AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿನಿಮಾ ಸಕ್ಸಸ್ ಮೀಟ್​ನಲ್ಲಿ ಸಿಟ್ಟಾಗಿ ಹೊರನಡೆದ ನಟ ನಾಗ ಶೌರ್ಯ

Rangabali: ನಟ ನಾಗಶೌರ್ಯ ನಟನೆಯ ರಂಗಬಲಿ ಸಿನಿಮಾ ಕೆಲವು ದಿನಗಳ ಹಿಂದೆ ಬಿಡುಗಡೆ ಆಗಿ ಹಿಟ್ ಎನಿಸಿಕೊಂಡಿದೆ. ಆದರೆ ಸಿನಿಮಾದ ಸಕ್ಸಸ್ ಮೀಟ್ ಕಾರ್ಯಕ್ರಮದಲ್ಲಿ ನಾಗಶೌರ್ಯ ಸಿಟ್ಟುಮಾಡಿಕೊಂಡು ಎದ್ದು ಹೋಗಿದ್ದಾರೆ.

ಸಿನಿಮಾ ಸಕ್ಸಸ್ ಮೀಟ್​ನಲ್ಲಿ ಸಿಟ್ಟಾಗಿ ಹೊರನಡೆದ ನಟ ನಾಗ ಶೌರ್ಯ
ನಾಗ ಶೌರ್ಯ
ಮಂಜುನಾಥ ಸಿ.
|

Updated on: Jul 09, 2023 | 3:43 PM

Share

ಸಿನಿಮಾ (Cinema) ನಟರು ಬಹಿರಂಗ ಸಭೆಗಳಲ್ಲಿ ತಾಳ್ಮೆ ಕಳೆದುಕೊಂಡು ವರ್ತಿಸುವುದು ತೀರ ಕಡಿಮೆ ಅದರಲ್ಲಿಯೂ ಪತ್ರಕರ್ತರು ಎದುರಿಗಿದ್ದಾಗಲಂತೂ ಸಂಭಾವ್ಯರಾಗಿಬಿಡುತ್ತಾರೆ, ಸಿಟ್ಟು ಪ್ರದರ್ಶಿಸುವುದು ತೀರ ಕಡಿಮೆ. ಆದರೆ ತೆಲುಗು ಚಿತ್ರರಂಗದ ಯುವನಟನೊಬ್ಬ ಪತ್ರಕರ್ತರ ಮೇಲೆ ಸಿಟ್ಟಾಗಿ ಸಿನಿಮಾದ ಸಕ್ಸಸ್ ಮೀಟ್ (success meet) ಕಾರ್ಯಕ್ರಮದಿಂದ ಎದ್ದು ಹೊರ ಹೋಗಿರುವ ಘಟನೆ ನಡೆದಿದೆ. ನಟನ ಕೋಪದ ಬಗ್ಗೆ ಋಣಾತ್ಮಕ ಕಮೆಂಟ್​ಗಳು ಸಾಮಾಜಿಕ ಜಾಲತಾಣದಲ್ಲಿ (Social Media) ಹರಿದಾಡುತ್ತಿವೆ.

ನಾಗಶೌರ್ಯ ನಟಿಸಿರುವ ‘ರಂಗಬಲಿ’ ಹೆಸರಿನ ಇತ್ತೆಚೆಗೆ ಬಿಡುಗಡೆ ಆಗಿ ಸಾಧಾರಣ ಹಿಟ್ ಎನಿಸಿಕೊಂಡಿದೆ. ಇದರ ಬೆನ್ನಲ್ಲೆ ಸಿನಿಮಾವು ಪತ್ರಕರ್ತರನ್ನು ಆಹ್ವಾನಿಸಿ ಸಿನಿಮಾದ ಸಕ್ಸಸ್ ಮೀಟ್ ಆಯೋಜನೆ ಮಾಡಿತ್ತು. ಕಾರ್ಯಕ್ರಮದಲ್ಲಿ ಸಿನಿಮಾದ ಯಶಸ್ಸಿನ ಬಗ್ಗೆ, ಸಿನಿಮಾವನ್ನು ಗೆಲ್ಲಿಸಿದ ಪ್ರೇಕ್ಷಕರಿಗೆ ಧನ್ಯವಾದವನ್ನು ಚಿತ್ರತಂಡ ಹೇಳಿತು. ಪತ್ರಕರ್ತರು ಪ್ರಶ್ನೆ ಕೇಳುವ ಸಂದರ್ಭ ಬಂದಾಗ ಸಿನಿಮಾದಲ್ಲಿದ್ದ ಸಮಸ್ಯೆಯೊಂದರ ಬಗ್ಗೆ ಪತ್ರಕರ್ತರೊಬ್ಬರು ಪ್ರಶ್ನೆ ಕೇಳಿದರು. ಇದು ನಾಗಶೌರ್ಯ ಅವರ ಸಿಟ್ಟಿಗೆ ಕಾರಣವಾಯಿತು.

