20 ರೂಪಾಯಿಗೆ ಕೂಲಿ ಕೆಲಸ ಮಾಡುತ್ತಿದ್ದ ಈ ವ್ಯಕ್ತಿ ಈಗ ಬೇಡಿಕೆಯ ನಾಯಕ ನಟ

Actor Soori: ದಕ್ಷಿಣ ಭಾರತ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿರುವ ಹಲವಾರು ನಟ, ನಿರ್ದೇಶಕ, ನಿರ್ಮಾಪಕರು ಒಂದು ಸಮಯದಲ್ಲಿ ಕಷ್ಟಪಟ್ಟು ಜೀವನ ಮಾಡಿದವರೇ. ಇಂದಿಗೂ ಸಹ ಎಷ್ಟೋ ಮಂದಿ ನಟರು ಮಧ್ಯಮ, ಬಡ ಕುಟುಂಬದಿಂದ ಬಂದವರೇ, ಅವರಲ್ಲಿ ತಮಿಳಿನ ಖ್ಯಾತ ನಟ ಸೂರಿ ಸಹ ಒಬ್ಬರು.

20 ರೂಪಾಯಿಗೆ ಕೂಲಿ ಕೆಲಸ ಮಾಡುತ್ತಿದ್ದ ಈ ವ್ಯಕ್ತಿ ಈಗ ಬೇಡಿಕೆಯ ನಾಯಕ ನಟ
Soori

Updated on: May 16, 2025 | 4:48 PM

ಸಿನಿಮಾ (Cinema) ಜಗತ್ತೇ ಹಾಗೆ ಇಲ್ಲಿ ಕುಬೇರ, ಕುಚೇಲ ಆಗಿಬಿಡಬಲ್ಲ, ಪ್ರತಿಭೆ, ಅದೃಷ್ಟ ಇದ್ದರೆ ಕುಚೇಲ, ಕುಬೇರ ಆಗಿಬಿಡಬಲ್ಲ. ಇಂದು ಚಿತ್ರರಂಗದಲ್ಲಿ, ವಿಶೇಷವಾಗಿ ದಕ್ಷಿಣ ಭಾರತ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿರುವ ಹಲವಾರು ನಟ, ನಿರ್ದೇಶಕ, ನಿರ್ಮಾಪಕರು ಒಂದು ಸಮಯದಲ್ಲಿ ಕಷ್ಟಪಟ್ಟು ಜೀವನ ಮಾಡಿದವರೇ. ಇಂದಿಗೂ ಸಹ ಎಷ್ಟೋ ಮಂದಿ ನಟರು ಮಧ್ಯಮ, ಬಡ ಕುಟುಂಬದಿಂದ ಬಂದವರೇ, ಅವರಲ್ಲಿ ತಮಿಳಿನ ಖ್ಯಾತ ನಟ ಸೂರಿ ಸಹ ಒಬ್ಬರು.

‘ವಿಡುದಲೈ’ ಸಿನಿಮಾನಲ್ಲಿ ವಿಜಯ್ ಸೇತುಪತಿ ಎದುರು ಅದ್ಭುತವಾಗಿ ನಟಿಸಿ ತಮ್ಮ ಪ್ರತಿಭೆ ಸಾಬೀತು ಮಾಡಿರುವ ಸೂರಿ ಅತ್ಯಂತ ಬಡ ಕುಟುಂಬದಿಂದ ಬಂದವರು. ಇದೀಗ ‘ಮಾಮನ್’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದು ಸಿನಿಮಾದ ಪ್ರಚಾರದ ವೇಳೆ ತಮ್ಮ ಹಿನ್ನೆಲೆಯ ಬಗ್ಗೆ, ತಮ್ಮ ಸಂಕಷ್ಟದ ದಿನಗಳ ಬಗ್ಗೆ ಸೂರಿ ಮಾತನಾಡಿದ್ದಾರೆ. 1993 ರಲ್ಲಿ ನಾನು ತಿರುಪೂರಿಗೆ ಕೆಲಸಕ್ಕಾಗಿ ಬಂದೆ. ಅಲ್ಲಿ ಸಿರಿ ಹೋಮ್ ಕ್ಯೂರಿಂಗ್ ಎಂಬಲ್ಲಿ ಕೆಲಸಕ್ಕೆ ಸೇರಿದೆ. ಅಲ್ಲಿ ನನಗೆ ದಿನಕ್ಕೆ 20 ರೂಪಾಯಿ ಸಂಬಳ. ವಾರಕ್ಕೆ 140 ಕೊಡುತ್ತಿದ್ದರು. ಅದರಲ್ಲಿ 70 ರೂಪಾಯಿ ನಾನು ಇಟ್ಟುಕೊಂಡು, 70 ರೂಪಾಯಿ ಮನೆಗೆ ಕಳಿಸುತ್ತಿದ್ದೆ’ ಎಂದಿದ್ದಾರೆ.

