Rajinikanth: ಆ ಸಿನಿಮಾ ಬಳಿಕ ರಜನೀಕಾಂತ್ ನಟನೆಯಿಂದ ನಿವೃತ್ತಿ?

Rajinikanth: 72 ವಯಸ್ಸಿನ ಸೂಪರ್ ಸ್ಟಾರ್ ರಜನೀಕಾಂತ್ ಇನ್ನು ಕೆಲವು ಸಿನಿಮಾಗಳ ಬಳಿಕ ನಿವೃತ್ತಿ ಪಡೆಯಲಿದ್ದಾರೆ. ಕೊನೆಯ ಸಿನಿಮಾಕ್ಕಾಗಿ ಹಿಟ್ ನಿರ್ದೇಶಕನನ್ನು ಆಯ್ದುಕೊಂಡಿದ್ದಾರೆ.

Rajinikanth: ಆ ಸಿನಿಮಾ ಬಳಿಕ ರಜನೀಕಾಂತ್ ನಟನೆಯಿಂದ ನಿವೃತ್ತಿ?
ರಜನೀಕಾಂತ್
Follow us
ಮಂಜುನಾಥ ಸಿ.
|

Updated on: May 19, 2023 | 8:00 AM

ಸೂಪರ್ ಸ್ಟಾರ್ ರಜನೀಕಾಂತ್​ಗೆ (Rajinikanth) ಈಗ ವಯಸ್ಸು 72. ಈಗಲೂ ಒಂದರ ಹಿಂದೊಂದು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈಗಲೂ ನಾಯಕನ ಪಾತ್ರಗಳಲ್ಲಿಯೇ ರಜನೀಕಾಂತ್ ನಟಿಸುತ್ತಿದ್ದು, ಸಿನಿಮಾಗಳಲ್ಲಿ ಫೈಟ್ ಮಾಡುವುದು, ಡ್ಯಾನ್ಸ್ ಮಾಡುವುದು ಎಲ್ಲವನ್ನೂ ಮಾಡುತ್ತಿದ್ದಾರೆ. ಆದರೆ ಇನ್ನು ಹೆಚ್ಚು ದಿನ ಅವರು ಸಿನಿಮಾಗಳಲ್ಲಿ ನಟಿಸುವುದಿಲ್ಲ ಎನ್ನಲಾಗುತ್ತಿದೆ. ನಿರ್ದೇಶಕನೊಬ್ಬನ ಸಿನಿಮಾದ ಬಳಿಕ ನಟನೆಗೆ ಗುಡ್​ ಬೈ ಹೇಳಿ ಮನೆಯಲ್ಲಿ ವಿಶ್ರಾಂತ ಜೀವನ ನಡೆಸುತ್ತಾರಂತೆ.

ರಜನೀಕಾಂತ್ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿ 2023ಕ್ಕೆ 48 ವರ್ಷವಾಯಿತು. ಈ ವರ್ಷವೂ ಅವರ ಡೇಟ್ಸ್​ಗಳು ಈಗಾಗಲೇ ಬುಕ್ ಆಗಿವೆ. ಒಂದು ಸಿನಿಮಾ ಬಿಡುಗಡೆಗೆ ತಯಾರಾಗಿದ್ದರೆ, ಇನ್ನೊಂದು ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಮತ್ತೊಂದು ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಆದರೆ ಇನ್ನು ಕೆಲವು ಸಿನಿಮಾಗಳ ಬಳಿಕ ರಜನೀಕಾಂತ್ ನಟನೆಗೆ ಗುಡ್ ಬೈ ಹೇಳುತ್ತಾರಂತೆ.

ಕೆ ಬಾಲಚಂದರ್ ಅವರ ನಿರ್ದೇಶನದಲ್ಲಿ ಮೊದಲ ಸಿನಿಮಾದಲ್ಲಿ ನಟಿಸಿದ್ದ ರಜನೀಕಾಂತ್ ಕೊನೆಯ ಸಿನಿಮಾವನ್ನು ಲೋಕೇಶ್ ಕನಗರಾಜ್ ನಿರ್ದೇಶನದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಅದು ಅವರ 171ನೇ ಸಿನಿಮಾ ಆಗಿರಲಿದೆ. ಆ ಸಿನಿಮಾದ ಬಳಿಕ ರಜನೀಕಾಂತ್ ನಟನೆಯಿಂದ ಹಿಂದೆ ಸರಿಯುತ್ತಾರೆ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಲೋಕೇಶ್ ಸಹ ಕತೆಯನ್ನು ಭರ್ಜರಿಯಾಗಿ ತಯಾರು ಮಾಡಿಕೊಳ್ಳುತ್ತಿದ್ದಾರೆ. ಕೊನೆಯ ಸಿನಿಮಾದಲ್ಲಿ ರಜನೀಕಾಂತ್ ಅಭಿಮಾನಿಗಳಿಗೆ ಹಬ್ಬದೂಟ ಬಡಿಸಲು ಬೇಕಾದ ಸರಕನ್ನು ಕತೆಗೆ ತುಂಬುತ್ತಿದ್ದಾರೆ ಎನ್ನಲಾಗಿದೆ.

