ತೆಲುಗು ಚಿತ್ರರಂಗದಲ್ಲಿ ಮಿಂಚುತ್ತಿರುವ ಕನ್ನಡದ ಬೆಡಗಿ ರಶ್ಮಿಕಾ ಮಂದಣ್ಣ ಅವರ ನೂತನ ಚಿತ್ರದ ಚಿತ್ರೀಕರಣ ಆರಂಭವಾಗಿದೆ. ಇದರಲ್ಲಿ ತೆಲುಗಿನ ಭರವಸೆಯ ಪ್ರತಿಭೆ ಶರ್ವಾನಂದ್ ಅವರೊಂದಿಗೆ ಮೊದಲ ಬಾರಿಗೆ ರಶ್ಮಿಕಾ ಮಂದಣ್ಣ ತೆರೆಯನ್ನು ಹಂಚಿಕೊಳ್ಳುತ್ತಿದ್ದಾರೆ. ರೊಮ್ಯಾಂಟಿಕ್- ಕಾಮಿಡಿ ಚಿತ್ರವಾದ ಈ ಚಿತ್ರಕ್ಕೆ ‘ಆಡವಲ್ಲು ಮೀಕು ಜೋಹಾರ್ಲು’(Aadavallu Meeku Joharlu) ಎಂದು ಹೆಸರಿಡಲಾಗಿದೆ.
ಕರೊನಾ ಎರಡನೇ ಅಲೆಯ ಲಾಕ್ಡೌನ್ ನಿರ್ಬಂಧಗಳು ಸಡಿಲವಾಗುತ್ತಿರುವ ಬೆನ್ನಲ್ಲಿಯೇ ಒಂದೊಂದೇ ಚಿತ್ರಗಳು ಸೆಟ್ಟೇರುತ್ತಿವೆ. ಅದೇ ರೀತಿ ರಶ್ಮಿಕಾ ಮತ್ತು ಶರ್ವಾನಂದ್ ಹೈದರಾಬಾದ್ನಲ್ಲಿ ಮಂಗಳವಾರ ಶೂಟಿಂಗ್ ಪ್ರಾರಂಭಿಸಿದ್ದಾರೆ. ತೆಲುಗಿನ ಹಿಟ್ ಚಿತ್ರ ‘ಗೀತ ಗೋವಿಂದಂ’ ನಂತರ ರಶ್ಮಿಕಾ ಮೊದಲ ಬಾರಿಗೆ ರೊಮ್ಯಾಂಟಿಕ್- ಕಾಮಿಡಿ ಚಿತ್ರವೊಂದರಲ್ಲಿ ನಟಿಸುತ್ತಿದ್ದು, ತಮ್ಮ ಖುಷಿಯನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
‘ಆಡವಲ್ಲು ಮೀಕು ಜೋಹಾರ್ಲು’ ಚಿತ್ರವನ್ನು ಕಿಶೋರ್ ತಿರುಮಲ ನಿರ್ದೇಶಿಸುತ್ತಿದ್ದಾರೆ. ಅವರೇ ಕತೆಯನ್ನು ಬರೆದಿರುವ ಈ ಚಿತ್ರವನ್ನು ಸುಧಾಕರ್ ಚೆರುಕುರಿ ಅವರು ‘ಎಸ್ಎಲ್ವಿಇ ಸಿನಿಮಾಸ್’ ಬ್ಯಾನರ್ನಲ್ಲಿ ನಿರ್ಮಿಸುತ್ತಿದ್ದಾರೆ.
ರಶ್ಮಿಕಾ ಮಂದಣ್ಣ ಹಂಚಿಕೊಂಡಿರುವ ಟ್ವೀಟ್:
— Rashmika Mandanna (@iamRashmika) July 20, 2021
ಈ ಚಿತ್ರದ ಜೊತೆಗೆ ರಶ್ಮಿಕಾ ಬತ್ತಳಿಕೆಯಲ್ಲಿ ಈಗಾಗಲೇ ಹಲವು ಚಿತ್ರಗಳಿವೆ. ಅಲ್ಲು ಅರ್ಜುನ್ ನಾಯಕ ನಟನಾಗಿ ಕಾಣಿಸಿಕೊಂಡಿರುವ, ಸುಕುಮಾರ್ ನಿರ್ದೇಶನದ ‘ಪುಷ್ಪಾ’ ಚಿತ್ರದ ಚಿತ್ರೀಕರಣ ಈಗಾಗಲೇ ಬಹುತೇಕ ಪೂರ್ಣವಾಗಿದೆ. ಇದರಲ್ಲಿ ಮಲಯಾಳಂನ ಖ್ಯಾತ ನಟ ಫಹಾದ್ ಫಾಸಿಲ್ ಪ್ರತಿ ನಾಯಕನಾಗಿ ಕಾಣಿಸಿಕೊಂಡಿದ್ದು, ತೆಲುಗು ಚಿತ್ರರಂಗಕ್ಕೆ ಈ ಚಿತ್ರದ ಮೂಲಕ ಕಾಲಿಡಲಿದ್ದಾರೆ. ಇದರ ಹೊರತಾಗಿ ರಶ್ಮಿಕಾ ಖಾತೆಯಲ್ಲಿ ಬಾಲಿವುಡ್ನ ಎರಡು ಚಿತ್ರಗಳಿವೆ. ಸಿದ್ಧಾರ್ಥ್ ಮಲ್ಹೋತ್ರಾರೊಂದಿಗೆ ತೆರೆ ಹಂಚಿಕೊಂಡಿರುವ ‘ಮಿಷನ್ ಮಜ್ನು’ ಹಾಗೂ ಅಮಿತಾಭ್ ಬಚ್ಚನ್ ಜೊತೆ ನಟಿಸಿರುವ ‘ಗುಡ್ಬೈ’ ಚಿತ್ರಗಳಲ್ಲಿ ರಶ್ಮಿಕಾ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಕನ್ನಡದದ ‘ಕಿರಿಕಾ ಪಾರ್ಟಿ’ ಚಿತ್ರದ ಮೂಲಕ ಬೆಳ್ಳಿತೆರೆ ಪ್ರವೇಶಿಸಿದ ಈ ನಟಿ ಅಲ್ಲಿಂದ ಹಿಂತಿರುಗಿ ನೋಡಿದ್ದೇ ಇಲ್ಲ. ಈಗ ಭಾರತದ ಅತ್ಯಂತ ಬೇಡಿಕೆಯ ನಟಿಯಾಗಿ ರಶ್ಮಿಕಾ ಮಂದಣ್ಣ ಗುರುತಿಸಿಕೊಂಡಿದ್ದಾರೆ.
ಇದನ್ನೂ ಓದಿ:
ಅನಂತ್ ನಾಗ್ ಬಗ್ಗೆ ಯಶ್ ವಿಶೇಷ ಮಾತು; ಪದ್ಮ ಪ್ರಶಸ್ತಿ ಒತ್ತಾಯಕ್ಕೆ ರಾಕಿಂಗ್ ಸ್ಟಾರ್ ಧ್ವನಿ
ನಾನು ರಾಜ್ ಕುಂದ್ರಾ ಅವರ ಒಂದು ಆಪ್ ನೋಡಿದ್ದೇನೆ, ಅದರಲ್ಲಿ ‘ಅಂಥದ್ದೇನೂ’ ಇರಲಿಲ್ಲ: ಮಿಕಾ ಸಿಂಗ್
(Actress Rashmika Mandanna starts shoot of her new telugu Rom Com movie Aadavallu Meeku Joharlu with Sharvanand)