ಐಶ್ವರ್ಯಾ ರೈ, ಮೃಣಾಲ್ ಠಾಕೂರ್ ಸೇರಿ ಅನೇಕ ಸೆಲೆಬ್ರಿಟಿಗಳಿಗೆ ಆಗಿತ್ತು ಬಾಡಿ ಶೇಮಿಂಗ್
ಜಿಮ್ ಮಾಡಲು ಸಾಧ್ಯವಾಗದೇ ಬಾಡಿ ಶೇಪ್ ಕಳೆದುಕೊಂಡ ಅನೇಕರಿದ್ದಾರೆ. ಅನೇಕರು ಬಟ್ಟೆ ವಿಚಾರದಲ್ಲಿ ಟ್ರೋಲ್ ಆಗಿದ್ದಾರೆ. ಇದರಿಂದ ಬಾಡಿ ಶೇಮಿಂಗ್ ಎದುರಿಸಿದ ಉದಾಹರಣೆ ಇದೆ. ಈ ಸಾಲಿನಲ್ಲಿ ಮೃಣಾಲ್ ಠಾಕೂರ್, ಐಶ್ವರ್ಯಾ ರೈ ಸೇರಿ ಅನೇಕ ಖ್ಯಾತ ಸೆಲೆಬ್ರಿಟಿಗಳು ಇದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

ಸೆಲೆಬ್ರಿಟಿಗಳು ಎಷ್ಟೇ ಕಾಳಜಿ ವಹಿಸಿದರೂ ಒಂದಲ್ಲಾ ಒಂದು ಸಂದರ್ಭದಲ್ಲಿ ಅಭಿಮಾನಿಗಳಿಂದ ಟೀಕೆಗೆ ಒಳಗಾಗ ಬೇಕಾಗುತ್ತದೆ. ಈ ರೀತಿ ಟೀಕೆ ಎದುರಿಸಲು ಸಾಕಷ್ಟು ಕಾರಣಗಳಿರುತ್ತವೆ. ಜಿಮ್ ಮಾಡಲು ಸಾಧ್ಯವಾಗದೇ ಬಾಡಿ ಶೇಪ್ ಕಳೆದುಕೊಂಡಿದ್ದು, ದೇಹದ ತೂಕ ಹೆಚ್ಚಿದ್ದು, ಹಾಕೋ ಬಟ್ಟೆ ಹೀಗೆ ನಾನಾ ಕಾರಣಕ್ಕೆ ಸೆಲೆಬ್ರಿಟಿಗಳು ಬಾಡಿ ಶೇಮಿಂಗ್ ಎದುರಿಸಿದ ಉದಾಹರಣೆ ಇದೆ. ಈ ಸಾಲಿನಲ್ಲಿ ಐಶ್ವರ್ಯಾ ರೈ (Aishwarya Rai), ಮೃಣಾಲ್ ಠಾಕೂರ್ ಸೇರಿ ಅನೇಕ ಖ್ಯಾತ ಸೆಲೆಬ್ರಿಟಿಗಳು ಇದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
ರಶ್ಮಿ ದೇಸಾಯಿ
ರಶ್ಮಿ ದೇಸಾಯಿ ಅವರು ನಟನೆಯ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಅವರು ಒಮ್ಮೆ ಚಿನ್ನದ ಬಣ್ಣದ ಬಟ್ಟೆ ಧರಿಸಿ ಕಾಣಿಸಿಕೊಂಡಿದ್ದರು. ಹೈ ಹೀಲ್ಸ್ ಹಾಕಿ ಎಲ್ಲರ ಗಮನ ಸೆಳೆದಿದ್ದರು. ಅವರ ಡ್ರೆಸ್ ಕೆಲವರ ಕಣ್ಣು ಕುಕ್ಕಿತ್ತು. ಅವರು ಹಾಕಿದ ಬಟ್ಟೆ ಸರಿ ಇಲ್ಲ ಎಂದು ಅನೇಕರು ಟೀಕೆ ಮಾಡಿದ್ದರು. ಇನ್ನೂ ಕೆಲವರು ಅವರ ದೇಹದ ತೂಕದ ಬಗ್ಗೆ ಟೀಕೆ ಮಾಡಿದ್ದರು.
