ನಟಿ ರಾಗಿಣಿ ಖನ್ನಾ (Ragini Khanna) ಅವರು ‘ಸಸುರಾಲ್ ಗೇಂಡಾ ಫೂಲ್’ ಮತ್ತು ‘ಭಾಸ್ಕರ್ ಭಾರ್ತಿ’ ಧಾರಾವಾಹಿ ಮೂಲಕ ಫೇಮಸ್ ಆದವರು. ಅವರು ಬಾಲಿವುಡ್ನ ಖ್ಯಾತ ನಟ ಗೋವಿಂದ್ ಅವರ ಸೊಸೆ ಕೂಡ ಹೌದು. ಅವರು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎನ್ನುವ ಸುದ್ದಿ ಹರಿದಾಡಿದೆ. ಆದರೆ, ಇದನ್ನು ರಾಗಿಣಿ ಖನ್ನಾ ಸುಳ್ಳು ಎಂದಿದ್ದಾರೆ. ಈ ರೀತಿ ಆಗಲು ಅವರು ಮಾಡಿದ ಎಡವಟ್ಟು ಕಾರಣ ಎಂದು ಹೇಳಿದ್ದಾರೆ.
ದೈನಿಕ್ ಭಾಸ್ಕರ್ಗೆ ನೀಡಿದ ಸಂದರ್ಶನ ಒಂದರಲ್ಲಿ ಅವರು ಮಾತನಾಡಿದ್ದಾರೆ. ‘ನಾವು ಕಲಾವಿದರಾಗಿರುವುದರಿಂದ ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಆ ಒಂದು ಘಟನೆಯಿಂದ ನಾನು ಈ ವಿಚಾರ ಕಲಿತಿದ್ದೇನೆ. ನಾನು ಇತ್ತೀಚೆಗೆ ಅಭಿಮಾನಿಗಳ ಪೋಸ್ಟ್ಗಳನ್ನು ರೀಪೋಸ್ಟ್ ಮಾಡುತ್ತಿದ್ದೇನೆ. ನಾನು ಇಂದು ಈ ಹಂತಕ್ಕೆ ಬಂದಿದ್ದೇನೆ ಎಂದರೆ ಅದಕ್ಕೆ ಅಭಿಮಾನಿಗಳೇ ಕಾರಣ. ಆದರೆ, ಇದರಿಂದಲೇ ತೊಂದರೆ ಆಗುತ್ತದೆ ಎಂದು ನಾನು ಭಾವಿಸಿರಲಿಲ್ಲ. ನನ್ನ ಅಸ್ಮಿತತೆ ಬಗ್ಗೆಯೇ ಪ್ರಶ್ನೆ ಏಳುವಂತಾಗಿದೆ’ ಎಂದಿದ್ದಾರೆ ಅವರು.
‘ನಾನು ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳುತ್ತೇನೆ ಎನ್ನುವ ಫೇಕ್ ಪೋಸ್ಟ್ನ ಅಭಿಮಾನಿಯೋರ್ವ ಪೋಸ್ಟ್ ಮಾಡಿದ್ದ. ಅಷ್ಟೇ ಅಲ್ಲ ಕೊಲಾಬರೇಷನ್ಗೆ ರಿಕ್ವೆಸ್ಟ್ ಕೂಡ ಕಳುಹಿಸಿದ್ದ. ತಪ್ಪಾಗಿ ನಾನು ಅದನ್ನು ಅಸ್ಸೆಪ್ಟ್ ಮಾಡಿದೆ. ನಾನು ಮತಾಂತರಗೊಂಡ ಬಗ್ಗೆ ಮಾತನಾಡುತ್ತಿರುವ ಫೇಕ್ ಪೋಸ್ಟ್ ಮಾಡಿದ್ದ. ಇದು ಸಂಪೂರ್ಣವಾಗಿ ಸುಳ್ಳು. ನಾನು ಅದನ್ನು ರಿಪೋರ್ಟ್ ಮಾಡಿದ್ದೇನೆ’ ಎಂದಿದ್ದಾರೆ ಅವರು.
‘ನನಗೆ ಲಕ್ಷಾಂತರ ಅಭಿಮಾನಿಗಳು ಇದ್ದಾರೆ. ಯಾರೋ ಒಬ್ಬವನು ಮಾಡಿದ ತಪ್ಪಿನಿಂದ ನಾನು ನನ್ನ ಎಲ್ಲಾ ಅಭಿಮಾನಿಗಳನ್ನು ದೂಷಿಸಲಾರೆ. ನನ್ನ ಅಭಿಮಾನಿಗಳು ನನಗೆ ತುಂಬಾನೇ ನಿಷ್ಠಾವಂತರಾಗಿದ್ದಾರೆ. ಹೀಗಾಗಿ ನಾನು ಅವರನ್ನು ಗೌರವಿಸುತ್ತೇನೆ’ ಎಂದಿದ್ದಾರೆ.
ಇದನ್ನೂ ಓದಿ: ರಾಗಿಣಿ ದ್ವಿವೇದಿ ಹೊಸ ಫೋಟೋ ಶೂಟ್ಗೆ ಫಿದಾ ಆದ ಫ್ಯಾನ್ಸ್
‘ನಾನು ರಾಗಿಣಿ ಖನ್ನಾ. ನಾನು ಹಿಂದೂ ಧರ್ಮವನ್ನು ತ್ಯಜಿಸಿ ಕ್ರಿಶ್ಚಿಯನ್ ಧರ್ಮವನ್ನು ಸ್ವೀಕರಿಸಿದ್ದೇನೆ. ಆದರೆ ಈಗ ನಾನು ಕಟ್ಟಾ ಹಿಂದೂ ಆಗಿಬಿಟ್ಟಿದ್ದೇನೆ. ನಾನು ಹಿಂದೂ ಸಂಪ್ರದಾಯಸ್ಥನಾಗುವತ್ತ ಸಾಗಿದ್ದೇನೆ’ ಎಂದು ಅವರು ಹೇಳಿದ್ದರು.
ರಾಗಿಣಿ ಅವರು 2008ರಲ್ಲಿ ಕಿರುತೆರೆ ಪ್ರವೇಶಿಸಿದರು. ‘ರಾಧಾ ಕಿ ಬೇಟಿಯಾ ಕುಚ್ ಕರ್ದಿಕಾಯೇಂಗಿ’ ಧಾರಾವಾಹಿ ಮೂಲಕ ಅವರು ಫೇಮಸ್ ಆದರು. ರಾಗಿಣಿ ಅವರು ‘ಸಸುರಾಲ್ ಗೇಂಡಾ ಫೂಲ್ 2’ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರಲ್ಲಿ ಅವರು ಸುಹಾನಾ ಬಾಜ್ಪಾಯಿ ಕಶ್ಯಪ್ ಪಾತ್ರ ಮಾಡುತ್ತಿದ್ದಾರೆ. ಇತ್ತೀಚೆಗೆ ಅವರು ತಮ್ಮ ಸಂಬಂಧಿ ಆರ್ತಿ ಸಿಂಗ್ ಮದುವೆಯಲ್ಲಿ ಕಾಣಿಸಿಕೊಂಡಿದ್ದರು. ಅವರು ಕಿರುತೆರೆ ಜೊತೆ ಹಿರಿತೆರೆಯಲ್ಲೂ ಗುರುತಿಸಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.