Adipurush Movie Rating: ಐಎಂಡಿಬಿಯಲ್ಲಿ ಅತೀ ಕಡಿಮೆ ರೇಟಿಂಗ್ ಪಡೆದ ‘ಆದಿಪುರುಷ್’; ಬುಕ್ ಮೈ ಶೋ ರೇಟಿಂಗ್ ಎಷ್ಟು?

14 ಸಾವಿರ ಜನರು ರೇಟಿಂಗ್ ನೀಡಿದ್ದಾರೆ. ಈ ಚಿತ್ರ ಪಡೆದಿರೋದು 10ಕ್ಕೆ 2.9 ರೇಟಿಂಗ್​ ಮಾತ್ರ! ಈ ಮೂಲಕ ಸಿನಿಮಾಗೆ ಅತೀ ಕಡಿಮೆ ರೇಟಿಂಗ್ ಸಿಕ್ಕಿದೆ.

Adipurush Movie Rating: ಐಎಂಡಿಬಿಯಲ್ಲಿ ಅತೀ ಕಡಿಮೆ ರೇಟಿಂಗ್ ಪಡೆದ ‘ಆದಿಪುರುಷ್’; ಬುಕ್ ಮೈ ಶೋ ರೇಟಿಂಗ್ ಎಷ್ಟು?
ಪ್ರಭಾಸ್

Updated on: Jun 17, 2023 | 8:13 AM

‘ಆದಿಪುರುಷ್’ ಸಿನಿಮಾ (Adipurush Movie) ಮೊದಲ ದಿನವೇ ಸಾಕಷ್ಟು ಟ್ರೋಲ್​ಗಳಿಗೆ ಒಳಗಾಗಿದೆ. 550+ ಕೋಟಿ ರೂಪಾಯಿ ಬಜೆಟ್​ನಲ್ಲಿ ಸಿದ್ಧಗೊಂಡ ಈ ಸಿನಿಮಾ ಲಾಭ ಕಾಣಬೇಕು ಎಂದರೆ ದೊಡ್ಡ ಮಟ್ಟದ ಬಿಸ್ನೆಸ್ ಮಾಡಲೇಬೇಕಾದ ಅನಿವಾರ್ಯತೆ ಇದೆ. ಆದರೆ, ಸಿಗುತ್ತಿರುವ ರೇಟಿಂಗ್ ಹಾಗೂ ವಿಮರ್ಶೆ ನೋಡಿದರೆ ಸಿನಿಮಾ ಒಳ್ಳೆಯ ಬಿಸ್ನೆಸ್ ಮಾಡೋದು ಅನುಮಾನ ಎಂದು ಹೇಳಲಾಗುತ್ತಿದೆ. ಪ್ರಭಾಸ್ (Prabhas) ವೃತ್ತಿ ಜೀವನದಲ್ಲೇ ಅತಿ ಕಡಿಮೆ ರೇಟಿಂಗ್ ಪಡೆದ ಸಿನಿಮಾ ಇದು ಎಂದರೂ ತಪ್ಪಾಗಲಾರದು.

ಐಎಂಡಿಬಿ ರೇಟಿಂಗ್ ಎಷ್ಟು?

