ನಟ ಅಕ್ಷಯ್ ಕುಮಾರ್ (Akshay Kumar) ಅವರು ಸಾಲು ಸಾಲು ಸಿನಿಮಾ ಒಪ್ಪಿಕೊಂಡು ನಟಿಸುತ್ತಿದ್ದಾರೆ. ಅವರ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇರುತ್ತದೆ. ಈಗ ಅವರ ಬರ್ತ್ಡೇ ದಿನ (ಸೆಪ್ಟೆಂಬರ್ 9) ‘ವೆಲ್ಕಮ್ 3’ ಸಿನಿಮಾ ಘೋಷಣೆ ಮಾಡಿದ್ದಾರೆ. ಈ ಚಿತ್ರದಲ್ಲಿ ಸ್ಟಾರ್ಸ್ ದಂಡಿದೆ. ಈ ಚಿತ್ರಕ್ಕೆ ‘ವೆಲ್ಕಮ್ ಟು ದಿ ಜಂಗಲ್’ ಎಂದು ಶೀರ್ಷಿಕೆ ಇಡಲಾಗಿದೆ. ಟೈಟಲ್ ಟೀಸರ್ ರಿಲೀಸ್ ಆಗಿದ್ದು ಗಮನ ಸೆಳೆದಿದೆ. ಈ ಸಿನಿಮಾ ಕ್ರಿಸ್ಮಸ್ ಪ್ರಯುಕ್ತ 2024ರ ಡಿಸೆಂಬರ್ 20ರಂದು ರಿಲೀಸ್ ಆಗಲಿದೆ.
‘ವೆಲ್ಕಮ್’ ಹಾಗೂ ‘ವೆಲ್ಕಮ್ 2’ ಸಿನಿಮಾ ಯಶಸ್ಸಿನ ಬಳಿಕ ‘ವೆಲ್ಕಮ್ 3’ ಸಿನಿಮಾ ತೆರೆಗೆ ತರಲು ಸಿದ್ಧತೆ ನಡೆದಿದೆ. ಈ ಚಿತ್ರದ ಪಾತ್ರವರ್ಗ ಹಿರಿದಾಗಿದೆ. ಅಕ್ಷಯ್ ಕುಮಾರ್, ಸಂಜಯ್ ದತ್, ಅರ್ಷದ್ ವಾರ್ಸಿ, ದಿಶಾ ಪಟಾಣಿ, ರವೀನಾ ಟಂಡನ್, ಲಾರಾ ದತ್ತ, ಪರೇಶ್ ರಾವಲ್ ಸೇರಿ ಅನೇಕರು ಸಿನಿಮಾದಲ್ಲಿ ನಟಿಸಿದ್ದಾರೆ.
Khud ko aur aap sab ko ek birthday gift diya hai aaj. If you like it and say thanks, I’d say Welcome(3) 😬#WelcomeToTheJunglehttps://t.co/gzy8l325fZ
In cinemas, Christmas – 20th December, 2024. #Welcome3 pic.twitter.com/eqWePNPrtJ
— Akshay Kumar (@akshaykumar) September 9, 2023
Thank you for all the love & wishes ❤
Now, if you liked the Apple Kela, sorry A cappella here’s another welcome gift for you…
Welcome…Welcome…Welcome
#WecomeToTheJungle #Welcome3https://t.co/gzy8l31xqrIn cinemas, Christmas – 20th December, 2024. #Welcome3 pic.twitter.com/dGUhd4W28z
— Akshay Kumar (@akshaykumar) September 9, 2023
ಇದನ್ನೂ ಓದಿ: ಆಮಿರ್ ಖಾನ್-ಅಕ್ಷಯ್ ಕುಮಾರ್ ಒಟ್ಟಾಗಿ ತೆರೆ ಹಂಚಿಕೊಳ್ಳದಿರಲು ಈ ಘಟನೆಯೇ ಕಾರಣ..
‘ವೆಲ್ಕಮ್ 3’ ಸಿನಿಮಾ ಬಗ್ಗೆ
‘ವೆಲ್ಕಮ್ 3’ ಸಿನಿಮಾಗೆ ಅಹ್ಮದ್ ಖಾನ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಪಾತ್ರವರ್ಗ ಎಲ್ಲರ ಗಮನ ಸೆಳೆಯುತ್ತಿದೆ. ಜಿಯೋ ಸ್ಟುಡಿಯೋ ಹಾಗೂ ಬೇಸ್ ಇಂಡಸ್ಟ್ರೀಸ್ ಗ್ರೂಪ್ ‘ವೆಲ್ಕಮ್ 3’ ಚಿತ್ರವನ್ನು ಪ್ರೆಸೆಂಟ್ ಮಾಡುತ್ತಿದೆ. ಜ್ಯೋತಿ ದೇಶಪಾಂಡೆ, ಫಿರೋಜ್ ನಾಡಿಯಾದ್ವಾಲಾ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸದ್ಯ ಪ್ರೀ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