Ponniyin Selvan: ‘ನಮ್ಮ ರಾಣಿ ಮತ್ತೆ ಬಂದರು’: ಐಶ್ವರ್ಯಾ ರೈ ಗೆಟಪ್​ ನೋಡಿ ಖುಷಿಯಿಂದ ಕಮೆಂಟ್​ ಮಾಡಿದ ಫ್ಯಾನ್ಸ್​

| Updated By: ಮದನ್​ ಕುಮಾರ್​

Updated on: Jul 07, 2022 | 12:52 PM

Aishwarya Rai Bachchan: ಹತ್ತು ಹಲವು ಕಾರಣಗಳಿಂದಾಗಿ ‘ಪೊನ್ನಿಯಿನ್​ ಸೆಲ್ವನ್​’ ಸಿನಿಮಾ ಹೈಪ್​ ಸೃಷ್ಟಿ ಮಾಡಿದೆ. ಈ ಚಿತ್ರದಲ್ಲಿ ನಂದಿನಿ ಎಂಬ ಪಾತ್ರವನ್ನು ಐಶ್ವರ್ಯಾ ರೈ ನಿಭಾಯಿಸುತ್ತಿದ್ದಾರೆ.

Ponniyin Selvan: ‘ನಮ್ಮ ರಾಣಿ ಮತ್ತೆ ಬಂದರು’: ಐಶ್ವರ್ಯಾ ರೈ ಗೆಟಪ್​ ನೋಡಿ ಖುಷಿಯಿಂದ ಕಮೆಂಟ್​ ಮಾಡಿದ ಫ್ಯಾನ್ಸ್​
ಐಶ್ವರ್ಯಾ ರೈ ಬಚ್ಚನ್
Follow us on

ಅಭಿನಯ ಮತ್ತು ಮನಮೋಹಕ ಸೌಂದರ್ಯದಿಂದ ಕೋಟ್ಯಂತರ ಅಭಿಮಾನಿಗಳ ಹೃದಯ ಕದ್ದವರು ನಟಿ ಐಶ್ವರ್ಯಾ ರೈ (Aishwarya Rai Bachchan). ಆದರೆ ಮದುವೆ ಬಳಿಕ ಅವರು ಸಿನಿಮಾದಲ್ಲಿ ಅಷ್ಟೇನೂ ಸಕ್ರಿಯವಾಗಿಲ್ಲ. ಅಲ್ಲೊಂದು ಇಲ್ಲೊಂದು ಚಿತ್ರಗಳನ್ನು ಮಾತ್ರ ಅವರು ಒಪ್ಪಿಕೊಳ್ಳುತ್ತಾರೆ. ಒಂದು ಕಾಲದಲ್ಲಿ ಬ್ಯಾಕ್​ ಟು ಬ್ಯಾಕ್​ ಬಾಲಿವುಡ್​ (Bollywood) ಸಿನಿಮಾ ಮಾಡುತ್ತಿದ್ದ ಅವರು ಈಗ ಸಖತ್​ ಚ್ಯೂಸಿ ಆಗಿದ್ದಾರೆ. ಕಥೆ ಮತ್ತು ಪಾತ್ರವನ್ನು ಅಳೆದು-ತೂಗಿ ಅವರು ಸಿನಿಮಾ ಒಪ್ಪಿಕೊಳ್ಳುತ್ತಾರೆ. ಐಶ್ವರ್ಯಾ ರೈ ನಟನೆಯ ‘ಪೊನ್ನಿಯಿನ್​ ಸೆಲ್ವನ್​’ (Ponniyin Selvan) ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಚಿತ್ರದ ಮೇಲೆ ಅಭಿಮಾನಿಗಳು ಸಖತ್​ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈಗ ಹೊಸ ಪೋಸ್ಟರ್​ ಬಿಡುಗಡೆ ಆಗಿದ್ದು, ಅದನ್ನು ಕಂಡು ಫ್ಯಾನ್ಸ್​ ಖುಷಿ ಆಗಿದ್ದಾರೆ. ‘ನಮ್ಮ ರಾಣಿ ಮತ್ತೆ ಬಂದರು’ ಎಂದು ಜನರು ಕಮೆಂಟ್​ ಮಾಡುತ್ತಿದ್ದಾರೆ.

ಹತ್ತು ಹಲವು ಕಾರಣಗಳಿಂದಾಗಿ ‘ಪೊನ್ನಿಯಿನ್​ ಸೆಲ್ವನ್​’ ಸಿನಿಮಾ ಹೈಪ್​ ಸೃಷ್ಟಿ ಮಾಡಿದೆ. ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿರುವುದು ಖ್ಯಾತ ನಿರ್ದೇಶಕ ಮಣಿರತ್ನಂ. ಇದರಲ್ಲಿ ಬಹುತಾರಾಗಣ ಇದೆ. ಐಶ್ವರ್ಯಾ ರೈ, ವಿಕ್ರಮ್​, ಜಯಮ್​ ರವಿ, ಕಾರ್ತಿ, ತ್ರಿಷಾ, ಆರ್​. ಶರತ್​ಕಮಾರ್​, ಶೋಭಿತಾ ಧೂಲಿಪಾಲಾ ಸೇರಿದಂತೆ ಹಲವು ಕಲಾವಿದರು ನಟಿಸುತ್ತಿದ್ದಾರೆ. ಮಣಿರತ್ನಂ ಮತ್ತು ಐಶ್ವರ್ಯಾ ರೈ ಅವರು ಜೊತೆಯಾಗಿ ಮಾಡುತ್ತಿರುವ ನಾಲ್ಕನೇ ಸಿನಿಮಾ ಇದು.

