ಬಿಗ್ ಬಾಸ್ ಬಳಿಕ ಕಾರ್ತಿಕ್ ಮಹೇಶ್ ಕೇಳಿದ ಸಿನಿಮಾ ಕಥೆಗಳೆಷ್ಟು? ಲೆಕ್ಕ ಕೊಟ್ಟ ನಟ
karthik Mahesh: ಈ ಬಾರಿಯ ಬಿಗ್ ಬಾಸ್ ಸಾಕಷ್ಟು ಚರ್ಚೆ ಹುಟ್ಟುಹಾಕಿದ್ದರಿಂದ ಸ್ಪರ್ಧಿಗಳಿಗೆ, ವಿನ್ನರ್ಗೆ ಸಾಕಷ್ಟು ಫೇಮ್ ಸಿಕ್ಕಿದೆ. ಕಾರ್ತಿಕ್ ಮಹೇಶ್ ಅವರು ತಮಗೆ ಬಂದ ಸಿನಿಮಾ ಆಫರ್ ಬಗ್ಗೆ ಮಾತನಾಡಿದ್ದಾರೆ. ‘ಸುಮಾರು ಸಿನಿಮಾ ಆಫರ್ಗಳು ಬರುತ್ತಿವೆ. ನಾನು ಯಾವುದೂ ಓಕೆ ಮಾಡಿಲ್ಲ’ ಎಂದಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 10’ರ (BBK 10) ವಿನ್ನರ್ ಕಾರ್ತಿಕ್ ಮಹೇಶ್ ಅವರು ದೊಡ್ಡ ಮಟ್ಟದ ಜನಪ್ರಿಯತೆ ಪಡೆದರು. ಅವರ ಖ್ಯಾತಿ ಹೆಚ್ಚುತ್ತಿದೆ. ಸಿನಿಮಾಗಳಲ್ಲಿ, ಕಿರುತೆರೆಯಲ್ಲಿ ನಟಿಸಿ ಕಾರ್ತಿಕ್ ಜನಪ್ರಿಯತೆ ಪಡೆದಿದ್ದಾರೆ. ಆ ಬಳಿಕ ಬಿಗ್ ಬಾಸ್ ಮನೆಗೆ ಹೋಗಿ ಅವರು ಕಪ್ ಗೆದ್ದರು. ಇದರಿಂದ ಅವರ ಅಭಿಮಾನಿ ಬಳಗ ಹಿರಿದಾಗಿದೆ. ಬಿಗ್ ಬಾಸ್ ಮುಗಿದ ಬಳಿಕ ಸಿನಿಮಾ ಆಫರ್ಗಳು ಅವರನ್ನು ಹುಡುಕಿ ಬರುತ್ತಿವೆ. ಆದರೆ, ಯಾವುದನ್ನೂ ಅವರು ಒಪ್ಪಿಕೊಳ್ಳುತ್ತಿಲ್ಲ. ಯಾವ ರೀತಿಯ ಕಥೆಗಳು ಅವರನ್ನು ಹುಡುಕಿ ಬರುತ್ತಿವೆ ಎನ್ನುವ ಬಗ್ಗೆ ಅವರು ‘ಟಿವಿ9 ಕನ್ನಡ ಡಿಜಿಟಲ್’ ಜೊತೆ ಮಾತನಾಡಿದ್ದಾರೆ.
ಈ ಬಾರಿಯ ಬಿಗ್ ಬಾಸ್ ಸಾಕಷ್ಟು ಚರ್ಚೆ ಹುಟ್ಟುಹಾಕಿದ್ದರಿಂದ ಸ್ಪರ್ಧಿಗಳಿಗೆ, ವಿನ್ನರ್ಗೆ ಸಾಕಷ್ಟು ಫೇಮ್ ಸಿಕ್ಕಿದೆ. ಕಾರ್ತಿಕ್ ಮಹೇಶ್ ಅವರು ತಮಗೆ ಬಂದ ಸಿನಿಮಾ ಆಫರ್ ಬಗ್ಗೆ ಮಾತನಾಡಿದ್ದಾರೆ. ‘ಸುಮಾರು ಸಿನಿಮಾ ಆಫರ್ಗಳು ಬರುತ್ತಿವೆ. ನಾನು ಯಾವುದೂ ಓಕೆ ಮಾಡಿಲ್ಲ’ ಎಂದಿದ್ದಾರೆ.
