ಲಾಸ್​ ವೇಗಾಸ್ ನಲ್ಲಿ ರೊಮ್ಯಾಂಟಿಕ್​ ವಾಕ್​ ಮಾಡಿದ ಪ್ರಿಯಾಂಕಾ ಚೋಪ್ರಾ  ಮತ್ತು ನಿಕ್​ ಜೋನಸ್​  

ಪ್ರಿಯಾಂಕಾ ಚೋಪ್ರಾ ಅವರು ಭಾನುವಾರ(ನವೆಂಬರ್​ 13) ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ‘ವೇಗಾಸ್​ ನೈಟ್ಸ್​ ವಿತ್​ ಬೇ' ಎಂದು ಬರೆದುಕೊಳ್ಳುವ ಮೂಲಕ ತಮ್ಮ ಪತಿ ನಿಕ್​ ಜೋನಸ್​ ಜೊತೆ ವಾಕ್​ ಮಾಡುವ ಪೋಸ್ಟ್​ನ್ನು ಹಂಚಿಕೊಂಡಿದ್ದಾರೆ.

ಲಾಸ್​ ವೇಗಾಸ್ ನಲ್ಲಿ ರೊಮ್ಯಾಂಟಿಕ್​ ವಾಕ್​ ಮಾಡಿದ ಪ್ರಿಯಾಂಕಾ ಚೋಪ್ರಾ  ಮತ್ತು ನಿಕ್​ ಜೋನಸ್​  
ಪ್ರಿಯಾಂಕಾ ಚೋಪ್ರಾ, ನಿಕ್​ ಜೋನಸ್​
Follow us
TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 14, 2022 | 10:42 AM

ಇತ್ತೀಚೆಗೆ ಭಾರತ ಪ್ರವಾಸ ಮುಗಿಸಿ ವಿದೇಶಕ್ಕೆ ಹಿಂದಿರುಗಿದ ನಟಿ ಪ್ರಿಯಾಂಕಾ ಚೋಪ್ರಾ (priyanka chopra)ತನ್ನ ಪತಿ ನಿಕ್​ ಅವರ ಜೊತೆ ಕಾಲಕಳೆದಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಹಿಂಬದಿಯಿಂದ ತೆಗೆದ ಫೋಟೋದಲ್ಲಿ ಪ್ರಿಯಾಂಕಾ ಕಪ್ಪು ಬೂಟುಗಳೊಂದಿಗೆ ಕೆಂಪು ಓವರ್​ ಕೋಟ್​ ಹಾಕಿಕೊಂಡಿದ್ದು, ನಿಕ್​ ಜೋನಸ್​ ಹಳದಿ ಜಾಕೆಟ್​ ಮತ್ತು ಜೀನ್ಸ್​ ಜೊತೆ ಬಿಳಿ ಬಣ್ಣದ ಸ್ನೀಕರ್ಸ್​ ಧರಿಸಿದ್ದಾರೆ.

