ಬುಲೆಟ್ ಪ್ರಕಾಶ್ ನಟನೆಯ ಕೊನೆಯ ಸಿನಿಮಾಕ್ಕೆ ಈಗ ಬಿಡುಗಡೆ ಭಾಗ್ಯ
David: ಹೊಸಬರ ಸಿನಿಮಾ 'ಡೇವಿಡ್' ಬಿಡುಗಡೆಗೆ ಸಜ್ಜಾಗಿದೆ. ಇದು ಬುಲೆಟ್ ಪ್ರಕಾಶ್ ನಟನೆಯ ಕೊನೆಯ ಸಿನಿಮಾ ಅಂತೆ.
ಹಾಸ್ಯ ನಟ ಬುಲೆಟ್ ಪ್ರಕಾಶ್ (Bullet Prakash) ನಟಿಸಿದ್ದ ಕೊನೆಯ ಸಿನಿಮಾಕ್ಕೆ ಈಗ ಬಿಡುಗಡೆ ಭಾಗ್ಯ ದೊರೆತಿದೆ. ಹೊಸ ನಟ ಶ್ರೇಯಸ್ ನಾಯಕನಾಗಿ ನಟಿಸಿ, ನಿರ್ದೇಶಿಸಿರುವ ” ಡೇವಿಡ್ ” ಸಿನಿಮಾ ಜುಲೈ 21ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತದೆ. ಧನರಾಜ ಬಾಬು ಜಿ ಈ ಸಿನಿಮಾವನ್ನು ಅರ್ಪಣೆ ಮಾಡಿದ್ದು, ಪ್ರಸಾದ್ ರುದ್ರಮುನಿ ನಿರಘಂಟಿ ನಿರ್ಮಾಣ ಮಾಡಿದ್ದಾರೆ.
“ಡೇವಿಡ್” ಸಿನಿಮಾ ರೊಮ್ಯಾಂಟಿಕ್ ಮಾರ್ಡರ್ ಮಿಸ್ಟರಿ ಸಿನಿಮಾ ಆಗಿದ್ದು ಸಿನಿಮಾವನ್ನು ನಾಯಕ ಶ್ರೇಯಸ್ ಚಿಂಗಾ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಬೆಂಗಳೂರನ್ನು ಹೊಸ ರೀತಿಯಲ್ಲಿ ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಿದ್ದೇವೆ. ಇದು ತಂತ್ರಜ್ಞರ ಸಿನಿಮಾ. ಎಲ್ಲ ನಟರ ಅಭಿನಯ ಸಹ ಚೆನ್ನಾಗಿದೆ. ಭಾರ್ಗವ ಅವರೊಟ್ಟಿಗೆ ಸೇರಿ ಈ ಚಿತ್ರವನ್ನು ನಿರ್ದೇಶಿಸಿದ್ದೇನೆ ಎಂದರು. ಸಿನಿಮಾದ ನಾಯಕಿ ಸಾರಾ ಹರೀಶ್ ಮಾತನಾಡಿ ‘ನಾನು “ಭರತ – ಬಾಹುಬಲಿ” ಸಿನಿಮಾದಲ್ಲಿ ನಟಿಸಿದ್ದೆ. ಡೇವಿಡ್ ನನ್ನ ಎರಡನೇ ಸಿನಿಮಾ. ಇದಕ್ಕೂ ಮುನ್ನ ಕೆಲವು ಜಾಹೀರಾತುಗಳಲ್ಲಿ ನಟಿಸಿದ್ದೇನೆ” ಎಂದರು.
