ಐಶ್ವರ್ಯಾ ರಜನಿಕಾಂತ್ ಹಾಗೂ ಧನುಷ್ (Danush) ವಿಚ್ಛೇದನ ಪಡೆದು ಬಹಳ ಸಮಯ ಕಳೆದಿದೆ. ಇವರು ಬೇರೆ ಆಗಬಹುದು ಎಂದು ಯಾರೂ ಊಹಿಸಿರಲಿಲ್ಲ. ವಿಚ್ಛೇದನದ ಬಳಿಕ ಒಬ್ಬರ ಮುಖವನ್ನು ಒಬ್ಬರು ನೋಡಿಕೊಂಡಿಲ್ಲ. ಈಗ ಅವರು ಮಾಜಿ ಪತಿ ಬಗ್ಗೆ ಮಾತನಾಡಿದ್ದಾರೆ. ಮ್ಯೂಸಿಕ್ ಕಂಪೋಸರ್ ಅನಿರುದ್ಧ್ ರವಿಚಂದರ್ ಅವರನ್ನು ಪರಿಚಯಿಸಿದ ಸಂಪೂರ್ಣ ಕ್ರೆಡಿಟ್ನ ಅವರು ಧನುಷ್ಗೆ ನೀಡಿದ್ದಾರೆ. ಅನಿರುದ್ಧ್, ಧನುಷ್ ಹಾಗೂ ಐಶ್ವರ್ಯಾ ‘3’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದರು.
ಅನಿರುದ್ಧ ಅವರ ಯಶಸ್ಸಿನ ಜರ್ನಿ ಬಗ್ಗೆ ಐಶ್ವರ್ಯಾ ಮಾತನಾಡಿದ್ದಾರೆ. ‘ನನಗೆ ಅವರ ಬಗ್ಗೆ ಬಹಳ ಖುಷಿ ಇದೆ. ಆದರೆ, ಅವರನ್ನು ಮ್ಯೂಸಿಕ್ ಡೈರೆಕ್ಟರ್ ಆಗಿ ಮಾಡಿದ್ದರಲ್ಲಿ ನನ್ನ ಕೊಡುಗೆ ಏನೂ ಇಲ್ಲ. ಧನುಷ್ ಅವರಿಂದ ಅನಿರುದ್ಧ್ ಸಿನಿಮಾ ಜಗತ್ತಿಗೆ ಕಾಲಿಟ್ಟರು. ಅನಿರುದ್ಧ್ ಪಾಲಕರು ಅನಿರುದ್ಧ್ನ ಸಿಂಗಾಪೂರ್ಗೆ ಕಳುಹಿಸಿ ಎಂಬಿಎ ಓದಿಸುವವರಿದ್ದರು. ಆದರೆ, ಇದಕ್ಕೆ ಧನುಷ್ ಅವಕಾಶ ನೀಡಲಿಲ್ಲ. ಅವರ ಕುಟುಂಬದವರಿಗೆ ಅನಿರುದ್ಧ್ ಕಲೆಯ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಅವರಿಗೆ ಕೀಬೋರ್ಡ್ ಖರೀದಿಸಿಕೊಟ್ಟರು. ಈ ಮೂಲಕ ಅವರನ್ನು ಕಂಪೋಸರ್ ಆಗಿ ಮಾಡಿದರು. ಧನುಷ್ ಅವರ ಸಹಾಯ ಹಾಗೂ ತಮ್ಮ ಪರಿಶ್ರಮದಿಂದ ಅನಿರುದ್ಧ್ ಇಲ್ಲಿಯವರೆಗೆ ಬಂದಿದ್ದಾರೆ’ ಎಂದಿದ್ದಾರೆ ಐಶ್ವರ್ಯಾ.
‘ವೈ ದಿಸ್ ಕೊಲವೆರಿ’ ಹಾಡು ಸೂಪರ್ ಹಿಟ್ ಆಯಿತು. ಈ ಹಾಡು ಅಂದಿನಕಾಲದಲ್ಲಿ ಸೆನ್ಸೇಷನ್ ಸೃಷ್ಟಿ ಮಾಡಿತ್ತು. ನಂತರ ಧನುಷ್ ಹಾಗೂ ಅನಿರುದ್ಧ್ ಕೆಲವು ಸಿನಿಮಾಗಳಲ್ಲಿ ಒಟ್ಟಾಗಿ ಕೆಲಸ ಮಾಡಿದರು. ನಂತರ ಏಳು ವರ್ಷ ಇಬ್ಬರೂ ಒಂದಾಗಿರಲಿಲ್ಲ. ‘ತಿರುಚಿತ್ರಂಬಳಂ’ ಸಿನಿಮಾದಲ್ಲಿ ಇವರು ಒಟ್ಟಾಗಿ ಕೆಲಸ ಮಾಡಿದರು. ಇದು ಸೂಪರ್ ಹಿಟ್ ಆಯಿತು.
ಇದನ್ನೂ ಓದಿ: ಆ ಒಂದು ವಿಚಾರದಲ್ಲಿ ಮಾಜಿ ಪತಿ ಧನುಷ್ಗೆ ಸಂಪೂರ್ಣ ಕ್ರೆಡಿಟ್ ಕೊಟ್ಟ ಐಶ್ವರ್ಯಾ ರಜನಿಕಾಂತ್
ಅನಿರುದ್ಧ್ ಅವರು ‘ಜೈಲರ್’, ‘ಜವಾನ್’ ಅಂಥ ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಅವರ ಖ್ಯಾತಿ ಹೆಚ್ಚಿದೆ. ಸದ್ಯ ರಜನಿಕಾಂತ್ ನಟನೆಯ ‘ವೆಟ್ಟೈಯನ್’, ಕಮಲ್ ಹಾಸನ್ ನಟನೆಯ ‘ಇಂಡಿಯನ್ 2’, ಜೂನಿಯರ್ ಎನ್ಟಿಆರ್ ಅಭಿನಯದ ‘ದೇವರ’ ಮೊದಲಾದ ಬಿಗ್ ಬಜೆಟ್ ಚಿತ್ರಗಳಿಗೆ ಅವರು ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:31 am, Thu, 14 March 24