Merry Christmas: ‘ಮೇರಿ ಕ್ರಿಸ್ಮಸ್’ ಒಂದು ಸಿನಿಮಾ ಅಲ್ಲ, ಎರಡು; ಅಚ್ಚರಿ ಮೂಡಿಸಿದ ನಿರ್ದೇಶಕ ಶ್ರೀರಾಮ್ ರಾಘವನ್
Katrina Kaif: ‘ಮೇರಿ ಕ್ರಿಸ್ಮಸ್’ ಚಿತ್ರವನ್ನು ತಮಿಳು ಮತ್ತು ಹಿಂದಿಯಲ್ಲಿ ನಿರ್ಮಾಣ ಮಾಡಲಾಗಿದೆ. ಹಾಗೆಂದ ಮಾತ್ರಕ್ಕೆ ಇದು ಬರೀ ಡಬ್ಬಿಂಗ್ ಚಿತ್ರ ಅಲ್ಲ ಎಂದು ನಿರ್ದೇಶಕರು ಹೇಳಿದ್ದಾರೆ.
ದಕ್ಷಿಣ ಭಾರತದ ಖ್ಯಾತ ನಟ ವಿಜಯ್ ಸೇತುಪತಿ (Vijay Sethupathi) ಅವರು ಕತ್ರಿನಾ ಕೈಫ್ ಜೊತೆ ನಟಿಸಿರುವ ‘ಮೇರಿ ಕ್ರಿಸ್ಮಸ್’ (Merry Christmas) ಸಿನಿಮಾ ಬಗ್ಗೆ ಒಂದು ಹೊಸ ಅಪ್ಡೇಟ್ ಸಿಕ್ಕಿದೆ. ಇದನ್ನು ಒಂದು ಸಿನಿಮಾ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಇದು ಒಂದು ಸಿನಿಮಾ ಅಲ್ಲ. ಬದಲಿಗೆ ಎರಡು ಸಿನಿಮಾ ಎಂಬ ಮಾಹಿತಿ ಬಹಿರಂಗ ಆಗಿದೆ. ಹಾಗಂತ ಇದು ಗಾಸಿಪ್ ಅಲ್ಲ. ಸ್ವತಃ ನಿರ್ದೇಶಕ ಶ್ರೀರಾಮ್ ರಾಘವನ್ (Sriram Raghavan) ಅವರು ಈ ವಿಚಾರ ತಿಳಿಸಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ. ಇದು ಎರಡು ಸಿನಿಮಾ ಹೇಗೆ ಎಂಬುದನ್ನು ಕೂಡ ವಿವರಿಸಿದ್ದಾರೆ.
ವಿಜಯ್ ಸೇತುಪತಿ ಅವರು ತಮಿಳು ಚಿತ್ರರಂಗದಲ್ಲಿ ಫೇಮಸ್. ಅದೇ ರೀತಿ ಕತ್ರಿನಾ ಕೈಫ್ ಅವರು ಬಾಲಿವುಡ್ನಲ್ಲಿ ಫೇಮಸ್. ಆ ಕಾರಣದಿಂದ ‘ಮೇರಿ ಕ್ರಿಸ್ಮಸ್’ ಸಿನಿಮಾವನ್ನು ತಮಿಳು ಮತ್ತು ಹಿಂದಿಯಲ್ಲಿ ನಿರ್ಮಾಣ ಮಾಡಲಾಗಿದೆ. ಹಾಗೆಂದ ಮಾತ್ರಕ್ಕೆ ಇದು ಬರೀ ಡಬ್ಬಿಂಗ್ ಚಿತ್ರ ಅಲ್ಲ. ತಮಿಳಿನಲ್ಲಿ ಮತ್ತು ಹಿಂದಿಯಲ್ಲಿ ಬೇರೆ ಬೇರೆ ವರ್ಷನ್ ಇರಲಿದೆ ಎಂದು ನಿರ್ದೇಶಕರು ಹೇಳಿದ್ದಾರೆ.