ಮೃಣಾಲ್ ಠಾಕೂರ್
ಮೃಣಾಲ್ ಠಾಕೂರ್ ಅವರು ಬಾಡಿಶೇಮ್ ಎದುರಿಸಿದ್ದಾರೆ. ಕೆಲವರು ಅವರನ್ನು ಮಟ್ಕಾ ಎಂದು ಕರೆದಿದ್ದರು. ಅವರನ್ನು ಕೆಲವರು ‘ಭಾರತದ ಕಿಮ್ ಕರ್ದಾಶಿಯಾನ್’ ಎಂದು ಕರೆದಿದ್ದರಂತೆ. ಅವರು ಈ ಬಗ್ಗೆ ಈ ಮೊದಲು ಹೇಳಿಕೊಂಡಿದ್ದರು.
ಐಶ್ವರ್ಯಾ ರೈ
ನಟಿ ಐಶ್ವರ್ಯಾ ರೈ ಈಗ ಫಿಟ್ನೆಸ್ಗೆ ಆದ್ಯತೆ ನೀಡೋಕೆ ಸಾಧ್ಯವಾಗುತ್ತಿಲ್ಲ. ಕುಟುಂಬದ ಕೆಲಸದಲ್ಲಿ ಅವರು ಬ್ಯುಸಿ ಇದ್ದಾರೆ. ಆರಾಧ್ಯಾ ಜನಿಸಿದಾಗ ಅವರ ದೇಹದ ತೂಕ ಹೆಚ್ಚಿತ್ತು. ಅನೇಕರು ಅವರನ್ನು ‘ಫ್ಯಾಟಿ’ ಎಂದು ಕರೆದು ಟೀಕೆ ಮಾಡಿದ್ದರು. ಸೋಶಿಯಲ್ ಮೀಡಿಯಾದಲ್ಲೂ ಈ ಬಗ್ಗೆ ಚರ್ಚೆ ಆಗಿತ್ತು. ಈಗಲೂ ಐಶ್ವರ್ಯಾ ರೈ ಗ್ಲಾಮರ್ ಉಳಿಸಿಕೊಂಡಿದ್ದಾರೆ.
ಪ್ರಭಾಸ್
‘ಬಾಹುಬಲಿ’ ಹಾಗೂ ‘ಬಾಹುಬಲಿ 2’ ರಿಲೀಸ್ ಆದಾಗ ಪ್ರಭಾಸ್ ಅನೇಕರ ಫೇವರಿಟ್ ಆದರು. ಆದರೆ, ಇತ್ತೀಚೆಗೆ ಅವರಿಗೆ ಮೊದಲಿನಂತೆ ದೇಹದ ಶೇಪ್ ಉಳಿಸಿಕೊಳ್ಳೋಕೆ ಆಗುತ್ತಿಲ್ಲ. ‘ಆದಿಪುರುಷ್’ ರಿಲೀಸ್ ಆದ ಸಂದರ್ಭದಲ್ಲಿ ಅನೇಕರು ಅವರನ್ನು ‘ಅಂಕಲ್’ ಎಂದು ಕರೆದು ಟೀಕೆ ಮಾಡಿದ್ದರು.
ನೇಹಾ ದೂಫಿಯಾ
ನಟಿ ನೇಹಾ ಧೂಪಿಯಾ ಹಲವು ರೀತಿಯ ಪಾತ್ರ ಮಾಡಿ ಫೇಮಸ್ ಆಗಿದ್ದಾರೆ. ಎರಡನೇ ಬಾರಿ ಪ್ರೆಗ್ನೆಂಟ್ ಆದಾಗ ಅವರ ದೇಹದ ತೂಕ ಹೆಚ್ಚಿತ್ತು. ಈ ವೇಳೆ ಅವರನ್ನು ಟ್ರೋಲ್ ಮಾಡಲಾಗಿತ್ತು. ಇದಕ್ಕೆ ಅವರು ಹೆಚ್ಚು ತಲೆಕೆಡಿಸಿಕೊಂಡಿಲ್ಲ.