ಇದನ್ನೂ ಓದಿ
30 ವರ್ಷಗಳ ಹಿಂದೆ ಐಶ್ವರ್ಯಾ ರೈ ಹೇಗಿದ್ರು ಗೊತ್ತಾ? ಇಲ್ಲಿದೆ ಫೋಟೋ
ಪಾರ್ಟಿಯಲ್ಲಿ ಸಲ್ಮಾನ್​ ಖಾನ್​ ಕಂಡು ಗಂಡನಿಂದಲೇ ಅಂತರ ಕಾಯ್ದುಕೊಂಡ ಐಶ್ವರ್ಯಾ ರೈ?
1992ರಲ್ಲಿ ಐಶ್ವರ್ಯಾ ರೈ ಪಡೆದ ಸಂಭಾವನೆ ಎಷ್ಟು? ನೀವು ಅಚ್ಚರಿ ಪಡೋದು ಗ್ಯಾರಂಟಿ
ವೈರಲ್ ಆಯ್ತು ಅಭಿಷೇಕ್ ಬಚ್ಚನ್- ಐಶ್ವರ್ಯಾ ರೈ ಮದುವೆಯ ಚಿತ್ರ; ಫೋಟೋದ ಅಸಲಿಯತ್ತನ್ನು ತೆರೆದಿಟ್ಟ ನಟ

ಕಲ್ಕಿ ಕೃಷ್ಣಮೂರ್ತಿ ಅವರು 1955ರಲ್ಲಿ ಬರೆದ ‘ಪೊನ್ನಿಯಿನ್​ ಸೆಲ್ವನ್​’ ಕಾದಂಬರಿ ಆಧರಿಸಿ ಈ ಚಿತ್ರ ಮೂಡಿಬರುತ್ತಿದೆ. ತಮಿಳು, ಹಿಂದಿ, ಕನ್ನಡ, ಮಲಯಾಳಂ ಮತ್ತು ತೆಲುಗು ಭಾಷೆಯಲ್ಲಿ ಇದು ಬಿಡುಗಡೆ ಆಗಲಿದೆ ಎಂಬುದು ವಿಶೇಷ. ಐಶ್ವರ್ಯಾ ರೈ ಅವರ ವೃತ್ತಿಜೀವನದಲ್ಲಿ ಇದು ಮಹತ್ವದ ಚಿತ್ರ ಆಗಲಿದೆ. ಇದರಲ್ಲಿ ಅವರು ನಂದಿನಿ ಎಂಬ ರಾಣಿಯ ಪಾತ್ರ ಮಾಡುತ್ತಿದ್ದಾರೆ.

ಚಿತ್ರತಂಡದವರು ಹಂಚಿಕೊಂಡಿರುವ ಈ ಪೋಸ್ಟರ್​ ಅಭಿಮಾನಿಗಳಿಗೆ ಸಖತ್​ ಇಷ್ಟ ಆಗಿದೆ. ಎಲ್ಲರೂ ಪಾಸಿಟಿವ್​ ಆಗಿ ಕಮೆಂಟ್​ ಮಾಡುತ್ತಿದ್ದಾರೆ. 2018ರಿಂದ ಈಚೆಗೆ ಐಶ್ವರ್ಯಾ ರೈ ಅವರ ಯಾವುದೇ ಸಿನಿಮಾ ರಿಲೀಸ್​ ಆಗಿಲ್ಲ. ಅವರನ್ನು ಚಿತ್ರಮಂದಿರದಲ್ಲಿ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. 2022ರ ಸೆ.30ರಂದು ಈ ಚಿತ್ರ ಬಿಡುಗಡೆ ಆಗಲಿದೆ. ಅದ್ದೂರಿಯಾಗಿ ಕಮ್​ಬ್ಯಾಕ್​ ಮಾಡಲು ಅವರಿಗೆ ಇದು ಸೂಕ್ತ ಸಿನಿಮಾ ಎಂಬುದರಲ್ಲಿ ಅನುಮಾನವಿಲ್ಲ.

ಇದನ್ನೂ ಓದಿ: ನಟಿ ಐಶ್ವರ್ಯಾ ರೈ ಜತೆ ಡ್ಯಾನ್ಸ್ ಮಾಡಿದ ಆರಾಧ್ಯಾ; ಇಲ್ಲಿದೆ ಕ್ಯೂಟ್ ವಿಡಿಯೋ

ನಟಿ ಐಶ್ವರ್ಯಾ ರೈ ಅವರ ಒಟ್ಟೂ ಆಸ್ತಿ ಎಷ್ಟು? ನಟನೆಯಿಂದ ದೂರ ಉಳಿದರೂ ಬರುತ್ತಿದೆ ಕೋಟಿ ಕೋಟಿ ದುಡ್ಡು

Published On - 12:52 pm, Thu, 7 July 22