ಐದನೇ ದಿನಕ್ಕೆ ಸಂಪೂರ್ಣವಾಗಿ ನೆಲಕಚ್ಚಿದ ‘ಆದಿಪುರುಷ್’; ಕೈಸುಟ್ಟುಕೊಂಡ ನಿರ್ಮಾಪಕ?

Adipurush Movie Collection: ಸೋಮವಾರ ‘ಆದಿಪುರುಷ್’ ಕೇವಲ 20 ಕೋಟಿ ರೂಪಾಯಿ ಗಳಿಸಿತು. ಮಂಗಳವಾರ ಈ ಚಿತ್ರ 10 ಕೋಟಿ ರೂಪಾಯಿಗೆ ತೃಪ್ತಿಪಟ್ಟುಕೊಂಡಿದೆ. ಇಂದು, ನಾಳೆ ಸಿನಿಮಾದ ಗಳಿಕೆ ಒಂದಂಕಿಗೆ ಇಳಿದರೂ ಅಚ್ಚರಿ ಇಲ್ಲ.

ಐದನೇ ದಿನಕ್ಕೆ ಸಂಪೂರ್ಣವಾಗಿ ನೆಲಕಚ್ಚಿದ ‘ಆದಿಪುರುಷ್’; ಕೈಸುಟ್ಟುಕೊಂಡ ನಿರ್ಮಾಪಕ?
ಆದಿಪುರುಷ್ ಟೀಂ
Follow us
|

Updated on: Jun 21, 2023 | 10:54 AM

ಪ್ರಭಾಸ್ (Prabhas) ರಾಮನಾಗಿ ನಟಿಸಿರುವ ‘ಆದಿಪುರುಷ್’ ಸಿನಿಮಾ (Adipurush Movie) ನೆಗೆಟಿವ್ ವಿಮರ್ಶೆಯ ಮಧ್ಯೆಯೂ ಮೊದಲ ವೀಕೆಂಡ್​ನಲ್ಲಿ ಅಬ್ಬರಿಸಿತು. ಮೊದಲ ಮೂರು ದಿನದಲ್ಲಿ ಸಿನಿಮಾ 300+ ಕೋಟಿ ರೂಪಾಯಿ ಕಮಾಯಿ ಮಾಡಿದೆ ಎನ್ನಲಾಗಿದೆ. ಆದರೆ, ವಾರದ ದಿನಗಳಲ್ಲಿ ಸಿನಿಮಾ ನೆಲಕಚ್ಚಿದೆ. ಐದನೇ ದಿನದ ಬಾಕ್ಸ್ ಆಫೀಸ್ ಲೆಕ್ಕಾಚಾರ ಸಿಕ್ಕಿದೆ. ಮಂಗಳವಾರ (ಜೂನ್ 20) ಭಾರತದಲ್ಲಿ ‘ಆದಿಪುರುಷ್’ ಕೇವಲ 10 ಕೋಟಿ ರೂಪಾಯಿ ಗಳಿಕೆ ಮಾಡಿದೆ. ನೂರಾರು ಕೋಟಿ ಹಾಕಿ ಸಿನಿಮಾ ಮಾಡಿದ ನಿರ್ಮಾಪಕರು ಈ ಚಿತ್ರದಿಂದ ಸಂಕಷ್ಟ ಎದುರಿಸಿದ್ದಾರೆ.

ಟಿ-ಸೀರಿಸ್​ ಬ್ಯಾನರ್ ಅಡಿಯಲ್ಲಿ ಭೂಷಣ್ ಕುಮಾರ್, ಕ್ರಿಶನ್ ಕುಮಾರ್, ಓಂ ರಾವತ್ ಮೊದಲಾದವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ನಿರ್ಮಾಣದಲ್ಲಿ ಭಾಗಿ ಆದ ಓಂ ರಾವತ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ರಾಮಾಯಣದ ಮೂಲ ಕಥೆಯನ್ನು ತಿರುಚಿದ್ದು, ಪಾತ್ರಗಳನ್ನು ಮನಬಂದಂತೆ ತೋರಿಸಿದ್ದು ಸಿನಿಮಾಗೆ ದೊಡ್ಡ ಹಿನ್ನಡೆ ಆಗಿದೆ. ಬಾಕ್ಸ್ ಆಫೀಸ್​ ಮೇಲೂ ನೆಗೆಟಿವ್ ವಿಮರ್ಶೆ ನೇರ ಪ್ರಭಾವ ಬೀರಿದೆ.

