ಪ್ರಿಯಾಮಣಿ ಮೊದಲ ಸಂಭಾವನೆ 500 ರೂಪಾಯಿ; ಈಗ ಪಡೆಯೋ ಹಣ ಎಷ್ಟು?

| Updated By: ರಾಜೇಶ್ ದುಗ್ಗುಮನೆ

Updated on: Jun 04, 2024 | 12:34 PM

ರಾಜ್ ಹಾಗೂ ಡಿಕೆ ನಿರ್ದೇಶನದ ‘ದಿ ಫ್ಯಾಮಿಲಿ ಮ್ಯಾನ್’ ಸರಣಿಯಲ್ಲಿ ಸುಚಿತ್ರಾ ಹೆಸರಿನ ಪಾತ್ರ ಮಾಡಿ ಪ್ರಿಯಾಮಣಿ ಎಲ್ಲರ ಮೆಚ್ಚುಗೆ ಪಡೆದರು. ಈಗ ಅವರು ಮೂರನೇ ಸೀಸನ್​ಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ಸರಣಿಗಾಗಿ ಅವರು ಕೋಟ್ಯಂತ ರೂಪಾಯಿ ಸಂಭಾವನೆ ಪಡೆದಿದ್ದಾರೆ

ಪ್ರಿಯಾಮಣಿ ಮೊದಲ ಸಂಭಾವನೆ 500 ರೂಪಾಯಿ; ಈಗ ಪಡೆಯೋ ಹಣ ಎಷ್ಟು?
ಪ್ರಿಯಾಮಣಿ
Follow us on

ನಟಿ ಪ್ರಿಯಾಮಣಿ (Priyamani) ಅವರು ಬಾಲಿವುಡ್ ಹಾಗೂ ದಕ್ಷಿಣದಲ್ಲಿ ಖ್ಯಾತಿ ಪಡೆದಿದ್ದಾರೆ. ಅವರಿಗೆ ಈಗಲೂ ಬೇಡಿಕೆ ಇದೆ. ಅವರು ಹಿಂದಿ ಹಾಗೂ ದಕ್ಷಿಣ ಭಾರತದಲ್ಲಿ ದೊಡ್ಡ ಮಟ್ಟದ ಜನಪ್ರಿಯತೆ ಪಡೆದಿದ್ದಾರೆ. ಅವರಿಗೆ ಇಂದು (ಜೂನ್ 4) ಜನ್ಮದಿನ. ಎಲ್ಲರೂ ಅವರಿಗೆ ಶುಭಾಶಯ ಕೋರುತ್ತಿದ್ದಾರೆ. ಪ್ರತಿ ಚಿತ್ರಕ್ಕೆ ಪ್ರಿಯಾಮಣಿ ಕೋಟಿ ಕೋಟಿ ರೂಪಾಯಿ ಪಡೆಯುತ್ತಾರೆ. ಮೊದಲಿಗೆ ಅವರಿಗೆ ಇಷ್ಟೊಂದು ಸಂಭಾವನೆ ಇರಲಿಲ್ಲ.

ರಾಜ್ ಹಾಗೂ ಡಿಕೆ ನಿರ್ದೇಶನದ ‘ದಿ ಫ್ಯಾಮಿಲಿ ಮ್ಯಾನ್’ ಸರಣಿಯಲ್ಲಿ ಸುಚಿತ್ರಾ ಹೆಸರಿನ ಪಾತ್ರ ಮಾಡಿ ಪ್ರಿಯಾಮಣಿ ಎಲ್ಲರ ಮೆಚ್ಚುಗೆ ಪಡೆದರು. ಈಗ ಅವರು ಮೂರನೇ ಸೀಸನ್​ಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ಸರಣಿಗಾಗಿ ಅವರು ಕೋಟ್ಯಂತ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಅವರ ಮೊದಲ ಸಂಭಾವನೆ ಕೇವಲ 500 ರೂಪಾಯಿ ಇತ್ತಂತೆ.

