AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

karthik Mahesh: ‘ಬಿಗ್ ಬಾಸ್’ನಿಂದ ಕಾರ್ತಿಕ್ ಮಹೇಶ್​ಗೆ ನಿಜಕ್ಕೂ ಸಿಕ್ಕ ಹಣ ಎಷ್ಟು?

ಕಾರ್ತಿಕ್ ಮಹೇಶ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 10’ ಮೂಲಕ ಗೆದ್ದು ಬೀಗಿದರು. ಇದರಿಂದ ಅವರ ಖ್ಯಾತಿ ಹೆಚ್ಚಿದೆ. ಅವರಿಗೆ ಹೊಸ ಹೊಸ ಸಿನಿಮಾ ಆಫರ್​ಗಳು ಬರುತ್ತಿವೆ. ತಮಗೆ ಸಿಗಬೇಕಿರೋ ಬ್ರೇಜಾ ಕಾರು ಬರೋಕೆ ಇನ್ನೂ ಐದಾರು ತಿಂಗಳು ಕಾಯಬೇಕು ಎಂದು ಅವರು ಹೇಳಿಕೊಂಡಿದ್ದಾರೆ.

karthik Mahesh: ‘ಬಿಗ್ ಬಾಸ್’ನಿಂದ ಕಾರ್ತಿಕ್ ಮಹೇಶ್​ಗೆ ನಿಜಕ್ಕೂ ಸಿಕ್ಕ ಹಣ ಎಷ್ಟು?
ಕಾರ್ತಿಕ್ ಮಹೇಶ್
ರಾಜೇಶ್ ದುಗ್ಗುಮನೆ
|

Updated on: Apr 20, 2024 | 2:39 PM

Share

‘ಬಿಗ್ ಬಾಸ್ ಕನ್ನಡ ಸೀಸನ್ 10’ರ  (BBK 10) ವಿನ್ನರ್ ಕಾರ್ತಿಕ್ ಮಹೇಶ್​ಗೆ 50 ಲಕ್ಷ ರೂಪಾಯಿ ಜೊತೆಗೆ ಒಂದು ಎಲೆಕ್ಟ್ರಿಕ್ ಬೈಕ್, ಕಾರು ಕೊಡುವುದಾಗಿ ಬಿಗ್ ಬಾಸ್ ಕಡೆಯಿಂದ ಘೋಷಣೆ ಆಗಿತ್ತು. ಈಗಾಗಲೇ ಬೈಕ್ ಅವರ ಮನೆ ಸೇರಿದೆ. ಮಾರುತಿ ಸುಜುಕಿ ಬ್ರೇಜಾ ಕಾರು ಅವರಿಗೆ ಸಿಗಬೇಕಿತ್ತು. ಆದರೆ, ಇದಕ್ಕೆ ಮತ್ತಷ್ಟು ಸಮಯ ಹಿಡಿಯಲಿದೆಯಂತೆ. ಈ ಬಗ್ಗೆ ಕಾರ್ತಿಕ್ ಮಹೇಶ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಜೊತೆಗೆ ಎಷ್ಟು ಹಣ ಸಿಕ್ಕಿದೆ ಎಂಬ ಬಗ್ಗೆಯೂ ಮಾಹಿತಿ ನೀಡಿದ್ದಾರೆ.

ಕಾರ್ತಿಕ್ ಮಹೇಶ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 10’ ಮೂಲಕ ಗೆದ್ದು ಬೀಗಿದರು. ಇದರಿಂದ ಅವರ ಖ್ಯಾತಿ ಹೆಚ್ಚಿದೆ. ಅವರಿಗೆ ಹೊಸ ಹೊಸ ಸಿನಿಮಾ ಆಫರ್​ಗಳು ಬರುತ್ತಿವೆ. ತಮಗೆ ಸಿಗಬೇಕಿರೋ ಬ್ರೇಜಾ ಕಾರು ಬರೋಕೆ ಇನ್ನೂ ಐದಾರು ತಿಂಗಳು ಕಾಯಬೇಕು ಎಂದು ಅವರು ಹೇಳಿಕೊಂಡಿದ್ದಾರೆ. ಈ ಪ್ರಕ್ರಿಯೆ ಸ್ವಲ್ಪ ದೀರ್ಘವಾಗಿದೆ ಎಂದಿದ್ದಾರೆ.

