Adipurush: ಪ್ರಭಾಸ್ ನಟನೆಯ ಆದಿಪುರುಷ್ ಚಿತ್ರತಂಡದಿಂದ ಹೊಸ ಅಪ್ಡೇಟ್; ಹೆಚ್ಚಾಯ್ತು ಅಭಿಮಾನಿಗಳ ಕುತೂಹಲ

Prabhas: ಪ್ರಭಾಸ್, ಕೃತಿ ಸನೋನ್ ಸೇರಿದಂತೆ ಖ್ಯಾತನಾಮರು ಕಾಣಿಸಿಕೊಳ್ಳುತ್ತಿರುವ ‘ಆದಿಪುರುಷ್’ ಚಿತ್ರತಂಡ ಶೂಟಿಂಗ್ ಮುಗಿಸಿದೆ. ಇದೇ ಸಂತಸದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಳ್ಳಲಾಗಿದ್ದು, ಅಭಿಮಾನಿಗಳಿಗೆ ವ್ಯಕ್ತಿಯೊಬ್ಬರು ಕುತೂಹಲ ಕೆರಳಿಸಿದ್ದಾರೆ.

Adipurush: ಪ್ರಭಾಸ್ ನಟನೆಯ ಆದಿಪುರುಷ್ ಚಿತ್ರತಂಡದಿಂದ ಹೊಸ ಅಪ್ಡೇಟ್; ಹೆಚ್ಚಾಯ್ತು ಅಭಿಮಾನಿಗಳ ಕುತೂಹಲ
‘ಆದಿಪುರುಷ್’ ಚಿತ್ರತಂಡ (ಪ್ರಭಾಸ್, ಕೃತಿ ಸನೋನ್, ಸೈಫ್ ಅಲಿ ಖಾನ್ ಮೊದಲಾದವರು ಚಿತ್ರದಲ್ಲಿದ್ದಾರೆ)
Edited By:

Updated on: Nov 11, 2021 | 4:13 PM

ಪ್ರಭಾಸ್ ರಾಮನಾಗಿ ಬಣ್ಣ ಹಚ್ಚುತ್ತಿರುವ ‘ಆದಿಪುರುಷ್’ ಚಿತ್ರಕ್ಕೆ ಅಭಿಮಾನಿಗಳು ಬಹಳ ಕಾಲದಿಂದ ಕಾಯುತ್ತಿದ್ದಾರೆ. ಚಿತ್ರತಂಡ ಇದುವರೆಗೆ ಯಾವುದೇ ಪಾತ್ರಗಳ ಪೋಸ್ಟರ್​ ಅನ್ನು ಹಂಚಿಕೊಂಡಿಲ್ಲ. ಆದರೆ ಚಿತ್ರೀಕರಣ ಸಂದರ್ಭದ ಅಪ್ಡೇಟ್ಸ್​​ಗಳನ್ನು ನಿರಂತರವಾಗಿ ನೀಡುತ್ತಾ ಬಂದಿದೆ. ಇತ್ತೀಚೆಗೆ ಚಿತ್ರದ ನಿರ್ದೇಶಕ ಓಂ ರಾವುತ್ ಹೊಸ ಸುದ್ದಿಯೊಂದನ್ನು ಹಂಚಿಕೊಂಡಿದ್ದು, ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ. ಅಂಥದ್ದೇನು ಸಮಾಚಾರ ಅಂತೀರಾ? ಪ್ರಭಾಸ್ ರಾಮನ ಪಾತ್ರದಲ್ಲಿ ಹಾಗೂ ನಟಿ ಕೃತಿ ಸನೋನ್ ಸೀತೆಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ‘ಆದಿಪುರುಷ್’ ಚಿತ್ರತಂಡ ಚಿತ್ರೀಕರಣವನ್ನು ಮುಕ್ತಾಯಗೊಳಿಸಿದೆ. ಸುಮಾರು ₹ 400 ಕೋಟಿ ವೆಚ್ಚದಲ್ಲಿ ಈ ಚಿತ್ರ ತಯಾರಾಗುತ್ತಿದೆ ಎಂಬ ಸುದ್ದಿ ಈ ಮೊದಲೇ ಅಭಿಮಾನಿಗಳಿಗೆ ನಿರೀಕ್ಷೆ ಹೆಚ್ಚಿಸಲು ಕಾರಣವಾಗಿತ್ತು. ನಂತರ ಚಿತ್ರದ ಪಾತ್ರವರ್ಗ ಕೂಡ ಹಿರಿದಾಗಿದ್ದು, ಚಿತ್ರದ ಕುರಿತು ಆಸಕ್ತಿ ಹುಟ್ಟುಹಾಕಿದೆ. ಇಷ್ಟು ಸಾಲದೆಂಬಂತೆ, ಪ್ರಸ್ತುತ ಓಂ ರಾವುತ್ ಹಂಚಿಕೊಂಡಿರುವ ಪೋಸ್ಟ್​ನಲ್ಲಿ ಓರ್ವ ವ್ಯಕ್ತಿ ಮತ್ತಷ್ಟು ಕುತೂಹಲ ಹುಟ್ಟುಹಾಕಿದ್ದಾರೆ.