ಹರ್ನಾಜ್ ಸಂಧು
ಹರ್ನಾಜ್ ಸಂಧು ಅವರು ಬಾಡಿಶೇಮ್ ಎದುರಿಸಿದ್ದರು. ಅವರು ‘ಮಿಸ್ ಯೂನಿವರ್ಸ್ ತರಹ ಕಾಣುವುದಿಲ್ಲ. ಅವರು ಮಿಸ್ ವರ್ಸ್ಟ್’ ಎಂದು ಟೀಕೆ ಮಾಡಲಾಗಿತ್ತು. ಇದು ಅವರಿಗೆ ಬೇಸರ ಮೂಡಿಸಿತ್ತು.
ವಿದ್ಯಾ ಬಾಲನ್
ವಿದ್ಯಾ ಬಾಲನ್ ಅವರು ಮೊದಲು ಸ್ಲಿಮ್ ಆಗಿದ್ದರು. ಅವರು ನಟಿಯಾಗಿ ಹಲವು ವರ್ಷಗಳ ಕಾಲ ಬಾಲಿವುಡ್ನಲ್ಲಿ ಮಿಂಚಿದ್ದಾರೆ. ಆದರೆ, ಈಗ ಹಾಗಿಲ್ಲ. ಅವರ ದೇಹದ ತೂಕ ಹೆಚ್ಚಿದೆ. ಇದರಿಂದ ಅವರು ಬಾಡಿ ಶೇಮ್ ಎದುರಿಸಿದ್ದರು. ‘ನನ್ನನ್ನು ನಾನು ಪ್ರೀತಿಸಬೇಕು. ನನ್ನನ್ನು ನಾನು ಒಪ್ಪಬೇಕು’ ಎನ್ನುವ ಮನಸ್ಥಿತಿ ಅವರಿಗೆ ಬಂದಿದೆ. ಇಲಿಯಾನಾ ಡಿಕ್ರೂಜ್
ಇಲಿಯಾನಾ ಈಗ ಒಂದು ಮಗುವಿನ ತಾಯಿ. ಟಾಲಿವುಡ್ ಹಾಗೂ ಬಾಲಿವುಡ್ನಲ್ಲಿ ನಟಿಸಿದ್ದ ಅವರು ಬಾಡಿ ಶೇಮಿಂಗ್ ಎದುರಿಸಿದ್ದಿದೆ. ಅವರ ದೇಹದ ತೂಕ ಹೆಚ್ಚಾಗಿದ್ದಕ್ಕೆ ಅನೇಕರು ಟೀಕೆ ಮಾಡಿದ್ದರು. ಈಗ ಮೊದಲಿನ ಶೇಪ್ಗೆ ಮರಳುತ್ತಿದ್ದಾರೆ. ಅವರು ಸಾಕಷ್ಟು ಜಿಮ್ ಮಾಡುತ್ತಿದ್ದಾರೆ.
ಇದನ್ನೂ ಓದಿ: ಗಂಡು ಮಗುವಿಗೆ ಜನ್ಮ ನೀಡಿದ ಇಲಿಯಾನಾ; ತಂದೆ ಯಾರೆಂಬುದು ಇನ್ನೂ ತಿಳಿದಿಲ್ಲ
ಅರ್ಜುನ್ ಕಪೂರ್
ಅರ್ಜುನ್ ಕಪೂರ್ ಅವರು ಶೇಪ್ ಕಳೆದುಕೊಂಡಿದ್ದಕ್ಕೆ ಟೀಕೆಗೆ ಒಳಗಾಗಿದ್ದರು. ಅವರನ್ನು ಅನೇಕರು ‘ಆಂಟಿ ಲವರ್’ ಎಂದು ಕರೆದಿದ್ದು ಇದೆ. ಅವರು ಮಲೈಕಾ ಅರೋರಾ ಜೊತೆ ರಿಲೇಶನ್ಶಿಪ್ ಹೊಂದಿದ್ದಾರೆ. ಇವರಿಗೆ ಮದುವೆ ಆಗೋ ಆಲೋಚನೆ ಇಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ



