AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Adipurush: ‘ಆದಿಪುರುಷ್​’ ಪ್ರದರ್ಶನಕ್ಕೂ ಮುನ್ನ ಬರುವ ಸ್ಪಷ್ಟೀಕರಣದಲ್ಲಿ ಏನಿದೆ? ಚಿತ್ರತಂಡದ ಅಸಲಿ ವಾದ ಇಲ್ಲಿದೆ ನೋಡಿ..

Adipurush Controversy: ಪ್ರತಿ ಸಿನಿಮಾ ಪ್ರದರ್ಶನದ ಆರಂಭದಲ್ಲಿ ಕೆಲವು ಸ್ಪಷ್ಟೀಕರಣಗಳನ್ನು ಪರದೆ ಮೇಲೆ ಬಿತ್ತರಿಸಲಾಗುತ್ತದೆ. ‘ಆದಿಪುರುಷ್​’ ಚಿತ್ರತಂಡ ಕೂಡ ತಮ್ಮ ಸ್ಪಷ್ಟೀಕರಣದಲ್ಲಿ ಹಲವು ಅಂಶಗಳನ್ನು ಪ್ರಸ್ತಾಪಿಸಿದೆ.

Adipurush: ‘ಆದಿಪುರುಷ್​’ ಪ್ರದರ್ಶನಕ್ಕೂ ಮುನ್ನ ಬರುವ ಸ್ಪಷ್ಟೀಕರಣದಲ್ಲಿ ಏನಿದೆ? ಚಿತ್ರತಂಡದ ಅಸಲಿ ವಾದ ಇಲ್ಲಿದೆ ನೋಡಿ..
‘ಆದಿಪುರುಷ್​’ ಸ್ಪಷ್ಟೀಕರಣ
ಮದನ್​ ಕುಮಾರ್​
|

Updated on:Jun 18, 2023 | 5:19 PM

Share

ರಾಮಾಯಣದ ಕಥೆಯನ್ನು ಆಧರಿಸಿ ‘ಆದಿಪುರುಷ್​’ ಸಿನಿಮಾ (Adipurush Movie) ತಯಾರಾಗಿದೆ. ಆದರೆ ಈ ಸಿನಿಮಾ ಮೂಡಿಬಂದ ರೀತಿಯ ಬಗ್ಗೆ ಜನರು ತಕರಾರು ತೆಗೆದಿದ್ದಾರೆ. ನಿರ್ದೇಶಕ ಓಂ ರಾವತ್​ ಅವರನ್ನು ಕಟುವಾಗಿ ಟೀಕಿಸಲಾಗುತ್ತಿದೆ. ಈ ಚಿತ್ರದಿಂದ ರಾಮಾಯಣಕ್ಕೆ (Ramayana) ಅಪಮಾನ ಆಗಿದೆ ಎಂದು ಕೆಲವರು ಆರೋಪಿಸುತ್ತಿದ್ದಾರೆ. ಡೈಲಾಗ್​ಗಳ ಬಗ್ಗೆ, ಪಾತ್ರಗಳ ಚಿತ್ರಣದ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ. ಈ ಸಿನಿಮಾದ ಟೀಸರ್​ ಬಿಡುಗಡೆ ಆದಾಗಲೇ ಟ್ರೋಲ್​ ಶುರುವಾಗಿತ್ತು. ಹಾಗಾಗಿ ಚಿತ್ರತಂಡದವರು ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದು ಅನಿವಾರ್ಯ ಆಯಿತು. ಹಾಗಿದ್ದರೂ ಕೂಡ ಮೂಲ ರಾಮಾಯಣದಲ್ಲಿನ ಹಲವು ವಿಚಾರಗಳನ್ನು ಒಂಚೂರು ಭಿನ್ನವಾಗಿಯೇ ತೋರಿಸುವ ಪ್ರಯತ್ನ ಆಗಿದೆ. ಕಿರಿಕ್​ ಆಗುವುದು ಬೇಡ ಎಂಬ ಉದ್ದೇಶದಿಂದ ಸಿನಿಮಾ ಪ್ರದರ್ಶನದ ಆರಂಭದಲ್ಲೇ ಸ್ಪಷ್ಟೀಕರಣ (Adipurush Movie Disclaimer) ನೀಡಲಾಗಿದೆ. ಚಿತ್ರತಂಡದ ಸ್ಪಷ್ಟೀಕರಣದಲ್ಲಿ ಏನಿದೆ ಎಂಬ ವಿವರ ಇಲ್ಲಿದೆ ನೋಡಿ..

