AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಂದೆಂದೂ ನೋಡಿರದ ಆಕ್ಷನ್ ದೃಶ್ಯಗಳು, ಬಂದೇ ಬಿಡ್ತು ಮಿಷನ್ ಇಂಪಾಸಿಬಲ್ 7 ಟ್ರೈಲರ್

Mission Impossible: ಟಾಮ್ ಕ್ರೂಸ್ ನಟನೆಯ ವಿಶ್ವದ ಬಹುನಿರೀಕ್ಷಿತ ಸಿನಿಮಾ ಮಿಷನ್ ಇಂಪಾಸಿಬಲ್ ಡೆಡ್ ರಿಕಾನಿಂಗ್ ಭಾಗ 1ರ ಟ್ರೈಲರ್ ಬಿಡುಗಡೆ ಆಗಿದೆ.

ಹಿಂದೆಂದೂ ನೋಡಿರದ ಆಕ್ಷನ್ ದೃಶ್ಯಗಳು, ಬಂದೇ ಬಿಡ್ತು ಮಿಷನ್ ಇಂಪಾಸಿಬಲ್ 7 ಟ್ರೈಲರ್
ಮಿಷನ್ ಇಂಪಾಸಿಬಲ್
ಮಂಜುನಾಥ ಸಿ.
|

Updated on: May 18, 2023 | 8:37 PM

Share

ಬೆಟ್ಟದ ತುದಿಯಿಂದ ಮೊಟಾರ್ ಸೈಕಲ್ ಜೊತೆಗೆ ಹಾರುವ ನಾಯಕ, ವೇಗವಾಗಿ ಓಡುವ ರೈಲಿನ ಮೇಲೆ ನೈವಿರೇಳುವ ಫೈಟ್, ಬ್ರಿಡ್ಜ್ ಮುರಿದು ನದಿಗೆ ಬೀಳುವ ರೈಲು, ಆ ರೈಲಿನಿಂದ ಆಚೆ ಹಾರುವ ನಾಯಕ. ಆಕಾಶದಲ್ಲಿ ಸಾಲು ಸಾಲು ವಿಮಾನಗಳ ನಡುವೆ ಫೈಟ್, ಸಾಗರದಾಳದಲ್ಲಿ ಬಾಂಬ್​ಗಳನ್ನು ಹಾರಿಸುವ ಸಬ್​ ಮರೀನ್​ಗಳು, ಒಂದೇ ಒಂದು ಮಿಷನ್​ಗಾಗಿ ಜೀವವನ್ನೇ ಪಣಕ್ಕಿಟ್ಟು ಪ್ರತಿಕ್ಷಣವೂ ಸಾವಿನೊಂದಿಗೆ ಸೆಣೆಸಾಡುವ ಗುಂಪು ಇದೆಲ್ಲ ಟಾಮ್ ಕ್ರೂಸ್ (Tom Cruise) ನಟನೆಯ ಮಿಷನ್ ಇಂಪಾಸಿಬಲ್ (Mission Imposible) ಡೆಡ್ ರಿಕಾನಿಂಗ್ ಮೊದಲ ಭಾಗದ ಟ್ರೈಲರ್ ನಲ್ಲಿ ಕಂಡು ಬಂದ ದೃಶ್ಯಗಳು.

ವಿಶ್ವದ ಬಹುನಿರೀಕ್ಷೆಯ ಸಿನಿಮಾಗಳಲ್ಲಿ ಮೊದಲಾಗಿರುವ ಮಿಷನ್ ಇಂಪಾಸಿಬಲ್ ಡೆಡ್ ರಿಕಾನಿಂಗ್ ಮೊದಲ ಭಾಗದ ಟ್ರೈಲರ್ ನಿನ್ನೆಯಷ್ಟೆ ಬಿಡುಗಡೆ ಆಗಿದೆ. ನಿರೀಕ್ಷೆಗೂ ಮೀರಿದ ಆಕ್ಷನ್ ದೃಶ್ಯಗಳು ಮಿಷನ್ ಇಂಪಾಸಿಬಲ್ ಸಿನಿಮಾದಲ್ಲಿ ಇರುವ ಸುಳಿವನ್ನು ಟ್ರೈಲರ್ ನೀಡಿದೆ. ಟಾಮ್ ಕ್ರೂಸ್ ಅಂತೂ ಈ ಹಿಂದಿನ ಸಿನಿಮಾಗಳಲ್ಲಿ ಮಾಡಿದ ಸ್ಟಂಟ್​ಗಳಿಗಿಂತಲೂ ಡೇಂಜರಸ್ ಆದ ಸ್ಟಂಟ್​ಗಳನ್ನು ಈ ಸಿನಿಮಾದಲ್ಲಿ ಮಾಡಿರುವುದು ಕಾಣುತ್ತಿದೆ. ಟ್ರೈಲರ್​ನಲ್ಲಿ ಕೇಳಿಬರುವ ಸಂಭಾಷಣೆ ಪ್ರಕಾರ, ಈ ಬಾರಿ ಇಡೀ ವಿಶ್ವವೇ ಟಾಮ್ ಕ್ರೂಸ್​ ಹಿಂದೆ ಬಿದ್ದಿದೆ. ಆದರೆ ಅವನ ತಂಡ ಅವನ ಸಹಾಯಕ್ಕೆ ಇದೆ.

