AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆ ಒಂದು ವಿಚಾರದಲ್ಲಿ ಮಾಜಿ ಪತಿ ಧನುಷ್​ಗೆ ಸಂಪೂರ್ಣ ಕ್ರೆಡಿಟ್ ಕೊಟ್ಟ ಐಶ್ವರ್ಯಾ ರಜನಿಕಾಂತ್

‘ವೈ ದಿಸ್ ಕೊಲವೆರಿ’ ಹಾಡು ಸೂಪರ್ ಹಿಟ್ ಆಯಿತು. ಈ ಹಾಡು ಅಂದಿನಕಾಲದಲ್ಲಿ ಸೆನ್ಸೇಷನ್ ಸೃಷ್ಟಿ ಮಾಡಿತ್ತು. ನಂತರ ಧನುಷ್ ಹಾಗೂ ಅನಿರುದ್ಧ್ ಕೆಲವು ಸಿನಿಮಾಗಳಲ್ಲಿ ಒಟ್ಟಾಗಿ ಕೆಲಸ ಮಾಡಿದರು. ನಂತರ ಏಳು ವರ್ಷ ಇಬ್ಬರೂ ಒಂದಾಗಿರಲಿಲ್ಲ. 2022ರಲ್ಲಿ ಸೇರಿ ಮತ್ತೆ ಒಟ್ಟಾಗಿ ಕೆಲಸ ಮಾಡಿದರು.

ಆ ಒಂದು ವಿಚಾರದಲ್ಲಿ ಮಾಜಿ ಪತಿ ಧನುಷ್​ಗೆ ಸಂಪೂರ್ಣ ಕ್ರೆಡಿಟ್ ಕೊಟ್ಟ ಐಶ್ವರ್ಯಾ ರಜನಿಕಾಂತ್
ಐಶ್ವರ್ಯಾ-ಧನುಷ್
ರಾಜೇಶ್ ದುಗ್ಗುಮನೆ
|

Updated on:Mar 14, 2024 | 7:52 AM

Share

ಐಶ್ವರ್ಯಾ ರಜನಿಕಾಂತ್ ಹಾಗೂ ಧನುಷ್ (Danush) ವಿಚ್ಛೇದನ ಪಡೆದು ಬಹಳ ಸಮಯ ಕಳೆದಿದೆ. ಇವರು ಬೇರೆ ಆಗಬಹುದು ಎಂದು ಯಾರೂ ಊಹಿಸಿರಲಿಲ್ಲ. ವಿಚ್ಛೇದನದ ಬಳಿಕ ಒಬ್ಬರ ಮುಖವನ್ನು ಒಬ್ಬರು ನೋಡಿಕೊಂಡಿಲ್ಲ. ಈಗ ಅವರು ಮಾಜಿ ಪತಿ ಬಗ್ಗೆ ಮಾತನಾಡಿದ್ದಾರೆ. ಮ್ಯೂಸಿಕ್ ಕಂಪೋಸರ್ ಅನಿರುದ್ಧ್ ರವಿಚಂದರ್​ ಅವರನ್ನು ಪರಿಚಯಿಸಿದ ಸಂಪೂರ್ಣ ಕ್ರೆಡಿಟ್​ನ ಅವರು ಧನುಷ್​ಗೆ ನೀಡಿದ್ದಾರೆ. ಅನಿರುದ್ಧ್​, ಧನುಷ್ ಹಾಗೂ ಐಶ್ವರ್ಯಾ ‘3’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದರು.