ಪ್ರತಿ ಸಿನಿಮಾದ ಆರಂಭದಲ್ಲಿ ಪರದೆ ಮೇಲೆ ಕೆಲವು ಸ್ಪಷ್ಟೀಕರಣಗಳನ್ನು ಬಿತ್ತರ ಮಾಡಲಾಗುತ್ತದೆ. ಅದರಲ್ಲೂ ಚಿತ್ರದ ಕಥಾವಸ್ತು ಸ್ವಲ್ಪ ವಿವಾದಾತ್ಮಕವಾಗಿದ್ದರೆ ಚಿತ್ರತಂಡದವರು ತಮ್ಮ ಆಶಯವನ್ನು ಸ್ಪಷ್ಟಪಡಿಸುವ ಉದ್ದೇಶದಿಂದ ಈ ರೀತಿಯ ಡಿಸ್​ಕ್ಲೈಮರ್​ ತೋರಿಸುತ್ತಾರೆ. ‘ಆದಿಪುರುಷ್​’ ಚಿತ್ರತಂಡ ಕೂಡ ತಮ್ಮ ಸ್ಪಷ್ಟನೆ ಏನು ಎಂಬುದನ್ನು ಮೊದಲೇ ತೋರಿಸಿದ್ದಾರೆ. ಹಾಗಿದ್ದರೂ ಕೂಡ ಕಿರಿಕ್​ ಆಗುತ್ತಿದೆ. ಅಂದಹಾಗೆ, ‘ಆದಿಪುರುಷ್​’ ಸ್ಪಷ್ಟೀಕರಣ ಈ ರೀತಿ ಇದೆ:

ಇದನ್ನೂ ಓದಿ: Adipurush: ‘ಆದಿಪುರುಷ್​’ ಚಿತ್ರದ ಎರಡೇ ದೃಶ್ಯದಲ್ಲಿ ನಟಿಸಿ 50 ಲಕ್ಷ ರೂಪಾಯಿ ಸಂಭಾವನೆ ಪಡೆದ ಸೋನಲ್​ ಚೌಹಾಣ್​?

‘ಈ ಚಿತ್ರವು ವಾಲ್ಮೀಕಿ ವಿರಚಿತ ಶ್ರೇಷ್ಠ ಮಹಾಕಾವ್ಯ ರಾಮಾಯಣದಿಂದ ಆಧಾರಿತವಾಗಿದೆ. ಇದೊಂದು ಪುಣ್ಯಕಾರ್ಯವೆಂದು ಭಾವಿಸಿ ಅದರಿಂದ ಸ್ಫೂರ್ತಿ ಪಡೆದು, ಮೂಲಕ್ಕೆ ನಿಷ್ಠವಾಗಿ, ಅದರ ಆಶಯಕ್ಕೆ ಧಕ್ಕೆ ಆಗದಂತೆ, ದೃಶ್ಯ ಮಾಧ್ಯಮದ ಸಾಧ್ಯತೆಗಳಿಗೆ ಅನುಗುಣವಾಗಿ ಕೆಲವು ಪಾತ್ರಗಳು ಮತ್ತು ಘಟನೆಗಳನ್ನು ಕೊಂಚ ಮಾರ್ಪಡಿಸಿ ಅಳವಡಿಸಲಾಗಿದೆ. ಹಾಗಾಗಿ ಚಿತ್ರದ ನಿರ್ಮಾಪಕರು ಇದು ವಾಲ್ಮೀಕಿ ರಾಮಾಯಣದ ಅಧಿಕೃತ ರೂಪ ಅಥವಾ ಧಾರ್ಮಿಕವಾಗಿ ಅನುಮೋದಿತ ನಿರೂಪಣೆ ಎಂದು ಎಲ್ಲಿಯೂ ಹೇಳಿರುವುದಿಲ್ಲ. ವೀಕ್ಷಕರು ಮೂಲ ವಾಲ್ಮೀಕಿ ರಾಮಾಯಣವನ್ನು ಓದಲು ಹಾಗೂ ಕಥೆಯ ಸಮಗ್ರ ಅರಿವಿಗಾಗಿ ವಿಶ್ವಾಸಾರ್ಹ ಸಾಹಿತ್ಯಿಕ ಕೃತಿಗಳನ್ನು ಅಥವಾ ಧಾರ್ಮಿಕ ಗ್ರಂಥಗಳನ್ನು ಅಭ್ಯಸಿಸಲು ಈ ಚಿತ್ರ ಪ್ರೇರೇಪಿಸುತ್ತದೆ’.

