Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರ್ತಿಕ್ ಮಹೇಶ್​ಗೆ ಇದು ಮರೆಯಲಾಗದ ಕ್ಷಣ; ವಿಡಿಯೋ ಹಂಚಿಕೊಂಡ ಬಿಗ್ ಬಾಸ್ ವಿನ್ನರ್

ನಾವೇ ಕಲಿತ ಶಾಲೆಗೆ ಭೇಟಿ ನೀಡಿದರೆ ಆಗ ಸಿಗುವ ಖುಷಿಯೇ ಬೇರೆ. ಅದೇ ರೀತಿ ತಾವು ಕಲಿತ ಶಾಲೆಗೆ ಅತಿಥಿಗಾಗಿ ತೆರಳೋದು, ಅಲ್ಲಿ ಗೌರವಿಸಿಕೊಳ್ಳೋದು ಎಂದರೆ ಇನ್ನಷ್ಟು ವಿಶೇಷ ಎನಿಸಿಕೊಳ್ಳಲಿದೆ. ಈಗ ಕಾರ್ತಿಕ್ ಅವರು ಮೈಸೂರಿನ ಎಸ್​ಬಿಆರ್​ಆರ್ ಮಹಾಜ ಫಸ್ಟ್​ ಗ್ರೇಡ್ ಕಾಲೇಜಿಗೆ ಭೇಟಿ ನೀಡಿದ್ದಾರೆ.

ಕಾರ್ತಿಕ್ ಮಹೇಶ್​ಗೆ ಇದು ಮರೆಯಲಾಗದ ಕ್ಷಣ; ವಿಡಿಯೋ ಹಂಚಿಕೊಂಡ ಬಿಗ್ ಬಾಸ್ ವಿನ್ನರ್
ಕಾರ್ತಿಕ್ ಮಹೇಶ್
Follow us
ರಾಜೇಶ್ ದುಗ್ಗುಮನೆ
|

Updated on: Apr 03, 2024 | 8:30 AM

ಕಾರ್ತಿಕ್ ಮಹೇಶ್ (Karthik Mahesh) ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 10’ ವಿನ್ ಆಗುವ ಮೂಲಕ ಎಲ್ಲರ ಮೆಚ್ಚುಗೆ ಪಡೆದರು. ಅವರ ಅಭಿಮಾನಿ ಬಳಗ ದೊಡ್ಡದಾಗಿದೆ. ಅವರಿಗೆ ಹೋದಲ್ಲಿ ಬಂದಲ್ಲಿ ಫ್ಯಾನ್ಸ್ ಸೆಲ್ಫಿಗೆ ಮುಗಿ ಬೀಳುತ್ತಿದ್ದಾರೆ. ಈಗ ಅವರು ಹೊಸ ವಿಡಿಯೋ ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ವಿಶೇಷ ಕ್ಷಣದ ಬಗ್ಗೆ ಮಾಹಿತಿ ನೀಡಿದ್ದಾರೆ. ತಾವು ಕಲಿತ ಕಾಲೇಜಿನಲ್ಲಿ ಕಾರ್ತಿಕ್ ಗೌರವ ಪಡೆದಿದ್ದಾರೆ. ಇದನ್ನು ಮರೆಯಲಾಗದ ಕ್ಷಣ ಎಂದು ಅವರು ಬಣ್ಣಿಸಿದ್ದಾರೆ.

ನಾವೇ ಕಲಿತ ಶಾಲೆಗೆ ಭೇಟಿ ನೀಡಿದರೆ ಆಗ ಸಿಗುವ ಖುಷಿಯೇ ಬೇರೆ. ಅದೇ ರೀತಿ ತಾವು ಕಲಿತ ಶಾಲೆಗೆ ಅತಿಥಿಗಾಗಿ ತೆರಳೋದು, ಅಲ್ಲಿ ಗೌರವಿಸಿಕೊಳ್ಳೋದು ಎಂದರೆ ಇನ್ನಷ್ಟು ವಿಶೇಷ ಎನಿಸಿಕೊಳ್ಳಲಿದೆ. ಈಗ ಕಾರ್ತಿಕ್ ಅವರು ಮೈಸೂರಿನ ಎಸ್​ಬಿಆರ್​ಆರ್ ಮಹಾಜ ಫಸ್ಟ್​ ಗ್ರೇಡ್ ಕಾಲೇಜಿಗೆ ಭೇಟಿ ನೀಡಿದ್ದಾರೆ. ಅಲ್ಲಿ ಅವರು ವಿಶೇಷ ಗೌರವ ಪಡೆದಿದ್ದಾರೆ. ಇದನ್ನೂ ಓದಿ: ಕಾರ್ತಿಕ್ ಮಹೇಶ್​​ಗೆ ಇನ್ನೂ ಸಿಕ್ಕಿಲ್ಲ ‘ಬಿಗ್ ಬಾಸ್’ ಕಾರ್; ಕಾರಣ ವಿವರಿಸಿದ ನಟ

