ಬಿಡುಗಡೆಗೆ ಮುನ್ನ 1.68 ಲಕ್ಷ ಟಿಕೆಟ್ ಮುಂಗಡ ಮಾರಾಟ ಮಾಡಿದ ‘ಆಪನ್​ಹೈಮರ್’

Oppenheimer movie: 'ಆಪನ್​ಹೈಮರ್' ಹಾಲಿವುಡ್ ಸಿನಿಮಾ ಬಿಡುಗಡೆಗೆ ಮುನ್ನವೇ ಮಲ್ಟಿಪ್ಲೆಕ್ಸ್​ಗಳಲ್ಲಿ 1.68 ಲಕ್ಷ ಟಿಕೆಟ್​ಗಳು ಮುಂಗಡವಾಗಿ ಮಾರಾಟವಾಗಿವೆ ಭಾರತದಲ್ಲಿ.

ಬಿಡುಗಡೆಗೆ ಮುನ್ನ 1.68 ಲಕ್ಷ ಟಿಕೆಟ್ ಮುಂಗಡ ಮಾರಾಟ ಮಾಡಿದ 'ಆಪನ್​ಹೈಮರ್'
ಆಪನ್​ಹೈಮರ್
Follow us
ಮಂಜುನಾಥ ಸಿ.
|

Updated on:Jul 20, 2023 | 11:58 PM

ರಜನೀಕಾಂತ್ (Rajinikanth), ಶಾರುಖ್ ಖಾನ್, ಪ್ರಭಾಸ್, ಇತ್ಯಾದಿ ಸ್ಟಾರ್ ನಟರ ಸಿನಿಮಾಗಳ ಟಿಕೆಟ್​ಗಳು ಮಾತ್ರವೇ ಮೊದಲ ದಿನ ದೊಡ್ಡ ಸಂಖ್ಯೆಯಲ್ಲಿ ಮಾರಾಟವಾಗುತ್ತವೆ ಎಂಬ ಮಾತು ಸಿನಿಮಾ ಉದ್ಯಮದಲ್ಲಿ ಜನಜನಿತವಾಗಿತ್ತು. ಆದರೆ ನಿರ್ದೇಶಕನೊಬ್ಬನ ಸಿನಿಮಾ ನೋಡಲು ಜನ ವಾರಕ್ಕೆ ಮುಂಗಡವಾಗಿ ಟಿಕೆಟ್ ಕಾಯ್ದಿರಿಸುತ್ತಾರೆ ಎಂಬುದು ಖಾತ್ರಿಯಾಗಿರುವುದು ಹಾಲಿವುಡ್​ನ ‘ಆಪನ್​ಹೈಮರ್‘ (Oppenheimer) ಸಿನಿಮಾದ ಮೂಲಕ.

ವಿಶ್ವ ಶ್ರೇಷ್ಠ ನಿರ್ದೇಶಕ ಆಪನ್​ಹೈಮರ್ ಸಿನಿಮಾ ಜುಲೈ 21ರಂದು ಭಾರತ ಸೇರಿದಂತೆ ವಿಶ್ವದ ಹಲವೆಡೆ ಬಿಡುಗಡೆ ಆಗುತ್ತಿದ್ದು ಸಿನಿಮಾದ ಬಗ್ಗೆ ದೊಡ್ಡ ಮಟ್ಟಿನ ನಿರೀಕ್ಷೆ ಇದೆ. ಭಾರತದಲ್ಲಿಯೂ ದೊಡ್ಡ ಸಂಖ್ಯೆಯ ಪ್ರದರ್ಶನಗಳನ್ನು ‘ಆಪನ್​ಹೈಮರ್’ ಸಿನಿಮಾ ಗಿಟ್ಟಿಸಿಕೊಂಡಿದೆ. ಸಿನಿಮಾ ಬಿಡುಗಡೆಗೆ ಸುಮಾರು ಒಂದು ವಾರದ ಮುಂಚಿತವಾಗಿಯೇ ಸಿನಿಮಾದ ಅಡ್ವಾನ್ಸ್ ಟಿಕೆಟ್ ಬುಕಿಂಗ್ ಓಪನ್ ಆಗಿತ್ತು. ಇದೀಗ ಈ ಸಿನಿಮಾ ಅಡ್ವಾನ್ಸ್ ಬುಕಿಂಗ್​ನಲ್ಲಿ ದಾಖಲೆಯನ್ನು ಬರೆದಿದೆ ಅದೂ ಭಾರತದಲ್ಲಿ.

