Deepika Chikhalia: ‘ಆದಿಪುರುಷ್​’ ನೋಡದೇ ಕಾಂಟ್ರವರ್ಸಿ ಬಗ್ಗೆ ಅಭಿಪ್ರಾಯ ತಿಳಿಸಿದ ರಾಮಾಯಣ ಧಾರಾವಾಹಿಯ ಸೀತೆ ದೀಪಿಕಾ ಚಿಖ್ಲಿಯಾ

Adipurush Controversy: ದಶಕಗಳ ಹಿಂದೆ ಪ್ರಸಾರವಾದ ‘ರಾಮಾಯಣ’ ಸೀರಿಯಲ್​ನಲ್ಲಿ ದೀಪಿಕಾ ಚಿಖ್ಲಿಯಾ ಅವರು ಸೀತೆಯ ಪಾತ್ರ ಮಾಡಿದ್ದರು. ಆ ಧಾರಾವಾಹಿಯನ್ನು ಜನರು ಈಗಲೂ ನೆನಪಿಸಿಕೊಳ್ಳುತ್ತಾರೆ.

Deepika Chikhalia: ‘ಆದಿಪುರುಷ್​’ ನೋಡದೇ ಕಾಂಟ್ರವರ್ಸಿ ಬಗ್ಗೆ ಅಭಿಪ್ರಾಯ ತಿಳಿಸಿದ ರಾಮಾಯಣ ಧಾರಾವಾಹಿಯ ಸೀತೆ ದೀಪಿಕಾ ಚಿಖ್ಲಿಯಾ
ದೀಪಿಕಾ ಚಿಖ್ಲಿಯಾ, ದೇವದತ್ತ ನಾಗೆ
Follow us
ಮದನ್​ ಕುಮಾರ್​
|

Updated on: Jun 21, 2023 | 12:25 PM

ಮಹಾಕಾವ್ಯ ರಾಮಾಯಣದ ಕಥೆ ಆಧರಿಸಿ ತಯಾರಾದ ‘ಆದಿಪುರುಷ್​’ (Adipurush) ಚಿತ್ರದಿಂದ ತುಂಬ ವಿವಾದಗಳು ಆಗುತ್ತಿವೆ. ಈ ಚಿತ್ರದಲ್ಲಿ ಪ್ರಭಾಸ್​ ಅವರು ರಾಮನಾಗಿ ಕಾಣಿಸಿದ್ದಾರೆ. ಸೈಫ್​ ಅಲಿ ಖಾನ್​ ಅವರು ರಾವಣನ ಪಾತ್ರ ಮಾಡಿದ್ದಾರೆ. ಆಂಜನೇಯನ ಪಾತ್ರಕ್ಕೆ ದೇವದತ್ತ ನಾಗೆ ಅವರು ಬಣ್ಣ ಹಚ್ಚಿದ್ದಾರೆ. ಈ ಸಿನಿಮಾದಲ್ಲಿ ಬಳಕೆ ಆಗಿರುವ ಭಾಷೆಯ ಬಗ್ಗೆ ಕೆಲವರು ತಕರಾರು ತೆಗೆದಿದ್ದಾರೆ. ಕೆಲವು ಪಾತ್ರಗಳ ಬಗ್ಗೆಯೂ ಟೀಕೆ ವ್ಯಕ್ತವಾಗಿದೆ. ಒಟ್ಟಾರೆಯಾಗಿ ಈ ಚಿತ್ರದಲ್ಲಿ ರಾಮಾಯಣದ (Ramayan) ಕಥೆಯನ್ನು ಹಾಗೂ ಅದರ ಪಾತ್ರಗಳನ್ನು ಅಸಂಬದ್ಧವಾಗಿ ತೋರಿಸಲಾಗಿದೆ ಎಂಬ ಕಾರಣಕ್ಕೆ ಹಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ‘ಆದಿಪುರುಷ್​’ ಸಿನಿಮಾದ ಬಗ್ಗೆ ‘ರಾಮಾಯಣ’ ಧಾರಾವಾಹಿಯ ಸೀತೆ ಪಾತ್ರಧಾರಿ ದೀಪಿಕಾ ಚಿಖ್ಲಿಯಾ (Deepika Chikhalia) ಅವರು ಕೂಡ ಈಗ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಅಂದಹಾಗೆ, ಅವರಿನ್ನೂ ‘ಆದಿಪುರುಷ್​’ ಸಿನಿಮಾವನ್ನು ನೋಡಿಲ್ಲ.

