ಭಾರತದಲ್ಲಿ ಭರ್ಜರಿ ಓಪನಿಂಗ್ ಪಡೆಯಲಿದೆ ಟಾಮ್ ಕ್ರೂಸ್ ಸಿನಿಮಾ: ಕಲೆಕ್ಷನ್ ನಿರೀಕ್ಷೆ ಎಷ್ಟು?

Tom Cruise: ಟಾಮ್ ಕ್ರೂಸ್ ನಟನೆಯ ಮಿಷನ್ ಇಂಪಾಸಿಬಲ್ 7 ನಾಳೆ (ಜುಲೈ 12) ಬಿಡುಗಡೆ ಆಗುತ್ತಿದ್ದು, ಭಾರತದಲ್ಲಿ ದೊಡ್ಡ ಸಂಖ್ಯೆಯಲ್ಲಿ ತೆರೆಗೆ ಬರುತ್ತಿದೆ. ಕಲೆಕ್ಷನ್ ಲೆಕ್ಕಾಚಾರವೂ ಜೋರಾಗಿದೆ.

ಭಾರತದಲ್ಲಿ ಭರ್ಜರಿ ಓಪನಿಂಗ್ ಪಡೆಯಲಿದೆ ಟಾಮ್ ಕ್ರೂಸ್ ಸಿನಿಮಾ: ಕಲೆಕ್ಷನ್ ನಿರೀಕ್ಷೆ ಎಷ್ಟು?
ಮಿಷನ್ ಇಂಪಾಸಿಬಲ್
Follow us
ಮಂಜುನಾಥ ಸಿ.
|

Updated on:Jul 11, 2023 | 6:04 PM

ಕೋವಿಡ್ (COVID) ಬಳಿಕ ಭಾರತೀಯ ಸಿನಿಮಾ ಮಾರುಕಟ್ಟೆ (Cinema Market) ಅಚಾನಕ್ ಭೂಮ್ ಆಗಿದೆ. ಒಂದೆಡೆ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು (Theater) ನೆಲಸಮ ಆಗುತ್ತಿವೆ ಎಂಬ ಕೂಗು ಕೇಳಿಬರುತ್ತಿವೆ ಇದರ ಬೆನ್ನಲ್ಲೆ ಸಿನಿಮಾಗಳು ಒಂದೆರಡು ದಿನಗಳಲ್ಲಿಯೂ ನೂರಾರು ಕೋಟಿ ಗಳಿಕೆಯನ್ನೂ ಮಾಡುತ್ತಿವೆ. ಭಾರತದ ಸಿನಿಮಾ ಮಾರುಕಟ್ಟೆಯ ಶಕ್ತಿ ವಿಶ್ವವನ್ನೆ ಸೆಳೆದಿದ್ದು ಹಾಲಿವುಡ್ (Hollywood) ಅಂತೂ ಭಾರತೀಯ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡೆ ಸಿನಿಮಾ ನಿರ್ಮಾಣ ಹಾಗೂ ಪ್ರಚಾರ ಮಾಡಲು ಆರಂಭಿಸಿದೆ. ಅದಕ್ಕೆ ತಕ್ಕಂತೆ ಹಾಲಿವುಡ್​ ಸಿನಿಮಾಗಳು ಇತ್ತೀಚೆಗೆ ಭಾರತದಲ್ಲಿ ಬಹಳ ಒಳ್ಳೆಯ ಕಲೆಕ್ಷನ್ ಮಾಡುತ್ತಿವೆ. ಇದೀಗ ಮತ್ತೊಂದು ಬಹುನಿರೀಕ್ಷಿತ ಹಾಲಿವುಡ್ ಸಿನಿಮಾ ಭಾರತದಲ್ಲಿ ಬಿಡುಗಡೆಗೆ ತಯಾರಾಗಿದೆ. ಅದುವೇ ‘ಮಿಷನ್ ಇಂಪಾಸಿಬಲ್ 7‘.

ಮಿಷನ್ ಇಂಪಾಸಿಬಲ್ 7 ಅಥವಾ ಮಿಷನ್ ಇಂಪಾಸಿಬಲ್ ಡೆಡ್ ರಕೂನ್ ಪಾರ್ಟ್ 1 ಸಿನಿಮಾ ಜುಲೈ 12 ರಂದು ವಿಶ್ವದ ಹಲವು ರಾಷ್ಟ್ರಗಳಲ್ಲಿ ಬಿಡುಗಡೆ ಆಗಲಿದ್ದು ಅಂತೆಯೇ ಭಾರತದಲ್ಲಿಯೂ ಪ್ರದರ್ಶನ ಆರಂಭಿಸಲಿದೆ. ಭಾರತದ ಪ್ರಮುಖ ಮೆಟ್ರೋ ಸಿಟಿಗಳನ್ನು ಸೇರಿದಂತೆ ಹಲವು ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿಯೂ ಮಿಷನ್ ಇಂಪಾಸಿಬಲ್ 7 ಸಿನಿಮಾವನ್ನು ಬಿಡುಗಡೆ ಮಾಡಲಾಗುತ್ತಿದೆ. ಬುಧವಾರ ಬಿಡುಗಡೆ ಆಗುತ್ತಿರುವ ಈ ಸಿನಿಮಾ ಮೊದಲ ಐದು ದಿನಗಳಲ್ಲಿ ಭಾರತದಲ್ಲಿ ಮಾತ್ರವೇ ಸುಮಾರು 120 ಕೋಟಿಗೂ ಹೆಚ್ಚು ಮೊತ್ತವನ್ನು ಕಲೆ ಹಾಕುವ ನಿರೀಕ್ಷೆ ಇದೆ.