ಇಂಟರ್​ನೆಟ್​ ಮೂವೀ ಡೇಟಾಬೇಸ್ ಅನ್ನೋದು ಐಎಂಡಿಬಿ ವಿಸ್ತ್ರತ ರೂಪ. 1990ರಲ್ಲೇ ಇದು ಆರಂಭ ಆಯಿತು. ಬಹುತೇಕ ಸಿನಿಮಾಗಳ ಮಾಹಿತಿ ಇದರಲ್ಲಿ ಇರುತ್ತದೆ. ಇದರಲ್ಲಿ ಸಿನಿಮಾಗೆ ರೇಟಿಂಗ್ ಕೂಡ ಇರುತ್ತದೆ. ಈ ರೇಟಿಂಗ್ ಆಧರಿಸಿ ಸಿನಿಮಾ ನೋಡುವವರು ಅನೇಕರು ಇರುತ್ತಾರೆ. ‘ಆದಿಪುರುಷ್’ ಚಿತ್ರಕ್ಕೆ ಈವರೆಗೆ (ಜೂನ್ 17, ಬೆಳಿಗ್ಗೆ 8 ಗಂಟೆ) 14 ಸಾವಿರ ಜನರು ರೇಟಿಂಗ್ ನೀಡಿದ್ದಾರೆ. ಈ ಚಿತ್ರ ಪಡೆದಿರೋದು 10ಕ್ಕೆ 2.9 ರೇಟಿಂಗ್​ ಮಾತ್ರ! ಈ ಮೂಲಕ ಸಿನಿಮಾಗೆ ಅತೀ ಕಡಿಮೆ ರೇಟಿಂಗ್ ಸಿಕ್ಕಿದೆ. ಮುಂದಿನ ದಿನಗಳಲ್ಲಿ ರೇಟಿಂಗ್ ಹೆಚ್ಚಬಹುದು ಅನ್ನೋದು ಅಭಿಮಾನಿಗಳ ನಂಬಿಕೆ.

ಇದನ್ನೂ ಓದಿ: Prabhas: ‘ಆದಿಪುರುಷ್’ ಚಿತ್ರದ ಬಗ್ಗೆ ಟೀಕೆ; ಯಾರ ಕಣ್ಣಿಗೂ ಬಿದ್ದಿಲ್ಲ ಪ್ರಭಾಸ್​, ಕಾರಣವೇನು?

ಬುಕ್ ಮೈ ಶೋ ರೇಟಿಂಗ್ ವಿವರ

ಭಾರತದಲ್ಲಿ ಟಿಕೆಟ್ ಬುಕಿಂಗ್ ಆ್ಯಪ್​ಗಳ ಸಾಲಿನಲ್ಲಿ ಬುಕ್ ಮೈ ಶೋ ಮೊದಲ ಸ್ಥಾನದಲ್ಲಿದೆ. ಸಿನಿಮಾಗಳನ್ನು ಬುಕ್ ಮಾಡೋದು ಮಾತ್ರವಲ್ಲ, ರೇಟಿಂಗ್ ಕೂಡ ನೀಡಬಹುದು. ಐಎಂಡಿಬಿಗೆ ಹೋಲಿಕೆ ಮಾಡಿದರೆ ಬುಕ್​ ಮೈ ಶೋನಲ್ಲಿ ‘ಆದಿಪುರುಷ್’ ರೇಟಿಂಗ್ ಕೊಂಚ ಉತ್ತಮವಾಗಿದೆ. ಈವರೆಗೆ 81 ಸಾವಿರ ಮಂದಿ ರೇಟಿಂಗ್ ನೀಡಿದ್ದು, 10ಕ್ಕೆ 7.4 ಅಂಕ ಪಡೆದಿದೆ.

ಇದನ್ನೂ ಓದಿ: ಚಿತ್ರ-ವಿಚಿತ್ರ ಗೆಟಪ್ ನಲ್ಲಿ ‘ಆದಿಪುರುಷ್’ ಪಾತ್ರಗಳು

ಆದರೂ ಒಳ್ಳೆಯ ಕಲೆಕ್ಷನ್ ನಿರೀಕ್ಷೆ

ಸಿನಿಮಾ ಕಡಿಮೆ ರೇಟಿಂಗ್ ಪಡೆದ ಹೊರತಾಗಿಯೂ ಒಂದಷ್ಟು ಮಂದಿ ಸಿನಿಪ್ರಿಯರು ಈ ಚಿತ್ರವನ್ನು ವೀಕ್ಷಿಸಲು ಆಸಕ್ತಿ ತೋರಿಸುತ್ತಿದ್ದಾರೆ. ಪ್ರಭಾಸ್ ಫ್ಯಾನ್ಸ್ ಮರಳಿ ಮರಳಿ ಚಿತ್ರಮಂದಿರಕ್ಕೆ ಬರುತ್ತಿದ್ದಾರೆ. ಈ ಎಲ್ಲಾ ಕಾರಣದಿಂದ ಮೊದಲ ದಿನ ‘ಆದಿಪುರುಷ್’ ಸಿನಿಮಾ ಅಬ್ಬರದ ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