ಅನಿರುದ್ಧ ಅವರ ಯಶಸ್ಸಿನ ಜರ್ನಿ ಬಗ್ಗೆ ಐಶ್ವರ್ಯಾ ಮಾತನಾಡಿದ್ದಾರೆ. ‘ನನಗೆ ಅವರ ಬಗ್ಗೆ ಬಹಳ ಖುಷಿ ಇದೆ. ಆದರೆ, ಅವರನ್ನು ಮ್ಯೂಸಿಕ್ ಡೈರೆಕ್ಟರ್​ ಆಗಿ ಮಾಡಿದ್ದರಲ್ಲಿ ನನ್ನ ಕೊಡುಗೆ ಏನೂ ಇಲ್ಲ. ಧನುಷ್ ಅವರಿಂದ ಅನಿರುದ್ಧ್ ಸಿನಿಮಾ ಜಗತ್ತಿಗೆ ಕಾಲಿಟ್ಟರು. ಅನಿರುದ್ಧ್​ ಪಾಲಕರು ಅನಿರುದ್ಧ್​​ನ ಸಿಂಗಾಪೂರ್​ಗೆ ಕಳುಹಿಸಿ ಎಂಬಿಎ ಓದಿಸುವವರಿದ್ದರು. ಆದರೆ, ಇದಕ್ಕೆ ಧನುಷ್ ಅವಕಾಶ ನೀಡಲಿಲ್ಲ. ಅವರ ಕುಟುಂಬದವರಿಗೆ ಅನಿರುದ್ಧ್​ ಕಲೆಯ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಅವರಿಗೆ ಕೀಬೋರ್ಡ್ ಖರೀದಿಸಿಕೊಟ್ಟರು. ಈ ಮೂಲಕ ಅವರನ್ನು ಕಂಪೋಸರ್ ಆಗಿ ಮಾಡಿದರು. ಧನುಷ್ ಅವರ ಸಹಾಯ ಹಾಗೂ ತಮ್ಮ ಪರಿಶ್ರಮದಿಂದ ಅನಿರುದ್ಧ್ ಇಲ್ಲಿಯವರೆಗೆ ಬಂದಿದ್ದಾರೆ’ ಎಂದಿದ್ದಾರೆ ಐಶ್ವರ್ಯಾ.

‘ವೈ ದಿಸ್ ಕೊಲವೆರಿ’ ಹಾಡು ಸೂಪರ್ ಹಿಟ್ ಆಯಿತು. ಈ ಹಾಡು ಅಂದಿನಕಾಲದಲ್ಲಿ ಸೆನ್ಸೇಷನ್ ಸೃಷ್ಟಿ ಮಾಡಿತ್ತು. ನಂತರ ಧನುಷ್ ಹಾಗೂ ಅನಿರುದ್ಧ್ ಕೆಲವು ಸಿನಿಮಾಗಳಲ್ಲಿ ಒಟ್ಟಾಗಿ ಕೆಲಸ ಮಾಡಿದರು. ನಂತರ ಏಳು ವರ್ಷ ಇಬ್ಬರೂ ಒಂದಾಗಿರಲಿಲ್ಲ. ‘ತಿರುಚಿತ್ರಂಬಳಂ’ ಸಿನಿಮಾದಲ್ಲಿ ಇವರು ಒಟ್ಟಾಗಿ ಕೆಲಸ ಮಾಡಿದರು. ಇದು ಸೂಪರ್ ಹಿಟ್ ಆಯಿತು.

ಇದನ್ನೂ ಓದಿ: ಆ ಒಂದು ವಿಚಾರದಲ್ಲಿ ಮಾಜಿ ಪತಿ ಧನುಷ್​ಗೆ ಸಂಪೂರ್ಣ ಕ್ರೆಡಿಟ್ ಕೊಟ್ಟ ಐಶ್ವರ್ಯಾ ರಜನಿಕಾಂತ್

ಅನಿರುದ್ಧ್​ ಅವರು ‘ಜೈಲರ್’, ‘ಜವಾನ್’ ಅಂಥ ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಅವರ ಖ್ಯಾತಿ ಹೆಚ್ಚಿದೆ. ಸದ್ಯ ರಜನಿಕಾಂತ್ ನಟನೆಯ ‘ವೆಟ್ಟೈಯನ್’, ಕಮಲ್ ಹಾಸನ್ ನಟನೆಯ ‘ಇಂಡಿಯನ್ 2’, ಜೂನಿಯರ್ ಎನ್​ಟಿಆರ್ ಅಭಿನಯದ ‘ದೇವರ’ ಮೊದಲಾದ ಬಿಗ್ ಬಜೆಟ್ ಚಿತ್ರಗಳಿಗೆ ಅವರು ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:31 am, Thu, 14 March 24

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