ಜೈಲರ್: ರಜನೀಕಾಂತ್ ಸಿನಿಮಾ ಹೆಸರು ವಿವಾದ, ಹೇಳಿಕೆ ಹೊರಡಿಸಿದ ನಿರ್ಮಾಣ ಸಂಸ್ಥೆ

Rajinikanth: ರಜನೀಕಾಂತ್ ಜೊತೆಗೆ ಶಿವರಾಜ್ ಕುಮಾರ್ ನಟಿಸಿರುವ 'ಜೈಲರ್' ಸಿನಿಮಾದ ಹೆಸರು ವಿವಾದಕ್ಕೆ ಕಾರಣವಾಗಿದೆ.

ಜೈಲರ್: ರಜನೀಕಾಂತ್ ಸಿನಿಮಾ ಹೆಸರು ವಿವಾದ, ಹೇಳಿಕೆ ಹೊರಡಿಸಿದ ನಿರ್ಮಾಣ ಸಂಸ್ಥೆ
ಜೈಲರ್
Follow us
| Updated By: ರಾಜೇಶ್ ದುಗ್ಗುಮನೆ

Updated on:Jul 17, 2023 | 6:32 AM

ಜೈಲರ್‘ (Jailer) ಹೆಸರಿನ ಹೊಸ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ರಜನೀಕಾಂತ್ (Rajinikanth) ನಟಿಸಿದ್ದು ಸಿನಿಮಾದಲ್ಲಿ ರಜನೀಕಾಂತ್ ಜೊತೆಗೆ ಕನ್ನಡದ ಸ್ಟಾರ್ ನಟ ಶಿವರಾಜ್ ಕುಮಾರ್ (Shiva Rajkumar) ಸಹ ಇದ್ದಾರೆ. ಇವರಿಬ್ಬರೇ ಅಲ್ಲದೆ, ಬೇರೆ-ಬೇರೆ ಚಿತ್ರರಂಗದ ಸ್ಟಾರ್ ನಟರುಗಳು ಈ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದು ಕೆಲವೇ ದಿನಗಳಲ್ಲಿ ‘ಜೈಲರ್’ ಸಿನಿಮಾ ಬಿಡುಗಡೆ ಆಗಲಿದೆ. ಆದರೆ ಸಿನಿಮಾದ ಹೆಸರು ಈಗ ವಿವಾದಕ್ಕೆ ಕಾರಣವಾಗಿದೆ. ಸಿನಿಮಾದ ಹೆಸರು ಬದಲಿಸುವಂತೆ ನೆರೆಯ ಚಿತ್ರರಂಗದವರಿಂದ ಒತ್ತಾಯ ಕೇಳಿಬಂದಿದೆ.

ರಜನೀಕಾಂತ್ ಜೈಲರ್ ಪಾತ್ರದಲ್ಲಿ ನಟಿಸಿರುವ ಕಾರಣ ‘ಜೈಲರ್’ ಎಂದು ಸಿನಿಮಾಕ್ಕೆ ಹೆಸರಿಡಲಾಗಿದೆ. ಆದರೆ ಮಲಯಾಳಂ ಚಿತ್ರರಂಗದ ನಿರ್ಮಾಒಕ ಹಾಗೂ ನಿರ್ದೇಶಕರೊಬ್ಬರು ಸಿನಿಮಾದ ಹೆಸರಿನ ಬಗ್ಗೆ ತಕರಾರು ತೆಗೆದಿದ್ದು ಸಿನಿಮಾದ ಹೆಸರು ಬದಲಿಸುವಂತೆ ಒತ್ತಾಯಿಸಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿ ಸಹ ಮಾಡಿ ಸಿನಿಮಾದ ಹೆಸರನ್ನು ಬದಲಾಯಿಸಬೇಕು, ಕನಿಷ್ಟ ಕೇರಳದಲ್ಲಿಯಾದರೂ ಬೇರೆ ಹೆಸರಿನೊಂದಿಗೆ ಸಿನಿಮಾವನ್ನು ಬಿಡುಗಡೆ ಮಾಡಬೇಕು ಎಂದು ಕೇಳಿಕೊಂಡಿದ್ದಾರೆ.

‘ಜೈಲರ್’ ಹೆಸರಿನ ಮಲಯಾಳಂ ಸಿನಿಮಾ ಒಂದು ಬಿಡುಗಡೆಗೆ ತಯಾರಾಗಿದೆ. ಮಲಯಾಳಂನ ‘ಜೈಲರ್’ ಸಿನಿಮಾದಲ್ಲಿ ಧ್ಯಾನ್ ಶ್ರೀನಿವಾಸನ್ ನಟಿಸಿದ್ದು ಸಿನಿಮಾವನ್ನು ಸಕ್ಕಿರ್ ಮದತ್ತಿಲ್ ನಿರ್ದೇಶನ ಮಾಡಿದ್ದಾರೆ. ಎನ್​ಕೆ ಮೊಹಮ್ಮದ್ ನಿರ್ಮಾಣ ಮಾಡಿದ್ದಾರೆ. ತಮಿಳಿನ ‘ಜೈಲರ್’ ಹಾಗೂ ಮಲಯಾಳಂ ‘ಜೈಲರ್’ ಸಿನಿಮಾಗಳ ಕತೆಗಳು ಒಂದಕ್ಕೊಂದು ಬಹಳ ಭಿನ್ನವಾಗಿದೆಯಾದರೂ ಸಿನಿಮಾದ ಹೆಸರುಗಳು ಒಂದೇ ಆಗಿವೆ. ಹಾಗಾಗಿ ಮಲಯಾಳಂ ‘ಜೈಲರ್’ ಚಿತ್ರತಂಡ ತಮಿಳು ‘ಜೈಲರ್’ ಸಿನಿಮಾದ ನಿರ್ಮಾಣ ಸಂಸ್ಥೆಯಾದ ಸನ್ ಪಿಕ್ಚರ್ಸ್ ಗೆ ಮನವಿ ಮಾಡಿದ್ದು, ಕನಿಷ್ಟ ಕೇರಳದಲ್ಲಿಯಾದರೂ ಸಿನಿಮಾದ ಹೆಸರು ಬದಲಿಸಿ ಬಿಡುಗಡೆ ಮಾಡಿ ಎಂದಿದೆ.

