ಬಿಗ್ ಬಾಸ್ ತಂಡದವರಿಂದಲೇ ಸ್ಪರ್ಧಿಗೆ ಆಗಿತ್ತು ಕಿರುಕುಳ? ತಡವಾಗಿ ರಿವೀಲ್ ಆಯ್ತು ವಿಚಾರ
‘ಝಲಕ್ ದಿಕ್ಲಾಜಾ’ ಶೋ ವಿನ್ನರ್ ಮನಿಶಾ ರಾಣಿ ಅವರು ಇತ್ತೀಚೆಗೆ ಸಂದರ್ಶನ ಒಂದರಲ್ಲಿ ಮಾತನಾಡಿದ್ದಾರೆ. ಅವರಿಗೆ ಅನಾಮಧೇಯ ವ್ಯಕ್ತಿಯೊಬ್ಬ ಕರೆ ಮಾಡಿದ್ದ. ತಮ್ಮನ್ನು ತಾವು ಬಿಗ್ ಬಾಸ್ ತಂಡದವರು ಎಂದು ಪರಿಚಯಿಸಿಕೊಂಡಿದ್ದ. ತಮ್ಮ ಡ್ಯಾನ್ಸ್ ವಿಡಿಯೋನ ಆ ವ್ಯಕ್ತಿ ಜೊತೆ ಮನಿಶಾ ಹಂಚಿಕೊಂಡಿದ್ದರು.
ಬಿಗ್ ಬಾಸ್ (Bigg Boss) ರಿಯಾಲಿಟಿ ಶೋ ಸಾಕಷ್ಟು ವಿವಾದಗಳನ್ನು ಮಾಡಿದೆ. ಇದರಿಂದ ಆದ ವಿವಾದಗಳ ಸಂಖ್ಯೆ ತುಂಬಾನೇ ದೊಡ್ಡದು. ಆದಾಗ್ಯೂ ಈ ಶೋಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ವಿವಾದಗಳನ್ನೂ ಎಂಜಾಯ್ ಮಾಡುವವರಿದ್ದಾರೆ. ಈ ಮಧ್ಯೆ ಬಿಗ್ ಬಾಸ್ ಸ್ಪರ್ಧಿ ಮನಿಶಾ ರಾಣಿಗೆ ತಂಡದವರಿಂದಲೇ ತೊಂದರೆ ಉಂಟಾಗಿತ್ತು ಎನ್ನುವ ವಿಚಾರ ರಿವೀಲ್ ಆಗಿದೆ. ಈ ವಿಚಾರವನ್ನು ಅವರು ಹೇಳಿಕೊಂಡಿದ್ದಾರೆ.
‘ಝಲಕ್ ದಿಕ್ಲಾಜಾ’ ಶೋ ವಿನ್ನರ್ ಮನಿಶಾ ರಾಣಿ ಅವರು ಇತ್ತೀಚೆಗೆ ಸಂದರ್ಶನ ಒಂದರಲ್ಲಿ ಮಾತನಾಡಿದ್ದಾರೆ. ಅವರಿಗೆ ಅನಾಮಧೇಯ ವ್ಯಕ್ತಿಯೊಬ್ಬ ಕರೆ ಮಾಡಿದ್ದ. ತಮ್ಮನ್ನು ತಾವು ಬಿಗ್ ಬಾಸ್ ತಂಡದವರು ಎಂದು ಪರಿಚಯಿಸಿಕೊಂಡಿದ್ದ. ತಮ್ಮ ಡ್ಯಾನ್ಸ್ ವಿಡಿಯೋನ ಆ ವ್ಯಕ್ತಿ ಜೊತೆ ಮನಿಶಾ ಹಂಚಿಕೊಂಡಿದ್ದರು. ನಂತರ ನಡೆದಿದ್ದು ಮಾತ್ರ ನಿಜಕ್ಕೂ ಶಾಕಿಂಗ್.
