Vishal Wedding: ನಟ ವಿಶಾಲ್​ ಮದುವೆ ಯಾವಾಗ? ಬಹಿರಂಗ ವೇದಿಕೆಯಲ್ಲಿ ಪ್ಲ್ಯಾನ್​ ತಿಳಿಸಿದ ಸ್ಟಾರ್​ ಹೀರೋ

Laatti Movie Teaser launch Event: ಹಲವು ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ವಿಶಾಲ್​ ಗುರುತಿಸಿಕೊಂಡಿದ್ದಾರೆ. ಇಂಥ ಕಾರ್ಯಗಳಿಂದಾಗಿ ಅವರಿಗೆ ಅಭಿಮಾನಿಗಳು ಹೆಚ್ಚು ಗೌರವ ನೀಡುತ್ತಾರೆ.

Vishal Wedding: ನಟ ವಿಶಾಲ್​ ಮದುವೆ ಯಾವಾಗ? ಬಹಿರಂಗ ವೇದಿಕೆಯಲ್ಲಿ ಪ್ಲ್ಯಾನ್​ ತಿಳಿಸಿದ ಸ್ಟಾರ್​ ಹೀರೋ
ವಿಶಾಲ್​
Updated By: ಮದನ್​ ಕುಮಾರ್​

Updated on: Nov 14, 2022 | 8:29 AM

ಖ್ಯಾತ ನಟ ವಿಶಾಲ್​ (Vishal) ಅವರು ತಮಿಳು ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ. ಬ್ಯಾಕ್​ ಟು ಬ್ಯಾಕ್ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಳ್ಳುತ್ತ, ಅಭಿಮಾನಿಗಳನ್ನು ರಂಜಿಸಲು ಶ್ರಮಿಸುತ್ತಿದ್ದಾರೆ. ಈಗ ಅವರಿಗೆ 45 ವರ್ಷ ವಯಸ್ಸು. ವಿಶಾಲ್​ ಯಾವಾಗ ಮದುವೆ (Vishal Marriage) ಆಗುತ್ತಾರೆ ಎಂಬ ಪ್ರಶ್ನೆ ಅಭಿಮಾನಿಗಳ ಮನದಲ್ಲಿ ಕೊರೆಯುತ್ತಿದೆ. ಆ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಬಹಿರಂಗ ವೇದಿಕೆಯಲ್ಲಿ ಈ ಬಗ್ಗೆ ವಿಶಾಲ್​ ಮಾತನಾಡಿದ್ದಾರೆ. ಅವರು ನಟಿಸಿರುವ ‘ಲಾಠಿ’ ಚಿತ್ರದ (Laatti Movie) ಟೀಸರ್​ ಲಾಂಚ್​ ಕಾರ್ಯಕ್ರಮ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ಮದುವೆ ಬಗ್ಗೆ ಪ್ರಶ್ನೆ ಎದುರಾಯಿತು. ಅದಕ್ಕೆ ಅವರು ನೇರವಾಗಿ ಉತ್ತರಿಸಿದ್ದಾರೆ.

ಹಲವು ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ವಿಶಾಲ್​ ಗುರುತಿಸಿಕೊಂಡಿದ್ದಾರೆ. ಇಂಥ ಕಾರ್ಯಗಳಿಂದಾಗಿ ಅವರಿಗೆ ಅಭಿಮಾನಿಗಳು ಹೆಚ್ಚು ಗೌರವ ನೀಡುತ್ತಾರೆ. ಪುನೀತ್​ ರಾಜ್​ಕುಮಾರ್​ ಅವರು ನಿಧನರಾದಾಗ ಶಕ್ತಿಧಾಮದ ಮಕ್ಕಳ ಜವಾಬ್ದಾರಿ ಹೊತ್ತುಕೊಳ್ಳುತ್ತೇನೆ ಎಂದು ವಿಶಾಲ್​ ಹೇಳಿದ್ದರು. ಹಾಗೆಯೇ ಅವರು ಚಿತ್ರರಂಗದ ಕಾರ್ಮಿಕರು ಮತ್ತು ಕಲಾವಿದರಿಗಾಗಿ ಶ್ರಮಿಸುತ್ತಿದ್ದಾರೆ.

‘ಪ್ರತಿ ವಿಚಾರಕ್ಕೂ ಒಂದು ಟೈಮ್​ ಬರಬೇಕು. ದಕ್ಷಿಣ ಭಾರತದ ಕಲಾವಿದರ ಸಂಘದ ಕಟ್ಟಡ ನಿರ್ಮಾಣ ಆದ ಬಳಿಕ ಮೊದಲ ಮುಹೂರ್ತದಲ್ಲಿ ನಾನು ಮದುವೆ ಆಗುತ್ತೇನೆ. ಆ ಕಟ್ಟಡದಿಂದ 3500 ಕಲಾವಿದರ ಕುಟುಂಬಗಳಿಗೆ ಸಹಾಯ ಆಗಲಿದೆ’ ಎಂದು ವಿಶಾಲ್​ ಹೇಳಿದ್ದಾರೆ. ಸಿನಿಮಾ ಮತ್ತು ರಂಗಭೂಮಿ ಕಲಾವಿದರಿಗೆ ಪಿಂಚಣಿ, ಹೆಲ್ತ್​ ಇನ್​ಶೂರೆನ್ಸ್​, ಮೇಕಪ್​ ಸಾಮಾಗ್ರಿ ಮುಂತಾದ ಸೌಲಭ್ಯಗಳನ್ನು ಒದಗಿಸಿಕೊಡಬೇಕು ಎಂದು ವಿಶಾಲ್​ ಕಷ್ಟಪಡುತ್ತಿದ್ದಾರೆ.