ಇದನ್ನೂ ಓದಿ:Rajinikanth: ಆ ಸಿನಿಮಾ ಬಳಿಕ ರಜನೀಕಾಂತ್ ನಟನೆಯಿಂದ ನಿವೃತ್ತಿ?

ತಮಿಳು ‘ಜೈಲರ್’ ಸಿನಿಮಾದಲ್ಲಿ ರಜನೀಕಾಂತ್ ಅಂಥಹಾ ದೊಡ್ಡ ಸ್ಟಾರ್ ಜೊತೆಗೆ ಮಲಯಾಳಂನ ಸೂಪರ್ ಸ್ಟಾರ್ ಮೊಹನ್​ಲಾಲ್ ಸಹ ನಟಿಸಿದ್ದಾರೆ. ಹಾಗಾಗಿ ಕೇರಳದಲ್ಲಿ ಸಿನಿಮಾದ ಹೆಸರು ಬದಲಾಯಿಸಿದರೆ ಸಮಸ್ಯೆ ಏನೂ ಆಗುವುದಿಲ್ಲ. ಆದರೆ ನಮ್ಮದು ಹಾಗಲ್ಲ, ನಾವು ಹೆಸರು ಇಟ್ಟು, ಅದೇ ಥೀಮ್​ನಲ್ಲಿ ಸಿನಿಮಾ ಮಾಡಿದ್ದೇವೆ, ತಮಿಳಿನ ‘ಜೈಲರ್’ ಸಿನಿಮಾ ಬಿಡುಗಡೆ ಆದರೆ ನಮ್ಮ ಸಿನಿಮಾ ಬರುವ ಸಮಯಕ್ಕೆ ಜನರಿಗೆ ಗೊಂದಲವಾಗಲಿದೆ ಎಂದಿದ್ದಾರೆ. ಈ ವಿಚಾರವಾಗಿ ನಾವು ಸನ್ ಪಿಕ್ಚರ್ಸ್ ಅನ್ನು ಸಂಪರ್ಕ ಮಾಡಿದ್ದೇವೆ ಆದರೆ ಅವರು ಪ್ರತಿಕ್ರಿಯೆ ನೀಡಿಲ್ಲ ಎಂದಿದ್ದಾರೆ.

ಆದರೆ ವಿವಾದದ ಬಗ್ಗೆ ಸನ್ ಪಿಕ್ಚರ್ಸ್​ನವರು ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದು, ”ಸನ್ ಪಿಕ್ಚರ್ಸ್ ಎಂಬುದು ಕಾರ್ಪೊರೇಟ್ ಸಂಸ್ಥೆಯಾಗಿದ್ದು, ‘ಜೈಲರ್’ ಸಿನಿಮಾವನ್ನು ನಾವು ದೊಡ್ಡ ಸ್ಟಾರ್ ನಟರು ಹಾಗೂ ಬಜೆಟ್​ನೊಂದಿಗೆ ನಿರ್ಮಾಣ ಮಾಡಿದ್ದೇವೆ. ನಮ್ಮ ಆಪರೇಷನಲ್ ದೃಷ್ಟಿಯಿಂದ ಹಾಗೂ ಸಿನಿಮಾದ ಕತೆಯ ದೃಷ್ಟಿಯಿಂದ ನಾವು ಹೆಸರು ಬದಲಾಯಿಸಲು ಸಾಧ್ಯವಿಲ್ಲ” ಎಂದಿದೆ.

‘ಜೈಲರ್’ ಸಿನಿಮಾದಲ್ಲಿ ರಜನೀಕಾಂತ್ ಜೊತೆಗೆ ಶಿವರಾಜ್ ಕುಮಾರ್, ಮಲಯಾಳಂನ ಮೋಹನ್​ಲಾಲ್, ಬಾಲಿವುಡ್​ನ ಜಾಕಿ ಶ್ರಾಫ್, ತೆಲುಗಿನ ಸುನಿಲ್ ನಟಿಸಿದ್ದಾರೆ. ಇವರ ಜೊತೆಗೆ ತಮನ್ನಾ ನಾಯಕಿಯಾಗಿದ್ದಾರೆ. ಸಿನಿಮಾದ ಎರಡು ಹಾಡುಗಳು ಈಗಾಗಲೇ ಬಿಡುಗಡೆ ಆಗಿದೆ. ಅದರಲ್ಲಿಯೂ ತಮನ್ನಾ ಕುಣಿದಿರುವ ಒಂದು ಹಾಡಂತೂ ಸಖತ್ ವೈರಲ್ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:05 pm, Sun, 16 July 23

ತಾಜಾ ಸುದ್ದಿ
ಆಷಾಢ ಮಾಸದ ವಿಶೇಷ ರಾಶಿ ಭವಿಷ್ಯ 2024: ಯಾವ ರಾಶಿಗೆ ಏನು ಫಲ? ಇಲ್ಲಿದೆ ವಿವರ
ಆಷಾಢ ಮಾಸದ ವಿಶೇಷ ರಾಶಿ ಭವಿಷ್ಯ 2024: ಯಾವ ರಾಶಿಗೆ ಏನು ಫಲ? ಇಲ್ಲಿದೆ ವಿವರ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!