ನ್ಯೂಸ್ ಚಾನೆಲ್ನಲ್ಲಿ ಐಂದ್ರಿತಾ ನೋಡಿ ಫಿದಾ ಆಗಿದ್ದ ದಿಗಂತ್; ಇಲ್ಲಿದೆ ಪ್ರೇಮಕಥೆ
ಐಂದ್ರಿತಾ ರೇ ಅವರು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದು 2006ರ ‘ಜ್ಯಾಕ್ಪಾಟ್’ ಸಿನಿಮಾ ಮೂಲಕ. 2009ರಲ್ಲಿ ರಿಲೀಸ್ ಆದ ‘ಮನಸಾರೆ’ ಸಿನಿಮಾ ಅವರ ವೃತ್ತಿ ಬದುಕನ್ನೇ ಬದಲಿಸಿತು. ಕೇವಲ ಕರಿಯರ್ ಮಾತ್ರವಲ್ಲ ಅವರ ವೈಯಕ್ತಿಕ ಬದುಕನ್ನೂ ಕೂಡ ಬದಲಿಸಿತ್ತು ಈ ಸಿನಿಮಾ.
ನಟಿ ಐಂದ್ರಿತಾ ರೇ (Aindrita Ray) ಅವರಿಗೆ ಇಂದು (ಏಪ್ರಿಲ್ 4) ಜನ್ಮದಿನ. ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಸೆಲೆಬ್ರಿಟಿಗಳು ಹಾಗೂ ಫ್ಯಾನ್ಸ್ ಶುಭ ಕೋರುತ್ತಿದ್ದಾರೆ. ಐಂದ್ರಿತಾ ಅವರದ್ದು ಬೆಂಗಾಲಿ ಫ್ಯಾಮಿಲಿ. ಇವರ ಕುಟುಂಬ ಉದಯಪುರದಲ್ಲಿ ಸೆಟಲ್ ಆಗಿತ್ತು. ಅವರು ಸ್ಯಾಂಡಲ್ವುಡ್ಗೆ ಬಂದು ಕನ್ನಡ ಕಲಿತು ಮಾತನಾಡುತ್ತಿದ್ದಾರೆ. ಈ ವಿಚಾರಕ್ಕೆ ಅವರು ಎಲ್ಲರಿಂದ ಮೆಚ್ಚುಗೆ ಪಡೆದಿದ್ದಾರೆ. ಐಂದ್ರಿತಾ ಹಾಗೂ ದಿಗಂತ್ ಲವ್ಸ್ಟೋರಿ ಗಮನ ಸೆಳೆಯುವಂಥದ್ದು. ಐಂದ್ರಿತಾಗೆ ಪ್ರಾಣಿಗಳ ಮೇಲೂ ವಿಶೇಷ ಪ್ರಿತಿ ಇದೆ. ಐಂದ್ರಿತಾ ಹಾಗೂ ದಿಗಂತ್ ಲವ್ಸ್ಟೋರಿ ಬಗ್ಗೆ ಇಲ್ಲಿದೆ ವಿವರ.
ಐಂದ್ರಿತಾ ರೇ ಅವರು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದು 2006ರ ‘ಜ್ಯಾಕ್ಪಾಟ್’ ಸಿನಿಮಾ ಮೂಲಕ. ನಂತರ ‘ಮಸ್ತ್ ಮಜಾ ಮಾಡಿ’, ‘ವಾಯುಪುತ್ರ’ ಸಿನಿಮಾಗಳಲ್ಲಿ ನಟಿಸಿದರು. 2009ರಲ್ಲಿ ರಿಲೀಸ್ ಆದ ‘ಮನಸಾರೆ’ ಸಿನಿಮಾ ಅವರ ವೃತ್ತಿ ಬದುಕನ್ನೇ ಬದಲಿಸಿತು. ಕೇವಲ ಕರಿಯರ್ ಮಾತ್ರವಲ್ಲ ಅವರ ವೈಯಕ್ತಿಕ ಬದುಕನ್ನೂ ಕೂಡ ಬದಲಿಸಿತ್ತು ಈ ಸಿನಿಮಾ. ಈ ಚಿತ್ರದಲ್ಲಿ ಐಂದ್ರಿತಾ ಹಾಗೂ ದಿಗಂತ್ ಮೊದಲ ಬಾರಿಗೆ ಒಟ್ಟಾಗಿ ನಟಿಸಿದ್ದರು.