ದಶಕಗಳ ಹಿಂದೆ ಪ್ರಸಾರವಾದ ‘ರಾಮಾಯಣ’ ಸೀರಿಯಲ್​ನಲ್ಲಿ ದೀಪಿಕಾ ಚಿಖ್ಲಿಯಾ ಅವರು ಸೀತೆಯ ಪಾತ್ರ ಮಾಡಿದ್ದರು. ಆ ಸೀರಿಯಲ್​ಗೆ ರಮಾನಂದ್​ ಸಾಗರ್​ ಅವರು ನಿರ್ದೇಶನ ಮಾಡಿದ್ದರು. ಆ ಧಾರಾವಾಹಿಯನ್ನು ಮತ್ತು ಅದರ ಪಾತ್ರಗಳನ್ನು ಜನರು ಈಗಲೂ ನೆನಪಿಸಿಕೊಳ್ಳುತ್ತಾರೆ. ‘ಆದಿಪುರುಷ್​’ ಸಿನಿಮಾ ಟೀಕೆಗೆ ಒಳಗಾಗುತ್ತಿರುವ ಈ ಸಂದರ್ಭದಲ್ಲಿ ದೀಪಿಕಾ ಚಿಖ್ಲಿಯಾ ಅವರ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

‘ಪ್ರತಿ ಬಾರಿ ರಾಮಾಯಣದ ಕಥೆಯನ್ನು ಇಟ್ಟುಕೊಂಡು ಸಿನಿಮಾ ಅಥವಾ ಸೀರಿಯಲ್​ ಮಾಡಿದಾಗ ಟೀಕೆ ಎದುರಾಗುತ್ತದೆ. ಪ್ರತಿ ಎರಡು-ಮೂರು ವರ್ಷಕ್ಕೊಮ್ಮೆ ನಾವು ರಾಮಾಯಣವನ್ನು ಯಾಕೆ ಸಿನಿಮಾ ಮಾಡುತ್ತೇವೆ ಎಂಬುದು ತಿಳಿದಿಲ್ಲ. ರಾಮಾಯಣ ಇರುವುದು ಮನರಂಜನೆಗೆ ಅಲ್ಲ. ಅದು ಇರುವುದು ಕಲಿಕೆಗಾಗಿ. ತಲೆಮಾರುಗಳಿಂದ ನಮಗೆ ಬಂದ ಕೃತಿ ಅದು. ಅದು ಸಂಸ್ಕಾರಕ್ಕೆ ಸಂಬಂಧಿಸಿದ್ದು’ ಎಂದು ದೀಪಿಕಾ ಚಿಖ್ಲಿಯಾ ಅವರು ಹೇಳಿದ್ದಾರೆ.

ದೀಪಿಕಾ ಚಿಖ್ಲಿಯಾ ಅವರು ಈಗ ಹಲವು ಪ್ರಾಜೆಕ್ಟ್​ಗಳಲ್ಲಿ ಬ್ಯುಸಿಯಾಗಿದ್ದಾರೆ. ಹಾಗಾಗಿ ಅವರಿಗೆ ಇನ್ನೂ ‘ಆದಿಪುರುಷ್​’ ಸಿನಿಮಾ ನೋಡಲು ಸಾಧ್ಯವಾಗಿಲ್ಲ. ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಇನ್ನೂ ಸ್ಪಷ್ಟವಾಗಿ ತಾವು ಮಾತನಾಡಲಿರುವುದಾಗಿ ಅವರು ಹೇಳಿದ್ದಾರೆ. ‘ನನ್ನ ಅಭಿಪ್ರಾಯ ಕೇಳಲು ಅನೇಕರು ಬರುತ್ತಿದ್ದಾರೆ. ಆದರೆ ಚಿತ್ರ ಹೇಗೆ ಮೂಡಿಬಂದಿದೆ ಎಂಬ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ’ ಎಂದು ಅವರು ಹೇಳಿದ್ದಾರೆ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