ಕಾರ್ತಿಕ್ ಬಿಗ್ ಬಾಸ್​ನಲ್ಲಿ ಇದ್ದಾಗ ಈ ಕಾಲೇಜಿನ ವಿದ್ಯಾರ್ಥಿಗಳು ಅವರ ಪರವಾಗಿ ಪ್ರಚಾರ ಮಾಡಿದ್ದರಂತೆ. ಕಾರ್ತಿಕ್ ಅವರು ‘ಡೊಳ್ಳು’ ಸಿನಿಮಾದಲ್ಲಿ ನಟಿಸಿದ್ದರು. ಹೀಗಾಗಿ, ಡೊಳ್ಳು ಬಾರಿಸಿ ಅವರನ್ನು ಸ್ವಾಗತಿಸಲಾಯಿತು. ಅವರು ಕೂಡ ಡೊಳ್ಳು ಬಾರಿಸಿ ಸಂಭ್ರಮಿಸಿದರು. ಈ ವಿಡಿಯೋದಲ್ಲಿ ಅವರು ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ.

ಈ ವಿಡಿಯೋ ಹಂಚಿಕೊಂಡು ಕಾರ್ತಿಕ್ ಅವರು ತಮ್ಮ ಮನಸಿನ ಮಾತನ್ನು ಬರೆದುಕೊಂಡಿದ್ದಾರೆ. ‘ನನ್ನ ಕಾಲೇಜು, ನನಗಾಗಿ ನನ್ನ ಗೆಲುವಿಗಾಗಿ ವಿದ್ಯಾರ್ಥಿಗಳಲ್ಲಿ ಶಿಕ್ಷಕರೆಲ್ಲ ನನ್ನ ಪರವಾಗಿ ಪ್ರಚಾರ ಮಾಡಿದ್ದರು. ಇಂದು ನನಗಾಗಿಯೇ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಿದ್ದರು. ವಿಶೇಷವಾಗಿ ನನಗೋಸ್ಕರ ವಿದ್ಯಾರ್ಥಿಗಳು ಡೊಳ್ಳು ಕುಣಿತವನ್ನು ಕಲಿತು ಬಾರಿಸಿದ್ದು ಅತ್ಯಂತ ಖುಷಿ ಕೊಟ್ಟ ವಿಷಯ. ನನ್ನ ಎಲ್ಲಾ ಶಿಕ್ಷಕರಿಗೆ, ಕಿರಿಯ ವಿದ್ಯಾರ್ಥಿಗಳಿಗೆ, ಸಂಸ್ಥಾಪಕರಿಗೆ ತುಂಬು ಹೃದಯದ ಧನ್ಯವಾದ’ ಎಂದು ಕಾರ್ತಿಕ್ ಬರೆದುಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಸಿದ್ದರಾಮಯ್ಯ ದಲಿತರ ಕೈ ಬಿಟ್ಟು ಮುಸಲ್ಮಾನರ ಕೈ ಹಿಡಿದಿದ್ದಾರೆ: ಅಶೋಕ
ಸಿದ್ದರಾಮಯ್ಯ ದಲಿತರ ಕೈ ಬಿಟ್ಟು ಮುಸಲ್ಮಾನರ ಕೈ ಹಿಡಿದಿದ್ದಾರೆ: ಅಶೋಕ
ಮತೀಯ ಭಾವನೆಗಳನ್ನು ಯಾರೂ ಕೆರಳಿಸಬಾರದು: ಕೋಲಾರ ಮಸೀದಿಯೊಂದರ ಮೌಲ್ವಿ
ಮತೀಯ ಭಾವನೆಗಳನ್ನು ಯಾರೂ ಕೆರಳಿಸಬಾರದು: ಕೋಲಾರ ಮಸೀದಿಯೊಂದರ ಮೌಲ್ವಿ
