Adipurush Movie: ಟೀಕೆಗಳ ಮಧ್ಯೆಯೇ ‘ಆದಿಪುರುಷ್’ ಚಿತ್ರಕ್ಕೆ ಹೈಕೋರ್ಟ್​ನಿಂದ ದೊಡ್ಡ ರಿಲೀಫ್

|

Updated on: Jun 22, 2023 | 8:21 AM

‘ಆದಿಪುರುಷ್’ ರಿಲೀಸ್ ಆದ ಬಳಿಕ ಹಿಂದೂ ಸೇನಾ ಮುಖ್ಯಸ್ಥ ವಿಷ್ಣು ಗುಪ್ತಾ ಅವರು ದೆಹಲಿ ಹೈಕೋರ್ಟ್​ಗೆ ಸ್ವಯಂ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಿದ್ದರು. ಚಿತ್ರದ ಮೇಲೆ ನಿಷೇಧ ಹೇರುವಂತೆ ಕೋರಿದ್ದರು.

Adipurush Movie: ಟೀಕೆಗಳ ಮಧ್ಯೆಯೇ ‘ಆದಿಪುರುಷ್’ ಚಿತ್ರಕ್ಕೆ ಹೈಕೋರ್ಟ್​ನಿಂದ ದೊಡ್ಡ ರಿಲೀಫ್
ಪ್ರಭಾಸ್-ಕೃತಿ ಸನೋನ್
Follow us on

ಹಲವು ನಿರೀಕ್ಷೆಗಳ ನಡುವೆ ಪ್ರಭಾಸ್ (Prabhas) ನಟನೆಯ ‘ಆದಿಪುರುಷ್’ ಚಿತ್ರ ವಿಶ್ವದಾದ್ಯಂತ ರಿಲೀಸ್ ಆಯಿತು. ಜೂನ್ 16ರಂದು ಬಿಡುಗಡೆಯಾದ ಈ ಸಿನಿಮಾ ಟೀಕೆಗೆ ಗುರಿಯಾಗುತ್ತಿದೆ. ರಾಮಾಯಣವನ್ನು ನಂಬುವವರು ಸಾಕಷ್ಟು ಜನರಿದ್ದಾರೆ. ರಾಮ ಹಾಗೂ ಹನುಮಂತನ ಭಕ್ತರ ಸಂಖ್ಯೆಯೂ ದೊಡ್ಡದಿದೆ. ಇವರ ಭಾವನೆಗಳಿಗೆ ಧಕ್ಕೆ ತರುವ ಕೆಲಸವನ್ನು ‘ಆದಿಪುರುಷ್’ (Adipurush Movie) ಮಾಡಿದೆ. ಈ ಕಾರಣಕ್ಕೆ ಚಿತ್ರರಂಗದ ಗಣ್ಯರು ಸೇರಿ ಅನೇಕ ರಂಗದವರು ಇದನ್ನು ತೀವ್ರವಾಗಿ ಟೀಕಿಸಿದ್ದಾರೆ. ಈ ಸಿನಿಮಾ ಮೇಲೆ ನಿಷೇಧ ಹೇರುವಂತೆ ಹಿಂದೂ ಸೇನೆಯ ರಾಷ್ಟ್ರೀಯ ಅಧ್ಯಕ್ಷ ವಿಷ್ಣು ಗುಪ್ತಾ ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ‘ತುರ್ತಾಗಿ ಅರ್ಜಿ ವಿಚಾರಣೆ ನಡೆಸುವ ಅಗತ್ಯವಿಲ್ಲ’ ಎಂದಿರುವ ಕೋರ್ಟ್​, ಮುಂದಿನ ವಿಚಾರಣೆಯನ್ನು ಜೂನ್​ 30ಕ್ಕೆ ಮುಂದೂಡಿದೆ.

