Adipurush: ‘ಬ್ರಾಹ್ಮಣನಾದ ರಾವಣ ಈ ಚಿತ್ರದಲ್ಲಿ ಮಾಂಸ ಮುಟ್ಟಿದ್ದು ತಪ್ಪು’: ‘ಆದಿಪುರುಷ್​’ ಬ್ಯಾನ್​ಗೆ ನೆಟ್ಟಿಗರ ಒತ್ತಾಯ

Ban Adipurush Movie: ‘ಆದಿಪುರುಷ್​’ ಚಿತ್ರದಲ್ಲಿ ರಾವಣನು ತಾನು ಸಾಕಿದ ದೈತ್ಯಾಕಾರದ ಬಾವಲಿಗೆ ತನ್ನ ಕೈಯಾರೆ ಮಾಂಸ ತಿನ್ನಿಸುತ್ತಾನೆ. ಯಾವುದೋ ದೊಡ್ಡ ಪ್ರಾಣಿಯ ಹಸಿ ಮಾಂಸವನ್ನು ಆತ ಮುಟ್ಟುತ್ತಾನೆ.

Adipurush: ‘ಬ್ರಾಹ್ಮಣನಾದ ರಾವಣ ಈ ಚಿತ್ರದಲ್ಲಿ ಮಾಂಸ ಮುಟ್ಟಿದ್ದು ತಪ್ಪು’: ‘ಆದಿಪುರುಷ್​’ ಬ್ಯಾನ್​ಗೆ ನೆಟ್ಟಿಗರ ಒತ್ತಾಯ
ಸೈಫ್​ ಅಲಿ ಖಾನ್​
Follow us
ಮದನ್​ ಕುಮಾರ್​
|

Updated on:Jun 19, 2023 | 4:35 PM

ಒಂದೆಡೆ ‘ಆದಿಪುರುಷ್​’ ಸಿನಿಮಾ (Adipurush Movie) ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ. ಇನ್ನೊಂದೆಡೆ ಈ ಸಿನಿಮಾವನ್ನು ಬ್ಯಾನ್​ ಮಾಡಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ನಿರ್ದೇಶಕ ಓಂ ರಾವತ್​ (Om Raut) ಅವರು ಈ ಚಿತ್ರದ ಬಗ್ಗೆ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಅವರು ಅಂದುಕೊಂಡ ರೀತಿಯಲ್ಲಿ ಜನರು ಈ ಸಿನಿಮಾವನ್ನು ಸ್ವೀಕರಿಸಿಲ್ಲ. ಸೋಶಿಯಲ್​ ಮೀಡಿಯಾದಲ್ಲಿ ಅನೇಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅನೇಕ ಕಾರಣಗಳಿಂದಾಗಿ ‘ಆದಿಪುರುಷ್​’ ಚಿತ್ರದ ಬಗ್ಗೆ ಅಸಮಾಧಾನ ಹೊರಹಾಕಲಾಗುತ್ತಿದೆ. ಅದರಲ್ಲೂ ರಾವಣನ ಪಾತ್ರದ ಬಗ್ಗೆ ಬಹಳ ಟೀಕೆ ವ್ಯಕ್ತವಾಗುತ್ತಿದೆ. ಸೈಫ್​ ಅಲಿ ಖಾನ್​ (Saif Ali Khan) ಅವರು ಈ ಪಾತ್ರ ಮಾಡಿದ್ದಾರೆ. ‘ಆದಿಪುರುಷ್​’ ಸಿನಿಮಾವನ್ನು ಬ್ಯಾನ್​ ಮಾಡಬೇಕು ಎಂದು ಕೆಲವರು ತಕರಾರು ತೆಗೆದಿದ್ದಾರೆ. ಹಾಗಾಗಿ ಟ್ವಿಟರ್​ನಲ್ಲಿ #BanAdipurushMovie ಎಂಬ ಹ್ಯಾಶ್​ಟ್ಯಾಗ್​ ಸಖತ್​ ಟ್ರೆಂಡ್​ ಆಗಿದೆ.

