವರನ್ನು ಅನೇಕರು ಟೀಕಿಸಿದ್ದರು. ಅವರ ನಿಜವಾದ ವಯಸ್ಸೆಷ್ಟು ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ‘ನನ್ನ ನಿಜವಾದ ವಯಸ್ಸನ್ನು ರಿವೀಲ್ ಮಾಡುತ್ತೇನೆ’ ಎಂದು ಅವರು ಹೇಳಿಕೊಂಡಿದ್ದರು.

View this post on Instagram

A post shared by Riva Arora (@rivarora_)

ಬೋಲ್ಡ್ ಅವತಾರ:

ಸಣ್ಣ ವಯಸ್ಸಿಗೆ ರಿವಾ ಅವರು ಸಖತ್ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಾರೆ. ಅವರನ್ನು ಈ ವಿಚಾರದಲ್ಲಿ ಅನೇಕರು ಟೀಕೆ ಮಾಡಿದ್ದಾರೆ. ರಿವಾ ಅವರು ಇದಕ್ಕೆಲ್ಲ ತಲೆಕೆಡಿಸಿಕೊಂಡಿಲ್ಲ. ಸಾಕಷ್ಟು ರೀಲ್ಸ್ ಮಾಡಿ ಅವರು ಪೋಸ್ಟ್ ಮಾಡುತ್ತಾ ಇರುತ್ತಾರೆ. ಸಾಕಷ್ಟು ಸೆಲೆಬ್ರಿಟಿಗಳ ಜೊತೆ ಅವರು ಸ್ಕ್ರೀನ್​ ಶೇರ್ ಮಾಡಿಕೊಂಡಿದ್ದಾರೆ. ರಿವಾ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಇನ್​ಸ್ಟಾಗ್ರಾಮ್​ನಲ್ಲಿ ಅವರನ್ನು 1.12 ಕೋಟಿ ಜನರು ಹಿಂಬಾಲಿಸುತ್ತಿದ್ದಾರೆ. ಸುಮಾರು 3 ಸಾವಿರ ಪೋಸ್ಟ್​ಗಳನ್ನು ಅವರು ಹಾಕಿದ್ದಾರೆ. ಸೋಶಿಯಲ್ ಮೀಡಿಯಾ ಖಾತೆಯನ್ನು ರಿವಾ ಅವರ ತಾಯಿ ಹ್ಯಾಂಡಲ್ ಮಾಡುತ್ತಿದ್ದಾರಂತೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