‘ಕೇರಳ ಸ್ಟೋರಿ’ ಬಳಿಕ ಬರ್ತಿದೆ ನಕ್ಸಲರ ಸ್ಟೋರಿ; ಪೋಸ್ಟರ್ ಮೂಲಕ ಗಮನ ಸೆಳೆದ ಅದಾ ಶರ್ಮಾ

| Updated By: ರಾಜೇಶ್ ದುಗ್ಗುಮನೆ

Updated on: Jan 16, 2024 | 2:19 PM

‘ದಿ ಕೇರಳ ಸ್ಟೋರಿ’ ಹಿಟ್ ಆದ ಬಳಿಕ ನಿರ್ದೇಶಕ ಸುದಿಪ್ತೋ ಸೇನ್, ನಿರ್ಮಾಪಕ ವಿಪುಲ್ ಅಮೃತ್​ಲಾಲ್ ಶಾ, ನಟಿ ಅದಾ ಶರ್ಮಾ ಅವರು ‘ಬಸ್ತಾರ್: ದಿ ನಕ್ಸಲ್ ಸ್ಟೋರಿ’ ಚಿತ್ರಕ್ಕಾಗಿ ಒಂದಾಗಿದ್ದಾರೆ.

‘ಕೇರಳ ಸ್ಟೋರಿ’ ಬಳಿಕ ಬರ್ತಿದೆ ನಕ್ಸಲರ ಸ್ಟೋರಿ; ಪೋಸ್ಟರ್ ಮೂಲಕ ಗಮನ ಸೆಳೆದ ಅದಾ ಶರ್ಮಾ
ಬಸ್ತರ್ ಸಿನಿಮಾ
Follow us on

ಅದಾ ಶರ್ಮಾ (Adah Sharma) ನಟನೆಯ ‘ದಿ ಕೇರಳ ಸ್ಟೋರಿ’ ಸಿನಿಮಾ 2023ರಲ್ಲಿ ರಿಲೀಸ್ ಆಯಿತು. ಚಿತ್ರಕ್ಕೆ ಒಂದು ವರ್ಗದ ಜನರು ವಿರೋಧ ವ್ಯಕ್ತಪಡಿಸಿದರೆ ಇನ್ನೊಂದು ವರ್ಗದ ಜನರು ಸಿನಿಮಾಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಕೇರಳದಲ್ಲಿ ನಡೆದಿದೆ ಎನ್ನಲಾದ ಮತಾಂತರದ ಬಗ್ಗೆ ಈ ಚಿತ್ರದಲ್ಲಿ ಹೇಳಲಾಗಿತ್ತು. ಮತಾಂತರಗೊಂಡವರ ಬಗ್ಗೆ ನಿರ್ದೇಶಕರು ತಪ್ಪು ಲೆಕ್ಕಾಚಾರ ನೀಡಿದ್ದಾರೆ ಎಂದು ಅನೇಕರು ಆರೋಪಿಸಿದ್ದರು. ಮಾಧ್ಯಮಗಳ ಮುಂದೆ ಬಂದು ಈ ಬಗ್ಗೆ ಅವರು ಸ್ಪಷ್ಟನೆ ನೀಡಿದ್ದರು. ಈಗ ಈ ಟೀಂ ಮತ್ತೊಂದು ಚಿತ್ರದ ಮೂಲಕ ಪ್ರೇಕ್ಷಕರ ಎದುರು ಬರಲು ರೆಡಿ ಆಗಿದೆ. ಈ ಚಿತ್ರಕ್ಕೆ ‘ಬಸ್ತಾರ್: ದಿ ನಕ್ಸಲ್ ಸ್ಟೋರಿ’ ಎಂದು ಟೈಟಲ್ ಇಡಲಾಗಿದ್ದು, ಮಾರ್ಚ್ 15ರಂದು ಚಿತ್ರ ರಿಲೀಸ್ ಆಗಲಿದೆ.

