ನಟ ಧನುಷ್ (Dhanush) ಹಾಗೂ ಐಶ್ವರ್ಯಾ ರಜನಿಕಾಂತ್ ಮದುವೆ ಆಗಿ ಹಲವು ವರ್ಷಗಳ ಕಾಲ ಸಂಸಾರ ನಡೆಸಿದ್ದರು. ಇಬ್ಬರೂ ಈಗ ಬೇರೆ ಆಗಿದ್ದಾರೆ. ಇವರ ಮಧ್ಯೆ ವೈಮನಸ್ಸು ಮೂಡಲು ಕಾರಣ ಏನು ಎಂಬುದು ಇನ್ನೂ ರಿವೀಲ್ ಆಗಿಲ್ಲ. ಈಗ ವಿಶೇಷ ಎಂದರೆ ಧನುಷ್ ಹಾಗೂ ಐಶ್ವರ್ಯಾ ಸಿನಿಮಾಗಳು ಒಂದೇ ದಿನ ರಿಲೀಸ್ ಆಗುತ್ತಿವೆ. ಹಾಗಂತ ಎರಡೂ ಚಿತ್ರಗಳ ಮಧ್ಯೆ ಥಿಯೇಟರ್ನಲ್ಲಿ ಸ್ಪರ್ಧೆ ಏರ್ಪಡುತ್ತಿಲ್ಲ. ಧನುಷ್ ನಟನೆಯ ‘ಕ್ಯಾಪ್ಟನ್ ಮಿಲ್ಲರ್’ ಒಟಿಟಿಯಲ್ಲಿ ಬಿಡುಗಡೆ ಆದರೆ, ಐಶ್ವರ್ಯಾ ನಿರ್ದೇಶನದ ‘ಲಾಲ್ ಸಲಾಂ’ ಚಿತ್ರಮಂದಿರದಲ್ಲಿ ಬಿಡುಗಡೆ ಕಂಡಿದೆ.
‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾ ಜನವರಿ 12ರಂದು ಥಿಯೇಟರ್ನಲ್ಲಿ ಬಿಡುಗಡೆ ಆಯಿತು. ಸ್ವತಂತ್ರ ಪೂರ್ವ ಕಥೆಯನ್ನು ಈ ಸಿನಿಮಾ ಹೊಂದಿದೆ. ಕನ್ನಡದ ನಟ ಶಿವರಾಜ್ಕುಮಾರ್ ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಈ ಸಿನಿಮಾ ಅಂದುಕೊಂಡಷ್ಟು ಕಮಾಲ್ ಮಾಡಿಲ್ಲ. ಈ ಬಗ್ಗೆ ಅಭಿಮಾನಿಗಳಿಗೆ ಬೇಸರ ಇದೆ. ಈ ಸಿನಿಮಾ ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ಇಂದು (ಫೆಬ್ರವರಿ 9) ಪ್ರಸಾರ ಆರಂಭಿಸಿದೆ. ಚಿತ್ರಮಂದಿರದಲ್ಲಿ ಬಿಡುಗಡೆ ಆಗಿ ಒಂದು ತಿಂಗಳು ಕಳೆಯುವುದರೊಳಗೆ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಿದೆ.
ಐಶ್ವರ್ಯಾ ರಜನೀಕಾಂತ್ ನಿರ್ದೇಶನದ ‘ಲಾಲ್ ಸಲಾಂ’ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿದೆ. ಈ ಚಿತ್ರದಲ್ಲಿ ರಜನಿಕಾಂತ್ ಅವರು ಅತಿಥಿ ಪಾತ್ರ ಮಾಡಿದ್ದಾರೆ. ಹಾಗಂತ ಇದು ಹೀಗೆ ಬಂದು ಹಾಗೆ ಹೊಗುವ ಅತಿಥಿ ಪಾತ್ರ ಅಲ್ಲ. ಅವರು ತೆರೆಮೇಲೆ ಸುಮಾರು 40 ನಿಮಿಷ ಕಾಣಿಸಿಕೊಳ್ಳಲಿದ್ದಾರಂತೆ. ಮಾಜಿ ಮಾವನ ಚಿತ್ರ ಎನ್ನುವ ಕಾರಣಕ್ಕೆ ಈ ಚಿತ್ರಕ್ಕೆ ಧನುಷ್ ಶುಭಾಶಯ ಹೇಳಿದ್ದಾರೆ.
ಇದನ್ನೂ ಓದಿ: ಒಟಿಟಿಯಲ್ಲಿ ಧಮಾಕ: ಸಿನಿಪ್ರಿಯರಿಗೆ ಮಿನಿ ಸಂಕ್ರಾಂತಿ; ರಿಲೀಸ್ ಆದ ಸಿನಿಮಾಗಳ ಪಟ್ಟಿ ಇಲ್ಲಿದೆ
ರಜನಿಕಾಂತ್ ಅವರನ್ನು ಕಂಡರೆ ಧನುಷ್ಗೆ ಅಪಾರ ಗೌರವ ಇದೆ. ಐಶ್ವರ್ಯಾ ಜೊತೆ ವಿಚ್ಛೇದನ ಪಡೆದರೂ ಅವರು ರಜನಿಕಾಂತ್ ಜೊತೆ ಇರುವ ಬಾಂಧವ್ಯವನ್ನು ಕಡಿದುಕೊಂಡಿಲ್ಲ. ಈ ಕಾರಣದಿಂದ ಅವರು ರಜನಿಕಾಂತ್ ಚಿತ್ರಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಆದರೆ, ಎಲ್ಲಿಯೂ ಅವರು ಪತ್ನಿ ಐಶ್ವರ್ಯಾ ಹೆಸರನ್ನು ಉಲ್ಲೇಖ ಮಾಡಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:56 am, Fri, 9 February 24