ಕೇರಳ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆಗೆ ಭಾವನಾ ಸರ್ಪ್ರೈಸ್​ ಎಂಟ್ರಿ; ನಟಿಗೆ ಅದ್ದೂರಿ ಸ್ವಾಗತ- ವಿಡಿಯೋ ಇಲ್ಲಿದೆ

| Updated By: shivaprasad.hs

Updated on: Mar 20, 2022 | 8:49 AM

Bhavana | IFFK: ಬಹುಭಾಷಾ ನಟಿ ಭಾವನಾ ಕೇರಳ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಅವರ ಈ ಭೇಟಿ ಸರ್ಪ್ರೈಸ್ ಆಗಿತ್ತು. ನಟಿಯನ್ನು ‘ಹೋರಾಟದ ದ್ಯೋತಕ’ ಎಂದು ವ್ಯಾಖ್ಯಾನಿಸಲಾಯಿತು. ಈ ವೇಳೆ ಅವರಿಗೆ ಎದ್ದು ನಿಂತು ಜನರು ಗೌರವ ಸಲ್ಲಿಸಿದರು.

ಕೇರಳ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆಗೆ ಭಾವನಾ ಸರ್ಪ್ರೈಸ್​ ಎಂಟ್ರಿ; ನಟಿಗೆ ಅದ್ದೂರಿ ಸ್ವಾಗತ- ವಿಡಿಯೋ ಇಲ್ಲಿದೆ
ಭಾವನಾ
Follow us on

ಕೇರಳದಲ್ಲಿ ಪ್ರತಿಷ್ಠಿತ 26ನೇ ಕೇರಳ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (IFFK 2022) ನಡೆಯುತ್ತಿದೆ. ಅದರ ಉದ್ಘಾಟನೆಗೆ ಸರ್ಪ್ರೈಸ್​ ಆಗಿ ಓರ್ವ ಅತಿಥಿ ಬಂದಿದ್ದರು. ಅವರ ಆಗಮನಕ್ಕೆ ಜನರು ಎದ್ದು ನಿಂತು ಚಪ್ಪಾಳೆಯ ಮೂಲಕ ಗೌರವ ಸಲ್ಲಿಸಿದ್ದ ವಿಶೇಷವಾಗಿತ್ತು. ಹೌದು. ಆ ನಟಿ ಭಾವನಾ (Bhavana). ಐದು ವರ್ಷಗಳ ನಂತರ ಅವರು ತಮ್ಮ ತವರು ಚಿತ್ರರಂಗಕ್ಕೆ ಇತ್ತೀಚೆಗೆ ಮರಳಿದ್ದರು. ಇದೀಗ ದೊಡ್ಡ ವೇದಿಕೆಯೊಂದರಲ್ಲಿ ಅವರು ಕಾಣಿಸಿಕೊಂಡಿದ್ದು, ಜನರು ಅದ್ದೂರಿಯಾಗಿ ನಟಿಯನ್ನು ಸ್ವಾಗತಿಸಿದ್ದಾರೆ. ಕೇರಳ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಸರ್ಪ್ರೈಸ್ ಆಗಿ ಎಂಟ್ರಿ ಕೊಟ್ಟಿರುವ ಭಾವನಾ, ಜ್ಯೋತಿ ಬೆಳಗಿಸಿ ಚಿತ್ರೋತ್ಸವವನ್ನು ಉದ್ಘಾಟಿಸಿದ್ದಾರೆ. ಆಯೋಜಕರು ಭಾವನಾ ಹೆಸರನ್ನು ಘೋಷಿಸುತ್ತಿದ್ದಂತೆಯೇ ನೆರೆದಿದ್ದವರ ಘೋಷಣೆಗಳು ಮುಗಿಲುಮುಟ್ಟಿತ್ತು. ಭಾವನಾ ವೇದಿಕೆಗೆ ಆಗಮಿಸಿ ಎಲ್ಲರಿಗೂ ಧನ್ಯವಾದ ಹೇಳುವಲ್ಲಿಯವರೆಗೆ ಅದು ಮುಂದುವರೆಯಿತು. ವೇದಿಕೆಯಲ್ಲಿ ಭಾವನಾರನ್ನು ‘ಹೋರಾಟದ ದ್ಯೋತಕ’ ಎಂದು ಕರೆದು ಕೇರಳ ಚಲನಚಿತ್ರ ಅಕಾಡೆಮಿ ಚೇರ್​ಮನ್ ರಂಜಿತ್  ಗೌರವಿಸಿದರು. ವೇದಿಕೆಯಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ನಿರ್ದೇಶಕ ಅನುರಾಗ್ ಕಶ್ಯಪ್ ಮೊದಲಾದವರು ಉಪಸ್ಥಿತರಿದ್ದರು.