‘ಆದಿಪುರುಷ್’ ರಿಲೀಸ್ ಆದ ಬಳಿಕ ಹಿಂದೂ ಸೇನಾ ಮುಖ್ಯಸ್ಥ ವಿಷ್ಣು ಗುಪ್ತಾ ಅವರು ದೆಹಲಿ ಹೈಕೋರ್ಟ್​ಗೆ ಸ್ವಯಂ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಿದ್ದರು. ಚಿತ್ರದ ಮೇಲೆ ನಿಷೇಧ ಹೇರುವಂತೆ ಕೋರಿದ್ದರು. ಈ ಅರ್ಜಿಯ ವಿಚಾರಣೆ ಹೈಕೋರ್ಟ್​ನಲ್ಲಿ ನಡೆದಿದೆ. ಕೋರ್ಟ್ ಆದೇಶದಿಂದ ‘ಆದಿಪುರುಷ್’ ಚಿತ್ರಕ್ಕೆ ರಿಲೀಫ್ ಸಿಕ್ಕಂತೆ ಆಗಿದೆ.

‘ನೇಪಾಳ ಈ ಸಿನಿಮಾನ ಬ್ಯಾನ್ ಮಾಡಿದೆ. ಚಿತ್ರದಲ್ಲಿ ಅನೇಕ ವಿವಾದಾತ್ಮಕ ವಿಚಾರಗಳಿವೆ. ಅದರಿಂದ ಅಂತರರಾಷ್ಟ್ರೀಯ ಸಂಬಂಧಗಳಿಗೆ ಅಡ್ಡಿಯಾಗಬಹುದು. ತುರ್ತಾಗಿ ಅರ್ಜಿ ವಿಚಾರಣೆ ನಡೆಸಬೇಕು’ ಎಂದು ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದರು. ಆದರೆ, ಇದಕ್ಕೆ ಹೈಕೋರ್ಟ್ ಒಪ್ಪಿಲ್ಲ. ‘ಸಿನಿಮಾ ಈಗಾಗಲೇ ರಿಲೀಸ್ ಆಗಿದೆ. ಇನ್ನಾವುದೇ ತರಾತುರಿ ಇಲ್ಲ. ಜೂನ್ 30ಕ್ಕೆ ಬನ್ನಿ’ ಎಂದು ಕೋರ್ಟ್ ಹೇಳಿದೆ.

ಇದನ್ನೂ ಓದಿ: Kriti Sanon: ಟ್ರೋಲ್​ಗಳ ನಡುವೆಯೂ ಶಾಲೆ ಮಕ್ಕಳಿಗೆ ಉಚಿತವಾಗಿ ‘ಆದಿಪುರುಷ್​’ ಚಿತ್ರ ತೋರಿಸಲು ಮುಂದಾದ ಕೃತಿ ಸನೋನ್​

ಈಗಾಗಲೇ ‘ಆದಿಪುರುಷ್’ ಚಿತ್ರಕ್ಕೆ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಕಲೆಕ್ಷನ್ ತಗ್ಗಿದೆ. ಈ ವೀಕೆಂಡ್​ನಲ್ಲಿ ಸಿನಿಮಾ ಕೊಂಚ ಗಳಿಕೆ ಮಾಡಬಹುದು. ಅರ್ಜಿಯ ಮುಂದಿನ ವಿಚಾರಣೆ ವೇಳೆಗೆ ‘ಆದಿಪುರುಷ್’ ಸಿನಿಮಾ ಬಹುತೇಕ ಚಿತ್ರಮಂದಿರದಿಂದ ಕಾಲ್ಕಿತ್ತಿರುತ್ತದೆ. ಹೀಗಾಗಿ, ಕೋರ್ಟ್ ಯಾವುದೇ ರೀತಿಯಲ್ಲಿ ಆದೇಶ ಕೊಟ್ಟರೂ ಅದು ಅಷ್ಟೊಂದು ಪ್ರಭಾವ ಬೀರುವುದಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:40 am, Thu, 22 June 23