Rajinikanth: ‘ಹುಕುಂ’ ನೀಡಲು ಸಜ್ಜಾದ ರಜನಿಕಾಂತ್​; ‘ಜೈಲರ್​’ ಸಿನಿಮಾದ 2ನೇ ಹಾಡಿನ ಬಿಡುಗಡೆಗೆ ದಿನಾಂಕ ನಿಗದಿ

Jailer Movie Songs: ಅನಿರುದ್ಧ್​ ರವಿಚಂದರ್​ ಅವರು ‘ಜೈಲರ್​’ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ‘ಕಾವಾಲಾ..’ ಹಾಡು ನೋಡಿ ಖುಷಿಪಟ್ಟಿರುವ ಸಿನಿಪ್ರಿಯರು ‘ಹುಕುಂ’ ಹಾಡನ್ನು ಬರಮಾಡಿಕೊಳ್ಳಲು ಕಾದಿದ್ದಾರೆ.

Rajinikanth: ‘ಹುಕುಂ’ ನೀಡಲು ಸಜ್ಜಾದ ರಜನಿಕಾಂತ್​; ‘ಜೈಲರ್​’ ಸಿನಿಮಾದ 2ನೇ ಹಾಡಿನ ಬಿಡುಗಡೆಗೆ ದಿನಾಂಕ ನಿಗದಿ
ರಜನಿಕಾಂತ್​
Follow us
ಮದನ್​ ಕುಮಾರ್​
|

Updated on: Jul 14, 2023 | 3:40 PM

ನಟ ರಜನಿಕಾಂತ್ (Rajinikanth)​ ಅವರು ‘ಜೈಲರ್​’ ಸಿನಿಮಾದಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಹಾಡುಗಳ ಮೂಲಕ ಈ ಸಿನಿಮಾ ಸದ್ದು ಮಾಡುತ್ತಿದೆ. ಕೆಲವೇ ದಿನಗಳ ಹಿಂದೆ ಬಿಡುಗಡೆ ಆದ ‘ಕಾವಾಲಾ..’ ಹಾಡು (Kaavaalaa Song) ಧೂಳೆಬ್ಬಿಸುತ್ತಿದೆ. ಆ ಗೀತೆಯಲ್ಲಿ ತಮನ್ನಾ ಭಾಟಿಯಾ ಅವರು ರಜನಿಕಾಂತ್​ ಜೊತೆ ಬಿಂದಾಸ್​ ಆಗಿ ಕುಣಿದಿದ್ದಾರೆ. ಈಗ ಮತ್ತೊಂದು ಹಾಡಿನ ಬಿಡುಗಡೆಗೆ ‘ಜೈಲರ್​’ ಸಿನಿಮಾ (Jailer Movie) ತಂಡ ಸಿದ್ಧತೆ ಮಾಡಿಕೊಂಡಿದೆ. 2ನೇ ಸಾಂಗ್​ ಹೆಸರು ‘ಹುಕುಂ’. ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ. ಜುಲೈ 17ಎಂದು ‘ಹುಕುಂ..’ ಹಾಡು ರಿಲೀಸ್​ ಆಗಲಿದೆ.