ಮಿಷನ್ ಇಂಪಾಸಿಬಲ್ 7 ಸಿನಿಮಾವು ಭಾರತದಲ್ಲಿ ಸುಮಾರು 2500 ಸ್ಕ್ರೀನ್​ಗಳಲ್ಲಿ ತೆರೆಗೆ ಬರುತ್ತಿದೆ. ಬೆಂಗಳೂರು ಸೇರಿದಂತೆ ಹಲವ ಮೆಟ್ರೊಪಾಲಟಿನ್ ನಗರಗಳಲ್ಲಿ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಜೋರಾಗಿದೆ. ಬೆಂಗಳೂರಿನ ಹಲವು ಮಲ್ಟಿಪ್ಲೆಕ್ಸ್​ಗಳಲ್ಲಿ ಬೆಳಿಗ್ಗೆ 7, 8 ಗಂಟೆಗೆ ಶೋಗಳನ್ನು ಪ್ರಾರಂಭಿಸಲಾಗುತ್ತಿದ್ದು, ಹಲವು ಶೋಗಳು ಈಗಾಗಲೇ ಬುಕ್ ಆಗಿವೆ. ಶನಿವಾರ ಹಾಗೂ ಭಾನುವಾರವಂತೂ ಭಾರಿ ಸಂಖ್ಯೆಯ ಜನ ಸಿನಿಮಾ ನೋಡುವ ನಿರೀಕ್ಷೆ ಇದೆ.

ಇದನ್ನೂ ಓದಿ:Tom Cruise: ರಿಲೀಸ್​ಗೂ ಮುನ್ನವೇ ಲೀಕ್ ಆಯ್ತು ಟಾಮ್​ ಕ್ರೂಸ್ ಹೊಸ ಚಿತ್ರದ ಟ್ರೇಲರ್​; ಸೂಪರ್ ಸ್ಟಾರ್​ಗಳ ಸಿನಿಮಾಕ್ಕೇ ಹೀಗಾದರೆ ಸಾಮಾನ್ಯರ ಕತೆಯೇನು?

ವಿಶ್ವದಾದ್ಯಂತ ಸುಮಾರು 100 ಕ್ಕೂ ಹೆಚ್ಚು ದೇಶಗಳಲ್ಲಿ ಏಕಕಾಲಕ್ಕೆ ಈ ಸಿನಿಮಾ ಬಿಡುಗಡೆ ಆಗುತ್ತಿದ್ದು ಮೊದಲ ವಾರದಲ್ಲಿಯೇ ಸುಮಾರು 6000 ಕೋಟಿಗೂ ಹೆಚ್ಚು ಮೊತ್ತವನ್ನು ಕಲೆ ಹಾಕುವ ನಿರೀಕ್ಷೆ ಇದೆ. ಇದರಲ್ಲಿ ಅಮೆರಿಕ ಒಂದರಲ್ಲಿಯೇ ಸುಮಾರು 1000 ಕೋಟಿಗೂ ಹೆಚ್ಚು ಹಣ ಮೊದಲ ವಾರದಲ್ಲಿಯೇ ಸಿನಿಮಾ ಗಳಿಸಲಿದೆ ಎನ್ನಲಾಗುತ್ತಿದೆ.

ಟಾಮ್ ಕ್ರೂಸ್ ನಟನೆಯ ಮಿಷನ್ ಇಂಪಾಸಿಬಲ್ ಸಿನಿಮಾಕ್ಕೆ ವಿಶ್ವದಾದ್ಯಂತ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಟಾಮ್ ಕ್ರೂಸ್​ರ ನಟನೆ, ಅವರ ಆಕ್ಷನ್​ ದೃಶ್ಯಗಳನ್ನು ನೋಡಲು ಪ್ರೇಕ್ಷಕರು ಕಾತರರಾಗಿದ್ದಾರೆ. ಮಿಷನ್ ಇಂಪಾಸಿಬಲ್ ಸಿನಿಮಾಕ್ಕೆ 2390 ಕೋಟಿ ರೂಪಾಯಿ ಬಜೆಟ್ ಸುರಿಯಲಾಗಿದೆ. ಸಿನಿಮಾದಲ್ಲಿ ಟಾಪ್ ಕ್ರೂಸ್ ಜೊತೆಗೆ ಹ್ಯಾತ್ಲಿ ಆಟ್ವೆಲ್, ವಿಂಗ್ ರಹಾಮಸ್, ಸಿಮೋನ್ ಪೆಗ್, ರೆಬೆಕಾ ಫರ್ಗೂಸನ್ ಇನ್ನಿತರರು ನಟಿಸಿದ್ದಾರೆ. ಸಿನಿಮಾವನ್ನು ಕ್ರಿಸ್ಟೊಫರ್ ಮೆಕ್ವೀರಿ ನಿರ್ದೇಶನ ಮಾಡಿದ್ದು ಇದು ಇವರ ಮೂರನೇ ಮಿಷನ್ ಇಂಪಾಸಿಬಲ್ ಸರಣಿ ಸಿನಿಮಾ. ಈ ಸಿನಿಮಾದ ಪಾರ್ಟ್ 2 ಸಹ ಬರಲಿದ್ದು ಅದನ್ನೂ ಕ್ರಿಸ್ಟೊಫರ್ ಮೆಕ್ವೀರಿ ನಿರ್ದೇಶನ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:43 pm, Tue, 11 July 23

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್