2003ರಲ್ಲಿ ರಿಲೀಸ್ ಆದ ತೆಲುಗಿನ ‘ಎವರೆ ಆಟಗಾಡು’ ಮೂಲಕ ಪ್ರಿಯಾಮಣಿ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಈ ಚಿತ್ರದಲ್ಲಿ ಅವರ ನಟನೆಗೆ ಮೆಚ್ಚುಗೆ ಸಿಕ್ಕಿತ್ತು. ನಂತರ ಅವರು ತಮಿಳು, ಮಲಯಾಳಂ ಹಾಗೂ ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿದರು. ಅವರು ಪ್ರತಿ ಚಿತ್ರಕ್ಕೆ ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಗ್ಲಾಮರ್, ಮಹಿಳಾ ಪ್ರಧಾನ ಸೇರಿ ಎಲ್ಲಾ ರೀತಿಯ ಪಾತ್ರಗಳನ್ನು ಅವರು ಮಾಡುತ್ತಾರೆ. ಅವರ ಮೊದಲ ಸಂಭಾವನೆ 500 ರೂಪಾಯಿ ಮಾತ್ರ. ಈ ಬಗ್ಗೆ ಅವರು ಹೇಳಿಕೊಂಡಿದ್ದರು.

‘ನನ್ನ ಮೊದಲ ಸಂಭಾವನೆ 500 ರೂಪಾಯಿ ಇತ್ತು. ನಾನು ಆ ಹಣವನ್ನು ಹಾಗೆಯೇ ಇಟ್ಟಿದ್ದೇನೆ’ ಎಂದು ಪ್ರಿಯಾಮಣಿ ಅವರು ಈ ಮೊದಲು ಹೇಳಿದ್ದರು. ಇದು ಮಾಡೆಲಿಂಗ್​ನಿಂದ ಬಂದ ಹಣ ಎಂದು ಹೇಳಲಾಗುತ್ತಿದೆ. ‘ನನ್ನ ಸಿನಿಮಾದಲ್ಲಿ ಹಾಡಬೇಕು. ಮೇಕಪ್ ಇಲ್ಲದೆ ಸಿನಿಮಾದಲ್ಲಿ ಕಾಣಿಸಿಕೊಳ್ಳಬೇಕು ಎನ್ನುವ ಆಸೆ ಇದೆ’ ಎಂದಿದ್ದಾರೆ ನಟಿ ಪ್ರಿಯಾಮಣಿ. ಅವರಿಗೆ ಯಾರು ಅವಕಾಶ ನೀಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

ಕನ್ನಡದಲ್ಲಿ ‘ವಿಷ್ಣುವರ್ಧನ’, ‘ಅಣ್ಣಾಬಾಂಡ್’ ಸೇರಿ ಅನೇಕ ಚಿತ್ರಗಳಲ್ಲಿ ಪ್ರಿಯಾಮಣಿ ಅವರು ನಟಿಸಿದ್ದಾರೆ. ಅವರು ‘ದಿ ಫ್ಯಾಮಿಲಿ ಮ್ಯಾನ್’ ಸೀರಿಸ್​ಗಾಗಿ ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಕಳೆದ ವರ್ಷ ಅವರ ನಟನೆಯ ‘ಜವಾನ್’ ಸಿನಿಮಾ ರಿಲೀಸ್ ಆಗಿ ಸೂಪರ್ ಹಿಟ್ ಆಯಿತು. ಶಾರುಖ್ ಖಾನ್ ಮುಖ್ಯಭೂಮಿಕೆ ಮಾಡಿದ ಈ ಸಿನಿಮಾದಲ್ಲಿ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: ‘ದಿ ಫ್ಯಾಮಿಲಿ ಮ್ಯಾನ್​ 3’ ಬಗ್ಗೆ ಸಿಹಿ ಸುದ್ದಿ ನೀಡಿದ ನಟಿ ಪ್ರಿಯಾಮಣಿ

ಪ್ರಿಯಾಮಣಿ ಈ ವರ್ಷ ಸಖತ್ ಬ್ಯುಸಿ ಇದ್ದಾರೆ. ‘ಭಾಮಾಕಲಾಪಮ್ 2’, ‘ಆರ್ಟಿಕಲ್ 370’ ಈಗಾಗಲೇ ರಿಲೀಸ್ ಆಗಿದೆ. ಏಪ್ರಿಲ್ 10ರಂದು ‘ಮೈದಾನ್’ ಸಿನಿಮಾ ರಿಲೀಸ್ ಆಗಿ ಸಾಧಾರಣ ಹಿಟ್ ಎನಿಸಿಕೊಂಡಿದೆ. ಈ ಚಿತ್ರಕ್ಕೆ ಅವರು 2 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.