ಕತೆ ನಡೆಯುವ ಕಾಲವನ್ನು ಸಿನಿಮಾದಲ್ಲಿ ತಪ್ಪಾಗಿ ತೋರಿಸಿರುವ ಬಗ್ಗೆ ಪತ್ರಕರ್ತರೊಬ್ಬರು ಪ್ರಶ್ನೆ ಮಾಡಿದರು. ಪತ್ರಕರ್ತರ ಪ್ರಶ್ನೆಗೆ ಉತ್ತರ ನೀಡಿದ ನಿರ್ದೇಶಕ ಪವನ್ ಬಸಮಸೆಟ್ಟಿ ಸ್ಪಷ್ಟೀಕರಣ ನೀಡಲೆತ್ನಿಸಿದರು. ಆದರೆ ನಿರ್ದೇಶಕನ ಉತ್ತರದಿಂದ ತೃಪ್ತಿಯಾಗದ ಪತ್ರಕರ್ತ ಪದೇ ಪದೇ ಪ್ರಶ್ನೆಗಳನ್ನು ಕೇಳುತ್ತಲೇ ಇದ್ದರು. ತಾಳ್ಮೆ ಕಳೆದುಕೊಂಡು ಮೈಕ್ ತೆಗೆದುಕೊಂಡ ನಾಗ ಶೌರ್ಯ, ಸಿನಿಮಾದಲ್ಲಿ ಪ್ರತಿ ನಿಮಿಷದ ಮಾಹಿತಿ ನೀಡಬೇಕು ಎಂದರೆ ಪ್ರತಿ ಸಿನಿಮಾವನ್ನು 24 ಗಂಟೆಗಳ ಕಾಲ ಪ್ರದರ್ಶಿಸಬೇಕಾಗುತ್ತದೆ. ಬಾಹುಬಲಿ ಸಿನಿಮಾ 20-30 ವರ್ಷಗಳಲ್ಲಿ ನಡೆಯುವ ಕತೆ ಆ ಸಿನಿಮಾದ ಪ್ರತಿ ಡೀಟೇಲ್ ನೀಡಲು ಸಾಧ್ಯವಾಗುತ್ತದೆಯೇ? ಹಾಗೆಯೇ ಕೆಲವು ವಿಷಯಗಳನ್ನು ನಂಬಿ ಕೈಬಿಡಬೇಕು ಅದನ್ನು ಹೀಗೆ ಎಳೆದಾಡಬಾರದು” ಎಂದು ಸಿಟ್ಟಿನಿಂದ ಹೇಳಿದ್ದಾರೆ.

ಇದನ್ನೂ ಓದಿ:ನಿಧಾನವಾಗಿ ಟಾಲಿವುಡ್​ ತೊರೆಯುತ್ತಿದ್ದಾರೆ ಕೃತಿ ಶೆಟ್ಟಿ, ಕೀರ್ತಿಸುರೇಶ್?

ಹೀಗೆ ಹೇಳಿದ ಬಳಿಕ ಮೈಕ್ ಅನ್ನು ನಿರೂಪಕಿಯ ಕೈಗೆ ಕೊಟ್ಟು ಎದ್ದು ಹೋಗಿಬಿಟ್ಟಿದ್ದಾರೆ. ನಾಗ ಶೌರ್ಯಾ ಎದ್ದು ಹೋಗುತ್ತಿದ್ದಂತೆ ಚಿತ್ರದ ನಾಯಕಿ, ನಿರ್ಮಾಪಕ ಇತರರು ಸಹ ಎದ್ದು ಹೋಗಿದ್ದಾರೆ. ನಿರ್ದೇಶಕರು ಪತ್ರಕರ್ತರಿಗೆ ಇನ್ನೂ ಉತ್ತರ ನೀಡುವಾಗಲೇ ನಾಗ ಶೌರ್ಯ ಸಿಟ್ಟಾಗಿ ಎದ್ದು ಹೋಗಿದ್ದರ ಬಗ್ಗೆ ಪತ್ರಕರ್ತರು ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿಯೂ ಈ ವಿಡಿಯೋ ವೈರಲ್ ಆಗಿದ್ದು, ನಾಗಶೌರ್ಯ ಅಂಥಹಾ ನಟ ಹೀಗೆ ಅಹಂಕಾರ ಪ್ರದರ್ಶಿಸಬಾರದು ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.

2011 ರಲ್ಲಿ ‘ಕ್ರಿಕೆಟ್ ಗರ್ಲ್ಸ್ ಆಂಡ್ ಬೀರ್’ ಹೆಸರಿನ ತೆಲುಗು ಸಿನಿಮಾ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದ ನಾಗಶೌರ್ಯ, ಹಲವು ಸಿನಿಮಾಗಳಲ್ಲಿ ನಾಯಕನಾಗಿ, ಎರಡನೇ ನಾಯಕನಾಗಿ ನಟಿಸಿದ್ದಾರೆ. ರಶ್ಮಿಕಾರ ಮೊದಲ ತೆಲುಗು ಸಿನಿಮಾ ‘ಛಲೋ’ಗೆ ಇವರೇ ನಾಯಕರಾಗಿದ್ದರು. ಅವರ ನಟನೆಯ ‘ರಂಗಬಲಿ’ ಸಿನಿಮಾ ಎರಡು ದಿನಗಳ ಹಿಂದಷ್ಟೆ (ಜುಲೈ 7) ಬಿಡುಗಡೆ ಆಗಿದೆ. ಸಿನಿಮಾದಲ್ಲಿ ಯುಕ್ತಿ ತರೇಜಾ, ಶೈನ್ ಟಾಮ್ ಚಾಕೋ ಇನ್ನಿತರರು ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್