ಸೈಫ್ ಅಲಿ ಖಾನ್ ರಾವಣನಾಗಿ ಹಾಗೂ ಸನ್ನಿ ಸಿಂಗ್ ಲಕ್ಷ್ಮಣನಾಗಿ ‘ಆದಿಪುರುಷ್’ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಿರ್ದೇಶಕ ಓಂ ರಾವುತ್ ಹಂಚಿಕೊಂಡಿರುವ ಚಿತ್ರದಲ್ಲಿ ಈ ನಟರೂ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಅಭಿಮಾನಿಗಳ ಕುತೂಹಲ ಕೆರಳಿಸಿರುವ ಮತ್ತೊಬ್ಬ ವ್ಯಕ್ತಿಯೂ ಓಂ ರಾವುತ್ ಹಂಚಿಕೊಂಡಿರುವ ಚಿತ್ರದಲ್ಲಿದ್ದಾರೆ. ಅಭಿಮಾನಿಗಳು ಈ ಕುರಿತು ಕಾಮೆಂಟ್ ಮಾಡುತ್ತಿದ್ದು, ‘ಚಿತ್ರದ ಎಡಭಾಗದಲ್ಲಿರುವ ವ್ಯಕ್ತಿ, ಹನುಮಂತನ ಪಾತ್ರ ಮಾಡುತ್ತಿದ್ದಾರೆಯೇ? ಹೌದಾಗಿದ್ದರೆ ಅದು ಬಹಳ ಒಳ್ಳೆಯ ಆಯ್ಕೆ’ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇದು ಬಹಳಷ್ಟು ಜನರ ಗಮನವನ್ನು ಸೆಳೆದಿದ್ದು, ಆ ವ್ಯಕ್ತಿಯ ಗೆಟಪ್ ಕೂಡ ಹನುಮಂತನ ಪಾತ್ರಕ್ಕೆ ಹೋಲುವಂತಿದೆ. ವಾಸ್ತವವಾಗಿ ಎಲ್ಲರ ಗಮನ ಸೆಳೆದಿರುವ ವ್ಯಕ್ತಿಯ ಹೆಸರು ದೇವದತ್ತ.ಜಿ.ನಾಗೆ. ನಟನೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅವರು ತೊಡಗಿಕೊಂಡಿದ್ದಾರೆ. ಅವರ ಚಿತ್ರಗಳನ್ನು ನೋಡಿರುವ ಅಭಿಮಾನಿಗಳು, ಹನುಮಂತನ ಪಾತ್ರಕ್ಕೆ ಅವರೇ ಬಣ್ಣ ಹಚ್ಚಿದ್ದಾರೆ ಎಂದು ಊಹಿಸಿದ್ದಾರೆ. ಆದರೆ ಈ ಕುರಿತು ಚಿತ್ರತಂಡ ಇನ್ನೂ ಅಧಿಕೃತವಾಗಿ ಮಾಹಿತಿ ಬಿಟ್ಟುಕೊಟ್ಟಿಲ್ಲ.

