ಟೀಕೆ ಬೆನ್ನಲ್ಲೇ ವರಸೆ ಬದಲಿಸಿದ ‘ಆದಿಪುರುಷ್’ ತಂಡ; ಮೊದಲು ಹೇಳಿದ್ದೊಂದು, ಈಗ ಹೇಳೋದೊಂದು

|

Updated on: Jun 19, 2023 | 12:04 PM

ರಾಮ ನವಮಿ, ಹನುಮ ಜಯಂತಿ ಸಂದರ್ಭದಲ್ಲಿ ಪೋಸ್ಟರ್ ರಿಲೀಸ್ ಮಾಡಿ ‘ಆದಿಪುರುಷ್’ ತಂಡ ಶುಭಕೋರಿತ್ತು. ಆದರೆ, ಯಾವಾಗ ಟೀಕೆಗಳು ಎದುರಾದವೋ ಆಗ ತಂಡ ತನ್ನ ನಿಲುವು ಬದಲಾಯಿಸಿದೆ.

ಟೀಕೆ ಬೆನ್ನಲ್ಲೇ ವರಸೆ ಬದಲಿಸಿದ ‘ಆದಿಪುರುಷ್’ ತಂಡ; ಮೊದಲು ಹೇಳಿದ್ದೊಂದು, ಈಗ ಹೇಳೋದೊಂದು
ಆದಿಪುರುಷ್ ತಂಡ
Follow us on

‘ಆದಿಪುರುಷ್’ (Adipurush Movie) ತಂಡ ಈಗ ಟೀಕೆಗಳ ಮೇಲೆ ಟೀಕೆ ಎದುರಿಸುತ್ತಿದೆ. ಮೂಲ ರಾಮಾಯಣಕ್ಕೂ ಈ ರಾಮಾಯಣಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಪ್ರತಿ ದೃಶ್ಯಕ್ಕೂ ಸಿನಿಮೀಯ ಅಂಶಗಳನ್ನು ನೀಡಲಾಗಿದೆ. ಈ ಕಾರಣಕ್ಕೆ ರಾಮ ಭಕ್ತರು, ಹನುಮಂತನ ಭಕ್ತರು ಚಿತ್ರತಂಡದ ವಿರುದ್ಧ ಕಿಡಿಕಾರಿದ್ದಾರೆ. ಈ ಮಧ್ಯೆ ಚಿತ್ರತಂಡ ಕೂಡ ಪ್ಲೇಟ್ ಬದಲಿಸುತ್ತಿದೆ. ರಿಲೀಸ್​ಗೂ ಮೊದಲು ಇದು ರಾಮಾಯಣ (Ramayana) ಆಧಾರಿತ ಚಿತ್ರ ಎಂದು ಹೇಳುತ್ತಾ ಬಂದಿದ್ದ ತಂಡ, ಈಗ ತನ್ನ ನಿಲುವು ಬದಲಾಯಿಸಿದೆ. ಇದು ರಾಮಾಯಾಣ ಆಧರಿಸಿದ ಸಿನಿಮಾ ಅಲ್ಲವೇ ಅಲ್ಲ ಎನ್ನುತ್ತಿದೆ. ಚಿತ್ರತಂಡದ ಈ ದ್ವಂದ ನೀತಿ ಬಗ್ಗೆ ಟೀಕೆ ವ್ಯಕ್ತವಾಗಿದೆ.

‘ಆದಿಪುರುಷ್’ ಸಿನಿಮಾ ರಾಮಾಯಣ ಆಧರಿಸಿದ ಚಿತ್ರ ಎಂದು ನಿರ್ದೇಶಕ ಓಂ ರಾವತ್ ಈ ಮೊದಲಿನಿಂದಲೂ ಹೇಳಿಕೊಳ್ಳುತ್ತಾ ಬರುತ್ತಿದ್ದಾರೆ. ರಾಮ ನವಮಿ, ಹನುಮ ಜಯಂತಿ ಸಂದರ್ಭದಲ್ಲಿ ಪೋಸ್ಟರ್ ರಿಲೀಸ್ ಮಾಡಿ ತಂಡ ಶುಭಕೋರಿತ್ತು. ಆದರೆ, ಯಾವಾಗ ಟೀಕೆಗಳು ಎದುರಾದವೋ ಆಗ ತಂಡ ತನ್ನ ನಿಲುವು ಬದಲಾಯಿಸಿದೆ.

‘ಆದಿಪುರುಷ್​’ ಹೀರೋ ಪ್ರಭಾಸ್​ಗೆ 150 ಕೋಟಿ ರೂ. ಸಂಬಳ; ಇನ್ನುಳಿದ ಕಲಾವಿದರಿಗೆ ಸಿಕ್ಕ ಸಂಭಾವನೆ ಎಷ್ಟು?

‘ಆದಿಪುರುಷ್ ಮಾಡರ್ನ್ ಮಾಡೋಕೆ ನಾವು ಪ್ರಯತ್ನಿಸಿಲ್ಲ. ಜನರು ಓದಿದ, ಕೇಳಿದ ರಾಮಾಯಣವನ್ನೇ ನಾವು ಹೇಳುತ್ತಿದ್ದೇವೆ’ ಎಂದು ‘ಆದಿಪುರುಷ್’ ತಂಡದ ಸಂಭಾಷಣಾಕಾರ ಮನೋಜ್ ಈ ಮೊದಲು ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಸಿನಿಮಾ ರಿಲೀಸ್ ಆದ ಬಳಿಕ ನಿಲುವು ಬದಲಾಗಿದೆ. ‘ನಾವು ಈ ಮೊದಲಿನಿಂದಲೂ ಇದನ್ನೇ ಹೇಳುತ್ತಾ ಬರುತ್ತಿದ್ದೇವೆ. ನಾವು ರಾಮಯಾಣವನ್ನೇ ಸಿನಿಮಾ ಮಾಡಿಲ್ಲ. ರಾಮಾಯಣವನ್ನು ಸ್ಫೂರ್ತಿಯಾಗಿ ಇಟ್ಟುಕೊಂಡಿದ್ದೇವೆ ಅಷ್ಟೇ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ‘ಆದಿಪುರುಷ್​’ ಪ್ರದರ್ಶನಕ್ಕೂ ಮುನ್ನ ಬರುವ ಸ್ಪಷ್ಟೀಕರಣದಲ್ಲಿ ಏನಿದೆ? ಚಿತ್ರತಂಡದ ಅಸಲಿ ವಾದ ಇಲ್ಲಿದೆ ನೋಡಿ..

ಈ ಎರಡೂ ಹೇಳಿಕೆಗಳನ್ನು ಜೋಡಿಸಿ ವಿಡಿಯೋಗಳನ್ನು ಹರಿಬಿಡಲಾಗಿದೆ. ‘ಆದಿಪುರುಷ್’ ತಂಡದವರು ಹೇಗೆ ಮಾತು ಬದಲಾಯಿಸುತ್ತಾರೆ ಎಂಬುದಕ್ಕೆ ಇವು ಸಾಕ್ಷಿ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ. ಚಿತ್ರತಂಡದವರ ನಡೆಗೆ ಅನೇಕರಿಂದ ಟೀಕೆ ವ್ಯಕ್ತವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