ಮೊದಲ ಮೂರು ದಿನಗಳಲ್ಲಿ ಭಾರತದಲ್ಲಿ ಈ ಸಿನಿಮಾ 220 ಕೋಟಿ ರೂಪಾಯಿ ಬಾಚಿಕೊಂಡಿತ್ತು. ಸೋಮವಾರ (ಜೂನ್ 19) ಕೇವಲ 20 ಕೋಟಿ ರೂಪಾಯಿ ಗಳಿಸಿತು. ಮಂಗಳವಾರ (ಜೂನ್ 20) ಚಿತ್ರ 10 ಕೋಟಿ ರೂಪಾಯಿಗೆ ತೃಪ್ತಿಪಟ್ಟುಕೊಂಡಿದೆ. ಇಂದು, ನಾಳೆ ಸಿನಿಮಾದ ಗಳಿಕೆ ಒಂದಂಕಿಗೆ ಇಳಿದರೂ ಅಚ್ಚರಿ ಇಲ್ಲ.

ಇದನ್ನೂ ಓದಿ: ಪೊಲೀಸ್ ಭದ್ರತೆ ಪಡೆದು ಹನುಮಂತ ದೇವರೇ ಅಲ್ಲ; ಎಂದ ಆದಿಪುರುಷ್ ಸಂಭಾಷಣೆಕಾರ

‘ಆದಿಪುರುಷ್’ ಸಿನಿಮಾದ ಬಜೆಟ್ 500+ ಕೋಟಿ ರೂಪಾಯಿ ಇದೆ. ಈ ಚಿತ್ರದ ಸ್ಯಾಟಲೈಟ್ ಹಕ್ಕು, ಒಟಿಟಿ ಹಕ್ಕು ಒಳ್ಳೆಯ ಮೊತ್ತಕ್ಕೆ ಸೇಲ್ ಆಗಿದೆ. ಇದರಿಂದ ನಿರ್ಮಾಪಕರಿಗೆ ದೊಡ್ಡ ಮೊತ್ತದ ಹಣ ಬಂದಿದೆ. ಆದರೆ, ಬಾಕ್ಸ್ ಆಫೀಸ್​ ಗಳಿಕೆಯಲ್ಲಿ ಚಿತ್ರ ಏಳ್ಗೆ ಕಾಣುತ್ತಿಲ್ಲ. ಒಟ್ಟಾರೆ ಬಿಸ್ನೆಸ್​​ನಿಂದ ‘ಆದಿಪುರುಷ್’ ನಿರ್ಮಾಪಕರು ನಷ್ಟ ಅನುಭವಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲ, 3 ವರ್ಷದ ಶ್ರಮ ವ್ಯರ್ಥವಾಗಿದೆ.

ಇನ್ನು, ಚಿತ್ರಕ್ಕೆ ಬ್ಯಾನ್ ಭೀತಿ ಕೂಡ ಕಾಡಿದೆ. ಈ ಚಿತ್ರದಿಂದ ಹಿಂದೂಗಳ ಭಾವನೆಗೆ ಧಕ್ಕೆ ಆಗಿದೆ ಎಂದು ಆರೋಪಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲಾಗಿದ್ದು, ಸಿನಿಮಾ ಬ್ಯಾನ್​ಗೆ ಕೋರಲಾಗಿದೆ. ಟೀಂ ವಿರುದ್ಧ ಎಫ್​ಐಆರ್ ಕೂಡ ದಾಖಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