Sign In

By signing in or creating an account, you agree with Associated Broadcasting Company's Terms & Conditions and Privacy Policy.

Tom Cruise: ಭಾರತದಲ್ಲಿ ದಿನದಿನಕ್ಕೂ ಕುಸಿಯುತ್ತಿದೆ ‘ಮಿಷನ್​ ಇಂಪಾಸಿಬಲ್​ 7’ ಸಿನಿಮಾದ ಬಾಕ್ಸ್​ ಆಫೀಸ್​ ಕಲೆಕ್ಷನ್​

Mission impossible 7 BO Collection: 8 ದಿನಕ್ಕೆ ಭಾರತದಲ್ಲಿ ‘ಮಿಷನ್​ ಇಂಪಾಸಿಬಲ್​ 7’ ಚಿತ್ರದ ಒಟ್ಟು ಕಲೆಕ್ಷನ್​ 76 ಕೋಟಿ ರೂ. ಆಗಿದೆ. ರಿಯಲ್​ ಸ್ಟಂಟ್ಸ್​ ಮೂಲಕ ಟಾಮ್​ ಕ್ರೂಸ್​ ಅವರು ಅಭಿಮಾನಿಗಳಿಗೆ ಮಸ್ತ್​ ಮನರಂಜನೆ ನೀಡಿದ್ದಾರೆ.

Tom Cruise: ಭಾರತದಲ್ಲಿ ದಿನದಿನಕ್ಕೂ ಕುಸಿಯುತ್ತಿದೆ ‘ಮಿಷನ್​ ಇಂಪಾಸಿಬಲ್​ 7’ ಸಿನಿಮಾದ ಬಾಕ್ಸ್​ ಆಫೀಸ್​ ಕಲೆಕ್ಷನ್​
‘ಮಿಷನ್​ ಇಂಪಾಸಿಬಲ್​ 7’ ಸಿನಿಮಾ ಪೋಸ್ಟರ್​
Follow us
ಮದನ್​ ಕುಮಾರ್​
|

Updated on: Jul 20, 2023 | 12:23 PM

ನಟ ಟಾಮ್​ ಕ್ರೂಸ್​ (Tom Cruise) ಅವರಿಗೆ ವಿಶ್ವಾದ್ಯಂತ ಅಭಿಮಾನಿಗಳು ಇದ್ದಾರೆ. ಅವರ ಸಿನಿಮಾಗಳು ಭಾರತದಲ್ಲೂ ಭರ್ಜರಿ ಕಲೆಕ್ಷನ್​ ಮಾಡಿದ ಉದಾಹರಣೆ ಇದೆ. ಇತ್ತೀಚೆಗೆ ಅವರು ನಟಿಸಿದ ‘ಮಿಷನ್​ ಇಂಪಾಸಿಬಲ್​ ಡೆಡ್​ ರೆಕನಿಂಗ್​ ಪಾರ್ಟ್​ 1’ (ಮಿಷನ್​ ಇಂಪಾಸಿಬಲ್​ 7) ಸಿನಿಮಾ ರಿಲೀಸ್​ ಆಯಿತು. ಈ ಚಿತ್ರವನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಆದರೆ ಈಗ ಸಿನಿಮಾದ ಬಾಕ್ಸ್​ ಆಫೀಸ್​ ಕಲೆಕ್ಷನ್​ (Box Office Collection) ಕುಸಿಯುತ್ತಿದೆ. 8ನೇ ದಿನಕ್ಕೆ ಈ ಸಿನಿಮಾದ ಗಳಿಕೆ 4 ಕೋಟಿ ರೂಪಾಯಿ ಆಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕುಸಿಯುವ ಸಾಧ್ಯತೆ ಇದೆ. ಆ್ಯಕ್ಷನ್​ ಪ್ರಿಯರಿಗೆ ‘ಮಿಷನ್​ ಇಂಪಾಸಿಬಲ್​ 7’ (Mission impossible 7) ಸಿನಿಮಾ ಇಷ್ಟ ಆಗಿದೆ.