ಕಾರ್ತಿಕ್ ಅವರು ಯಾವ ರೀತಿಯ ಸಿನಿಮಾ ಫೈನಲ್ ಮಾಡಲಿದ್ದಾರೆ? ಯಾವ ರೀತಿಯ ಆಫರ್ ಒಪ್ಪಿಕೊಳ್ಳುತ್ತಾರೆ ಅನ್ನೋ ಪ್ರಶ್ನೆ ಅಭಿಮಾನಿಗಳಲ್ಲಿ ಇರುತ್ತದೆ. ಈ ಬಗ್ಗೆ ಅವರು ಮಾತನಾಡಿದ್ದಾರೆ. ‘ಯಾವ ರೀತಿಯ ಪಾತ್ರ ಒಪ್ಪಿಕೊಳ್ಳುತ್ತೇನೆ ಎಂಬುದನ್ನು ಹೇಳೋಕೆ ಸಾಧ್ಯವಿಲ್ಲ. ಯಾರ ಸಿನಿಮಾ, ಪಾತ್ರಕ್ಕೆ ಎಷ್ಟು ತೂಕ ಇದೆ ಅನ್ನೋದು ಮುಖ್ಯವಾಗುತ್ತದೆ. ನನಗೆ ಪಾತ್ರ ಮುಖ್ಯ. ಹೀರೋ ಓರಿಯೆಂಟೆಡ್ ಸಿನಿಮಾಗಳನ್ನು ಮುಖ್ಯವಾಗಿ ಹುಡುಕುತ್ತಿದ್ದೇನೆ. ಕಳೆದ ತಿಂಗಳವರೆಗೆ 15ಕ್ಕಿಂತ ಜಾಸ್ತಿ ಕಥೆ ಕೇಳಿದ್ದೇನೆ. ಆ ಬಳಿಕ ಲೆಕ್ಕ ಇಟ್ಟುಕೊಳ್ಳೋದನ್ನು ಬಿಟ್ಟಿದ್ದೇನೆ’ ಎಂದಿದ್ದಾರೆ ಕಾರ್ತಿಕ್.
ಲವರ್ ಬಾಯ್ ಆಗಿ, ಹೀರೋ ಆಗಿ, ಅಗ್ರೆಸ್ಸಿವ್ ವ್ಯಕ್ತಿಯಾಗಿ ಕಾರ್ತಿಕ್ ಮಹೇಶ್ ಅವರು ಬಿಗ್ ಬಾಸ್ನಲ್ಲಿ ಕಾಣಿಸಿಕೊಂಡಿದ್ದರು. ಹೀಗಾಗಿ ಎಲ್ಲಾ ರೀತಿಯ ಕಥೆಗಳು ಅವರನ್ನು ಹುಡುಕಿ ಬರುತ್ತಿವೆ. ‘ಲವ್ ಸ್ಟೋರಿ, ರೋಘ್ ರೀತಿಯ ಪಾತ್ರ, ಅರ್ಜುನ್ ರೆಡ್ಡಿ ಸಿನಿಮಾ ರೀತಿಯ ಕಥೆ, ಹ್ಯೂಮರ್ ಸೇರಿ ಎಲ್ಲಾ ಜಾನರ್ನ ಕಥೆ ಬರುತ್ತಿದೆ. ಬಿಗ್ ಬಾಸ್ನಲ್ಲಿ ಎಲ್ಲಾ ರೀತಿಯಲ್ಲೂ ಜನರು ನನ್ನನ್ನು ನೋಡಿದ್ದಾರೆ. ಹೀಗಾಗಿ, ಅದೇ ರೀತಿಯ ಪಾತ್ರಗಳು ಬರುತ್ತಿವೆ’ ಎಂದಿದ್ದಾರೆ ಕಾರ್ತಿಕ್.
ಇದನ್ನೂ ಓದಿ: ಕಾರ್ತಿಕ್ ಮಹೇಶ್ಗೆ ಇದು ಮರೆಯಲಾಗದ ಕ್ಷಣ; ವಿಡಿಯೋ ಹಂಚಿಕೊಂಡ ಬಿಗ್ ಬಾಸ್ ವಿನ್ನರ್
ಬಿಗ್ ಬಾಸ್ಗೆ ಹೋದ ಬಳಿಕ ಕಾರ್ತಿಕ್ ಮಹೇಶ್ ಅವರ ಇನ್ಸ್ಟಾಗ್ರಾಮ್ ಹಿಂಬಾಲಕರ ಸಂಖ್ಯೆ ಹೆಚ್ಚಿದೆ. ಇದು ಕೇವಲ ನಂಬರ್ ಅನ್ನೋದು ಕಾರ್ತಿಕ್ ಮಹೇಶ್ ಅಭಿಪ್ರಾಯ. ‘ಅನೇಕರು ಇನ್ಸ್ಟಾಗ್ರಾಮ್ನಲ್ಲಿ ಇಲ್ಲ. ವಯಸ್ಸಾದವರೆಲ್ಲ ಎದುರು ಸಿಕ್ಕಾಗ ಪ್ರೀತಿ ತೋರಿಸುತ್ತಾರೆ. ಹೀಗಾಗಿ, ಇನ್ಸ್ಟಾಗ್ರಾಮ್ ಹಿಂಬಾಲಕರ ಸಂಖ್ಯೆ ಅನ್ನೋದು ಕೇವಲ ನಂಬರ್’ ಎಂದಿದ್ದಾರೆ ಅವರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:34 am, Sat, 20 April 24