ಇದನ್ನೂ ಓದಿ
ಧರ್ಮಸ್ಥಳ ಮಂಜುನಾಥನ ದರ್ಶನ ಪಡೆದ ತಮಿಳು ನಟ ವಿಶಾಲ್: ಸೆಲ್ಫಿ ಕ್ಲಿಕ್ಕಿಸಿಕೊಂಡ ಅಭಿಮಾನಿಗಳು
Vishal: ವಿಶಾಲ್​ ಮನೆ ಮೇಲೆ ಕಲ್ಲು ತೂರಾಟ; ಸಿಸಿಟಿವಿ ವಿಡಿಯೋ ನೋಡಿ ಅಭಿಮಾನಿಗಳಲ್ಲಿ ಆತಂಕ
ಅಪ್ಪು ಕನಸು ಈಡೇರಿಸಲು ಶಕ್ತಿಧಾಮಕ್ಕೆ ಭೇಟಿ ನೀಡಿದ ತಮಿಳು ನಟ ವಿಶಾಲ್
Vishal: ವೃದ್ಧಾಶ್ರಮಗಳಲ್ಲಿ ಅನ್ನದಾನ ನಡೆಸಿ ಪುನೀತ್​ಗೆ ಅರ್ಥಪೂರ್ಣ ನಮನ ಸಲ್ಲಿಸಿದ ವಿಶಾಲ್

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಷ್ಟು ಹೊತ್ತಿಗಾಗಲೇ ವಿಶಾಲ್​ ಅವರ ಮದುವೆ ನಡೆದಿರಬೇಕಿತ್ತು. ಹೈದರಾಬಾದ್​ ಬೆಡಗಿಯೊಬ್ಬರ ಜೊತೆ ಅವರ ವಿವಾಹ ನಿಶ್ಚಯ ಆಗಿತ್ತು. ಆದರೆ ನಂತರದಲ್ಲಿ ಆ ಸಂಬಂಧ ಮುರಿದು ಬಿತ್ತು. ಈಗ ವಿಶಾಲ್​ ಅವರು ಯುವತಿಯೊಬ್ಬರ ಜೊತೆ ಡೇಟಿಂಗ್​ ಮಾಡುತ್ತಿದ್ದಾರೆ ಎಂಬ ಮಾತಿದೆ. ಆದರೆ ಅದು ಯಾರು ಎಂಬುದು ಸದ್ಯಕ್ಕೆ ಬಹಿರಂಗ ಆಗಿಲ್ಲ.

ಶೀಘ್ರದಲ್ಲೇ ವಿಶಾಲ್​ ಅವರು ತಮ್ಮ ಪ್ರಿಯತಮೆ ಯಾರೆಂಬುದನ್ನು ತಿಳಿಸಲಿದ್ದಾರೆ ಎಂದು ಅಭಿಮಾನಿಗಳು ನಿರೀಕ್ಷಿಸಿದ್ದಾರೆ. ಆದಷ್ಟು ಬೇಗ ದಕ್ಷಿಣ ಭಾರತದ ಕಲಾವಿದರ ಸಂಘದ ಕಟ್ಟಡ ನಿರ್ಮಾಣ ಆಗಲಿ. ಆನಂತರ ವಿಶಾಲ್ ಅವರು ದಾಂಪತ್ಯ ಜೀವನಕ್ಕೆ ಕಾಲಿಡಲಿ ಎಂದು ಫ್ಯಾನ್ಸ್​ ಆಶಿಸುತ್ತಿದ್ದಾರೆ.

ಕರ್ನಾಟಕದ ಜೊತೆ ವಿಶಾಲ್​ ನಂಟು ಹೊಂದಿದ್ದಾರೆ. ಇತ್ತೀಚೆಗೆ ಅವರು ಧರ್ಮಸ್ಥಳದ ಶ್ರೀಮಂಜುನಾಥ ಸ್ವಾಮಿ ದೇವಾಲಯಕ್ಕೆ ಬಂದು ಹೋಗಿದ್ದಾರೆ. ಈ ಮೊದಲು ಮೈಸೂರಿನ ಶಕ್ತಿಧಾಮಕ್ಕೂ ಅವರು ಭೇಟಿ ನೀಡಿದ್ದರು.

​ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.