2:21 ನಿಮಿಷದ ಟ್ರೈಲರ್ ತುಂಬ ಆಕ್ಷನ್ ಹಾಗೂ ಚೇಸ್ ದೃಶ್ಯಗಳು ಭರಪೂರವಾಗಿ ತುಂಬಿಕೊಂಡಿವೆ. ಅಲ್ಲಲ್ಲಿ ಪಾತ್ರಗಳ ಪರಿಚಯಕ್ಕೂ ಸ್ಪೇಸ್ ನೀಡಲಾಗಿದೆ. ಕೆಲವು ಪಂಚಿಂಗ್ ಸಂಭಾಷಣೆಗಳು ಸಹ ಕೇಳುತ್ತವೆ. ಒಂದಷ್ಟೆ ರೊಮ್ಯಾಂಟಿಕ್ ದೃಶ್ಯವೂ ಕಂಡು ಮರೆಯಾಗುತ್ತದೆ. ಸಿನಿಮಾ ರೀತಿಯಲ್ಲಿಯೇ ಸೀಟಿನ ತುದಿಗೆ ಕೂರಿಸುವಂಥಹಾ ಟ್ರೈಲರ್ ಪ್ಯಾರಾಮೌಂಟ್ ಪಿಕ್ಚರ್ಸ್ ಯೂಟ್ಯೂಬ್ ಚಾನೆಲ್​ನಲ್ಲಿ ಬಿಡುಗಡೆ ಆಗಿದ್ದು, ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಮಂದಿ ಟ್ರೈಲರ್ ಅನ್ನು ವೀಕ್ಷಿಸಿದ್ದಾರೆ.

ಇದನ್ನೂ ಓದಿ:Tom Cruise: ರಿಲೀಸ್​ಗೂ ಮುನ್ನವೇ ಲೀಕ್ ಆಯ್ತು ಟಾಮ್​ ಕ್ರೂಸ್ ಹೊಸ ಚಿತ್ರದ ಟ್ರೇಲರ್​; ಸೂಪರ್ ಸ್ಟಾರ್​ಗಳ ಸಿನಿಮಾಕ್ಕೇ ಹೀಗಾದರೆ ಸಾಮಾನ್ಯರ ಕತೆಯೇನು?

1996 ರಲ್ಲಿ ಮೊದಲ ಮಿಷನ್ ಇಂಪಾಸಿಬಲ್ ಸಿನಿಮಾ ಬಿಡುಗಡೆ ಆಗಿತ್ತು. ಆಗಿನಿಂದಲೂ ಮಿಷನ್ ಇಂಪಾಸಿಬಲ್ ಸರಣಿಯಲ್ಲಿ ಟಾಮ್ ಕ್ರೂಸ್ ನಟಿಸುತ್ತಿದ್ದಾರೆ. ಈಗ ಬಿಡುಗಡೆಗೆ ಸಜ್ಜಾಗಿರುವ ಮಿಷನ್ ಇಂಪಾಸಿಬಲ್: ಡೆಡ್ ರಿಕಾನಿಂಗ್ ಈ ಸರಣಿಯ ಏಳನೇ ಸಿನಿಮಾ ಆಗಿದೆ. ಮಿಷನ್ ಇಂಪಾಸಿಬಲ್: ಡೆಡ್ ರಿಕಾನಿಂಗ್ ಎರಡು ಭಾಗಗಳಲ್ಲಿ ಬಿಡುಗಡೆ ಆಗಲಿದ್ದು, ಇದೀಗ ಮೊದಲ ಭಾಗದ ಟ್ರೈಲರ್ ಬಿಡುಗಡೆ ಆಗಿದೆ. ಎರಡನೇ ಭಾಗ ಮುಂದಿನ ವರ್ಷಾಂತ್ಯಕ್ಕೆ ಬಿಡುಗಡೆ ಆಗುವ ಸಾಧ್ಯತೆ ಇದೆ. ಕೋವಿಡ್ ನಿಂದಾಗಿ ಸಿನಿಮಾದ ಚಿತ್ರೀಕರಣ ತಡವಾಗಿದೆ ಇಲ್ಲವಾದರೆ ಈ ವೇಳೆಗಾಗಲೆ ಸಿನಿಮಾ ಬಿಡುಗಡೆ ಆಗಿರುತ್ತಿತ್ತು.

ಮಿಷನ್ ಇಂಪಾಸಿಬಲ್: ಡೆಡ್ ರಿಕಾನಿಂಗ್ ಸಿನಿಮಾವನ್ನು ಕ್ರಿಸ್ಟೊಫರ್ ಮೆಕ್ವೀರಿ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ 2015 ರಲ್ಲಿ ಬಿಡುಗಡೆ ಆಗಿದ್ದ ಮಿಷನ್ ಇಂಪಾಸಿಬಲ್: ರೋಗ್ ನೇಷನ್ ಹಾಗೂ 2018 ರಲ್ಲಿ ಬಿಡುಗಡೆ ಆಗಿದ್ದ ಮಿಷನ್ ಇಂಪಾಸಿಬಲ್: ಫಾಲೌಟ್ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು. ಮಿಷನ್ ಇಂಪಾಸಿಬಲ್: ಡೆಡ್ ರಿಕಾನಿಂಗ್ ಸಿನಿಮಾ ಜುಲೈ 12ಕ್ಕೆ ತೆರೆಗೆ ಬರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್