‘ಆದಿಪುರುಷ್​’ ಸಿನಿಮಾದಲ್ಲಿ ಪ್ರಭಾಸ್​ ಅವರು ರಾಮನಾಗಿ ನಟಿಸಿದ್ದರೆ, ಅವರ ಎದುರು ರಾವಣನ ಪಾತ್ರದಲ್ಲಿ ಸೈಫ್​ ಅಲಿ ಖಾನ್​ ಅವರು ಆರ್ಭಟಿಸಿದ್ದಾರೆ. ಅವರ ಪಾತ್ರವನ್ನು ಇಟ್ಟುಕೊಂಡು ಸಿಕ್ಕಾಪಟ್ಟೆ ಟ್ರೋಲ್​ ಮಾಡಲಾಗುತ್ತಿದೆ. ರಾವಣನ ಗೆಟಪ್​, ಆತ ನಡೆದುಕೊಳ್ಳುವ ರೀತಿ, ಪುಷ್ಪಕ ವಿಮಾನದ ಬದಲಿಗೆ ದೈತ್ಯಾಕಾರದ ಬಾವಲಿ ಬಳಕೆ ಆಗಿರುವುದು ಸೇರಿದಂತೆ ಅನೇಕ ಸಂಗತಿಗಳು ಟೀಕೆಗೆ ಒಳಗಾಗುತ್ತಿವೆ. ಇನ್ನೊಂದು ಪ್ರಮುಖ ಅಂಶ ಏನೆಂದರೆ ‘ಬ್ರಾಹ್ಮಣನಾದ ರಾವಣನು ಈ ಸಿನಿಮಾದಲ್ಲಿ ಮಾಂಸ ಏಕೆ ಮುಟ್ಟಿದ್ದಾನೆ’ ಎಂಬ ಪ್ರಶ್ನೆ ಎದುರಾಗಿದೆ.

ಇದನ್ನೂ ಓದಿ: Hanuman: ‘ಆದಿಪುರುಷ್​’ ಬಳಿಕ ‘ಹನುಮಾನ್​’ ಸಿನಿಮಾ ಮೇಲೆ ಮೂಡಿದೆ ನಿರೀಕ್ಷೆ: ಇದೂ ಸಹ ಪ್ಯಾನ್​ ಇಂಡಿಯಾ ಚಿತ್ರ

ತಾನು ಸಾಕಿದ ದೈತ್ಯಾಕಾರದ ಬಾವಲಿಗೆ ರಾವಣನು ತನ್ನ ಕೈಯಾರೆ ಮಾಂಸ ತಿನ್ನಿಸುತ್ತಾನೆ. ಯಾವುದೋ ದೊಡ್ಡ ಪ್ರಾಣಿಯ ಹಸಿ ಮಾಂಸವನ್ನು ಆತ ಮುಟ್ಟುತ್ತಾನೆ. ಈ ದೃಶ್ಯದ ಬಗ್ಗೆ ಟೀಕೆ ಮಾಡಲಾಗುತ್ತಿದೆ. ಸಿನಿಮಾದಲ್ಲಿನ ಇನ್ನೂ ಅನೇಕ ದೃಶ್ಯಗಳಿಗೆ ತಕರಾರು ಎದುರಾಗಿದೆ. ಈ ಕಾರಣದಿಂದ ‘ಆದಿಪುರುಷ್​’ ಚಿತ್ರವನ್ನು ಬ್ಯಾನ್​ ಮಾಡಬೇಕು ಎಂದು ಒಂದು ವರ್ಗದ ನೆಟ್ಟಿಗರು ಒತ್ತಾಯಿಸುತ್ತಿದ್ದಾರೆ.

ಈ ಸಿನಿಮಾದಲ್ಲಿ ಆಂಜನೇಯನ ಪಾತ್ರವನ್ನು ದೇವದತ್ತ ನಾಗೆ ಅವರು ನಿಭಾಯಿಸಿದ್ದಾರೆ. ಹನುಮಂತನ ಸಂಭಾಷಣೆಗಳು ತೀರಾ ಕಳಪೆ ಆಗಿವೆ ಎಂದು ಬಹುತೇಕರು ಟೀಕಿಸಿದ್ದಾರೆ. ಈ ಸಿನಿಮಾದಿಂದ ನಿರ್ದೇಶಕ ಓಂ ರಾವತ್​ ಅವರು ಹಲವರ ಕೆಂಗಣ್ಣಿಗೆ ಗುರಿ ಆಗಿದ್ದಾರೆ. ರಾಮಾಯಣವನ್ನು ತಪ್ಪಾಗಿ ಚಿತ್ರಿಸಿರುವುದಕ್ಕೆ ಇಡೀ ಚಿತ್ರತಂಡದವರು ಕ್ಷಮೆ ಕೇಳಬೇಕು ಎಂದು ಹಲವರು ಒತ್ತಾಯಿಸುತ್ತಿದ್ದಾರೆ. ಈ ಸಮಯದಲ್ಲಿ ಪ್ರಭಾಸ್​ ಅವರು ಮೌನಕ್ಕೆ ಶರಣಾಗಿದ್ದಾರೆ. ಅವರ ಮುಂಬರುವ ಸಿನಿಮಾಗಳ ಮೇಲೆ ಇದು ಪರಿಣಾಮ ಬೀರುವ ಸಾಧ್ಯತೆ ಇದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:31 pm, Mon, 19 June 23

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