ಅಜಿತ್ ನಟನೆಯ ‘ಗುಡ್ ಬ್ಯಾಡ್ ಅಗ್ಲಿ’ ಬಿಡುಗಡೆ, ಸಿನಿಮಾ ಗುಡ್ಡಾ? ಬ್ಯಾಡಾ? ಅಗ್ಲಿಯಾ?

Good Bad Ugly Movie review: ತಮಿಳಿನ ಸ್ಟಾರ್ ನಟ ಅಜಿತ್ ಕುಮಾರ್ ನಟಿಸಿರುವ ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾ ಇಂದು ಬಿಡುಗಡೆ ಆಗಿದೆ. ಹಲವೆಡೆ ಅರ್ಲಿ ಮಾರ್ನಿಂಗ್ ಶೋಗಳನ್ನು ಪ್ರದರ್ಶಿಸಲಾಗಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಸಿನಿಮಾದ ಟ್ವಿಟ್ಟರ್ ವಿಮರ್ಶೆ ಇಲ್ಲಿದೆ.

ಅಜಿತ್ ನಟನೆಯ ‘ಗುಡ್ ಬ್ಯಾಡ್ ಅಗ್ಲಿ’ ಬಿಡುಗಡೆ, ಸಿನಿಮಾ ಗುಡ್ಡಾ? ಬ್ಯಾಡಾ? ಅಗ್ಲಿಯಾ?
Good Bad Ugly

Updated on: Apr 10, 2025 | 11:11 AM

ತಮಿಳು ಚಿತ್ರರಂಗದ ಸ್ಟಾರ್ ನಟ ಅಜಿತ್ ಕುಮಾರ್ (Ajith Kumar) ನಟನೆಯ ‘ಗುಡ್ ಬ್ಯಾಡ್ ಅಗ್ಲಿ’(Good Bad Ugly) ಸಿನಿಮಾ ಇಂದು (ಏಪ್ರಿಲ್ 10) ಬಿಡುಗಡೆ ಆಗಿದೆ. ಸಿನಿಮಾದಲ್ಲಿ ನಟಿ ತ್ರಿಷಾ (Trisha) ನಾಯಕಿ. ಸಿನಿಮಾ ನಿರ್ದೇಶನ ಮಾಡಿರುವುದು ಅಧಿಕ್ ರವಿಚಂದ್ರನ್, ಸಿನಿಮಾ ನಿರ್ಮಾಣ ಮಾಡಿರುವುದು ಮೈತ್ರಿ ಮೂವಿ ಮೇಕರ್ಸ್. ಜಿವಿ ಪ್ರಕಾಶ್ ಸಂಗೀತ ನೀಡಿದ್ದಾರೆ. ತಮಿಳುನಾಡಿನ ಹಲವು ಕಡೆ ಅರ್ಲಿ ಮಾರ್ನಿಂಗ್ ಶೋಗಳು ಪ್ರದರ್ಶನಗೊಂಡಿವೆ. ಮೊದಲ ಶೋ ಸಿನಿಮಾ ನೋಡಿದವರು ತಮ್ಮ ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇಲ್ಲಿದೆ ಸಿನಿಮಾದ ಟ್ವಿಟ್ಟರ್ ವಿಮರ್ಶೆ…

ವೆಂಕಿ ರಿವ್ಯೂಸ್ ಹೆಸರಿನ ಟ್ವಿಟ್ಟರ್ ಖಾತೆಯೊಂದು ಸಿನಿಮಾದ ಸುದೀರ್ಘ ವಿಮರ್ಶೆ ಹಂಚಿಕೊಂಡಿದ್ದು, ‘ಗುಡ್ ಬ್ಯಾಡ್ ಅಗ್ಲಿ’ ಒಂದು ಸಾಧಾರಣ ಆಕ್ಷನ್ ಸಿನಿಮಾ ಎಂದಿದೆ. ಮೊದಲಾರ್ಧ ಚೆನ್ನಾಗಿದೆ, ಎರಡನೇ ಅರ್ಧ ಫ್ಲ್ಯಾಷ್​ಬ್ಯಾಕ್ ಕತೆಯಿಂದ ಕೂಡಿದ್ದು, ತುಸು ಅಸಹನೀಯವಾಗಿದೆ. ಸಿನಿಮಾ ಬಹುತೇಕ ಆಕ್ಷನ್ ಮತ್ತು ಎಲಿವೇಷನ್ ಸೀನ್​ಗಳ ಮೇಲೆ ಆಧಾರವಾಗಿದೆ. ಕತೆ, ಎಮೋಷನ್ ಗೆಲ್ಲ ಹೆಚ್ಚಿನ ಆದ್ಯತೆ ಇಲ್ಲ. ಸಿನಿಮಾಕ್ಕೆ 5 ರಲ್ಲಿ 2.50 ಅಂಕ ಕೊಡಬಹುದು ಎಂದಿದ್ದಾರೆ.

