
ನಟಿ ಸಮಂತಾ ರುತ್ ಪ್ರಭು ಅವರು ಇತ್ತೀಚೆಗೆ ನಿರ್ದೇಶಕ ರಾಜ್ ಅವರನ್ನು ವಿವಾಹ ಆಗಿದ್ದಾರೆ. ತಮಿಳುನಾಡಿನ ಕೊಯಿಮತ್ತೂರಿನಲ್ಲಿ ಈ ವಿವಾಹ ನಡೆದಿದೆ. ಇಶಾ ಫೌಂಡೇಷನ್ ಅಲ್ಲಿ ಸಿಂಪಲ್ ಆಗಿ ದಂಪತಿ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಸಮಂತಾ ಬೆನ್ನಲ್ಲೇ ದಕ್ಷಿಣದ ಸ್ಟಾರ್ ನಟಿ ಮದುವೆಗೆ ಸಿದ್ಧರಾಗಿದ್ದಾರೆ. ಅಷ್ಟಕ್ಕೂ ಯಾರು ಅವರು? ರಶ್ಮಿಕಾ ಮಂದಣ್ಣ. ಹೌದು ಫೆಬ್ರವರಿ ವೇಳೆಗೆ ರಶ್ಮಿಕಾ (Rashmika Mandanna) ಹಾಗೂ ವಿಜಯ್ ದೇವರಕೊಂಡ ವಿವಾಹ ನಡೆಯಲಿದೆ. ಈ ಬಗ್ಗೆ ಅವರು ಇತ್ತೀಚೆಗೆ ಮಾತನಾಡಿದ್ದು, ಅಡ್ಡ ಗೋಡೇ ಮೇಲೆ ದೀಪ ಇಟ್ಟಿದ್ದಾರೆ.
ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಹಲವು ವರ್ಷಗಳಿಂದ ಪ್ರೀತಿಯಲ್ಲಿ ಇದ್ದಾರೆ. ಅಕ್ಟೋಬರ್ನಲ್ಲಿ ಇವರ ನಿಶ್ಚಿತಾರ್ಥ ಹೈದರಾಬಾದ್ನಲ್ಲಿ ನಡೆದಿದೆ ಎನ್ನಲಾಗಿದೆ. ಇವರ ಮದುವೆ ಫೆಬ್ರವರಿಯಲ್ಲಿ ರಾಜಸ್ಥಾನದಲ್ಲಿ ನಡೆಯಲಿದೆ ಎಂದು ವರದಿ ಆಗಿದೆ. ಈ ಪ್ರಶ್ನೆಗೆ ರಶ್ಮಿಕಾಗೆ ಕೇಳಲಾಗಿದೆ. ಇದಕ್ಕೆ ಅವರು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದಾರೆ.
‘ನಾನು ಮದುವೆ ವಿಷಯವನ್ನು ತಳ್ಳಿಯೂ ಹಾಕುತ್ತಿಲ್ಲ, ಒಪ್ಪಿಯೂ ಕೊಳ್ಳುತ್ತಿಲ್ಲ. ಅದರ ಬಗ್ಗೆ ಯಾವಾಗ ಮಾತನಾಡಬೇಕೋ ಆಗ ಮಾತನಾಡುತ್ತೇವೆ’ ಎಂದು ರಶ್ಮಿಕಾ ಹೇಳಿದ್ದಾರೆ. ಈ ಮೂಲಕ ವಿವಾಹ ವಿಷಯವನ್ನು ಗುಟ್ಟಾಗಿಟ್ಟಿದ್ದಾರೆ. ಇವರು ಫೆಬ್ರವರಿಯಲ್ಲಿ ಮದುವೆ ಆಗುತ್ತಿರುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.
‘ನಾನು ಕಲಾವಿದೆ. ಆದರೆ, ಮನೆಗೆ ಹೋದಾಗ ನಟನೆಯ ಬಗ್ಗೆ ಯೋಚಿಸದಿರಲು ನಿರ್ಧರಿಸುತ್ತೇನೆ. ಕೆಲಸದ ಬಗ್ಗೆ ಮನೆಯಲ್ಲಿ ನಾನು ಮಾತನಾಡುವುದಿಲ್ಲ’ ಎಂದಿದ್ದಾರೆ.
‘ನಾವು ದಿನದ 24 ಗಂಟೆಯೂ ಕೆಲಸ ಮಾಡಲು ಸಾಧ್ಯವಿಲ್ಲ. ನೀವು ಕೆಲಸದ ಬಗ್ಗೆ ಮಾತನಾಡುತ್ತಿದ್ದೀರಿ ಎಂದರೆ ಅದು ಕೂಡ ಕೆಲಸ ಮಾಡಿದಂತೆ. ಕೆಲಸ ಎಂಬುದು ಬಂದಾಗ ನನ್ನ ಪ್ರಯತ್ನ ನೂರರಷ್ಟು ಇರುತ್ತದೆ. ಆದರೆ, ಮನೆಯಲ್ಲಿ ಇದ್ದೇನೆ ಎಂದಾಗ ನಾನು ಸಂಪೂರ್ಣ ಅಲ್ಲಿಯೇ ಸಮಯ ಕಳೆಯಲು ಬಯಸುತ್ತೇನೆ’ ಎಂದಿದ್ದಾರೆ ರಶ್ಮಿಕಾ.
ಇದನ್ನೂ ಓದಿ: ಮತ್ತೆ ರಶ್ಮಿಕಾ ಮಂದಣ್ಣರನ್ನು ಕಾಡಿದ ಎಐ, ಕಠಿಣವಾಗಿ ಶಿಕ್ಷಿಸಿ ಎಂದ ನಟಿ
ರಶ್ಮಿಕಾ ಮಂದಣ್ಣ ಅವರು ಈ ಮೊದಲು ರಕ್ಷಿತ್ ಶೆಟ್ಟಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ‘ಗೀತ ಗೋವಿಂದಂ’ ಸಿನಿಮಾ ರಿಲೀಸ್ ಸಂದರ್ಭದಲ್ಲಿ ಇವರು ಬೇರೆ ಆಗುವ ಘೋಷಣೆ ಮಾಡಿದರು. ವಿಜಯ್ ಹಾಗೂ ರಶ್ಮಿಕಾ ನಡುವೆ ಪ್ರೀತಿ ಮೂಡಿದೆ ಎಂದು ಆಗಲೇ ಹೇಳಲಾಗಿತ್ತು. ಈಗ ಇವರು ಮದುವೆ ಆಗುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.