ಹಿಂದಿಯ ಪ್ರಮುಖ ಸಿನಿಮಾ, ಟಿವಿ ಶೋ ಹಾಗೂ ವೆಬ್ ಸೀರಿಸ್ಗಳಲ್ಲಿ ಅಭಿನಯಿಸಿದ್ದ ನಟ ಮೇಜರ್ ಬಿಕ್ರಮ್‌ಜೀತ್ ಕನ್ವರ್‌ಪಾಲ್ ಕೊವಿಡ್ಗೆ ಬಲಿಯಾಗಿದ್ದಾರೆ. ಅವರಿಗೆ 52 ವರ್ಷ ವಯಸ್ಸಾಗಿತ್ತು. ಈ ಮೂಲಕ ಭಾರತ ಚಿತ್ರರಂಗ ಮತ್ತೋರ್ವ ಕಲಾವಿದನನ್ನು ಕಳೆದುಕೊಂಡಂತಾಗಿದೆ.
ಬಿಕ್ರಮ್‌ಜೀತ್ ಕನ್ವರ್‌ಪಾಲ್ ಅವರಿಗೆ ಇತ್ತೀಚೆಗೆ ಕೊರೊನಾ ಸೋಂಕು ಅಂಟಿರುವ ವಿಚಾರ ದೃಢವಾಗಿತ್ತು. ನಂತರ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ವೇಳೆ ಅವರಿಗೆ ತೀವ್ರವಾಗಿ ಉಸಿರಾಟದ ತೊಂದರೆ ಕಾಡಿತ್ತು. ಕೊನೆಗೆ ಚಿಕಿತ್ಸೆ ಫಲಕಾರಿಯಾಗದೆ ಬಿಕ್ರಮ್‌ಜೀತ್ ಮೃತಪಟ್ಟಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಬಿಕ್ರಮ್‌ಜೀತ್ ಸಾವು ಬಾಲಿವುಡ್ಗೆ ಶಾಕ್ ನೀಡಿದೆ. ಸಾಕಷ್ಟು ಸೆಲೆಬ್ರಿಟಿಗಳು ಇವರ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಫಿಲ್ಮ್ಮೇಕರ್ ಅಶೋಕ್ ಪಂಡಿತ್, ಬಿಕ್ರಮ್‌ಜೀತ್ ಕೊವಿಡ್ಗೆ ಬಲಿಯಾಗಿದ್ದಾರೆ. ಅವರು ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ನಂತರ ಚಿತ್ರರಂಗಕ್ಕೆ ಬಂದು ಸಾಕಷ್ಟು ಪೋಷಕ ಪಾತ್ರ ನಿರ್ವಹಿಸಿದ್ದರು. ಅವರ ಕುಟುಂದವರಿಗೆ ಈ ನೋವು ಭರಿಸುವ ಶಕ್ತಿ ಸಿಗಲಿ ಎಂದಿದ್ದಾರೆ.
Sad to hear about the demise of actor Major Bikramjeet Kanwarpal this morning due to #Covid.
A retired army officer, Kanwarpal had played supporting roles in many films and television serials.
Heartfelt condolences to his family & near ones.ॐ शान्ति !
?— Ashoke Pandit (@ashokepandit) May 1, 2021
ಬಿಕ್ರಮ್‌ಜೀತ್ ಸೇನೆಯಲ್ಲಿ ಸೇವೆಸಲ್ಲಿಸಿ ಬಂದ ನಂತರ 2003ರಲ್ಲಿ ನಟನೆ ಆರಂಭಿಸಿದರು. ಪೇಜ್ 3, ರಾಕೆಟ್ ಸಿಂಗ್, ಆರಕ್ಷಕನ್, ಮರ್ಡರ್ 2, 2 ಸ್ಟೇಟ್ಸ್, ಘಾಜಿ ಅಟ್ಯಾಕ್, ರಹಸ್ಯ ಸೇರಿ ಸಾಕಷ್ಟು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಇವರು ಕೊನೆಯಾದಾಗಿ ಕಾಣಿಸಿಕೊಂಡಿದ್ದು ಹಾಟ್ ಸ್ಟಾರ್ನ Special Ops ವೆಬ್ ಸೀರಿಸ್ನಲ್ಲಿ.
ಚಿತ್ರರಂಗದ ಸಾಲು ಸಾಲು ಮಂದಿ ಕೊರೊನಾಗೆ ಬಲಿಯಾಗುತ್ತಿದ್ದಾರೆ. ಬಾಲಿವುಡ್, ಕಾಲಿವುಡ್ ಹಾಗೂ ಸ್ಯಾಂಡಲ್ವುಡ್ನ ಕಲಾವಿದರು, ನಿರ್ದೇಶಕರು, ನಿರ್ಮಾಪಕರು ಕೊರೊನಾದಿಂದ ಮೃತಪಡುತ್ತಿದ್ದಾರೆ. ಯುವ ನಟ-ನಿರ್ಮಾಪಕ ಡಿ.ಎಸ್. ಮಂಜುನಾಥ್, ಪೆಟ್ರೋಮ್ಯಾಕ್ಸ್ ಸಿನಿಮಾದ ಕಾರ್ಯಕಾರಿ ನಿರ್ಮಾಪಕ ರಾಜಶೇಖರ್ ಅವರನ್ನು ಕೊರೊನಾ ಬಲಿ ತೆಗೆದುಕೊಂಡಿದೆ.
ಇದನ್ನೂ ಓದಿ: Corona Death: ಪೆಟ್ರೋಮ್ಯಾಕ್ಸ್ ಸಿನಿಮಾದ ಕಾರ್ಯಕಾರಿ ನಿರ್ಮಾಪಕ ರಾಜು ನಿಧನ