Akhil Akkineni: ‘ನಮಗೆ ಒಳ್ಳೆಯ ಸಿನಿಮಾ ಮಾಡಲು ಆಗಲಿಲ್ಲ’: ಸೋತ ಬಳಿಕ ಅಖಿಲ್​ ಪ್ರಾಮಾಣಿಕ ಪತ್ರ

Agent Movie: ತೆಲುಗು ಚಿತ್ರರಂಗದಲ್ಲಿ ಮಾಸ್​ ಸಿನಿಮಾಗಳು ಗೆಲ್ಲುತ್ತವೆ ಎಂಬ ಮಾತು ಇದೆ. ಆದರೆ ಈಗ ಪ್ರೇಕ್ಷಕರ ಅಭಿರುಚಿ ಬದಲಾದಂತಿದೆ. ‘ಏಜೆಂಟ್​’ ರೀತಿ ಚಿತ್ರಗಳು ಸೋಲುತ್ತಿವೆ.

Akhil Akkineni: ‘ನಮಗೆ ಒಳ್ಳೆಯ ಸಿನಿಮಾ ಮಾಡಲು ಆಗಲಿಲ್ಲ’: ಸೋತ ಬಳಿಕ ಅಖಿಲ್​ ಪ್ರಾಮಾಣಿಕ ಪತ್ರ
ಅಖಿಲ್ ಅಕ್ಕಿನೇನಿ
Follow us
ಮದನ್​ ಕುಮಾರ್​
|

Updated on: May 15, 2023 | 8:52 PM

ನಟಿ ಅಖಿಲ್​ ಅಕ್ಕಿನೇನಿ (Akhil Akkineni) ಅವರು ಭಾರಿ ಗೆಲುವಿನ ನಿರೀಕ್ಷೆಯಲ್ಲಿ ಇದ್ದರು. ಆ ನಿರೀಕ್ಷೆಯಲ್ಲೇ ‘ಏಜೆಂಟ್​’ (Agent) ಸಿನಿಮಾವನ್ನು ಬಿಡುಗಡೆ ಮಾಡಲಾಗಿತ್ತು. ಆದರೆ ಈ ಸಿನಿಮಾ ಹೀನಾಯವಾಗಿ ಸೋತಿದೆ. ಚಿತ್ರ ಸೋತ ಬಳಿಕ ಅಖಿಲ್​ ಅಕ್ಕಿನೇನಿ ಅವರು ಟ್ವಿಟರ್​ ಮೂಲಕ ಅಭಿಮಾನಿಗಳಿಗೆ ಮತ್ತು ಹಿತೈಷಿಗಳಿಗೆ ಬಹಿರಂಗ ಪತ್ರ ಬರೆದಿದ್ದಾರೆ. ತಮ್ಮಿಂದ ಒಳ್ಳೆಯ ಸಿನಿಮಾ ಮಾಡಲು ಸಾಧ್ಯವಾಗಲಿಲ್ಲ ಎಂದು ಅವರು ಒಪ್ಪಿಕೊಂಡಿದ್ದಾರೆ. ಅಖಿಲ್​ ಅಕ್ಕಿನೇನಿ ಬರೆದ ಬಹಿರಂಗ ಪತ್ರ ವೈರಲ್​ ಆಗಿದೆ. ‘ಏಜೆಂಟ್​’ ಸಿನಿಮಾಗಾಗಿ ಅಖಿಲ್ ಅವರು ಬಹಳಷ್ಟು ಶ್ರಮಪಟ್ಟಿದ್ದರು. ಬಾಡಿ ಬಿಲ್ಡ್​ ಮಾಡಿ ಸಾಹಸ ಮೆರೆದಿದ್ದರು. ಏನೇ ಮಾಡಿದರೂ ಪ್ರೇಕ್ಷಕರಿಗೆ ಈ ಚಿತ್ರ ಇಷ್ಟ ಆಗಲಿಲ್ಲ. ಅಖಿಲ್​ ಬರೆದ ಬಹಿರಂಗ ಪತ್ರಕ್ಕೆ ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

ಅಖಿಲ್​ ಅಕ್ಕಿನೇನಿ ಬರೆದ ಪತ್ರದಲ್ಲಿ ಏನಿದೆ?

