ಕಿರುತೆರೆ ನಟಿ ರೂಪಾಲಿ ಗಂಗೂಲಿ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅವರ ನಟನೆಗೆ ಎಲ್ಲಾ ಕಡೆಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಹೀಗಿರುವಾಗಲೇ ಅನೇಕರು ರೂಪಾಲಿ ನಟನೆಯನ್ನು ಶ್ರೀದೇವಿಗೆ ಹೋಲಿಕೆ ಮಾಡಿದ್ದಾರೆ. ಇದಕ್ಕೆ ಅವರು ಸಾಕಷ್ಟು ಖುಷಿಯಾಗಿದ್ದಾರೆ. ಈ ಬಗ್ಗೆ ರೂಪಾಲಿ ಸಂತಸ ಹಂಚಿಕೊಂಡಿದ್ದಾರೆ.
ಆಂಗ್ಲ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ರೂಪಾಲಿ, ನನಗೆ ಶ್ರೀದೇವಿ ಮಾದರಿ. ಅವರ ಎಲ್ಲಾ ಚಲನಚಿತ್ರಗಳನ್ನು ನಾನು 25-30 ಬಾರಿ ನೋಡಿದ್ದೇನೆ. ಅನೇಕ ಚಿತ್ರಗಳನ್ನು ಥಿಯೇಟರ್‌ನಲ್ಲೇ ಕನಿಷ್ಠ 8-10 ಬಾರಿ ನೋಡಿದ್ದೇನೆ. ನಾನು ಶ್ರೀದೇವಿಯ ಬಗ್ಗೆ ತುಂಬಾ ಗೌರವ ಹೊಂದಿದ್ದೇನೆ ಎಂದಿದ್ದಾರೆ.
ನಾನು ಅವರ ಎಲ್ಲಾ ಚಲನಚಿತ್ರಗಳನ್ನು ನೋಡಿದ್ದೇನೆ. ಅವರ ಸಿನಿಮಾಗಳಲ್ಲಿನ ಪಾತ್ರಗಳು ತುಂಬಾನೇ ಇಷ್ಟವಾಗುತ್ತವೆ. ಅವರ ಪ್ರತಿ ಚಿತ್ರವೂ ನನಗೆ ಮಾದರಿ. ಹೀಗಿರುವಾಗ ನನ್ನ ನಟನೆಯನ್ನು ಶ್ರೀದೆವಿಗೆ ಹೋಲಿಕೆ ಮಾಡಿರೆ ಖಂಡಿತವಾಗಿಯೂ ಖುಷಿಯಾಗುತ್ತದೆ ಎಂದಿದ್ದಾರೆ ಅವರು.
ಅನುಪಮಾ ಧಾರಾವಾಹಿಯಲ್ಲಿ ರೂಪಾಲಿ ನಟಿಸುತ್ತಿದ್ದಾರೆ. 2020ರಲ್ಲಿ ಈ ಧಾರಾವಾಹಿಯ ಪ್ರಸಾರ ಆರಂಭವಾಗಿತ್ತು. ಅಂದಿನಿಂದ ಇತ್ತೀಚೆವರೆಗೂ ಈ ಧಾರಾವಾಹಿ ಒಂದನೇ ಸ್ಥಾನದಲ್ಲೇ ಇತ್ತು. ಈ ಬಗ್ಗೆಯೂ ಅವರು ಸಂತಸ ಹೊರ ಹಾಕಿದ್ದಾರೆ.
ರೂಪಾಲಿ Vs ಸಾರಾಭಾಯ್ ಎಂಬ ಕಾಮಿಕ್ ಸರಣಿಯಲ್ಲಿ ರೂಪಾಲಿ ತನ್ನ ಮೋನಿಷಾ ಪಾತ್ರದ ಮೂಲಕ ಹೆಚ್ಚು ಖ್ಯಾತಿ ಗಳಿಸಿಕೊಂಡರು. ಅವರು ಸಂಜೀವಿನಿ, ಕಹಾನಿ ಘರ್ ಘರ್ ಕಿ ಮೊದಲಾದ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇದಲ್ಲದೆ, ಬಿಗ್ ಬಾಸ್ (2006), ಜರಾ ನಾಚ್ಕೆ ದಿಖಾ (2008), ಫಿಯರ್ ಫ್ಯಾಕ್ಟರ್: ಖತ್ರೋನ್ ಕಿ ಖಿಲಾಡಿ 2 (2009) ಸೇರಿದಂತೆ ಹಲವಾರು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದರು.
ಇದನ್ನೂ ಒದಿ: ಶ್ರೀದೇವಿ ಜೊತೆಗಿನ ಚಿತ್ರದ ಶೂಟಿಂಗ್ಗೆ ಬರುವಾಗ ಐಷಾರಾಮಿ ಕಾರು ಬೇಡ ಎಂದಿದ್ದ ನಟ ಅಜಿತ್