‘ನಾನು ಒಮ್ಮೆ ಬಿಹಾರಕ್ಕೆ ತೆರಳಿದ್ದೆ. ನನ್ನ ಊರಿನಲ್ಲಿ 4-5 ದಿನ ಇರಬೇಕು ಎಂದುಕೊಂಡಿದ್ದೆ. ಆ ಸಂದರ್ಭದಲ್ಲಿ ಆತ ಕರೆ ಮಾಡಿದ. ನೀವು ಮನೆ ಹೋಗಿ ಕುಳಿತಿದ್ದೀರಲ್ಲ, ಬಿಗ್ ಬಾಸ್ಗೆ ಹೋಗೋ ಆಲೋಚನೆ ಇಲ್ಲವಾ ಎಂದು ಕೇಳಿದರು. ಈಗಲೇ ಮುಂಬೈಗೆ ಬನ್ನಿ ಎಂದು ವ್ಯಕ್ತಿ ಹೇಳಿದ್ದ. ಹೀಗಾಗಿ ಸ್ಪೆಷಲ್ ಟಿಕೆ ಮಾಡಿಕೊಂಡು ನಾನು ಮುಂಬೈಗೆ ಹೋದೆ’ ಎಂದಿದ್ದಾರೆ ಅವರು.
‘ಒಂದು ದಿನ ಮುಂಜಾನೆ 3 ಗಂಟೆಗೆ ಕರೆ ಮಾಡಿ ಮನೆಗೆ ಬಾ ಎಂದು ಆ ವ್ಯಕ್ತಿ ಹೇಳಿದ. ನಾನು ಅದೆಲ್ಲ ಸಾಧ್ಯವಿಲ್ಲ ಎಂದು ಹೇಳಿದೆ’ ಎಂದು ಅವರು ಹೇಳಿದ್ದಾರೆ. ‘ನಿಮಗೆ ಟ್ಯಾಲೆಂಟ್ ಇದ್ದರೆ ಎಲ್ಲವೂ ಆಗುತ್ತದೆ’ ಎಂದು ಮನಿಶಾ ರಾಣಿ ಹೇಳಿದ್ದಾರೆ. ಮನಿಶಾ ರಾಣಿ ಅವರು ಕಳೆದ ವರ್ಷ ‘ಬಿಗ್ ಬಾಸ್ ಹಿಂದಿ ಒಟಿಟಿ ಸೀಸನ್ 2’ ಮೂಲಕ ಜನಪ್ರಿಯತೆ ಪಡೆದರು. ಈ ಸೀಸನ್ನಲ್ಲಿ ಎಲ್ವಿಶ್ ಯಾದವ್ ವಿನ್ನರ್ ಆದರು.
ಇದನ್ನೂ ಓದಿ: karthik Mahesh: ‘ಬಿಗ್ ಬಾಸ್’ನಿಂದ ಕಾರ್ತಿಕ್ ಮಹೇಶ್ಗೆ ನಿಜಕ್ಕೂ ಸಿಕ್ಕ ಹಣ ಎಷ್ಟು?
ಮೂಲಗಳ ಪ್ರಕಾರ ಕೆಲವೇ ತಿಂಗಳಲ್ಲಿ ‘ಬಿಗ್ ಬಾಸ್ ಒಟಿಟಿ 3’ ಆರಂಭ ಆಗಲಿದೆ. ಇದರಲ್ಲಿ ಮನಿಶಾ ಅವರು ಮೆಂಟರ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಆಗಿಲ್ಲ. ‘ಝಲಕ್ ದಿಕ್ಲಾಜಾ ಸೀಸನ್ 11’ರ ವಿನ್ನರ್ ಆಗಿ ಮನಿಶಾ ಹೊರ ಹೊಮ್ಮಿದ್ದರು. 30 ಲಕ್ಷ ರೂಪಾಯಿ ವಿನ್ನಿಂಗ್ ಅಮೌಂಟ್ನಲ್ಲಿ ಅವರಿಗೆ ಕೇವಲ 11 ಲಕ್ಷ ಸಿಕ್ಕಿದೆ ಎನ್ನಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.