‘ಈ ಸಿನಿಮಾ ಮಾಡಲು ಕಾರಣವಾದ ಎಲ್ಲಿರಿಗೂ ಧನ್ಯವಾದಗಳು. ತುಂಬ ಶ್ರಮವಹಿಸಿದರೂ ಕೂಡ ನಾವು ಅಂದುಕೊಂಡ ರೀತಿಯಲ್ಲಿ ಈ ಸಿನಿಮಾ ಮೂಡಿಬರಲಿಲ್ಲ. ನಿಮಗೆ ನಾವು ಒಳ್ಳೆಯ ಸಿನಿಮಾ ನೀಡಲು ಸಾಧ್ಯವಾಗಲಿಲ್ಲ. ನನಗೆ ದೊಡ್ಡ ಬೆಂಬಲವಾಗಿದ್ದ ನಿರ್ಮಾಪಕ ಅನಿಲ್​ ಅವರಿಗೆ ವಿಶೇಷ ಧನ್ಯವಾದಗಳು. ನಮ್ಮ ಸಿನಿಮಾದ ಮೇಲೆ ನಂಬಿಕೆ ಇಟ್ಟ ಎಲ್ಲ ವಿತರಕರು ಮತ್ತು ಬೆಂಬಲ ನೀಡಿದ ಮಾಧ್ಯಮದವರಿಗೆ ಧನ್ಯವಾದ’ ಎಂದು ಅಖಿಲ್ ಅಕ್ಕಿನೇನಿ ಪತ್ರ ಬರೆದಿದ್ದಾರೆ.

ತೆಲುಗು ಚಿತ್ರರಂಗದಲ್ಲಿ ಮಾಸ್​ ಸಿನಿಮಾಗಳು ಹೆಚ್ಚು ಸದ್ದು ಮಾಡುತ್ತವೆ ಎಂಬ ಮಾತು ಇದೆ. ಆದರೆ ಈಗ ಪ್ರೇಕ್ಷಕರ ಅಭಿರುಚಿ ಬದಲಾಗಿದೆ. ಬೇರೆ ಬೇರೆ ಭಾಷೆಯ ಸಿನಿಮಾಗಳನ್ನು ನೋಡಿ ಎಂಜಾಯ್​ ಮಾಡಿರುವ ಜನರು ಈಗ ಹೊಸತನದ ಕಥೆಗಳನ್ನು ಬಯಸುತ್ತಿದ್ದಾರೆ. ಅದೇ ಕಾರಣಕ್ಕೋ ಏನೋ ಟಾಲಿವುಡ್​ನ ಕೆಲವು ಸಿನಿಮಾಗಳು ಮುಗ್ಗರಿಸುತ್ತಿವೆ. ಹಳೇ ಮಾದರಿಯಲ್ಲೇ ಸಿನಿಮಾ ಮಾಡಿದ ಹೀರೋಗಳಿಗೆ ಸೋಲು ಉಂಟಾಗುತ್ತಿದೆ. ಅದರಲ್ಲೂ ಅಕ್ಕಿನೇನಿ ಕುಟುಂಬದ ನಟರು ಬ್ಯಾಕ್​ ಟು ಬ್ಯಾಕ್​ ಸೋಲುತ್ತಿದ್ದಾರೆ.

ಇದನ್ನೂ ಓದಿ: ಮಾಜಿ ಗಂಡನ ಕುಟುಂಬದ ಮೇಲೆ ಸಮಂತಾಗೆ ಇನ್ನೂ ಕಡಿಮೆ ಆಗಿಲ್ಲ ಪ್ರೀತಿ; ಇಲ್ಲಿದೆ ಹೊಸ ಸಾಕ್ಷಿ