ಟಾಲಿವುಡ್ ರೂಲ್ಸ್ ಹೆಸರಿನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ಅಭಿಪ್ರಾಯದಂತೆ ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾ ಸಾಧಾರಣವಾಗಿದೆಯಷ್ಟೆ. ಸಿನಿಮಾದಲ್ಲಿ ಚೆನ್ನಾಗಿರುವುದು ಮಾಸ್ ಸೀನ್​ಗಳು, ಅಜಿತ್ ಆಕ್ಷನ್ ಮತ್ತು ಸ್ಟೈಲ್, ಒಳ್ಳೆಯ ಪ್ರೊಡಕ್ಷನ್, ಒಳ್ಳೆ ಮೊದಲಾರ್ಧ. ಚೆನ್ನಾಗಿಲ್ಲದಿರುವುದು ಕತೆಯೇ ಇಲ್ಲದಿರುವುದು, ಎಮೋಷನ್ ಇಲ್ಲದಿರುವುದು, ಸುಮ್ಮನೆ ಕತೆಯನ್ನು ಎಳೆದಾಡಿರುವುದು, ಅತಿಯಾದಾ ಡ್ರಾಮಾ. ಈ ಸಿನಿಮಾಕ್ಕೆ 2.5 ರೇಟಿಂಗ್ ಕೊಡಬಹುದಷ್ಟೆ ಎಂದಿದ್ದಾರೆ.

‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾದ ಮೊದಲಾರ್ಧ ಅದ್ಭುತವಾಗಿದೆ. ಅಜಿತ್ ಅಭಿಮಾನಿಗಳಿಗಂತೂ ಹಬ್ಬವೇ ಆಗಿದೆ. ಪ್ರತಿ 10 ನಿಮಿಷಕ್ಕೆ ಒಂದು ಮಾಸ್ ಸೀನ್ ಇದೆ. ಅಜಿತ್ ಅವರ ಈ ವರೆಗಿನ ಪರ್ಫಾಮೆನ್ಸ್​ಗಳಲ್ಲಿ ಇದುವೇ ಬೆಸ್ಟ್. ಇಂಟ್ರೊಡಕ್ಷನ್ ಸೀನ್ ಅತ್ಯದ್ಭುತವಾಗಿದೆ. ಇಂಟರ್ವೆಲ್ ಸೀನ್​ ಸಹ ಅದ್ಭುತವಾಗಿದೆ. ದಳಪತಿ ವಿಜಯ್​ಗೆ ನೀಡಿರುವ ರೆಫೆರೆನ್ಸ್ ಚೆನ್ನಾಗಿದೆ’ ಎಂದಿದ್ದಾರೆ ಪ್ರವೀಣ್ ಕುಮಾರ್.

ಹರ್ಷಿತ್ ಎನ್​ಎಸ್ ಎಂಬುವರು ಟ್ವೀಟ್ ಮಾಡಿ ಸಿನಿಮಾದ ಪಾಸಿಟಿವ್ ಮತ್ತು ನೆಗೆಟಿವ್​ಗಳನ್ನು ಪಟ್ಟಿ ಮಾಡಿದ್ದಾರೆ. ಪಾಸಿಟಿವ್​ಗಳೆಂದರೆ ಅಜಿತ್ ಕುಮಾರ್ ಒಳ್ಳೆಯ ಸ್ವಾಗ್ ನಲ್ಲಿ ನಟನೆ ಮಾಡಿದ್ದಾರೆ. ಸಖತ್ ಸ್ಟೈಲಿಷ್ ಆಗಿ ಕಾಣುತ್ತಾರೆ. ಕೆಲವು ಒಳ್ಳೆಯ ಮಾಸ್ ಸೀನ್​ಗಳಿವೆ. ಕೆಲ ಡೈಲಾಗ್​ಗಳು ಸಖತ್ ಆಗಿವೆ. ನೆಗೆಟಿವ್​ಗಳೆಂದರೆ ಹಿನ್ನೆಲೆ ಸಂಗೀತ ಮತ್ತು ಹಾಡುಗಳು ಕೇಳಲು ಹಿಂಸೆಯಾಗುತ್ತದೆ. ಕತೆ, ಚಿತ್ರಕತೆ ಎಂಬುದು ಸಿನಿಮಾದಲ್ಲಿ ಇಲ್ಲವೇ ಇಲ್ಲ. ಕೆಲವು ಕಡೆ ಕತೆ, ಪಾತ್ರಗಳು ಕೃತಕ ಅನಿಸುತ್ತದೆ. ಡಬ್ ಸಿನಿಮಾ ನೋಡಿದ ಅನುಭವ ಬರುತ್ತದೆ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