
ಈ ವಾರ ಕಾಲಿವುಡ್ನಲ್ಲಿ ಭರ್ಜರಿ ಫೈಟ್ ನಡೆದಿದೆ. ಅಜಿತ್ ಕುಮಾರ್ ನಟನೆಯ ‘ತುನಿವು’ (Thunivu Movie) ಹಾಗೂ ದಳಪತಿ ವಿಜಯ್ ಅಭಿನಯದ ‘ವಾರಿಸು’ (Varisu Movie) ಸಿನಿಮಾಗಳು ಒಂದೇ ದಿನ ರಿಲೀಸ್ ಆಗಿ ಸದ್ದು ಮಾಡುತ್ತಿವೆ. ಕಲೆಕ್ಷನ್ ವಿಚಾರದಲ್ಲಿ ಎರಡೂ ಚಿತ್ರಗಳು ಕೆಲವೇ ಕೋಟಿ ಅಂತರಗಳಲ್ಲಿ ಬಿಸ್ನೆಸ್ ಮಾಡುತ್ತಿವೆ. ಎರಡೂ ಸಿನಿಮಾಗಳನ್ನು ಫ್ಯಾನ್ಸ್ ಇಷ್ಟಪಟ್ಟಿದ್ದಾರೆ ಅನ್ನೋದು ವಿಶೇಷ.
‘ವಾರಿಸು’ ಹಾಗೂ ‘ತುನಿವು’ ಚಿತ್ರಗಳು ಜನವರಿ 11ರಂದು ರಿಲೀಸ್ ಆದವು. ಎರಡೂ ಚಿತ್ರಗಳು ಸಂಕ್ರಾಂತಿ ನಿಮಿತ್ತ ತೆರೆಗೆ ಬಂದಿವೆ. ಮೊದಲ ದಿನ ‘ತುನಿವು’ 26 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದರೆ, ‘ವಾರಿಸು’ 26.5 ಕೋಟಿ ಬಾಚಿಕೊಂಡಿತು. ಎರಡು (ಜನವರಿ 12) ಹಾಗೂ ಮೂರನೇ ದಿನವೂ (ಜನವರಿ 13) ಎರಡೂ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸಿವೆ. ವಾರದ ದಿನವಾದರೂ ಕೋಟಿ ಕೋಟಿ ಬಾಚಿಕೊಂಡಿವೆ.
ಜನವರಿ 13ರಂದು ‘ವಾರಿಸು’ ಸಿನಿಮಾ ಭಾರತದಲ್ಲಿ 10 ಕೋಟಿ ರೂಪಾಯಿ ಕಮಾಯಿ ಮಾಡಿದೆ ಎನ್ನಲಾಗಿದೆ. ಈ ಮೂಲಕ ಸಿನಿಮಾದ ಕಲೆಕ್ಷನ್ 57 ಕೋಟಿ ರೂಪಾಯಿ ದಾಟಿದೆ. ‘ತುನಿವು’ ಸಿನಿಮಾ ಶುಕ್ರವಾರ 8.5 ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ. ಈ ಮೂಲಕ ಚಿತ್ರದ ಒಟ್ಟಾರೆ ಕಲೆಕ್ಷನ್ 52 ಕೋಟಿ ರೂಪಾಯಿ ಆಗಿದೆ. ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಲೆಕ್ಕಾಚಾರ ಇನ್ನಷ್ಟೇ ಸಿಗಬೇಕಿದೆ.
ಇಂದು (ಜನವರಿ 14) ಹಾಗೂ ನಾಳೆ (ಜನವರಿ 15) ವೀಕೆಂಡ್. ಜತೆಗೆ ಹಬ್ಬದ ಸಂಭ್ರಮ. ಈ ಅವಧಿಯಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಮಂದಿರಕ್ಕೆ ಲಗ್ಗೆ ಇಡುತ್ತಾರೆ. ಹೀಗಾಗಿ, ಎರಡೂ ಚಿತ್ರಗಳಿಗೆ ಈ ದಿನ ಅಗ್ನಿಪರೀಕ್ಷೆಯ ದಿನವಾಗಿದೆ.
ಇದನ್ನೂ ಓದಿ: Thalapathy Vijay: ‘ವಾರಿಸು’ ಸಿನಿಮಾದಲ್ಲಿ ನಟಿಸಲು 150 ಕೋಟಿ ರೂಪಾಯಿ ಸಂಭಾವನೆ ಪಡೆದ ದಳಪತಿ ವಿಜಯ್
ದಳಪತಿ ವಿಜಯ್ ಹಾಗೂ ಅಜಿತ್ ಅಭಿಮಾನಿಗಳ ಮಧ್ಯೆ ಫೈಟ್ ಇದ್ದೇ ಇದೆ. ಹೀಗಾಗಿ, ‘ವಾರಿಸು’ ಹಾಗೂ ‘ತುನಿವು’ ಚಿತ್ರದ ಕಲೆಕ್ಷನ್ ಮೇಲೆ ಅಭಿಮಾನಿಗಳು ಕಣ್ಣಿಟ್ಟಿರುತ್ತಾರೆ. ಹೀಗಾಗಿ, ಈ ಎರಡು ಚಿತ್ರಗಳಲ್ಲಿ ಯಾವ ಸಿನಿಮಾ ಹೆಚ್ಚು ಗಳಿಕೆ ಮಾಡಲಿದೆ ಎಂಬ ಕುತೂಹಲದಲ್ಲಿ ಅಭಿಮಾನಿಗಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