ಪ್ರತಿಷ್ಠಿತ ಸನ್​ ಪಿಕ್ಚರ್ಸ್​ ಮೂಲಕ ‘ಜೈಲರ್​’ ಸಿನಿಮಾ ನಿರ್ಮಾಣ ಆಗಿದೆ. ಆಗಸ್ಟ್​ 10ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಈಗಲೇ ಪ್ರಚಾರಕ್ಕೆ ಸಖತ್​ ಮಹತ್ವ ನೀಡಲಾಗುತ್ತಿದೆ. ಸೋಶಿಯಲ್​ ಮೀಡಿಯಾದಲ್ಲಿ ‘ಕಾವಾಲಾ..’ ಹಾಡು ಹೊಸ ಕ್ರೇಜ್​ ಸೃಷ್ಟಿ ಮಾಡಿದೆ. ಅದೇ ರೀತಿ ‘ಹುಕುಂ..’ ಸಾಂಗ್​ ಕೂಡ ಟ್ರೆಂಡ್​ ಆಗಲಿದೆ ಎಂದು ರಜನಿಕಾಂತ್​ ಅಭಿಮಾನಿಗಳು ನಿರೀಕ್ಷಿಸಿದ್ದಾರೆ. ಈ ಹಾಡಿನ ಮೋಷನ್​ ಪೋಸ್ಟರ್​ ಬಿಡುಗಡೆ ಮಾಡಲಾಗಿದ್ದು, ಆ ಮೂಲಕ ಕೌತುಕ ಮೂಡಿಸುವ ಪ್ರಯತ್ನ ಮಾಡಲಾಗಿದೆ.

ಅನಿರುದ್ಧ್​ ರವಿಚಂದರ್​ ಅವರು ‘ಜೈಲರ್​’ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ‘ಕಾವಾಲಾ..’ ಹಾಡು ನೋಡಿ ಖುಷಿಪಟ್ಟಿರುವ ಸಿನಿಪ್ರಿಯರು ‘ಹುಕುಂ’ ಹಾಡನ್ನು ಬರಮಾಡಿಕೊಳ್ಳಲು ಕಾದಿದ್ದಾರೆ. ಈ ಸಿನಿಮಾದಲ್ಲಿ ರಜನಿಕಾಂತ್​ ಅವರ ಕೋಡ್​ನೇಮ್​ ಟೈಗರ್​ ಆಗಿರಲಿದೆ ಎಂದು ಊಹಿಸಲಾಗುತ್ತಿದೆ. ‘ಹುಕುಂ’ ಹಾಡಿನಲ್ಲಿ ಆ ಬಗ್ಗೆ ಸುಳಿವು ಸಿಗುವ ಸಾಧ್ಯತೆ ಇದೆ. ಶೀರ್ಷಿಕೆಗೆ ತಕ್ಕಂತೆಯೇ ಈ ಸಿನಿಮಾದಲ್ಲಿ ರಜನಿಕಾಂತ್​ ಅವರು ಜೈಲರ್​ ಪಾತ್ರ ಮಾಡಿದ್ದಾರೆ.

ಇದನ್ನೂ ಓದಿ: Tamannaah Bhatia: ‘ಇಂಡಿಯನ್​ ಶಕೀರಾ’: ಅಭಿಮಾನಿಗಳು ಕೊಟ್ಟ ಹೊಸ ಬಿರುದನ್ನು ಸ್ವೀಕರಿಸಿದ ತಮನ್ನಾ ಭಾಟಿಯಾ

ನೆಲ್ಸನ್​ ದಿಲೀಪ್​ಕುಮಾರ್​ ಅವರು ‘ಜೈಲರ್​’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಪಾತ್ರವರ್ಗದಲ್ಲಿ ಶಿವರಾಜ್​ಕುಮಾರ್​ ಕೂಡ ನಟಿಸಿರುವುದರಿಂದ ಕನ್ನಡ ಸಿನಿಪ್ರಿಯರ ವಲಯದಲ್ಲೂ ಈ ಚಿತ್ರದ ಬಗ್ಗೆ ನಿರೀಕ್ಷೆ ಮೂಡಿದೆ. ಮೋಹಲ್​ಲಾಲ್​, ಜಾಕಿ ಶ್ರಾಫ್​, ರಮ್ಯಾ ಕೃಷ್ಣನ್​ ಮುಂತಾದ ಘಟಾನುಘಟಿ ಕಲಾವಿದರು ಕೂಡ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಬಹುತಾರಾಗಣದ ಕಾರಣದಿಂದಲೂ ಈ ಸಿನಿಮಾಗೆ ನಿರೀಕ್ಷೆ ಹೆಚ್ಚಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