AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೆಗೆಟಿವ್ ವಿಮರ್ಶೆಗಳಿದ್ದರೂ ಗಳಿಕೆ ಕುಗ್ಗಿಲ್ಲ: ಎರಡನೇ ದಿನ ಆದಿಪುರುಷ್ ಗಳಿಸಿದ್ದೆಷ್ಟು?

Adipurush: ಬಿಡುಗಡೆ ಆದ ಮೊದಲ ದಿನ ಭರ್ಜರಿ ಕಲೆಕ್ಷನ್ ಮಾಡಿದ್ದ ಆದಿಪುರುಷ್ ಸಿನಿಮಾ ಎರಡನೇ ದಿನ ಗಳಿಸಿದ್ದೆಷ್ಟು?

ನೆಗೆಟಿವ್ ವಿಮರ್ಶೆಗಳಿದ್ದರೂ ಗಳಿಕೆ ಕುಗ್ಗಿಲ್ಲ: ಎರಡನೇ ದಿನ ಆದಿಪುರುಷ್ ಗಳಿಸಿದ್ದೆಷ್ಟು?
ಆದಿಪುರುಷ್ ಕಲೆಕ್ಷನ್
ಮಂಜುನಾಥ ಸಿ.
|

Updated on: Jun 18, 2023 | 5:22 PM

Share

ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ (Pan India) ಸಿನಿಮಾ ಆದಿಪುರುಷ್ (Adipurush) ಜೂನ್ 16 ರಂದು ಬಿಡುಗಡೆ ಆಗಿದೆ. ಮೊದಲ ದಿನವೇ ಸಿನಿಮಾಕ್ಕೆ ಭರಪೂರ ನೆಗೆಟಿವ್ ವಿಮರ್ಶೆಗಳು ಕೇಳಿಬಂದಿವೆ. ಸಿನಿಮಾ ಚೆನ್ನಾಗಿಲ್ಲವೆಂದು, ಚಿತ್ರತಂಡವು ರಾಮಾಯಣ ಕತೆಯನ್ನು ಕೆಟ್ಟರೀತಿಯಲ್ಲಿ ತೆರೆಗೆ ತಂದಿದೆ ಎಂಬ ಆರೋಪಗಳು ಜೋರಾಗಿ ಕೇಳಿ ಬಂದಿವೆ. ಕೆಲವೆಡೆ ಸಿನಿಮಾದ ವಿರುದ್ಧ ಪ್ರಕರಣಗಳು ಸಹ ದಾಖಲಾಗಿವೆ. ಚತ್ತೀಸ್​ಘಡದ ಸಿಎಂ ಸಹ ಸಿನಿಮಾವನ್ನು ಬ್ಯಾನ್ ಮಾಡಲು ಹಿಂಜರಿಯುವುದಿಲ್ಲ ಎಂದಿದ್ದಾರೆ. ಸಿನಿಮಾದ ವಿರುದ್ಧ ಇಷ್ಟೆಲ್ಲಾ ನೆಗೆಟಿವ್ ವಿಮರ್ಶೆಗಳ (Review) ನಡುವೆಯೂ ಎರಡನೇ ದಿನ ಸಿನಿಮಾ ಒಳ್ಳೆಯ ಕಲೆಕ್ಷನ್ ಅನ್ನೇ ಮಾಡಿದೆ.

ಆದಿಪುರುಷ್ ಸಿನಿಮಾ ಬಿಡುಗಡೆ ಆದ ದಿನ ಭಾರತದಲ್ಲಿ ಸುಮಾರು 85 ಕೋಟಿ ಗಳಿಕೆ ಮಾಡಿತ್ತು. ಮೊದಲ ದಿನ ಕೇಳಿ ಬಂದ ನೆಗೆಟಿವ್ ವಿಮರ್ಶೆಗಳಿಂದ ಎರಡನೇ ದಿನಕ್ಕೆ ಸಿನಿಮಾದ ಕಲೆಕ್ಷನ್ ಧಾರುಣವಾಗಿ ಕುಸಿಯಲಿದೆ ಎನ್ನಲಾಗಿತ್ತು. ಮೊದಲ ದಿನಕ್ಕೆ ಹೋಲಿಸಿದರೆ ಎರಡನೇ ದಿನದ ಕಲೆಕ್ಷನ್ ಕಡಿಮೆಯಾಗಿದೆಯಾದರೂ ತೀರ ಧಾರುಣ ಕುಸಿತ ಕಂಡು ಬಂದಿಲ್ಲ. ಆದರೆ ಮುಂದಿನ ದಿನಗಳಲ್ಲಿ ಸಿನಿಮಾದ ಕಲೆಕ್ಷನ್ ಕುಸಿಯುವ ಮುನ್ಸೂಚನೆಯನ್ನಂತೂ ನೀಡಿದೆ.

ಶನಿವಾರ ಆದಿಪುರುಷ್ ಸಿನಿಮಾ ಭಾರತದಾದ್ಯಂತ ಸುಮಾರು 67.50 ಕೋಟಿ ಗಳಿಕೆ ಮಾಡಿದೆ. ಮೊದ ದಿನದ ಕಲೆಕ್ಷನ್​ಗಿಂತಲೂ ಸುಮಾರು 20 ಕೋಟಿ ರೂಪಾಯಿ ಕಡಿಮೆ ಗಳಿಕೆ ಮಾಡಿದೆ ಆದಿಪುರುಷ್. ಅಲ್ಲಿಗೆ ಸಿನಿಮಾದ ಎರಡು ದಿನದ ಒಟ್ಟು ಕಲೆಕ್ಷನ್ ಭಾರತದಲ್ಲಿ 155 ಕೋಟಿಗೂ ಹೆಚ್ಚಾಗಿದೆ. ಎರಡನೇ ದಿನ ತೆಲುಗು ರಾಜ್ಯಗಳಿಗಿಂತಲೂ ಹೆಚ್ಚಿನ ಮೊತ್ತ ಉತ್ತರ ಭಾರತದಲ್ಲಿ ಕಲೆಕ್ಷನ್ ಆಗಿದೆ. ಮೊದಲ ದಿನ ಉತ್ತರ ಭಾರತ ಹಾಗೂ ತೆಲುಗು ರಾಜ್ಯಗಳ ಕಲೆಕ್ಷನ್​ ನಡುವೆ ಬಹಳ ಅಂತರ ಇರಲಿಲ್ಲ. ಆದರೆ ಶನಿವಾರದಂದು ಉತ್ತರ ಭಾರತದ ಕಲೆಕ್ಷನ್​ ತೆಲುಗು ರಾಜ್ಯಗಳ ಕಲೆಕ್ಷನ್​ಗಿಂತ ಗಮನಾರ್ಹವಾಗಿ ಏರಿದೆ.

ಇದನ್ನೂ ಓದಿ:Adipurush: ‘ಆದಿಪುರುಷ್​’ ಪ್ರದರ್ಶನಕ್ಕೂ ಮುನ್ನ ಬರುವ ಸ್ಪಷ್ಟೀಕರಣದಲ್ಲಿ ಏನಿದೆ? ಚಿತ್ರತಂಡದ ಅಸಲಿ ವಾದ ಇಲ್ಲಿದೆ ನೋಡಿ..

ಶನಿವಾರ ತೆಲುಗು ರಾಜ್ಯಗಳಲ್ಲಿ ಆದಿಪುರುಷ್ ಗಳಿಸಿರುವುದು 21.50 ಕೋಟಿ ಮಾತ್ರವೇ. ಮೊದಲ ದಿನ ಎರಡು ರಾಜ್ಯಗಳ ಒಟ್ಟು ಕಲೆಕ್ಷನ್ 38 ಕೋಟಿ ಆಗಿತ್ತು. ಉತ್ತರ ಭಾರತದ ರಾಜ್ಯಗಳಲ್ಲಿ ಮೊದಲ ದಿನ ಸುಮಾರು 39-40 ಕೋಟಿ ಕಲೆಕ್ಷನ್ ಆಗಿತ್ತು. ಶನಿವಾರವೂ ಬಹುತೇಕ ಇಷ್ಟೇ ಮೊತ್ತದ ಕಲೆಕ್ಷನ್ ಮುಂದುವರೆದಿದ್ದು ಶನಿವಾರದಂದು 38.50 ಕೋಟಿ ಕಲೆಕ್ಷನ್ ಅನ್ನು ಸಿನಿಮಾ ಮಾಡಿದೆ.

ಸಾಮಾನ್ಯವಾಗಿ ಮೊದಲ ದಿನದ ಕಲೆಕ್ಷನ್​ನಷ್ಟೆ ಎರಡನೇ ದಿನ ಅಥವಾ ಶನಿವಾರ ಕಲೆಕ್ಷನ್ ಆಗುವುದು ಸಾಮಾನ್ಯ. ಒಮ್ಮೊಮ್ಮೆಯಂತೂ ಮೊದಲ ದಿನದ ಕಲೆಕ್ಷನ್ ಅನ್ನು ಎರಡು ಹಾಗೂ ಮೂರನೇ ದಿನದ ಕಲೆಕ್ಷನ್ ಮೀರಿಸುತ್ತದೆ. ಆದರೆ ಆದಿಪುರುಷ್ ಸಿನಿಮಾದ ಎರಡನೇ ದಿನದ ಕಲೆಕ್ಷನ್ ಇಳಿಮುಖವಾಗಿದೆ. ಇದು ಸಿನಿಮಾದ ನಿರ್ಮಾಪಕರಿಗೆ ಚಿಂತೆ ಮೂಡಿಸಿರುವ ಸಾಧ್ಯತೆ ಇದೆ. ಭಾರತದಲ್ಲಿ ಶನಿವಾರ 67.50 ಕೋಟಿ ಗಳಿಕೆ ಮಾಡಿರುವ ಆದಿಪುರುಷ ಸಿನಿಮಾ ವಿದೇಶದಲ್ಲಿ ಸುಮಾರು 30 ಕೋಟಿ ಗಳಿಸಿದೆ ಎನ್ನಲಾಗುತ್ತಿದೆ.

ಆದಿಪುರುಷ್ ಸಿನಿಮಾವು ರಾಮಾಯಣದ ಕತೆ ಆಧರಿಸಿದೆ. ಪ್ರಭಾಸ್ ಶ್ರೀರಾಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೃತಿ ಸೆನನ್ ಸೀತಾಮಾತೆ, ದೇವದತ್ತ ನಾಗರೆ ಹನುಮಂತನ ಪಾತ್ರದಲ್ಲಿ, ಸನ್ನಿ ಸಿಂಗ್ ಲಕ್ಷ್ಮಣನ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾವನ್ನು ಓಂ ರಾವತ್ ನಿರ್ದೇಶನ ಮಾಡಿದ್ದು, ಸಿನಿಮಾ ನಿರ್ಮಾಣ ಮಾಡಿರುವುದು ಟಿ-ಸೀರೀಸ್​ನ ಭೂಷಣ್ ಕುಮಾರ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