ಇದನ್ನೂ ಓದಿ: Vijay Sethupathi: ಶಾರುಖ್ ಖಾನ್ ಎದುರು ವಿಲನ್ ಆಗಿ ನಟಿಸಿದ ವಿಜಯ್ ಸೇತುಪತಿಗೆ ಸಿಕ್ಕ ಸಂಬಳ ಎಷ್ಟು?
‘ಇದನ್ನು ಎರಡು ವರ್ಷನ್ ಮಾಡುವುದು ಒಳ್ಳೆಯದು ಅಂತ ನಮಗೆ ಅನಿಸಿತು. ಎರಡರಲ್ಲೂ ಶೇಕಡ 95ರಷ್ಟು ಸೇಮ್ ಇರಲಿದೆ. ಭಾಷೆಯಲ್ಲಿ ಬದಲಾವಣೆ ಇರಲಿದೆ. ಹಿಂದಿ ಮತ್ತು ತಮಿಳಿನಲ್ಲಿ ಕೆಲವು ನಟರು ಕೂಡ ಬದಲಾಗಿದ್ದಾರೆ. ಇದೊಂದು ಡಬ್ಬಿಂಗ್ ಸಿನಿಮಾ ಅಂತ ಅನಿಸಬಾರದು ಎಂಬುದು ನಮ್ಮ ಉದ್ದೇಶ’ ಎಂದು ನಿರ್ದೇಶಕ ಶ್ರೀರಾಮ್ ರಾಘವನ್ ಹೇಳಿದ್ದಾರೆ. ಆ ಕಾರಣದಿಂದ ಸಿನಿಪ್ರಿಯರಿಗೆ ನಿರೀಕ್ಷೆ ಹೆಚ್ಚುವಂತಾಗಿದೆ.
ಇದನ್ನೂ ಓದಿ: Mumbaikar: ‘ಜಿಯೋ ಸಿನಿಮಾ’ಒಟಿಟಿಯಲ್ಲಿ ಉಚಿತವಾಗಿ ಲಭ್ಯವಾಗಲಿದೆ ವಿಜಯ್ ಸೇತುಪತಿ ನಟನೆಯ ಹೊಸ ಸಿನಿಮಾ ‘ಮುಂಬೈಕರ್’
ಇದೇ ಮೊದಲ ಬಾರಿಗೆ ಕತ್ರಿನಾ ಕೈಫ್ ಮತ್ತು ವಿಜಯ್ ಸೇತುಪತಿ ಜೊತೆಯಾಗಿ ನಟಿಸಿರುವುದರಿಂದ ಅಭಿಮಾನಿಗಳ ವಲಯದಲ್ಲಿ ಈ ಸಿನಿಮಾ ಮೇಲೆ ಭರವಸೆ ಮೂಡಿದೆ. ಹೆಸರಿಗೆ ತಕ್ಕಂತೆ ಕ್ರಿಸ್ಮಸ್ ಹಬ್ಬಕ್ಕೂ ಕೆಲವೇ ದಿನಗಳ ಮುನ್ನ ಈ ಸಿನಿಮಾ ರಿಲೀಸ್ ಆಗಲಿದೆ. ಡಿಸೆಂಬರ್ 15ರಂದು ಈ ಚಿತ್ರ ರಿಲೀಸ್ ಆಗಲಿದ್ದು, ಅದೇ ಸಮಯಕ್ಕೆ ಸಿದ್ದಾರ್ಥ್ ಮಲ್ಹೋತ್ರಾ ಅಭಿನಯದ ‘ಯೋಧ’ ಚಿತ್ರ ಕೂಡ ಬಿಡುಗಡೆ ಆಗುತ್ತಿರುವುದರಿಂದ ಕ್ಲ್ಯಾಶ್ ಏರ್ಪಡಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.