ಮೂರು ವರ್ಷಗಳ ಬಳಿಕ ಮುಂಬೈಗೆ ಬಂದಿದ್ದ ಪ್ರಿಯಾಂಕಾ ಚೋಪ್ರಾ ತಮ್ಮ ಹೇರ್​ಕೇರ್​ ಬ್ರ್ಯಾಂಡ್​ನ್ನು ಪ್ರಚಾರ ಮಾಡಲು ಭಾರತಕ್ಕೆ ಆಗಮಿಸಿದ್ದರು, ಮುಂಬೈನ ತಮ್ಮ ನೆಚ್ಚಿನ ಸ್ಥಳಗಳಿಗೆ ಭೇಟಿ ನೀಡುವ ಫೋಟೋಗಳನ್ನು ಸೋಶಿಯಲ್​ ಮೀಡಿಯಾಗಳಲ್ಲಿ ಹಂಚಿಕೊಳ್ಳುವುದರ ಮೂಲಕ ಅಲ್ಲಿ ಕಳೆದ ನೆನಪುಗಳನ್ನು ಮೆಲಕು ಹಾಕುತ್ತಿದ್ದರು, ಮುಂಬೈನ ಮೆರೈನ್​ಡ್ರೈವ್​ ಬಳಿ ಕೆಲಕಾಲ ಕಾರು ನಿಲ್ಲಿಸಿ,‘ಒಂದು ನಿಮಿಷವಾದರೂ ನಾನು ನಿನ್ನನ್ನು ಮಿಸ್​ ಮಾಡಿಕೊಂಡಿದ್ದೇನೆ’ ಎಂದು ಬರೆದುಕೊಂಡಿದ್ದರು. ಇದರ ಜೊತೆಗೆ ಲಕ್ನೋದಲ್ಲಿರುವ ತಮ್ಮ ಬಾಲ್ಯದ ಮನೆಗೂ ಭೇಟಿ ನೀಡಿ ‘ನಾನು ಕೆಲವು ವರ್ಷಗಳು ನನ್ನ ಬಾಲ್ಯವನ್ನ ಇಲ್ಲಿಯೇ ಕಳೆದಿದ್ದು, ಇಲ್ಲಿ ನನಗೆ ಸ್ನೇಹಿತರಿದ್ದಾರೆ’ ಎಂದು ಹೇಳಿದ್ದರು.

View this post on Instagram

A post shared by Priyanka (@priyankachopra)

ಲಾಸ್​ ಏಂಜಲೀಸ್​ಗೆ ಮರಳಿದ ನಂತರ, ಪ್ರಿಯಾಂಕಾ ಚೋಪ್ರಾ ಅವರು ತಮ್ಮ ಮಗಳು ಮಾಲ್ತಿ ಮೇರಿ ಚೋಪ್ರಾ ಜೋನಸ್​ ಅವರೊಂದಿಗೆ ಆಟವಾಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ನಿಕ್​ ಅವರು ಮುದ್ದಾಗಿ ನೋಡುತ್ತಿದ್ದಾರೆ, ಈ ಪೋಸ್ಟ್​ನಲ್ಲಿ ಅವರು ‘ಮನೆ’ ಎಂದು ಬರೆದು ಹಾರ್ಟ್​ ಎಮೋಜಿಯನ್ನು ಹಾಕಿದ್ದಾರೆ.

ಇದನ್ನೂ ಓದಿ:Priyanka Chopra: ‘ಪ್ರಿಯಾಂಕಾ ಚೋಪ್ರಾ ವಿಶ್ವ ಸುಂದರಿ ಆಗಿದ್ದು ಮೋಸದಿಂದ’; 22 ವರ್ಷಗಳ ಬಳಿಕ ಗಂಭೀರ ಆರೋಪ

ಇನ್ನು ಪ್ರಿಯಾಂಕಾ ಚೋಪ್ರಾ ಅವರು ಬಾಲಿವುಡ್​ನಲ್ಲಿ ಕೊನೆಯದಾಗಿ 2019 ರಲ್ಲಿ ‘ದಿ ಸ್ಕೈ ಇಸ್​ ಪಿಂಕ್​’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಈಗ ‘ಜೀ ಲೆ ಜರಾ’ದಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಪ್ರಿಯಾಂಕಾ ಚೋಪ್ರಾ ಬಾಲಿವುಡ್​ ಸಿನಿಮಾಗಳಿಗಿಂತಲೂ ಹಾಲಿವುಡ್​ ಚಿತ್ರಗಳನ್ನೇ ಹೆಚ್ಚಾಗಿ ಒಪ್ಪಿಕೊಳ್ಳುತ್ತಿದ್ದಾರೆ. ಹಾಲಿವುಡ್​ನಲ್ಲಿ ಅವರ ‘ಲವ್​ ಅಗೇನ್​’ ಸಿನಿಮಾವು ಮುಂದಿನ ವರ್ಷ ರಿಲೀಸ್​ ಆಗಲಿದೆ.

ಇನ್ನಷ್ಟು ಮನರಂಜನಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