ಸ್ಟಾರ್ ಹೀರೋಗಳ ಚಿತ್ರಗಳು ರಿಲೀಸ್ ಆಗುವಾಗ ನಸುಕಿನಲ್ಲೇ ಪ್ರದರ್ಶನ ಶುರು ಮಾಡಲಾಗುತ್ತದೆ. ಈಗ ಹೊಸದೊಂದು ಬಿಗ್ ಬಜೆಟ್ ಸಿನಿಮಾ ಕೂಡ ಇದೇ ಟ್ರೆಂಡ್ ಪಾಲೋ ಮಾಡುತ್ತಿದೆ. ದೊಡ್ಡ ಮಟ್ಟದಲ್ಲಿ ಡಿಸೆಂಬರ್ 5ರಂದು ಬಿಡುಗಡೆ ಆಗುತ್ತಿದೆ. ಬೇಡಿಕೆ ಹೆಚ್ಚಿರುವ ಕಾರಣದಿಂದ ಬೆಂಗಳೂರಿನ ಅನೇಕ ಚಿತ್ರಮಂದಿರಗಳಲ್ಲಿ ನಸುಕಿನ 3 ಗಂಟೆಗೆ ಪ್ರದರ್ಶನಕ್ಕೆ ಸಿದ್ಧತೆ ನಡೆದಿದೆ. ಅಂಥ ಚಿತ್ರಮಂದಿರಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳು ಮುಂದಾಗಿದ್ದಾರೆ.
ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿ ಕಾರ್ಯಾಲಯದಿಂದ ಪೊಲೀಸ್ ಆಯುಕ್ತರಿಗೆ ಪತ್ರ ಬರೆಯಲಾಗಿದೆ. ಸಮಯ ಪಾಲನೆ ಮಾಡದೇ ಅನಧಿಕೃತವಾಗಿ ಚಲನಚಿತ್ರ ಪ್ರದರ್ಶಿಸುವ ಚಿತ್ರಮಂದಿರಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಬುಕ್ ಮೈ ಶೋ ಮೂಲಕ ಬೆಳಗಿನಜಾವ 6.30ಕ್ಕೂ ಮುನ್ನ ಸಿನಿಮಾ ಪ್ರದರ್ಶನಕ್ಕೆ ಟಿಕೆಟ್ ಮಾರಾಟ ಆಗುತ್ತಿರುವುದನ್ನು ಗಮನಿಸಿ ಕಾನೂನು ಕ್ರಮಕ್ಕೆ ಆದೇಶಿಸಲಾಗಿದೆ.
ಕರ್ನಾಟಕ ಸಿನಿಮಾ ರೆಗ್ಯುಲೇಷನ್ ಕಾಯ್ದೆಯ ನಿಮಯ 41ರ ಪ್ರಕಾರ, ಬೆಳಗ್ಗೆ 6.30ಕ್ಕೂ ಮೊದಲು ಯಾವುದೇ ಸಿನಿಮಾ ಪ್ರದರ್ಶನಕ್ಕೆ ಅನುಮತಿ ನೀಡುವಂತಿಲ್ಲ. ಅಲ್ಲದೇ, ರಾತ್ರಿ 10.30ರ ನಂತರ ಯಾವುದೇ ಸಿನಿಮಾ ಪ್ರದರ್ಶನ ಆರಂಭ ಆಗುವಂತಿಲ್ಲ. ಈ ನಿಯಮವನ್ನು ಉಲ್ಲಂಘನೆ ಮಾಡುತ್ತಿರುವ ಚಿತ್ರಮಂದಿರಗಳ ವಿರುದ್ಧ ಕ್ರಮ ಕೈಕೊಳ್ಳಲಾಗುತ್ತಿದೆ. ಇದರಿಂದ ಈ ಸಿನಿಮಾದ ಅನೇಕ ಶೋಗಳು ಕ್ಯಾನ್ಸಲ್ ಆಗುವ ಸಾಧ್ಯತೆ ಇದೆ.
ಇದನ್ನೂ ಓದಿ: ‘ಯುಐ’ ಸಿನಿಮಾ ಪ್ರಚಾರ: ಧಾರವಾಡದಲ್ಲಿ ಕಾಲೇಜು ದಿನಗಳ ನೆನಪು ಮಾಡಿಕೊಂಡ ಉಪ್ಪಿ
ಅಮೃತ್, ಅಂಜನ್, ಬಾಲಾಜಿ, ಬೃಂದಾ, ಚಂದ್ರೋದಯ, ಗೋವರ್ಧನ್, ಕಾಮಾಕ್ಯ, ಸಿನಿಫೈಲ್, ಕಿಯೋ, ಲಕ್ಷ್ಮಿ, ಮಹದೇಶ್ವರ, ಮೋಹನ್, ಪಿಎನ್ಆರ್, ಶ್ರೀಕೃಷ್ಣ, ವೆಂಕಟೇಶ್ವರ, ವಿ. ಸಿನಿಮಾ, ಶ್ರೀನಿವಾಸ್, ನವರಂಗ, ತಿರುಮಲ, ಸ್ವಾಗತ್, ವೈಭವ್, ಸಿದ್ದೇಶ್ವರ, ಭಾರತಿ, ರಾಧಾಕೃಷ್ಣ, ಪ್ರಸನ್ನ, ರವಿ, ವಿನಾಯಕ, ಪೂರ್ಣಿಮಾ, ರೇಣುಕಾ ಪ್ರಸನ್ನ, ವೈನಿಧಿ, ತ್ರಿವೇಣಿ, ಮುರಳಿ, ರವಿ ಡಿಜಿಟಲ್, ಪ್ರಕಾಶ್, ಶಾರದಾ, ವಿ.ಆರ್. ಸಿನಿಮಾಸ್ ಮುಂತಾದ ಚಿತ್ರಮಂದಿರಗಳ ಮೇಲೆ ಕ್ರಮ ಕೈಕೊಳ್ಳಲು ಸೂಚಿಸಲಾಗಿದೆ. ನಿಮಯ ಮೀರಿ ನಡೆಯುವ ಅವಧಿ ಪೂರ್ವ ಪ್ರದರ್ಶನಗಳನ್ನು ಸ್ಥಗಿತಗೊಳಿಸುವಂತೆಯೂ ಆದೇಶಿಸಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 6:41 pm, Wed, 4 December 24