Adipurush Movie: ‘ನಮ್ಮ ಧರ್ಮದಲ್ಲೇ ಈ ರೀತಿ ಆಗುತ್ತಿರುವುದೇಕೆ?’; ‘ಆದಿಪುರುಷ್’ ಬಗ್ಗೆ ರಾಮ ಪಾತ್ರಧಾರಿ ಪ್ರಶ್ನೆ
1987ರಲ್ಲಿ ‘ರಾಮಾಯಣ’ ಸೀರಿಯಲ್ ಪ್ರಸಾರ ಕಂಡಿತು. ಮೂಲ ರಾಮಾಯಣಕ್ಕೆ ಯಾವುದೇ ಧಕ್ಕೆ ಆಗದ ರೀತಿಯಲ್ಲಿ ಇದನ್ನು ಕಟ್ಟಿಕೊಡಲಾಗಿತ್ತು. ಈ ಧಾರಾವಾಹಿಯ ರಾಮ ಪಾತ್ರಧಾರಿ ‘ಆದಿಪುರುಷ್’ ಬಗ್ಗೆ ಮಾತನಾಡಿದ್ದಾರೆ.
ಮಹಾಗ್ರಂಥಗಳ ಆಧರಿಸಿ ಸಿನಿಮಾ ಮಾಡುವಾಗ ಸಾಕಷ್ಟು ಎಚ್ಚರಿಕೆ ಬೇಕು. ವಿಚಾರಗಳು ಕೊಂಚ ಅದಲು ಬದಲಾದರೂ ಟೀಕೆ ಆಗೋದು ಗ್ಯಾರಂಟಿ. ಇಷ್ಟೆಲ್ಲ ವಿಚಾರ ಗೊತ್ತಿದ್ದ ಹೊರತಾಗಿಯೂ ‘ಆದಿಪುರುಷ್’ ಚಿತ್ರವನ್ನು (Adipurush Movie) ಮನಬಂದಂತೆ ಮಾಡಲಾಗಿದೆ. ಚಿತ್ರದಲ್ಲಿ ಬರುವ ಪಾತ್ರಗಳು, ಬಳಕೆ ಆದ ಭಾಷೆಯ ಬಗ್ಗೆ ಹಲವರು ಟೀಕೆ ವ್ಯಕ್ತಪಡಿಸಿದ್ದಾರೆ. ಈಗ ಈ ಚಿತ್ರದ ಬಗ್ಗೆ ನಟ ಅರುಣ್ ಗೋವಿಲ್ ಅವರು ಅಸಮಾಧಾನ ಹೊರಹಾಕಿದ್ದಾರೆ. ಈ ರೀತಿಯಲ್ಲಿ ಸಿನಿಮಾ ಮಾಡೋದು ತಪ್ಪು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
1987ರಲ್ಲಿ ‘ರಾಮಾಯಣ’ ಸೀರಿಯಲ್ ಪ್ರಸಾರ ಕಂಡಿತು. ರಮಾನಂದ್ ಸಾಗರ್ ಅವರು ಇದನ್ನು ನಿರ್ದೇಶಿಸಿದ್ದರು. ಮೂಲ ರಾಮಾಯಣಕ್ಕೆ ಯಾವುದೇ ಧಕ್ಕೆ ಆಗದ ರೀತಿಯಲ್ಲಿ ಇದನ್ನು ಕಟ್ಟಿಕೊಡಲಾಗಿತ್ತು. ಈ ಧಾರಾವಾಹಿಯಲ್ಲಿ ಅರುಣ್ ಗೋವಿಲ್ ಅವರು ರಾಮನ ಪಾತ್ರ ಮಾಡಿದ್ದರು. ಈಗ ಅವರು ‘ಆದಿಪುರುಷ್’ ಸಿನಿಮಾ ಕುರಿತು ಸಿಎನ್ಎನ್ ನ್ಯೂಸ್18ಗೆ ಜೊತೆ ಮಾತನಾಡಿದ್ದಾರೆ.
‘ನಾವು ಎಂದಿಗೂ ಮೂರ್ಖರಾಗಬಾರದು. ದೇವರ ವಿಚಾರದಲ್ಲಿ ಮನಸ್ಸಿಗೆ ಬಂದಂತೆ ನಡೆದುಕೊಳ್ಳಬಾರದು. ಭಾರತೀಯರು ಧರ್ಮದ ಬಗ್ಗೆ ಬಹಳ ಸೂಕ್ಷ್ಮವಾಗಿದ್ದಾರೆ. ನಾವು ಹಿಂದೂಗಳು ಬಹಳ ಸಂವೇದನಾಶೀಲರು. ಇತರ ಧರ್ಮದವರೂ ಸಂವೇದನಾ ಶೀಲರೆ. ಆದರೆ, ಇತರ ಧರ್ಮಗಳಲ್ಲಿ ಈ ರೀತಿಯ ಕೆಲಸ ಆಗುವುದಿಲ್ಲ. ಆದರೆ, ನಮ್ಮ ಧರ್ಮದಲ್ಲಿ ಮಾತ್ರ ಏಕೆ ಹೀಗೆ? ನಮ್ಮ ಧರ್ಮದಲ್ಲಿ ಮಾತ್ರ ಯಾಕೆ ಈ ರೀತಿಯ ಪ್ರಯೋಗ ಆಗುತ್ತಿದೆ? ಅವರು ಏನು ಹೇಳಲು ಬಯಸುತ್ತಿದ್ದಾರೆ?’ ಎಂದು ಪ್ರಶ್ನೆ ಮಾಡಿದ್ದಾರೆ ಗೋವಿಲ್.
ಇದನ್ನೂ ಓದಿ: Adipurush: ‘ಆಂಜನೇಯನಿಗೆ ಇಂಥ ಸೀನ್ ತೋರಿಸಿಬಿಟ್ರಲ್ಲೋ’: ‘ಆದಿಪುರುಷ್’ ಚಿತ್ರದ ಗ್ಲಾಮರ್ ಬಗ್ಗೆ ಜನರ ಟೀಕೆ
‘ಅವರು ಏಕೆ ಸುತ್ತಲಿನ ಜನರನ್ನು ಮೂರ್ಖರನ್ನಾಗಿ ಮಾಡ ಹೊರಟಿದ್ದಾರೆ? ಹೊಸ ವಿಷಯಗಳನ್ನು ತರಲು, ಹೊಸದನ್ನು ಪ್ರಯತ್ನಿಸಲು ಏಕೆ ಬಯಸುತ್ತಾರೆ? ನಮ್ಮನ್ನು ನಮ್ಮ ಪಾಡಿಗೆ ಬಿಟ್ಟುಬಿಡಿ. ದಯವಿಟ್ಟು ಈ ರೀತಿ ಮಾಡಬೇಡಿ. ನಿಜಕ್ಕೂ ಈ ರೀತಿ ಸಿನಿಮಾದ ಅಗತ್ಯವೇನಿತ್ತು? ಜಗತ್ತಿನಲ್ಲಿ ಸಿನಿಮಾ ಮಾಡಲು ಇನ್ನೂ ಹಲವು ವಿಷಯಗಳಿವೆ. ನಿಮ್ಮ ಸೃಜನಶೀಲತೆಯನ್ನು ಅಲ್ಲಿ ತೋರಿಸಿ. ಈ ರೀತಿಯ ಕೆಲಸ ಮಾಡುವ ಮೂಲಕ ನೀವು ಏನನ್ನು ಸಾಬೀತುಪಡಿಸಲು ಹೊರಟಿದ್ದೀರಿ’ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