‘ಬಿಗ್ ಬಾಸ್​’ನಿಂದ ಬಂದ ಹಣದಲ್ಲಿ ಮನೆ ಕಟ್ಟೋ ಆಸೆಯನ್ನು ಕಾರ್ತಿಕ್ ಮಹೇಶ್ ಹೊಂದಿದ್ದಾರೆ. ‘ಮನೆ ನೋಡ್ತಾ ಇದೀನಿ. ಬೆಂಗಳೂರಲ್ಲಿ ಮನೆ ಕಟ್ಟಬೇಕು ಎಂದರೆ ಬಿಗ್ ಬಾಸ್​ನ ಹಣ ಎಲ್ಲಿಯೂ ಸಾಕಾಗಲ್ಲ. ನಾನು ದುಡಿಯಬೇಕು’  ಎಂದು ಕಾರ್ತಿಕ್ ಅವರು ಹೇಳಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಬಳಿಕ ಕಾರ್ತಿಕ್​ ಮಹೇಶ್ ಕೇಳಿದ ಸಿನಿಮಾ ಕಥೆಗಳೆಷ್ಟು? ಲೆಕ್ಕ ಕೊಟ್ಟ ನಟ

ಈ ಮೊದಲು ‘ಮರಾಠಿ ಬಿಗ್ ಬಾಸ್ ಸೀಸನ್ 2’ರ ವಿನ್ನರ್ ಶಿವ ಠಾಕ್ರೆ ಬಿಗ್ ಬಾಸ್ ಬಹುಮಾನದ ಮೊತ್ತದ ಬಗ್ಗೆ ಮಾತನಾಡಿದ್ದರು. ಅವರು ಪ್ರಾಮಿಸ್ ಮಾಡಿದಷ್ಟು ಹಣ ನೀಡಿಲ್ಲ ಎಂದಿದ್ದರು. 25ರಲ್ಲಿ 11 ಲಕ್ಷ ರೂಪಾಯಿ ಮಾತ್ರ ಸಿಕ್ಕಿದೆ ಎಂದಿದ್ದರು. ಕಾರ್ತಿಕ್ ಈ ಬಗ್ಗೆ ಮಾತನಾಡಿದ್ದಾರೆ. ‘ಐವತ್ತರಲ್ಲಿ 35 ಲಕ್ಷ ರೂಪಾಯಿ ಬರುತ್ತದೆ. 15 ಲಕ್ಷ ರೂಪಾಯಿ ಟ್ಯಾಕ್ಸ್​ ಕಟ್ ಆಗುತ್ತದೆ. ಹಂತ ಹಂತವಾಗಿ ಹಣ ಬರುತ್ತಿದೆ’ ಎಂದಿದ್ದಾರೆ ಕಾರ್ತಿಕ್.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ರೂಪಗೊಳ್ಳುತ್ತಿದೆ ಮೈ ಹೋಂ ಗ್ರೂಪ್​​​ನ ಮತ್ತೊಂದು ಅಲ್ಟ್ರಾ ಲಕ್ಸುರಿ ಯೋಜನೆ
ರೂಪಗೊಳ್ಳುತ್ತಿದೆ ಮೈ ಹೋಂ ಗ್ರೂಪ್​​​ನ ಮತ್ತೊಂದು ಅಲ್ಟ್ರಾ ಲಕ್ಸುರಿ ಯೋಜನೆ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ
‘ತಪ್ಪು ಮಾಡಿಬಿಟ್ಟೆ’: ಎಲಿಮಿನೇಟ್ ಆದ ಬಳಿಕ ಸುದೀಪ್ ಎದುರು ಮಂಜನ ಕಣ್ಣೀರು
‘ತಪ್ಪು ಮಾಡಿಬಿಟ್ಟೆ’: ಎಲಿಮಿನೇಟ್ ಆದ ಬಳಿಕ ಸುದೀಪ್ ಎದುರು ಮಂಜನ ಕಣ್ಣೀರು
ಚಿನ್ನದ ಸಿಂಹಾಸನವೇರಿದ ಯದುವೀರ ಒಡೆಯರ್:ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್
ಚಿನ್ನದ ಸಿಂಹಾಸನವೇರಿದ ಯದುವೀರ ಒಡೆಯರ್:ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್
ಚೆನ್ನೈನ ಜಲಕಂಠೇಶ್ವರ ಸ್ವಾಮಿ ದೇಗುಲದಲ್ಲಿ ಪ್ರಧಾನಿ ಮೋದಿ ವಿಶೇಷ ಪೂಜೆ
ಚೆನ್ನೈನ ಜಲಕಂಠೇಶ್ವರ ಸ್ವಾಮಿ ದೇಗುಲದಲ್ಲಿ ಪ್ರಧಾನಿ ಮೋದಿ ವಿಶೇಷ ಪೂಜೆ
ಚೆನ್ನೈನಲ್ಲಿ ಮೋದಿ ರೋಡ್‌ ಶೋ: 13 ಸಾವಿರ ಕೋಟಿ ರೂ. ಯೋಜನೆಗಳಿಗೆ ಚಾಲನೆ
ಚೆನ್ನೈನಲ್ಲಿ ಮೋದಿ ರೋಡ್‌ ಶೋ: 13 ಸಾವಿರ ಕೋಟಿ ರೂ. ಯೋಜನೆಗಳಿಗೆ ಚಾಲನೆ