‘ಯಮ ಬಂದು ಕರೆದರೂ ಅಮ್ಮನ ಕೆಲಸ ಮಾಡಿಯೇ ಹೋಗೋದು’; ದರ್ಶನ್

‘ಅಮ್ಮ ಏನೇ ನಿರ್ಧಾರ ತೆಗೆದುಕೊಡರೂ ನಾನು ಅವರ ಹಿಂದೆ ಇರ್ತೀನಿ. ತಾಯಿ ತಾಯಿನೇ. ಏನೇ ಹೇಳಿದ್ರೂ ನಾನು ಮಾಡ್ತೀನಿ. ಹಾಳು ಬಾವಿಗೆ ಬೀಳು ಅಂದ್ರೂ ಬೀಳ್ತೀನಿ. ನಾನು ನನ್ನ ತಮ್ಮ ಅವರ ಮಾತಿಗೆ ಬದ್ಧವಾಗಿದೀವಿ’ ಎಂದರು ದರ್ಶನ್.

‘ಯಮ ಬಂದು ಕರೆದರೂ ಅಮ್ಮನ ಕೆಲಸ ಮಾಡಿಯೇ ಹೋಗೋದು’; ದರ್ಶನ್
ದರ್ಶನ್-ಸುಮಲತಾ
Follow us
ರಾಜೇಶ್ ದುಗ್ಗುಮನೆ
|

Updated on: Apr 03, 2024 | 12:42 PM

ಅಂಬರೀಷ್ ಕುಟುಂಬದ ಜೊತೆ ದರ್ಶನ್​ಗೆ ಒಳ್ಳೆಯ ಬಾಂಧವ್ಯ ಇದೆ. ಆ ಪ್ರೀತಿ ಎಂದಿಗೂ ಕಡಿಮೆ ಆಗೋದಲ್ಲ. ಸುಮಲತಾ ಅವರು ದರ್ಶನ್​​ನ ಪ್ರೀತಿಯಿಂದ ಹಿರಿ ಮಗ ಎನ್ನುತ್ತಾರೆ. ದರ್ಶನ್ ಕೂಡ ಸುಮಲತಾ ಅವರನ್ನು ತಾಯಿ ಎಂದು ಕರೆಯುತ್ತಾರೆ. ಈಗ ಸುಮಲತಾ ಅವರು ಲೋಕಸಭೆ ಚುನಾವಣೆಯ ಸ್ಪರ್ಧೆ ಬಗ್ಗೆ ಮಾತನಾಡಿದ್ದಾರೆ. ಅವರ ಮಾತಿಗೂ ಮೊದಲು ದರ್ಶನ್ ಮಾತನಾಡಿದರು. ತಾಯಿ ಬೆಂಬಲಕ್ಕೆ ನಿಲ್ಲೋದಾಗಿ ಹೇಳಿದ್ದಾರೆ.

‘ನನ್ನ ಸೆಲೆಬ್ರಿಟಿಗಳಿಗೆ, ಹಿರಿಯರಿಗೆ ನಮಸ್ಕಾರ. ಇದೇ ಐದು ವರ್ಷಗಳ ಹಿಂದೆ ಪ್ರಚಾರ ಮಾಡಲು ಬಂದಾಗ ಎಲ್ಲಾ ರೈತರು ಎಳನೀರು ಕೊಟ್ಟು ನನ್ನನ್ನು ತಣ್ಣಗೆ ಮಾಡಿದರು, ಅವರಿಗೆ ಧನ್ಯವಾದ. ಆರತಿ ಬೆಳಗಿದ ತಾಯಂದಿರಿಗೂ ನನ್ನ ಧನ್ಯವಾದ’ ಎಂದು ಮಾತು ಆರಂಭಿಸಿದರು ದರ್ಶನ್.

ಸುಮಲತಾ ಅವರ ಕೋರಿಕೆಗೆ ಎಷ್ಟು ಪ್ರಾಮುಖ್ಯತೆ ನೀಡುತ್ತೇನೆ ಎಂಬುದನ್ನು ದರ್ಶನ್ ವಿವರಿಸಿದ್ದಾರೆ. ‘ಯಮ ಕರೆದರೆ ಅಮ್ಮನ ಒಂದು ಕೆಲಸ ಇದೆ ಮುಗಿಸಿ ಬರ್ತೀನಿ ಎಂದು ಹೇಳುತ್ತೇನೆ. ಅವರ ಕುಟುಂಬ ಜೊತೆಗಿನ ಬಾಂಧವ್ಯ ಅಂಥದ್ದು. ಇವತ್ತು ಕೈಗೆ ಆಪರೇಷನ್ ಇತ್ತು. ಆದರೆ, ಅಮ್ಮನ ಕೆಲಸ ಇದೆ ಎಂದು ಹೇಳಿ ಬಂದಿದ್ದೇನೆ. ಇಂದು ಸಂಜೆ ಅಡ್ಮಿಟ್ ಆಗಿ, ನಾಳೆ ಆಪರೇಷನ್ ಮಾಡಿಸಿಕೊಳ್ಳುತ್ತೇನೆ’ ಎಂದರು ದರ್ಶನ್.

ಇದನ್ನೂ ಓದಿ: ಮಂಡ್ಯದ ಕಾಳಿಕಾಂಬ ದೇವಸ್ಥಾನಕ್ಕೆ ಸುಮಲತಾ ಭೇಟಿ; ಸಾಥ್ ಕೊಟ್ಟ ದರ್ಶನ್

‘ಅಮ್ಮ ಏನೇ ನಿರ್ಧಾರ ತೆಗೆದುಕೊಡರೂ ನಾನು ಅವರ ಹಿಂದೆ ಇರ್ತೀನಿ. ತಾಯಿ ತಾಯಿನೇ. ಏನೇ ಹೇಳಿದ್ರೂ ನಾನು ಮಾಡ್ತೀನಿ. ಹಾಳು ಬಾವಿಗೆ ಬೀಳು ಅಂದ್ರೂ ಬೀಳ್ತೀನಿ. ನಾನು ನನ್ನ ತಮ್ಮ ಅವರ ಮಾತಿಗೆ ಬದ್ಧವಾಗಿದೀವಿ’ ಎಂದರು ದರ್ಶನ್.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