ರಿಯಲ್​ ಸ್ಟಂಟ್ಸ್​ ಮಾಡುವ ಮೂಲಕ ನಟ ಟಾಮ್​ ಕ್ರೂಸ್​ ಅವರು ಅಭಿಮಾನಿಗಳಿಗೆ ಮಸ್ತ್​ ಮನರಂಜನೆ ನೀಡುತ್ತಾರೆ. ‘ಮಿಷನ್​ ಇಂಪಾಸಿಬಲ್​ 7’ ಸಿನಿಮಾದಲ್ಲೂ ಅದು ಮುಂದುವರಿದಿದೆ. ಉಸಿರು ಬಿಗಿ ಹಿಡಿದು ನೋಡುವಂತಹ ಆ್ಯಕ್ಷನ್​ ದೃಶ್ಯಗಳು ಈ ಸಿನಿಮಾದಲ್ಲಿ ಇವೆ. ಹಾಗಿದ್ದರೂ ಕೂಡ ಭಾರತದಲ್ಲಿ ಒಂದು ವಾರದ ಬಳಿಕ ಈ ಚಿತ್ರಕ್ಕೆ ಪ್ರೇಕ್ಷಕರ ಸಂಖ್ಯೆ ಕಡಿಮೆ ಆಗುತ್ತಿದೆ. ಮೂಲಗಳ ಪ್ರಕಾರ, ಭಾರತದ ಬಾಕ್ಸ್​ ಆಫೀಸ್​ನಲ್ಲಿ ಈವರೆಗೂ ಈ ಚಿತ್ರ 76.85 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ.

ಇದನ್ನೂ ಓದಿ: ಮಿಷನ್ ಇಂಪಾಸಿಬಲ್ 7 ನೋಡಿದ ನೆಟ್ಟಿಗರು ಏನಂದರು?

ಕ್ರಿಸ್ಟೋಫರ್​ ಮ್ಯಾಕ್ವರೀನ್​ ಅವರು ‘ಮಿಷನ್​ ಇಂಪಾಸಿಬಲ್​ ಡೆಡ್​ ರೆಕನಿಂಗ್​ ಪಾರ್ಟ್​ 1’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಬರುವ ರೈಲಿನ ಆ್ಯಕ್ಷನ್​ ದೃಶ್ಯದ ಕಾನ್ಸೆಪ್ಟ್​ ಅನ್ನು ವಿಡಿಯೋ ಗೇಮ್​ನಿಂದ ಕಾಪಿ ಮಾಡಲಾಗಿದೆ ಎಂಬ ಆರೋಪ ಕೂಡ ಇದೆ. ‘ಪಠಾಣ್​’ ಸಿನಿಮಾದ ದೃಶ್ಯಕ್ಕೂ ಹೋಲಿಕೆ ಇದೆ. ಅದೇನೆ ಇರಲಿ, ಟಾಮ್​ ಕ್ರೂಸ್​ ಅವರ ಅಭಿಮಾನಿಗಳು ಈ ಸಿನಿಮಾವನ್ನು ಇಷ್ಟಪಟ್ಟಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ ಭರ್ಜರಿ ಓಪನಿಂಗ್ ಪಡೆಯಲಿದೆ ಟಾಮ್ ಕ್ರೂಸ್ ಸಿನಿಮಾ: ಕಲೆಕ್ಷನ್ ನಿರೀಕ್ಷೆ ಎಷ್ಟು?