ಹಿರಿಯ ನಟ ನಾಗಾರ್ಜುನ ಮಾಡಿದ ಚಿತ್ರಗಳು ಜನರಿಗೆ ಮೆಚ್ಚುಗೆ ಆಗುತ್ತಿಲ್ಲ. ಅವರ ಪುತ್ರರಾದ ನಾಗ ಚೈತನ್ಯ ಮತ್ತು ಅಖಿಲ್​ ನಟನೆಯ ಸಿನಿಮಾಗಳನ್ನು ಕೂಡ ಪ್ರೇಕ್ಷಕರು ರಿಜೆಕ್ಟ್​ ಮಾಡಿದ್ದಾರೆ. ಇತ್ತೀಚೆಗೆ ತೆರೆಕಂಡ ‘ಕಸ್ಟಡಿ’ ಸಿನಿಮಾದ ಸೋಲಿನ ಬಳಿಕ ಈ ಫ್ಯಾಮಿಲಿಯ ಮೂವರು ಹೀರೋಗಳು ತಮ್ಮ ಭವಿಷ್ಯದ ಬಗ್ಗೆ ಗಂಭೀರವಾಗಿ ಆಲೋಚಿಸುವಂತಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಮನೆಯಲ್ಲಿ ಸಲಗೆನಾ, ಸ್ಟ್ರೀಕ್ಟಾ? ವಿದ್ಯಾರ್ಥಿನಿ ಪ್ರಶ್ನೆಗೆ ಡಿಕೆಶಿ ಉತ್ತರ
ಮನೆಯಲ್ಲಿ ಸಲಗೆನಾ, ಸ್ಟ್ರೀಕ್ಟಾ? ವಿದ್ಯಾರ್ಥಿನಿ ಪ್ರಶ್ನೆಗೆ ಡಿಕೆಶಿ ಉತ್ತರ
ತಮಗೊಂದು ಗ್ಯಾರಂಟಿ ನೀಡುವಂತೆ ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಡಿಸಿಎಂ ಉತ್ತರ
ತಮಗೊಂದು ಗ್ಯಾರಂಟಿ ನೀಡುವಂತೆ ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಡಿಸಿಎಂ ಉತ್ತರ
ರಸ್ತೆ ದಾಟುವಾಗ ಬಸ್ ಡಿಕ್ಕಿ ಹೊಡೆದು ಕಾಲೇಜು ಯುವತಿ ಭೀಕರ ಸಾವು
ರಸ್ತೆ ದಾಟುವಾಗ ಬಸ್ ಡಿಕ್ಕಿ ಹೊಡೆದು ಕಾಲೇಜು ಯುವತಿ ಭೀಕರ ಸಾವು
ಬೃಹತ್ ಹೆಬ್ಬಾವನ್ನು ಮೈಗೆಲ್ಲ ಸುತ್ತಿಕೊಂಡ ವಿಡಿಯೋ ನೋಡಿದರೆ ಶಾಕ್ ಗ್ಯಾರಂಟಿ
ಬೃಹತ್ ಹೆಬ್ಬಾವನ್ನು ಮೈಗೆಲ್ಲ ಸುತ್ತಿಕೊಂಡ ವಿಡಿಯೋ ನೋಡಿದರೆ ಶಾಕ್ ಗ್ಯಾರಂಟಿ
ಮಕ್ಕಳು ಕ್ರೀಡಾಪಟುಗಳಾಗಿದ್ದರೆ ಕೃಪಾಂಕ ನೀಡುವ ಬಗ್ಗೆ ಪರಾಮರ್ಶೆ: ಸಿಎಂ
ಮಕ್ಕಳು ಕ್ರೀಡಾಪಟುಗಳಾಗಿದ್ದರೆ ಕೃಪಾಂಕ ನೀಡುವ ಬಗ್ಗೆ ಪರಾಮರ್ಶೆ: ಸಿಎಂ
ಯತೀಂದ್ರ ಸಿದ್ದರಾಮಯ್ಯಗೆ ಸಂವಿಧಾನ ಕೈಯಲ್ಲಿ ಹಿಡಿಯುವ ನೈತಿಕತೆ ಇಲ್ಲ: ಅಶೋಕ
ಯತೀಂದ್ರ ಸಿದ್ದರಾಮಯ್ಯಗೆ ಸಂವಿಧಾನ ಕೈಯಲ್ಲಿ ಹಿಡಿಯುವ ನೈತಿಕತೆ ಇಲ್ಲ: ಅಶೋಕ
ಮಹಾರಾಷ್ಟ್ರದ ಪನ್ವೇಲ್​ನಲ್ಲಿ ಇಸ್ಕಾನ್​ನಿಂದ ಮೋದಿಗೆ ವಿಶೇಷ ಸ್ವಾಗತ
ಮಹಾರಾಷ್ಟ್ರದ ಪನ್ವೇಲ್​ನಲ್ಲಿ ಇಸ್ಕಾನ್​ನಿಂದ ಮೋದಿಗೆ ವಿಶೇಷ ಸ್ವಾಗತ
ಬಸ್​​ನಿಂದ ಎಳೆದೊಯ್ದು ಕಂಡಕ್ಟರ್ ಮೇಲೆ ಮಾರಣಾಂತಿಕ ಹಲ್ಲೆ
ಬಸ್​​ನಿಂದ ಎಳೆದೊಯ್ದು ಕಂಡಕ್ಟರ್ ಮೇಲೆ ಮಾರಣಾಂತಿಕ ಹಲ್ಲೆ
ಲೈಸೆನ್ಸ್ ಹಂಚಿಕೆಯಲ್ಲಿ ಅವ್ಯಾಹತ ಭ್ರಷ್ಟಾಚಾರ: ಗುರುಸ್ವಾಮಿ, ಸಂಘದ ಅಧ್ಯಕ್ಷ
ಲೈಸೆನ್ಸ್ ಹಂಚಿಕೆಯಲ್ಲಿ ಅವ್ಯಾಹತ ಭ್ರಷ್ಟಾಚಾರ: ಗುರುಸ್ವಾಮಿ, ಸಂಘದ ಅಧ್ಯಕ್ಷ
ಕೊವಿಡ್ ಹಗರಣದ ತನಿಖೆಗೆ SIT ರಚನೆ: ಡಾ ಸಿಎನ್ ಮಂಜುನಾಥ್​ಗೂ ಸಂಕಷ್ಟ?
ಕೊವಿಡ್ ಹಗರಣದ ತನಿಖೆಗೆ SIT ರಚನೆ: ಡಾ ಸಿಎನ್ ಮಂಜುನಾಥ್​ಗೂ ಸಂಕಷ್ಟ?