ಇದನ್ನೂ ಓದಿ: Om Raut: ‘ಆದಿಪುರುಷ್​’ ಚಿತ್ರಕ್ಕೆ ಕೆಟ್ಟ ವಿಮರ್ಶೆ ಸಿಕ್ಕ ಬಳಿಕ ನಿರ್ದೇಶಕ ಓಂ ರಾವತ್​ ಪ್ರತಿಕ್ರಿಯೆ ಏನು?

‘ಚಲನಚಿತ್ರವು ಕೆಲವು ನಾಟಕೀಯ ದೃಶ್ಯಗಳು ಹಾಗೂ ಕಾಲ್ಪನಿಕ ರೂಪಾಂತರಗಳನ್ನು ಸಹ ಒಳಗೊಂಡಿರಬಹುದು. ಹಾಗಾಗಿ ಅಂತಹ ರೂಪಾಂತರವನ್ನು ವಾಸ್ತವಿಕ ಅಥವಾ ಐತಿಹಾಸಿಕ ವ್ಯಾಖ್ಯಾನಗಳೆಂದು ಪರಿಗಣಿಸಬಾರದು. ಚಿತ್ರದ ನಿರ್ಮಾಪಕರು ವಾಲ್ಮೀಕಿ ರಾಮಾಯಣದ ಸಾಂಸ್ಕೃತಿಕ ಮತ್ತು ಧಾರ್ಮಿಕ ಮಹತ್ವವನ್ನು ಒಪ್ಪಿಕೊಂಡಿದ್ದಾರೆ ಮತ್ತು ಅದನ್ನು ಗೌರವದಿಂದ ಸೂಕ್ಷ್ಮತೆಯಿಂದ ಪ್ರಸ್ತುತಪಡಿಸುವ ಗುರಿಯನ್ನು ಹೊಂದಿದ್ದಾರೆ. ಆದಾಗ್ಯೂ ಚಿತ್ರದ ವ್ಯಾಖ್ಯಾನಗಳಲ್ಲಿ ವ್ಯತ್ಯಾಸಗಳು ಇರಬಹುದು ಹಾಗೂ ಚಿತ್ರವು ಯಾವುದೇ ನಿರ್ದಿಷ್ಟ ಧಾರ್ಮಿಕ ಅಥವಾ ತಾತ್ವಿಕ ದೃಷ್ಟಿಕೋನವನ್ನು ಬೆಂಬಲಿಸುವುದಿಲ್ಲ’.

ಇದನ್ನೂ ಓದಿ: Adipurush Review: ಗ್ರಾಫಿಕ್ಸ್​ ನಂಬಿಕೊಂಡು ಯುದ್ಧ ಮಾಡಿದ ರಾಮ-ರಾವಣ; ಇದು ಓಂ ರಾವತ್​ ರಾಮಾಯಣ

‘ಯಾವುದೇ ವ್ಯಕ್ತಿ, ಜನರು, ಸಮುದಾಯಗಳು, ಸಮಾಜ, ಸಂಸ್ಕೃತಿ, ಪದ್ಧತಿ, ಸಂಪ್ರದಾಯದ ನಂಬಿಕೆಗಳು, ಆಚರಣೆಗಳು, ಭಾವನೆಗಳು, ಆಲೋಚನೆಗಳನ್ನು ಮತ್ತು ಅನುಭವಗಳನ್ನು ಯಾವುದೇ ರೀತಿಯಲ್ಲಿ ಕೀಳಾಗಿ ಕಾಣುವ, ವಿರೂಪಗೊಳಿಸುವ ಅಥವಾ ಅವಮಾನಿಸುವ ಉದ್ದೇಶವನ್ನು ಹೊಂದಿರುವುದಿಲ್ಲ’ ಎಂದು ಆದಿಪುರುಷ್​ ಸಿನಿಮಾದ ಸ್ಪಷ್ಟೀಕರಣದಲ್ಲಿ ತಿಳಿಸಲಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:24 pm, Sun, 18 June 23

ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