ಜುಲೈ 21ರಂದು ಕ್ರಿಸ್ಟೋಫರ್​ ನೋಲನ್​ ನಿರ್ದೇಶನ ಮಾಡಿರುವ ‘ಆಪನ್​ಹೈಮರ್​’ ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾ ಕೂಡ ದೊಡ್ಡ ಮಟ್ಟದಲ್ಲಿ ತೆರೆಕಾಣುತ್ತಿದೆ. ಈಗಾಗಲೇ ಅನೇಕ ಶೋಗಳ ಬುಕಿಂಗ್​ ಫುಲ್​ ಆಗಿದೆ. ಹಾಗಾಗಿ ‘ಆಪನ್​ಹೈಮರ್​’ ಅಬ್ಬರದ ಎದುರು ‘ಮಿಷನ್​ ಇಂಪಾಸಿಬಲ್​ ಡೆಡ್​ ರೆಕನಿಂಗ್​ ಪಾರ್ಟ್​ 1’ ಚಿತ್ರದ ಹವಾ ಕಡಿಮೆ ಆಗುವ ಸಾಧ್ಯತೆ ದಟ್ಟವಾಗಿದೆ. ಅಲ್ಲದೇ, ರಯಾನ್​ ಗಾಸ್ಲಿಂಗ್​ ನಟನೆಯ ‘ಬಾರ್ಬಿ’ ಚಿತ್ರ ಕೂಡ ಜುಲೈ 21ರಂದು ಬಿಡುಗಡೆ ಆಗಲಿದ್ದು, ಪೈಪೋಟಿ ಹೆಚ್ಚಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಮಳೆಗಾಲದಲ್ಲಿ ಬೆಂಗಳೂರು ಹೇಗಿರಲಿದೆ ಅನ್ನೋದಿಕ್ಕೆ ಇದು ಟೀಸರ್ ಮಾತ್ರ!
ಮಳೆಗಾಲದಲ್ಲಿ ಬೆಂಗಳೂರು ಹೇಗಿರಲಿದೆ ಅನ್ನೋದಿಕ್ಕೆ ಇದು ಟೀಸರ್ ಮಾತ್ರ!
ಥಾಯ್ ಪ್ರಧಾನಿಯಿಂದ ಮೋದಿಗೆ ದಿ ವರ್ಲ್ಡ್ ಟಿಪಿಟಕ ಗ್ರಂಥ ಉಡುಗೊರೆ
ಥಾಯ್ ಪ್ರಧಾನಿಯಿಂದ ಮೋದಿಗೆ ದಿ ವರ್ಲ್ಡ್ ಟಿಪಿಟಕ ಗ್ರಂಥ ಉಡುಗೊರೆ
ವಕ್ಫ್ ತಿದ್ದುಪಡಿ ಬಿಲ್ ಬಗ್ಗೆ ನನ್ನ ಪಕ್ಷದ ಹಿರಿಯರು ಮಾತಾಡುತ್ತಾರೆ: ಸಚಿವೆ
ವಕ್ಫ್ ತಿದ್ದುಪಡಿ ಬಿಲ್ ಬಗ್ಗೆ ನನ್ನ ಪಕ್ಷದ ಹಿರಿಯರು ಮಾತಾಡುತ್ತಾರೆ: ಸಚಿವೆ
ಯಡಿಯೂರಪ್ಪ ಜೊತೆ ಬಸ್ಸಲ್ಲಿ ಹೋಗಲು ಬಿಜೆಪಿ ನಾಯಕರಲ್ಲಿ ಪೈಪೋಟಿ
ಯಡಿಯೂರಪ್ಪ ಜೊತೆ ಬಸ್ಸಲ್ಲಿ ಹೋಗಲು ಬಿಜೆಪಿ ನಾಯಕರಲ್ಲಿ ಪೈಪೋಟಿ
ಬ್ಯಾಂಕಾಕ್​ನಲ್ಲಿ ಥಾಯ್ ರಾಮಾಯಣ ವೀಕ್ಷಿಸಿದ ಪ್ರಧಾನಿ ಮೋದಿ
ಬ್ಯಾಂಕಾಕ್​ನಲ್ಲಿ ಥಾಯ್ ರಾಮಾಯಣ ವೀಕ್ಷಿಸಿದ ಪ್ರಧಾನಿ ಮೋದಿ
ವಕ್ಫ್ ಬಿಲ್​​ ಬಗ್ಗೆ ಮಾತಾಡುವ ರಾಜ್ಯ ಬಿಜೆಪಿಗೆ ನಾಚಿಕೆಯಾಗಬೇಕು: ಮುತಾಲಿಕ್
ವಕ್ಫ್ ಬಿಲ್​​ ಬಗ್ಗೆ ಮಾತಾಡುವ ರಾಜ್ಯ ಬಿಜೆಪಿಗೆ ನಾಚಿಕೆಯಾಗಬೇಕು: ಮುತಾಲಿಕ್
RCB vs GT: ನಾನು ಮ್ಯಾಚ್ ವಿನ್ನರ್ ಸಿರಾಜ್ ಅನ್ನು ಮಾತ್ರ ನಂಬುತ್ತೇನೆ..!
RCB vs GT: ನಾನು ಮ್ಯಾಚ್ ವಿನ್ನರ್ ಸಿರಾಜ್ ಅನ್ನು ಮಾತ್ರ ನಂಬುತ್ತೇನೆ..!
ಇಳಿವಯಸ್ಸಿನಲ್ಲೂ ಯಡಿಯೂರಪ್ಪ ಪಕ್ಷದ ಅತ್ಯಂತ ಪ್ರಭಾವಿ ನಾಯಕ
ಇಳಿವಯಸ್ಸಿನಲ್ಲೂ ಯಡಿಯೂರಪ್ಪ ಪಕ್ಷದ ಅತ್ಯಂತ ಪ್ರಭಾವಿ ನಾಯಕ
ಸಿದ್ದಗಂಗಾ ಮಠದ ಜೊತೆ ನನ್ನ ಕುಟಂಬಕ್ಕೆ ಅವಿನಾಭಾವ ಸಂಬಂಧ: ಪರಮೇಶ್ವರ್
ಸಿದ್ದಗಂಗಾ ಮಠದ ಜೊತೆ ನನ್ನ ಕುಟಂಬಕ್ಕೆ ಅವಿನಾಭಾವ ಸಂಬಂಧ: ಪರಮೇಶ್ವರ್
ಗುಜರಾತ್​ನಲ್ಲಿ ಐಎಎಫ್​ನ ಜಾಗ್ವಾರ್ ಯುದ್ಧ ವಿಮಾನ ಪತನ, ಪೈಲಟ್ ಸಾವು
ಗುಜರಾತ್​ನಲ್ಲಿ ಐಎಎಫ್​ನ ಜಾಗ್ವಾರ್ ಯುದ್ಧ ವಿಮಾನ ಪತನ, ಪೈಲಟ್ ಸಾವು