ಸಿನಿಮಾದಲ್ಲಿ ನಟಿಸಿರುವ ಪ್ರತಾಪ್ ನಾರಾಯಣ್ ತಾವು ಈ ಸಿನಿಮಾದಲ್ಲಿ ಐಶಾರಾಮಿ ಕುಟುಂಬದ ಮಗನ ಪಾತ್ರದಲ್ಲಿ ನಟಿಸಿದ್ದೇನೆ ಎಂದರು. ಜನಪ್ರಿಯ ಕನ್ನಡ ರಾಪರ್ ಗಳಾದ ಸಿದ್, ಎಂ.ಸಿ.ಬಿಜು ಸಹ ಈ ಸಿನಿಮಾದಲ್ಲಿ ನಟಿಸಿದ್ದು, ಸ್ವತಃ ರ್ಯಾಪರ್ಗಳಾಗಿಯೇ ಕಾಣಿಸಿಕೊಂಡಿದ್ದಾರೆ. ತಮ್ಮ ಪಾತ್ರದ ಬಗ್ಗೆ ಖುಷಿಯಿಂದ ಹೇಳಿಕೊಂಡ ರ್ಯಾಪರ್ಗಳು ಹಾಡೊಂದನ್ನು ಹಾಡಿ ರಂಜಿಸಿದರು.
ಇದನ್ನೂ ಓದಿ:ಶಿವರಾಜ್ ಕುಮಾರ್ ಹುಟ್ಟುಹಬ್ಬದಂದು ಘೋಷಣೆಯಾದ ಸಿನಿಮಾಗಳ ಪಟ್ಟಿ ಇಲ್ಲಿದೆ
ನಟರಾದ ನಂದೀಶ್, ಪ್ರತಾಪ್ ನಾರಾಯಣ್, ಸಾರಾ ಹರೀಶ್, ಅವಿನಾಶ್ ಯಳಂದೂರು, ಬುಲೆಟ್ ಪ್ರಕಾಶ್, ಕಾವ್ಯಾ ಶಾ, ಇನ್ನೂ ಹಲವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಜನಪ್ರಿಯ ಹಾಸ್ಯ ನಟ ಬುಲೇಟ್ ಪ್ರಕಾಶ್ ನಟಿಸಿರುವ ಕೊನೆಯ ಸಿನಿಮಾ ‘ಡೇವಿಡ್’ ಎಂದು ಚಿತ್ರತಂಡ ಹೇಳಿಕೊಂಡಿದೆ.
ಬುಲೆಟ್ ಪ್ರಕಾಶ್ ಅವರು 2020ರಲ್ಲಿ ಅನಾರೋಗ್ಯದಿಂದ ನಿಧನರಾದರು. ಅವರ ನಟನೆಯ ಕೆಲವು ದೃಶ್ಯಗಳು ‘ಡೇವಿಡ್’ ಸಿನಿಮಾದಲ್ಲಿವೆ. ಬುಲೆಟ್ ಪ್ರಕಾಶ್ ಅವರು ಕಿಡ್ನಿ ಮತ್ತು ಲಿವರ್ ಫೇಲ್ಯೂರ್ನಿಂದ ನಿಧನ ಹೊಂದಿದ್ದರು. ‘ಗಾಳಿಪಟ 2’ ಸಿನಿಮಾದಲ್ಲಿಯೂ ಬುಲೆಟ್ ಪ್ರಕಾಶ್ ನಟಿಸಿದ್ದರು. ಅದೇ ಸಮಯದಲ್ಲಿ ‘ಡೇವಿಡ್’ ಸಿನಿಮಾದಲ್ಲಿಯೂ ಬುಲೆಟ್ ಪ್ರಕಾಶ್ ನಟಿಸಿದ್ದರು.
ಇತ್ತೀಚೆಗೆ ಹೊಸಬರ ಸಿನಿಮಾಗಳು ಗಮನ ಸೆಳೆಯುತ್ತಿದ್ದು, ಅಂತೆಯೇ ಹೊಸಬರ ತಂಡ ಮಾಡಿರುವ ‘ಡೇವಿಡ್’ ಸಿನಿಮಾ ಸಹ ಗಮನ ಸೆಳೆಯಲಿದೆಯೇ ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