ನಟ ನಿರ್ದೇಶಕ ಮಿಸ್ಕಿನ್, ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದು, ಲೋಕೇಶ್ ಕನಗರಾಜ್ ಜೊತೆ ರಜನೀಕಾಂತ್ ಕೆಲಸ ಮಾಡಲಿದ್ದಾರೆ. ಅದು ಅವರ ಕೊನೆಯ ಸಿನಿಮಾ ಆಗುವ ಸಾಧ್ಯತೆ ಇದೆ ಎಂದಿದ್ದಾರೆ. ಅಂದಹಾಗೆ ಮಿಸ್ಕಿನ್, ಲೋಕೇಶ್ ಕನಕರಾಜ್​ರ ಪ್ರಸ್ತುತ ಸಿನಿಮಾ ಲಿಯೋನಲ್ಲಿ ನಟಿಸುತ್ತಿದ್ದಾರೆ.

ಇದನ್ನೂ ಓದಿ:ಕ್ರಿಕೆಟ್ ದಂತಕತೆ ಕಪಿಲ್ ದೇವ್​ ಜೊತೆ ರಜನೀಕಾಂತ್ ನಟನೆ: ಸಿನಿಮಾ ಯಾವುದು?

ರಜನೀಕಾಂತ್ ಈಗಾಗಲೇ ಜೈಲರ್ ಹೆಸರಿನ ಸಿನಿಮಾದಲ್ಲಿ ನಟಿಸಿದ್ದು ಸಿನಿಮಾ ಆಗಸ್ಟ್ ತಿಂಗಳಲ್ಲಿ ತೆರೆಗೆ ಬರಲಿದೆ. ಸಿನಿಮಾದಲ್ಲಿ ಕನ್ನಡದ ಸ್ಟಾರ್ ನಟ ಶಿವರಾಜ್​ಕುಮಾರ್, ಮಲಯಾಳಂನ ಮೋಹನ್​ಲಾಲ್​, ಬಾಲಿವುಡ್​ನ ಜಾಕಿ ಶ್ರಾಫ್, ತೆಲುಗಿನ ಸುನಿಲ್, ನಟಿ ತಮನ್ನಾ ಭಾಟಿಯಾ ಇನ್ನೂ ಕೆಲವರು ನಟಿಸಿದ್ದಾರೆ. ಇದೀಗ ತಮ್ಮ ಪುತ್ರಿ ಐಶ್ವರ್ಯಾ ಧನುಶ್ ನಿರ್ದೇಶನದ ಲಾಲ್ ಸಲಾಮ್ ಸಿನಿಮಾದಲ್ಲಿ ರಜನೀಕಾಂತ್ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಕ್ರಿಕೆಟಿಗ ಕಪಿಲ್ ದೇವ್ ಸಹ ನಟಿಸುತ್ತಿರುವುದು ವಿಶೇಷ. ಈ ಸಿನಿಮಾದ ಬಳಿಕ ನೆಲ್ಸನ್ ಜೊತೆ ಸಿನಿಮಾದಲ್ಲಿ ನಟಿಸಿದ ಬಳಿಕ ಲೋಕೇಶ್ ಸಿನಿಮಾಕ್ಕೆ ತಯಾರಾಗಲಿದ್ದಾರೆ ರಜನೀಕಾಂತ್.

ಇನ್ನು ಲೋಕೇಶ್ ಕನಕರಾಜ್ ಸಹ ಬಹಳ ಬ್ಯುಸಿ ನಿರ್ದೇಶಕ. ಪ್ರಸ್ತುತ ವಿಜಯ್ ರ ಲಿಯೋ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಅದರ ಬಳಿಕ ವಿಕ್ರಂ 2 ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ಅದಾದ ಬಳಿಕ ರಜನೀಕಾಂತ್ ಸಿನಿಮಾ ನಿರ್ದೇಶನ ಮಾಡಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