‘ದಿ ಕೇರಳ ಸ್ಟೋರಿ’ ಹಿಟ್ ಆದ ಬಳಿಕ ನಿರ್ಮಾಪಕ ವಿಪುಲ್ ಅಮೃತ್​ಲಾಲ್ ಶಾ, ನಿರ್ದೇಶಕ ಸುದಿಪ್ತೋ ಸೇನ್, ನಟಿ ಅದಾ ಶರ್ಮಾ ಅವರು ‘ಬಸ್ತಾರ್: ದಿ ನಕ್ಸಲ್ ಸ್ಟೋರಿ’ ಚಿತ್ರಕ್ಕಾಗಿ ಒಂದಾದರು. ಈ ಚಿತ್ರದ ಶೂಟಿಂಗ್ ಪೂರ್ಣಗೊಂಡಿದೆ. ಈಗ ಈ ಚಿತ್ರದ ರಿಲೀಸ್ ದಿನಾಂಕ ಕೂಡ ಘೋಷಣೆ ಆಗಿದೆ. ಹೊಸ ಪೋಸ್ಟರ್​ನಲ್ಲಿ ಅದಾ ಶರ್ಮಾ ಅವರು ಗನ್ ಹಿಡಿದು ಮಿಂಚಿದ್ದಾರೆ. ಅವರು ಮಿಲಿಟಿರಿ ಡ್ರೆಸ್​ನಲ್ಲಿ ಗಮನ ಸೆಳೆದಿದ್ದಾರೆ. ಈ ಪೋಸ್ಟರ್ ಗಮನ ಸೆಳೆಯುತ್ತಿದೆ.

ಟ್ರೇಡ್ ಅನಲಿಸ್ಟ್ ತರಣ್ ಆದರ್ಶ್ ಟ್ವೀಟ್ ಮಾಡಿದ್ದು, ‘ಬಸ್ತಾರ್: ದಿ ನಕ್ಸಲ್ ಸ್ಟೋರಿ’ ಚಿತ್ರದ ಪೋಸ್ಟರ್ ಹಂಚಿಕೊಂಡಿದ್ದಾರೆ. ಜೊತೆಗೆ ಚಿತ್ರದ ಬಗ್ಗೆ ಕೆಲವು ವಿವರಗಳನ್ನು ಹಂಚಿಕೊಂಡಿದ್ದಾರೆ. ನಕ್ಸಲೀಯರ ಕಥೆಯನ್ನು ಚಿತ್ರದಲ್ಲಿ ತೋರಿಸಲಾಗುತ್ತಿದೆ. ಇದು ಕೂಡ ನೈಜ ಘಟನೆ ಆಧರಿಸಿ ಸಿದ್ಧಗೊಂಡ ಸಿನಿಮಾ ಅನ್ನೋದು ವಿಶೇಷ.

ಬಸ್ತಾರ್ ಅನ್ನೋದು ಚಂಡೀಗಢದಲ್ಲಿ ಬರುವ ಒಂದು ಪ್ರದೇಶ. ಸರ್ಕಾರದ ಮೈನಿಂಗಾ ಮಾಫಿಯಾದಿಂದ ಜನರು ತೊಂದರೆಗೆ ಒಳಗಾಗುತ್ತಾರೆ. ಇದರ ವಿರುದ್ಧ ನಕ್ಸಲರು ಹೋರಾಡುತ್ತಾರೆ. ಈ ಕಥೆಯನ್ನು ‘ಬಸ್ತಾರ್’ ಸಿನಿಮಾದಲ್ಲಿ ಹೇಳಲಾಗುತ್ತಿದೆ.

ಇದನ್ನೂ ಓದಿ: ಕ್ಯೂಟ್ ಲುಕ್​ನಲ್ಲಿ ಗಮನ ಸೆಳೆಯುವ ಅದಾ ಶರ್ಮಾ; ಇಲ್ಲಿದೆ ಫೋಟೋಸ್

ಅದಾ ಶರ್ಮಾ ಅವರು ಈ ಮೊದಲು ಸಾಕಷ್ಟು ಗ್ಲಾಮರ್ ರೀತಿಯ ಪಾತ್ರಗಳನ್ನು ಮಾಡಿ ಗಮನ ಸೆಳೆದಿದ್ದಾರೆ. ಅವರು ಕೇರಳ ಸ್ಟೋರಿಯಲ್ಲಿ ಬೇರೆಯದೇ ರೀತಿಯ ಪಾತ್ರ ಮಾಡಿದ್ದರು. ಮುಸ್ಲಿಂ ಧರ್ಮಕ್ಕೆ ಮತಾಂತರಗೊಳ್ಳುವ ಹಿಂದೂ ಹುಡುಗಿ ಪಾತ್ರದಲ್ಲಿ ಅವರು ನಟಿಸಿದ್ದರು. ಈಗ ಅವರು ಆ್ಯಕ್ಷನ್ ಅವತಾರದಲ್ಲಿ ಕಾಣಿಸಿಕೊಳ್ಳಲು ರೆಡಿ ಆಗಿದ್ದಾರೆ. ಈ ರೀತಿಯ ಪಾತ್ರಗಳಲ್ಲಿ ಅವರು ಹೆಚ್ಚಾಗಿ ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