ಚಿತ್ರದಲ್ಲಿ ಪ್ರಭಾಸ್ ಕೂಡ ತುಸು ಡಿಫರೆಂಟ್ ಗೆಟಪ್​ನಲ್ಲಿದ್ದು, ಕುತೂಹಲ ಮೂಡಿಸಿದೆ. ಆದರೆ ಕೆಲ ಅಭಿಮಾನಿಗಳಿಗೆ ಪ್ರಭಾಸ್ ಗೆಟಪ್ ಇಷ್ಟವಾಗಿಲ್ಲ. ಅದನ್ನೂ ಬಹಿರಂಗವಾಗಿಯೇ ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಓಂ ರಾವುತ್ ಹಂಚಿಕೊಂಡ ಪೋಸ್ಟ್ ಅಭಿಮಾನಿ ವಲಯದಲ್ಲಿ ಚರ್ಚೆ ಹುಟ್ಟುಹಾಕಿರುವುದಂತೂ ಹೌದು. 2022ರ ಆಗಸ್ಟ್ 11ರಂದು ‘ಆದಿಪುರುಷ್’ ಬಿಡುಗಡೆಯಾಗಲಿದ್ದು, ರಾಮಾಯಣವನ್ನು ಆಧರಿಸಿದ ಈ ಚಿತ್ರ 3ಡಿಯಲ್ಲಿ ತೆರೆಗೆ ಬರಲಿದೆ. ಚಿತ್ರತಂಡವು ಒಟ್ಟು 103 ದಿನಗಳ ಕಾಲ ಚಿತ್ರೀಕರಣ ನಡೆಸಿದ್ದು, ಇನ್ನು ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಆರಂಭಿಸಲಿದೆ. ಚಿತ್ರಕ್ಕೆ ತಾಂತ್ರಿಕ ಕೆಲಸಗಳು ಹೆಚ್ಚು ಇರುವ ಕಾರಣ, ಅದಕ್ಕೆ ದೀರ್ಘ ಅವಧಿ ಬೇಕಾಗಲಿದೆ.

ಓಂ ರಾವುತ್ ಹಂಚಿಕೊಂಡಿರುವ ಟ್ವೀಟ್ ಇಲ್ಲಿದೆ:


ಆದಿಪುರುಷ್ ಚಿತ್ರ ತೆಲುಗು ಹಾಗೂ ಹಿಂದಿಯಲ್ಲಿ ಏಕಕಾಲಕ್ಕೆ ತಯಾರಾಗುತ್ತಿದ್ದು, ಉಳಿದ ಭಾಷೆಗಳಿಗೆ ಡಬ್ ಆಗಲಿದೆ. ಟಿ- ಸೀರೀಸ್ ಹಾಗೂ ರೆಟ್ರೋಫೈಲ್ಸ್ ಸಂಸ್ಥೆ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿವೆ.

ಇದನ್ನೂ ಓದಿ:

ಮಂಕಾಗಿದ್ದ ಚಿತ್ರಮಂದಿರಗಳ ವಹಿವಾಟಿಗೆ ಮರುಜೀವ ನೀಡಿದ ಅಣ್ಣಾಥೆ, ಸೂರ್ಯವಂಶಿ, ಎಟರ್ನಲ್ಸ್​

Kangana Ranaut: ಕಂಗನಾ ಅಭಿಮಾನಿಗಳಿಗೆ ಎದುರಾಯ್ತು ಅನಿರೀಕ್ಷಿತ ಸಮಾಚಾರ; ಸಂಗಾತಿಯ ಗುಟ್ಟು ಬಿಟ್ಟುಕೊಟ್ಟ ನಟಿ

Published On - 4:11 pm, Thu, 11 November 21