ಚಿತ್ರೋತ್ಸವದ ವೇದಿಕೆಯಲ್ಲಿ ಭಾವನಾ:

ಮಲಯಾಳಂ ಚಿತ್ರರಂಗಕ್ಕೆ ಮರಳಿದ ನಟಿ:

ಪ್ರಸ್ತುತ ಭಾವನಾ ಮಲಯಾಳಂ ಚಿತ್ರರಂಗಕ್ಕೆ ಮರಳುತ್ತಿದ್ಧಾರೆ. 5 ವರ್ಷಗಳ ನಂತರ ಅವರ ಹೊಸ ಚಿತ್ರ ಅನೌನ್ಸ್ ಆಗಿದೆ. ಇತ್ತೀಚೆಗೆ ತಾವು ಅನುಭವಿಸಿದ ನೋವಿನ ಬಗ್ಗೆ ಭಾವನಾ ಮೊದಲ ಬಾರಿಗೆ ನೋವು ಹಂಚಿಕೊಂಡಿದ್ದರು. ‘‘ಈ ಐದು ವರ್ಷಗಳಲ್ಲಿ ನನ್ನ ಧ್ವನಿಯನ್ನು ಹತ್ತಿಕ್ಕಲು ಪ್ರಯತ್ನಿಸಲಾಗಿದೆ. ನಾನು ಯಾವುದೇ ಅಪರಾಧ ಮಾಡಿಲ್ಲ. ಅಪರಾಧಿಗಳಿಗೆ ಶಿಕ್ಷೆಯಾಗಲು ಹೋರಾಟವನ್ನು ಮುಂದುವರೆಸುತ್ತೇನೆ’’ ಎಂದು ನಟಿ ಹೇಳಿದ್ದರು.

ಪ್ರಸ್ತುತ ಭಾವನಾ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದನ್ನು ಅವರ ಸಹದ್ಯೋಗಿಗಳು, ನಟಿಯರು ಸ್ವಾಗತಿಸಿದ್ದಾರೆ. ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡಿದ್ದಾರೆ. ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರುವ ಪಾರ್ವತಿ ಭಾವನಾ ಚಿತ್ರೋತ್ಸವದ ಸಮಾರಂಭದ ವೇದಿಕೆಗೆ ಆಗಮಿಸುತ್ತಿರುವ ವಿಡಿಯೋ ಹಂಚಿಕೊಂಡಿದ್ದು, ‘‘ಇದು ನಿಮ್ಮ ವೇದಿಕೆ, ಇದು ನಿಮ್ಮ ಕತೆ. ನಿಮ್ಮನ್ನು ತಡೆಯುವವರು ಯಾರೂ ಇಲ್ಲ’’ ಎಂದು ಬರೆದಿದ್ದಾರೆ.

ಪಾರ್ವತಿ ಹಂಚಿಕೊಂಡ ವಿಡಿಯೋ ಇಲ್ಲಿದೆ:

5 ವರ್ಷಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಭಾವನಾ:

ಭಾವನಾ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದ ಪುನೀತ್ ರಾಜ್​ಕುಮಾರ್ ಅವರ ‘ಜಾಕಿ’ ಚಿತ್ರದ ಮೂಲಕ. 2017ರ ನಂತರ ಭಾವನಾ ಕನ್ನಡ ಚಿತ್ರಗಳಲ್ಲಿ ಪೂರ್ಣವಾಗಿ ತೊಡಗಿಸಿಕೊಂಡರು. ಈ ಅವಧಿಯಲ್ಲಿ ಅವರಿಗೆ ದೊಡ್ಡ ಹಿಟ್ ನೀಡಿದ್ದು ‘ಟಗರು’ ಚಿತ್ರ. ಇದಲ್ಲದೇ ಭಾವನಾ ನಟಿಸಿದ್ದ ಕನ್ನಡ ಚಿತ್ರಗಳು ವಿವಿಧ ಕಾರಣಗಳಿಗೆ ಸದ್ದು ಮಾಡಿದ್ದವು. ‘99’ ‘ಇನ್ಸ್‌ಪೆಕ್ಟರ್ ವಿಕ್ರಂ’, shrikrishna@gmail.com ‘ಭಜರಂಗಿ 2’ ಮೊದಲಾದ ಚಿತ್ರಗಳಲ್ಲಿ ಭಾವನಾ ಬಣ್ಣಹಚ್ಚಿದರು.

ಏಳು ದಿನಗಳ ಕಾಲ ನಡೆಯಲಿದೆ ಕೇರಳ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ:

ಏಳು ದಿನಗಳ ಕೇರಳ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಏಷಿಯನ್, ಆಫ್ರಿಕನ್, ಲ್ಯಾಟಿನ್ ಅಮೇರಿಕನ್, ಯುರೋಪಿನ್ ದೇಶಗಳ 180 ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. ಇದು 14 ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗಲಿವೆ. ಸಮಾರಂಭದಲ್ಲಿ ಐಸಿಸ್ ದಾಳಿಯಿಂದ ಕಾಲುಗಳನ್ನು ಕಳೆದುಕೊಂಡ ಟರ್ಕಿಶ್ ನಿರ್ದೇಶಕಿ ಲೀಸಾ ಕ್ಯಾಲನ್ ಅವರ ಸಾಧನೆಗೆ ‘ಸ್ಪಿರಿಟ್ ಆಫ್ ಸಿನಿಮಾ ಅವಾರ್ಡ್’ ನೀಡಿ ಗೌರವಿಸಲಾಯಿತು.

ಇದನ್ನೂ ಓದಿ:

ತೆಲುಗಿನ ‘RRR’ ಸಿನಿಮಾ ಪ್ರಚಾರದ ವೇದಿಕೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ; ಇಲ್ಲಿವೆ ಫೋಟೋಗಳು​

ಸಮಂತಾಗೆ ಆ್ಯಕ್ಷನ್​ ಹೇಳಿಕೊಡೋಕೆ ಬಂದ ಹಾಲಿವುಡ್​ ಸ್ಟಂಟ್​ ಮಾಸ್ಟರ್​