ವರದಿ ಮೇಲಿನ ಚರ್ಚೆಗೆ ಸಿಎಂ ವಿಶೇಷ ಅಧಿವೇಶನ ಕರೆಯಲು ಮನವಿ: ಜಾರಕಿಹೊಳಿ
ವರದಿ ಮೇಲಿನ ಚರ್ಚೆಗೆ ಸಿಎಂ ವಿಶೇಷ ಅಧಿವೇಶನ ಕರೆಯಲು ಮನವಿ: ಜಾರಕಿಹೊಳಿ
ಮಧ್ಯಂತರ ವರದಿಯನ್ನು ಅಧಿಕಾರಿಗಳು ಅಂತಿಮ ವರದಿ ಅಂದಿದ್ದಾರೆ: ಸ್ನೇಹಮಯಿ
ಮಧ್ಯಂತರ ವರದಿಯನ್ನು ಅಧಿಕಾರಿಗಳು ಅಂತಿಮ ವರದಿ ಅಂದಿದ್ದಾರೆ: ಸ್ನೇಹಮಯಿ
ಜಾತಿ ಗಣತಿ ಬೇಸಿಕ್ ಡಾಟಾ ಒದಗಿಸಿದೆ, ಆದರ ಆಧಾರದ ಮೇಲೆ ತೀರ್ಮಾನಗಳು: ಸಚಿವ
ಜಾತಿ ಗಣತಿ ಬೇಸಿಕ್ ಡಾಟಾ ಒದಗಿಸಿದೆ, ಆದರ ಆಧಾರದ ಮೇಲೆ ತೀರ್ಮಾನಗಳು: ಸಚಿವ
ಜಾತಿ ಗಣತಿಯ ಬಗ್ಗೆ ಕಾಂಗ್ರೆಸ್ ಸರ್ಕಾರದ ಗೊಂದಲ ಜನಕ್ಕೆ ಗೊತ್ತಾಗುತ್ತಿದೆ!
ಜಾತಿ ಗಣತಿಯ ಬಗ್ಗೆ ಕಾಂಗ್ರೆಸ್ ಸರ್ಕಾರದ ಗೊಂದಲ ಜನಕ್ಕೆ ಗೊತ್ತಾಗುತ್ತಿದೆ!
ಬಿಜೆಪಿಯ ರಾಜಕೀಯ ಪಿತೂರಿ; ಇಡಿ ಸಮನ್ಸ್ ಬಳಿಕ ರಾಬರ್ಟ್ ವಾದ್ರಾ ಆರೋಪ
ಬಿಜೆಪಿಯ ರಾಜಕೀಯ ಪಿತೂರಿ; ಇಡಿ ಸಮನ್ಸ್ ಬಳಿಕ ರಾಬರ್ಟ್ ವಾದ್ರಾ ಆರೋಪ
ಮತ್ತೊಮ್ಮೆ ಸಮೀಕ್ಷೆ ಮಾಡಿಸುವಂತೆ ಸಿಎಂ, ಡಿಸಿಎಂಗೆ ಆಗ್ರಹಿಸುತ್ತೇವೆ: ಶಾಸಕ
ಮತ್ತೊಮ್ಮೆ ಸಮೀಕ್ಷೆ ಮಾಡಿಸುವಂತೆ ಸಿಎಂ, ಡಿಸಿಎಂಗೆ ಆಗ್ರಹಿಸುತ್ತೇವೆ: ಶಾಸಕ
ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸಿಎಂ ಹಣ ಮೀಸಲಿಟ್ಟಿದ್ದಾರಾ? ವಿಜಯೇಂದ್ರ
ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸಿಎಂ ಹಣ ಮೀಸಲಿಟ್ಟಿದ್ದಾರಾ? ವಿಜಯೇಂದ್ರ
ಬವೇರಿಯ 1.3 ಕೋಟಿ ಜನಸಂಖ್ಯೆಯಿರುವ ಜರ್ಮನಿಯ ಅತಿದೊಡ್ಡ ರಾಜ್ಯ
ಬವೇರಿಯ 1.3 ಕೋಟಿ ಜನಸಂಖ್ಯೆಯಿರುವ ಜರ್ಮನಿಯ ಅತಿದೊಡ್ಡ ರಾಜ್ಯ