‘ಮನಸಾರೆ’ ಸಿನಿಮಾ ಆರಂಭಕ್ಕೂ ಮೊದಲೇ ಐಂದ್ರಿತಾ ಅವರು ಒಮ್ಮೆ ದಿಗಂತ್ನ ರೆಸ್ಟೋರೆಂಟ್ ಒಂದರಲ್ಲಿ ನೋಡಿದ್ದರು. ‘ಈ ಹುಡುಗ ಸಖತ್ ಹ್ಯಾಂಡ್ಸಮ್ ಆಗಿದ್ದಾನೆ. ಈ ರೀತಿಯ ಬಾಯ್ಫ್ರೆಂಡ್ ಸಿಗಬೇಕು’ ಎಂದು ಮನಸ್ಸಿನಲ್ಲಿ ಅಂದುಕೊಂಡಿದ್ದರು ಐಂದ್ರಿತಾ. ಅಚ್ಚರಿಯ ವಿಚಾರ ಎಂದರೆ ದಿಗಂತ್ ಕೂಡ ಇದೇ ರೀತಿ ಅಂದುಕೊಂಡಿದ್ದರಂತೆ! ನ್ಯೂಸ್ ಚಾನೆಲ್ ಒಂದಕ್ಕೆ ಐಂದ್ರಿತಾ ಸಂದರ್ಶನ ನೀಡುತ್ತಿದ್ದರು. ಈ ಸಂದರ್ಶನದಲ್ಲಿದ್ದ ಐಂದ್ರಿತಾ ಅವರು ದಿಗಂತ್ಗೆ ಸಖತ್ ಇಷ್ಟ ಆದರು.
‘ಇಂಡಸ್ಟ್ರಿಗೆ ಯಾವುದೋ ಹೊಸ ನಟಿಯ ಆಗಮನ ಆಗಿದೆ. ಸಿಕ್ಕಿದ್ರೆ ಈ ತರಹದ ಹುಡುಗಿ ಸಿಗಬೇಕು’ ಎಂದು ದಿಗಂತ್ ಅಂದುಕೊಂಡಿದ್ದರು. ಇವರಿಬ್ಬರ ಕೋರಿಕೆ ದೇವರಿಗೆ ಕೇಳಿಸಿತು ಅನಿಸುತ್ತದೆ! ‘ಮನಸಾರೆ’ ಸಿನಿಮಾಗಾಗಿ ಇವರನ್ನು ದೇವರು ಒಂದು ಮಾಡಿದರು. ದಿಗಂತ್ ಹಾಗೂ ಐಂದ್ರಿತಾ ಈ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದರು. ಈ ಸಿನಿಮಾ ಮೆಚ್ಚುಗೆ ಪಡೆಯಿತು. ಇವರ ಕೆಮಿಸ್ಟ್ರಿ ಇಷ್ಟವಾಗಿದೆ.
ಸಿನಿಮಾ ಶೂಟಿಂಗ್ ವೇಳೆ ದಿಗಂತ್ ಅವರು ಅನಾರೋಗ್ಯಕ್ಕೆ ಒಳಗಾಗಿದ್ದರು. ಆಗ ದಿಗಂತ್ ಅವರಿಗೆ ಹಣ್ಣುಗಳನ್ನು ಐಂದ್ರಿತಾ ಕಳುಹಿಸಿಕೊಟ್ಟಿದ್ದರು. ಇದರಿಂದ ಇಬ್ಬರ ಮಧ್ಯೆ ಪ್ರೀತಿ ಮೂಡಿತ್ತು. ಪ್ರೇಮ ನಿವೇದನೆ ಮಾಡಿಕೊಂಡು ಡೇಟಿಂಗ್ ಆರಂಭಿಸಿದರು.
ಇದನ್ನೂ ಓದಿ: ಹೊಸ ಗೆಟಪ್ನಲ್ಲಿ ಬಂದ ದಿಗಂತ್-ಸಂಗೀತಾ ಶೃಂಗೇರಿ; ಇದು ‘ಮಾರಿಗೋಲ್ಡ್’ ಕಥೆ
‘ಮನಸಾರೆ’ ಸಿನಿಮಾ ರಿಲೀಸ್ ಆಗಿದ್ದು 2009ರಲ್ಲಿ. ಅಲ್ಲಿಂದ ಹಲವು ವರ್ಷಗಳ ಕಾಲ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. 2018ರಲ್ಲಿ ದಿಗಂತ್ ಹಾಗೂ ಐಂದ್ರಿತಾ ಮದುವೆ ಆದರು. 10 ವರ್ಷಗಳ ಕಾಲ ಇವರು ಹಾಯಾಗಿ ಸುತ್ತಾಟ ನಡೆಸಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