ಭಾರತದಲ್ಲಿ ಅತಿ ಹೆಚ್ಚು ಅಡ್ವಾನ್ಸ್ ಬುಕಿಂಗ್ ಪಡೆದುಕೊಂಡ ಹಾಲಿವುಡ್ ಸಿನಿಮಾ ಎಂಬ ಖ್ಯಾತಿಗೆ ‘ಆಪನ್​ಹೈಮರ್’ ಪಾತ್ರವಾಗಿದ್ದು ಈ ಸಿನಿಮಾದ 1.68 ಲಕ್ಷ ಟಿಕೆಟ್​ಗಳು ಸಿನಿಮಾ ಬಿಡುಗಡೆಗೆ ಒಂದು ದಿನ ಮುಂಚಿತವಾಗಿ ಮಾರಾಟವಾಗಿವೆ. ಈ ಲೆಕ್ಕಾಚಾರ ಕೇವಲ ಸಿನಿಮಾ ಚೈನ್​ಗಳಾದ ಐನಾಕ್ಸ್, ಪಿವಿಆರ್, ಸಿನಿಪೊಲೀಸ್​ಗಳದ್ದು ಮಾತ್ರವೇ. ಇನ್ನೂ ಬೇರೆ ಚಿತ್ರಮಂದಿರಗಳಲ್ಲಿಯೂ ಈ ಸಿನಿಮಾಕ್ಕೆ ಅಡ್ವಾನ್ಸ್ ಬುಕಿಂಗ್ ಜೋರಾಗಿಯೇ ನಡೆದಿದೆ. ಇನ್ನು ಇದೇ ದಿನ ಬಿಡುಗಡೆ ಆಗುತ್ತಿರುವ ಮತ್ತೊಂದು ಹಾಲಿವುಡ್ ಸಿನಿಮಾ ‘ಬಾರ್ಬಿ’ ಸಹ ಭಾರತದಲ್ಲಿ ಈವರೆಗೆ 64 ಸಾವಿರ ಟಿಕೆಟ್​ಗಳ ಅಡ್ವಾನ್ಸ್ ಬುಕಿಂಗ್ ಪಡೆದುಕೊಂಡಿದೆ. ಎರಡೂ ಸಿನಿಮಾಗಳು ಸೇರಿ ಭಾರತದ ಮಲ್ಟಿಪ್ಲೆಕ್ಸ್​ ಚೈನ್​ಗಳಲ್ಲಿ ಮಾತ್ರವೇ 2.30 ಲಕ್ಷ ಟಿಕೆಟ್​ಗಳನ್ನು ಮುಂಗಡವಾಗಿ ಮಾರಾಟ ಮಾಡಿವೆ.

ಇದನ್ನೂ ಓದಿ:ಯಾರಿದು ಜೆ ರಾಬರ್ಟ್ ಆಪನ್​ಹೈಮರ್? ಇವರ ಬಗ್ಗೆ ಸಿನಿಮಾ ಯಾಕೆ?

ಭಾರತದಲ್ಲಿ ‘ಆಪನ್​ಹೈಮರ್’ ಸಿನಿಮಾ ಗಮನಾರ್ಹ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡುವ ನಿರೀಕ್ಷೆ ಹುಟ್ಟಿಸಿದೆ. ವಿಶೇಷವಾಗಿ ಐಮ್ಯಾಕ್ಸ್ ಸ್ಕ್ರೀನ್​ಗಳಿಗಾಗಿ ಈ ಸಿನಿಮಾವನ್ನು ನಿರ್ಮಿಸಲಾಗಿದ್ದು, ಬೆಂಗಳೂರಿನಲ್ಲಿ ಒಂದು ದಿನ ಮುಂಚಿತವಾಗಿಯೇ ಐಮ್ಯಾಕ್ಸ್​ನ ಬಹುತೇಕ ಟಿಕೆಟ್​ಗಳು ಮಾರಾಟವಾಗಿದ್ದವು. ಇತರೆ ಮಲ್ಟಿಪ್ಲೆಕ್ಸ್​ಗಳಲ್ಲಿಯೂ ಟಿಕೆಟ್​ಗಳು ಬಹುತೇಕ ಮಾರಾಟವಾಗಿಬಿಟ್ಟಿದ್ದವು. ಕೆಲವು ಚಿತ್ರಮಂದಿರಗಳಲ್ಲಿ 2000-2500 ಟಿಕೆಟ್ ಬೆಲೆ ಇದ್ದರೂ ಸಹ ಹೌಸ್​ಫುಲ್ ಆಗಿರುವುದು ಬುಕ್​ಮೈ ಶೋ ಮಾಹಿತಿಯಿಂದ ತಿಳಿದುಬರುತ್ತಿದೆ.

ಅಟೊಮಿಕ್ ಬಾಂಬ್ ಜನಕ ಜೆ ರಾಬರ್ಟ್ ಆಪನ್​ಹೈಮರ್ ಜೀವನದ ಕುರಿತಾದ ಕತೆಯನ್ನು ಕ್ರಿಸ್ಟೊಫರ್ ನೋಲನ್ ‘ಆಪನ್​ಹೈಮರ್’ ಸಿನಿಮಾದಲ್ಲಿ ಹೇಳಿದ್ದಾರೆ. ಕಿಲಿಯನ್ ಮರ್ಫಿ ಆಪನ್​ಹೈಮರ್ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಐರನ್ ಮ್ಯಾನ್ ಖ್ಯಾತಿಯ ರಾಬರ್ಟ್ ಡೌನಿ ಜೂನಿಯರ್ ನೆಗೆಟಿವ್ ಶೇಡ್​ನ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾವು ಜುಲೈ 21ಕ್ಕೆ ಬಿಡುಗಡೆ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:53 pm, Thu, 20 July 23

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು