
ದಳಪತಿ ವಿಜಯ್ (Thalapathy Vijay) ಅವರು ರಾಜಕೀಯಕ್ಕೆ ಬರೋದು ಖಚಿತವಾಗಿದೆ. ಈಗಾಗಲೇ ಅವರು ಪಕ್ಷ ಕೂಡ ಕಟ್ಟಿದ್ದಾರೆ. 2026ರಲ್ಲಿ ನಡೆಯೋ ತಮಿಳುನಾಡು ವಿಧಾನಸಭೆ ಚುನಾವಣೆಗೆ ಅವರು ಸ್ಪರ್ಧಿಸಲಿದ್ದಾರೆ. ಇದಕ್ಕಾಗಿ ಅವರು ಸಂಪೂರ್ಣವಾಗಿ ಚಿತ್ರರಂಗ ತೊರೆಯಲಿದ್ದಾರೆ. ಈ ಬೆನ್ನಲ್ಲೇ ತಮಿಳಿನ ಮತ್ತೋರ್ವ ಸ್ಟಾರ್ ನಟ ರಾಜಕೀಯಕ್ಕೆ ಧುಮುಕಲು ರೆಡಿ ಆಗಿದ್ದಾರೆ. ಅವರು ಬೇರಾರು ಅಲ್ಲ ನಟ ದಳಪತಿ ವಿಜಯ್. ಈ ವಿಚಾರ ಫ್ಯಾನ್ಸ್ಗೆ ಖುಷಿ ನೀಡಿದೆ.
‘ರತ್ನಮ್’ ಸಿನಿಮಾದ ಪ್ರಮೋಷನ್ನಲ್ಲಿ ವಿಶಾಲ್ ಭಾಗಿ ಆಗಿದ್ದಾರೆ. ಈ ವೇಳೆ ಅವರಿಗೆ ರಾಜಕೀಯದ ಬಗ್ಗೆ ಪ್ರಶ್ನೆ ಎದುರಾಗಿದೆ. ‘2026ರಲ್ಲಿ ಚುನಾವಣೆಯ ಭಾಗವಾಗುತ್ತೀರೆ’ ಎಂದು ಅವರನ್ನು ಕೇಳಲಾಗಿದೆ. ಇದಕ್ಕೆ ಪರೋಕ್ಷವಾಗಿ ಅವರು ಹೌದು ಎಂದು ಉತ್ತರಿಸಿದ್ದಾರೆ. ‘ಅಗತ್ಯವಾಗಿರೋ ವಸ್ತುಗಳು ಜನರಿಗೆ ಸಿಗುತ್ತಿಲ್ಲ. ಅದರಲ್ಲೂ ಗ್ರಾಮಿಣ ಭಾಗದ ಜನರಿಗೆ ಸರ್ಕಾರದ ಯೋಜನೆಗಳು ತಲುಪುತ್ತಿಲ್ಲ. ಸರ್ಕಾರ ಸರಿಯಾಗಿ ಕೆಲಸ ಮಾಡಿದರೆ ರಾಜಕೀಯ ಸೇರಲ್ಲ’ ಎಂದಿದ್ದಾರೆ. ಸದ್ಯದ ಸ್ಥಿತಿಯಲ್ಲಿ ರಾಜಕೀಯ ಪಕ್ಷಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎನ್ನುವ ಅಭಿಪ್ರಾಯ ಅವರಿಗೆ ಇದೆ.
ವಿಶಾಲ್ ಅವರು ಯಾವ ಪಕ್ಷ ಸೇರುತ್ತೇನೆ, ಯಾರನ್ನು ಬೆಂಬಲಿಸುತ್ತೇನೆ ಎನ್ನುವ ವಿಚಾರ ರಿವೀಲ್ ಮಾಡಿಲ್ಲ. ಅವರು ‘ತುಪ್ಪರಿವಾಲನ್ 2’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ನಿರ್ದೇಶಕನಾಗಿ ಇದು ಅವರ ಮೊದಲ ಸಿನಿಮಾ. ಅವರು ರಾಜಕೀಯದಲ್ಲಿ ಯಶಸ್ಸು ಕಾಣುತ್ತಾರಾ ಅಥವಾ ಇಲ್ಲವೇ ಎನ್ನುವ ಅನುಮಾನ ಮೂಡಿದೆ.
ಇದನ್ನೂ ಓದಿ: ತಾಯಿಗಾಗಿ ಸಾಯಿ ಬಾಬಾ ಮಂದಿರ ಕಟ್ಟಿದ ದಳಪತಿ ವಿಜಯ್
ದಳಪತಿ ವಿಜಯ್ ಈಗಾಗಲೇ ಪಕ್ಷ ಘೋಷಣೆ ಮಾಡಿದ್ದಾರೆ. ಇದಕ್ಕೆ ‘ತಮಿಳಗ ವೆಟ್ರಿ ಕಳಗಮ್’ ಎಂದು ಹೆಸರಿಡಲಾಗಿದೆ. ಅವರು ಸದ್ಯ ‘GOAT’ ಸಿನಿಮಾ ಶೂಟ್ಗಾಗಿ ರಷ್ಯಾಗೆ ತೆರಳಿದ್ದಾರೆ. ಇದಾದ ಬಳಿಕ ಅವರು ಮತ್ತೊಂದು ಸಿನಿಮಾ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಆ ಬಳಿಕ ಅವರ ಸಂಪೂರ್ಣ ಗಮನ ರಾಜಕೀಯದ ಮೇಲೆ ಇರಲಿದೆ. 2026ರ ಲೋಕಸಭೆ ಚುನಾವಣೆಯಲ್ಲಿ ತಮಿಳು ನಾಡಿನಲ್ಲಿ ಅವರ ಪಕ್ಷ ಸ್ಪರ್ಧೆ ಮಾಡಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.