ಇದನ್ನೂ ಓದಿ:ಕೈ ಕೊಟ್ಟ ಅಲ್ಲು ಅರ್ಜುನ್, ರಾಮ್ ಚರಣ್ ಜೊತೆ ಸಿನಿಮಾ ಮಾಡಲಿರುವ ಸ್ಟಾರ್ ನಿರ್ದೇಶಕ

‘ತಿರುಪುರು ಜಿವನದ ಮೊದಲ ಪಾಠಗಳನ್ನು ನನಗೆ ಕಲಿಸಿಕೊಟ್ಟಿತು. ನಾನು ಕೆಲಸ ಮಾಡುವ ಕಡೆ ಒಂದು ಬೇಕರಿ ಇತ್ತು. ಅಲ್ಲಿ ಒಂದು ರೂಪಾಯಿಗೆ ಕೊಬ್ರಿ ಬನ್ನು, 50 ಪೈಸೆಗೆ ಟೀ ಕೊಡುತ್ತಿದ್ದರು. ಎರಡೂ ಒಟ್ಟಿಗೆ ತೆಗೆದುಕೊಂಡರೆ ನನ್ನ ಬಜೆಟ್​ಗೆ ಸರಿ ಹೊಂದುತ್ತಿರಲಿಲ್ಲ ಹಾಗಾಗಿ ನಾನು ಟೀ ಮಾತ್ರ ಕುಡಿಯುತ್ತಿದ್ದೆ. ಆದರೆ ಆಗಲೂ ಸಹ ಎಷ್ಟೋ ಮಂದಿ ನನಗೆ ಊಟಕ್ಕೆ, ವಸತಿಗೆ ಸಹಾಯ ಮಾಡಿದರು. ಎಷ್ಟೋ ಹೋಟೆಲ್ ಓನರ್​ಗಳು ಊಟ ಕೊಟ್ಟಿದ್ದಾರೆ’ ಎಂದು ಹಳೆಯ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ.

‘ನಾನು ತಿರಪೂರಿನಲ್ಲಿ ಕಲಿತ ಪಾಠಗಳು ನನ್ನ ಮುಂದಿನ ಜೀವನಕ್ಕೆ ಬಹಳ ಸಹಾಯ ಮಾಡಿವೆ. ಈ ಮಣ್ಣಿನಲ್ಲಿಯೇ ನಾನು ಜೀವನದ ಬಗ್ಗೆ ಕಲಿತದ್ದು’ ಎಂದಿದ್ದಾರೆ. ಸೂರಿ ನಟಿಸಿರುವ ‘ಮಾಮನ್’ ಸಿನಿಮಾ, ಮಾಮ ಮತ್ತು ಅಳಿಯನ ಕತೆಯಾಗಿದೆ. ಸಹೋದರಿಯ ಮಗನ ಮೇಲೆ ಜೀವವೇ ಇಟ್ಟುಕೊಂಡಿರುವ ನಾಯಕ. ಆದರೆ ಕುಟುಂಬ ಯಾವುದೋ ಕ್ಷುಲ್ಲಕ ಕಾರಣಕ್ಕೆ ದೂರಾದಾಗ ಮಾಮನ ಮೇಲೆ ಹಾಗೂ ಅಳಿಯ ಸಹ ದೂರಾಗುತ್ತಾರೆ. ಆ ಬಳಿಕ ಅವರು ಹೇಗೆ ಒಂದಾಗುತ್ತಾರೆ ಎಂಬುದೇ ಸಿನಿಮಾದ ಕತೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